‘ಒಮ್ಮೊಮ್ಮೆ ಬೆಚ್ಚಿ ಬೀಳುವ ಭಾವ?’…ಸುಂದರ ಸಾಲುಗಳು ಕವಿಯತ್ರಿ ಆತ್ಮ. ಜಿ ಎಸ್ ಅವರ ಸುಂದರ ಕವನ ತಪ್ಪದೆ ಓದಿ ಮತ್ತು ಶೇರ್ ಮಾಡಿ…
ಮಾಲೆ ಮಾಡದ ಮಲ್ಲಿಗೆಯಂತೆ
ಹರವಿ ಕುಳಿತಿತ್ತು ನನ್ನೆದೆಯ
ಒಳಗೆ ನಿನ್ನ ನೆನಪುಗಳು..
ಮನೆಯ ಹಿತ್ತಲಿನ ಗಿಡಗಳಿಗೆ
ನೀರೆರೆದು ಪೋಷಿಸುವಂತೆ
ಆಗ ಈಗ ನೆನಪುಗಳಿಗೂ
ನೀರೆರೆಯುವೆ..
ಒಮ್ಮೊಮ್ಮೆ
ಬೆಚ್ಚಿ ಬೀಳುವ ಭಾವ..?
ಮೊಗ್ಗು ಹೂವಾಗಿ , ಮಾಲೆ
ಮಾಡಿ ನನ್ನ ಮುಡಿಗೋ
ದೇವರ ಕೊರಳಿಗೋ ಏರಿ
ಸಾರ್ಥಕ್ಯ ಕಾಣುವಂತೆ ನಿನ್ನ
ನೆನಪುಗಳೂ ಆದರೆ?
ಸ್ವಾರ್ಥಿ ನಾನು ,
ಬದುಕಿನ ಉದ್ದಕ್ಕೂ ದೀವಟಿಗೆಯಂತೆ
ನಿನ್ನ ನೆನಪುಗಳು ನನ್ನ ಜೊತೆ
ಇರಲಿ ಎಂದೇ ಬಂಧಿಸದೆ
ಮುಕ್ತವಾಗಿ ಬಿಟ್ಟಿರುವೆ..
ಮಿತಿಯ ಬಂಧನಕ್ಕಿಂತ
ಸ್ವಾತಂತ್ರ್ಯಕ್ಕೆ ಬೆಲೆ ಹೆಚ್ಚೆಂದು.
- ಆತ್ಮ. ಜಿ ಎಸ್