ಮಾರುಕಟ್ಟೆಯಲ್ಲಿ ಬಣ್ಣಬಣ್ಣದ ವಿವಿಧ ಅಳತೆಯ ಬಕೆಟ್ಟುಗಳು ಸಿಗಬಹುದು. ಆದರೆ ಬಣ್ಣದ ಬಕೆಟ್ಗಳ ಉಪಯೋಗದ ಮುಂದೆ ಅವುಗಳೆಲ್ಲ ಸಪೆಸಪ್ಪೆ. ಹಾಗಾಗಿ ಇತ್ತೀಚೆಗೆ ಖಾಲಿ ಬಣ್ಣದ ಬಕೆಟ್ಗಳನ್ನೂ ಮಾರಾಟಕ್ಕಿಡುವುದಿದೆ.ಹಾಸ್ಯ ಲೇಖಕರಾದ ನಳಿನಿ ಟಿ. ಭೀಮಪ್ಪ ಅವರು ಬಣ್ಣದ ಬಕೆಟ್ ಕುರಿತು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…
ಮಹಿಳೆಯರು ಚರ್ಮದ ಅಂದ ಚಂದ ಹೆಚ್ಚಿಸಲು ಹಾಗೂ ಪ್ರಸ್ತುತ ವಯಸ್ಸನ್ನು ಮರೆಮಾಡಲು ಮತ್ತು ಬಿಗಿಗೊಳಿಸಲು ಕಾಲಕಾಲಕ್ಕೆ ಬ್ಯೂಟಿ ಸ್ಪಾಗಳಿಗೆ ತೆರಳಿ, ಅಲ್ಲಿನ ರೂಪದರ್ಶಿಯರ ಮೂಲಕ ಫೇಶಿಯಲ್ಲು, ಬ್ಲೀಚಿಂಗು, ಮೇಕಪ್ಪುಗಳ ಮೊರೆ ಹೋಗುವುದು ಸಹಜ. ಹಾಗೆಯೇ ಕಟ್ಟಡಗಳ ಅಂದ ಚಂದ ಹೆಚ್ಚಿಸಲು ಹಾಗೂ ದೀರ್ಘಾವಧಿ ಬಾಳಿಕೆ ಬರಲು ಕಾಲಕಾಲಕ್ಕೆ ಸುಣ್ಣ, ಬಣ್ಣಗಳ ಲೇಪನಗಳಾಗುವುದು ಬಹುಮುಖ್ಯ. ಪೈಂಟರ್ಸ್ಗಳು ಉಪ್ಪುಕಾಗದದಿಂದ ಉಜ್ಜಿ, ಕನ್ಸೀಲರ್ನಂತೆ ಕ್ರಾಕ್ಸ್ಗಳಿಗೆಲ್ಲ ತುಂಬಿ ಲಪ್ಪ ಬಳಿದು ನಂತರ ಸುಣ್ಣ ಬಣ್ಣ ಬಳಿದು ಹೊಸರೂಪ, ಹೊಸ ನೋಟ ಕೊಡುವುದರಲ್ಲಿ ಯಶಸ್ವಿಯಾಗುವರು.
ಹಚ್ಚಿದ ಬಣ್ಣ ವಷಾನುಗಟ್ಟಲೆ ಬಾಳಿಕೆ ಬರುತ್ತದೆ ಎಂದು ಜಾಹೀರಾತುಗಳಲ್ಲಿ ತಮ್ಮ ತಮ್ಮ ಪೈಂಟ್ಸ್ ಗಳ ಬಗ್ಗೆ, ಬಣ್ಣಬಣ್ಣದ ರೂಪದರ್ಶಿಯರ ಮೂಲಕ ಬಣ್ಣಬಣ್ಣದ ಮಾತುಗಳಿಂದ ಜನಪ್ರಿಯಗೊಳಿಸಲು ಸಾಕಷ್ಟು ಹಣ ವ್ಯಯಿಸಿದರೂ, ಮುಖ ತೊಳೆಯುತ್ತಿದ್ದಂತೆ ಮೇಕಪ್ಪು ಕಳಚುವ ಹಾಗೆ, ಒಂದೆರಡು ಮಳೆಗಾಲಕ್ಕೆ ಮುಖವೊಡ್ಡಿದ ಕಟ್ಟಡಗಳೂ ಅದೇ ಸ್ಥಿತಿ ತಲುಪುವವು. ಆದರೆ ‘ಸಾಲೋಂ ಸಾಲ್ ರಖೇ ಖಯಾಲ್’ ಎನ್ನುವ ಸ್ಲೋಗನ್ ಪೇಂಟ್ಗೆ ಸಂಬಂಧಿಸಿದ್ದೇ ಆದರೂ, ಅದು ಬಣ್ಣಕ್ಕಿಂತ ಹೆಚ್ಚಾಗಿ ಅದನ್ನು ತುಂಬಿಕೊಂಡ ಬಕೆಟ್ಗಳಿಗೇ ಹೆಚ್ಚು ಅನ್ವಯವಾಗುವುದು ಸತ್ಯ. ಮೊಬೈಲ್ ಇರದ ಮನೆಯಿಲ್ಲ ಎನ್ನುವಂತೆ, ಬಣ್ಣದ ಬಕೆಟ್ ಉಪಯೋಗಿಸದ ಮನೆಗಳು ವಿರಳ ಎನ್ನಬಹುದು. ಮನೆಯ ಪೇಂಟಿಂಗ್ ಮುಗಿಯುವಷ್ಟರಲ್ಲಿ ಅರ್ಧಲೀಟರ್ ಮಗ್ಗಳಿಂದ ಹಿಡಿದು, ದೊಡ್ಡ ಅಳತೆಯ ಸ್ನಾನದ ಬಕೆಟ್ವರೆಗೂ ಸಂಗ್ರಹವಾಗಿರುವವು. ಮನೆಗೆ ಬಣ್ಣತುಂಬಿಕೊಂಡು ಪ್ರವೇಸಿಸುವ ಈ ಬಕೆಟುಗಳು, ತುಂಬಿದಮನೆಗೆ ಸೇರೊದ್ದು ಬಣ್ಣಬಣ್ಣದ ಕನಸುಗಳನ್ನು ಹೊತ್ತು ಬರುವ ಮನೆಸೊಸೆಯರಂತೆ ಮೇಲುಕೀಳೆನ್ನದೆ ಅನೇಕ ಗೃಹಕೃತ್ಯಗಳಿಗೂ ನೆರವಾಗಿ ಕೊನೆಯವರೆಗೂ ಅಲ್ಲಿಯೇ ಬೀಡುಬಿಟ್ಟು ಜೀವಸವೆಸುವುದಿದೆ.

ಇವುಗಳ ಆಕಾರ, ಗಾತ್ರ, ಗಟ್ಟಿತನಕ್ಕೆ ಮನಸೋಲದವರಿಲ್ಲ. ಸಿಲಿಂಡ್ರಿಕಲ್ ಫಿಗರ್ ಕಾಯ್ದುಕೊಂಡಿರುವ ಇವುಗಳು ಬಳುಕಾಡುವ ಮಾತೇ ಇಲ್ಲ. ಆನಕೊಂಡದಂತಹ ಬಲಶಾಲಿಯಾಗಿರುವ ಬಕೆಟ್ಗಳು ಮಿಡಿನಾಗರ ಅಥವಾ ಪ್ಲಾಸ್ಟಿಕ್ ಟೇಪಿನಂತಹ ಹಿಡಿಕೆ ಹೊಂದಿರುವುದು ವಿಶೇಷ. ಬಕೆಟ್ ಹಾಗೂ ಮುಚ್ಚಳಗಳು ಬಣ್ಣ ಬಳಿಯುವವರೆಗೆ ಮಾತ್ರ ಜೊತೆಯಾಗಿದ್ದು, ನಂತರ ಮನ್ನಣೆ ಇರದ ಪತಿಯ ಪಾತ್ರದಂತೆ ಮುಚ್ಚಳಗಳು ಮೂಲೆಗುಂಪಾಗುವುದು ಹೆಚ್ಚು. ಕೆಲವೊಮ್ಮೆ ಹಿಡಿಕೆಗಳೂ ಹಿಡಿತ ಸಡಲಿಸಿ ಅಗಲುವುದಿದೆ. ‘ಆನೆ ನಡೆದದ್ದೇ ದಾರಿ’ ಎನ್ನುವಂತೆ ಬಕೆಟ್ ಮಾತ್ರ ಯಾರನ್ನೂ ಅವಲಂಬಿಸದೆ ತನ್ನ ಕಾಯಕಕ್ಕೆ ಪಕ್ಕಾಗಿರುತ್ತದೆ. ಸೂರ್ಯನ ತಾಪಕ್ಕೂ ಸುಲಭವಾಗಿ ಫೇಡ್ ಆಗದೆ ಮಹಿಳೆಯರು ದುಬಾರಿ ಹೆಚ್ಡಿ ಮೇಕಪ್ ಲೇಪಿಸಿಕೊಂಡಂತಹ ನಯ, ನುಣುಪು ಸೌಂದರ್ಯವನ್ನು ಸದಾ ಕಾಪಾಡಿಕೊಂಡಿರುತ್ತದೆ
ಗೃಹಕೃತ್ಯದಲ್ಲಿ ಈ ಬಣ್ಣದ ಬಕೆಟ್ಗಳ ಪಾತ್ರ ಹೆಚ್ಚು. ಪಾತ್ರೆ ತೊಳೆಯುವ ಟಬ್ ಆಗಿ, ತೊಳೆದ ಪಾತ್ರೆ ಹಾಕುವ ಬುಟ್ಟಿಯಾಗಿ, ಬಟ್ಟೆಗಳನ್ನು ತೊಳೆಯುವ ಬಕೆಟ್ಗಳಾಗಿ, ಮಜ್ಜನ ಮಾಡುವ ಬಕೆಟ್ ಹಾಗೂ ಮಗ್ಗುಗಳಾಗಿ, ನೆಲ ಒರೆಸುವ ಉಪಯೋಗಕ್ಕಾಗಿ, ಕಸ ಹಾಕುವ ಡಸ್ಟ್ಬಿನ್ಗಳಾಗಿ ಹೀಗೆ ಪ್ರತಿ ಕೆಲಸದಲ್ಲೂ ತಮ್ಮ ಛಾಯೆಯನ್ನು ಬಿಂಬಿಸುತ್ತಿವೆ. ಸ್ಟೋರೇಜ್ ಡಬ್ಬಿಗಳಾಗಿ ಕಾರ್ಯನಿರ್ವಹಿಸುವುದಲ್ಲದೆ, ಉಲ್ಟಾ ತಿರುಗಿಸಿ ಹಾಕಿದರೆ ಗಜತೂಕವನ್ನೂ ತಡೆದುಕೊಳ್ಳುವ ಸಾಮರ್ಥ್ಯವಿರುವ ಸ್ಟೂಲ್ನಂತೆ ಬದಲಾಗುವುದು. ಹಸಿಕಸ, ಒಣಕಸ ಸಂಗ್ರಹಕ್ಕೆ ಇವುಗಳಿಗಿಂತ ಸೂಕ್ತ ಆಯ್ಕೆ ಮತ್ತೊಂದಿಲ್ಲ. ಕಟ್ಟಡ ಕಾರ್ಮಿಕರು ಮಣ್ಣು, ಗಾರೆ ತುಂಬಿ ತಲೆಯ ಮೇಲೆ ಹೊತ್ತೊಯ್ಯಲು ಉಪಯೋಗಿಸುತ್ತಿದ್ದ ಕಬ್ಬಿಣ ಅಥವಾ ಪ್ಲಾಸ್ಟಿಕ್ ಬುಟ್ಟಿಗೆ ಬದಲಾಗಿ ಹೆಗಲ ಮೇಲಿಟ್ಟುಕೊಳ್ಳಲು ಸೂಕ್ತವಾಗಿರುವ ಈ ಬಣ್ಣದ ಬಕೆಟುಗಳನ್ನೇ ಹೆಚ್ಚು ನೆಚ್ಚಿಕೊಳ್ಳುತ್ತಿದ್ದಾರೆ. ಮುಂಜಾನೆಯಿಂದ ಸಂಜೆಯವರೆಗೆ ಬೀದಿಯಲ್ಲಿ ಇಟ್ಟರೂ ಕಳ್ಳಕಾಕರು ಅಷ್ಟಾಗಿ ಇವುಗಳನ್ನು ಕದಿಯಲು ಆಸಕ್ತಿ ತೋರರು. ಕದ್ದರೂ ಬೇಸರವಾಗದು. ಹಾಗಾಗಿ ಕಸದ ಗಾಡಿ ಆಗಮಿಸುವವರೆಗೆ ನಿರ್ಭೀತಿಯಿಂದ ಬಿಡಬಹುದು. ನಾಯಿ, ಹಂದಿ, ಹಸುಗಳು ಬಂದು ಬಾಯಿಹಾಕಿ ಕೆಡವಿದರೂ, ಉರುಳಿಸಿದರೂ ಇವುಗಳ ಗಟ್ಟಿತನಕ್ಕೆ ಧಕ್ಕೆಯಾಗಲಾರದು.
ಹೈನೋದ್ಯಮ ನಡೆಸುವ ಹೆಚ್ಚಾನುಹೆಚ್ಚು ಗೌಳಿಗಳಿಗೆ ಬಣ್ಣದ ಬಕೆಟ್ಗಳು ವರದಾನವಾಗಿವೆ ಎನ್ನಬಹುದು. ರಾಸುಗಳಿಗೆ ನೀರುಣಿಸಲು ಮುಸುರೆ ಬಾನಿಯಂತೆ ಕಾರ್ಯನಿರ್ವಹಿಸುತ್ತದೆ. ಎಳೆದಾಡಿದರೂ, ಉರುಳಿಸಿದರೂ ಅಷ್ಟು ಸುಲಭವಾಗಿ ಹಾನಿಗೊಳಗಾಗಲಾರವು. ಹಿಂದೆಲ್ಲ ಕಬ್ಬಿಣ ಹಾಗೂ ಪ್ಲಾಸ್ಟಿಕ್ ಬಕೆಟ್ಗಳನ್ನು ಹೋಟೆಲ್ಗಳು, ಖಾನಾವಳಿ, ಬೇಕರಿ ಹಾಗೂ ಕೆಲವು ಪರಿಚಿತರ ಮನೆಗಳಲ್ಲಿ ಮುಸುರೆ ಸಂಗ್ರಹಕ್ಕಾಗಿ ಇಡುತ್ತಿದ್ದರು. ಕಬ್ಬಿಣದ ಬಕೇಟಿನ ಸೊಂಟ ಗಟ್ಟಿಯಿದ್ದರೂ, ತೂಕ ಹೆಚ್ಚಿರುತ್ತಿದ್ದರಿಂದ ಸಲೀಸಾಗದೆ ಹೊರಲಾಗದೆ ತುಳುಕಾಡಿಸಿಕೊಂಡು, ಕೆಲದಿನಗಳಲ್ಲೇ ತುಕ್ಕು ಹಿಡಿದು ತೂತು ಬಿದ್ದು ಆಗಾಗ ಆಪರೇಷನ್ ಕಲಾಯಿ ಅಥವಾ ಬೆಸುಗೆಗೆ ತುತ್ತಾಗುತ್ತಿರುತ್ತಿದ್ದವು. ಸಾಮಾನ್ಯ ಪ್ಲಾಸ್ಟಿಕ್ ಬಕೆಟ್ಗಳು ಹ್ಯಾಂಡಲ್ ಹಿಡಿದು ಮೇಲಕೆತ್ತುತ್ತಿದ್ದಂತೆ, ಸೊಂಟದಲ್ಲಿ ಕರ್ವ್ ಮೂಡಿಸಿಕೊಂಡು, ಹೇರ್ಲೈನ್ ಫ್ರಾಕ್ಚರ್ನಂತೆ, ತೆಳುವಾದ ಕ್ರ್ಯಾಕ್ ಮೂಡಿಸಿಕೊಂಡು, ಬಕೆಟ್ ರಿಪೇರಿಯವರು ಆ ಬಿರುಕಿಗೆ ಹೆಚ್ಚುವರಿ ಪ್ಲಾಸ್ಟಿಕ್ ತುಂಡನ್ನು ಬಿಸಿ ಮಾಡಿ ಕರಗಿಸಿ ಅಂಟಿಸುತ್ತಿದ್ದುದರಿಂದ ವಿವಿಧ ವಿನ್ಯಾಸದ ಬ್ಯಾಂಡೇಜ್ಗಳಿಂದ ಬಾಂಡ್ ಆದಂತೆ ಗೋಚರಿಸುತ್ತಿದ್ದವು. ಇಂತಹ ಪ್ಲಾಸ್ಟಿಕ್ ಸರ್ಜರಿಗೆ ಒಳಗಾದ ಬಕೆಟ್ಗಳು ಕೆಲವೇ ದಿನಗಳಲ್ಲಿ, ಬಿದ್ದವನಿಗೇ ಗುದ್ದು ಎಂಬಂತೆ, ವೆಲ್ಡಿಂಗ್ ಮಾಡಿದ ಅಕ್ಕಪಕ್ಕದಲ್ಲೇ ಬಿರುಕು ಮೂಡುತ್ತಿದ್ದರಿಂದ ಅವುಗಳ ಕಾರ್ಯಕ್ಷಮತೆ ಕ್ಷೀಣಿಸುತ್ತಿತ್ತು. ಹೆಚ್ಚುವರಿ ಕೆಲಸಗಳಿಗೆ ಬಳಸಲಾಗದೆ, ಕೇವಲ ಉಸ್ತುವಾರಿ ಕಾರ್ಯಗಳಿಗೆ ಬಳಸುವುದಾಗುತ್ತಿತ್ತು. ಪೈಂಟ್ ಬಕೆಟ್ಗಳು ಅವತರಿಸಿದಾಗಿನಿಂದ, ಮುಸುರೆ ಸಂಗ್ರಹಕ್ಕೆ ಇದಕ್ಕಿಂತ ಉತ್ಕೃಷ್ಟ ಗುಣಮಟ್ಟದ ವಸ್ತು ಸಿಗಲಾರದು ಎಂಬುದು ಮನವರಿಕೆಯಾಗಿದೆ. ಅವಶ್ಯಕತೆ ಇರುವೆಡೆಯೆಲ್ಲ ಇವುಗಳನ್ನು ಇಟ್ಟು, ತುಂಬಿದ ನಂತರ ಬೈಕ್ನ ಎರಡೂ ಕಡೆ ದಾರ ಕಟ್ಟಿ ಒಮ್ಮೆಲೇ ನಾಲ್ಕಾರು ಬಕೆಟ್ಗಳನ್ನು ಇಳೆಬಿಟ್ಟು ಸಾಗಿಸುವುದು ಸುಲಭವಾಗಿದೆ. ಅಕ್ಕಪಕ್ಕದಲ್ಲಿ ಅಕಸ್ಮಾತ್ ತಾಗಿದರೂ, ಹಾನಿ ತಾಗಿದವರಿಗೇ ಹೊರತು ಇವುಗಳಿಗಲ್ಲ. ಅಲುಗದೆ, ನಲುಗದೆ, ಮುಸುರೆಯನ್ನು ಹೆಚ್ಚು ತುಳುಕಿಸದೆ ಸ್ಥಿರತೆಯನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗುವವು.

ವರ್ಷಕ್ಕೊಮ್ಮೆ ಬೇಸಿಗೆಯಲ್ಲಿ ಹಪ್ಪಳ ಸಂಡಿಗೆ ಮಾಡುವಾಗ, ನೆರೆಹೊರೆಯವರ ಕಣ್ಣುಗಳು ಅವುಗಳ ಮೇಲೆಯೇ ಠಳಾಯಿಸಿ, ಮಾಹಿತಿ ಸಂಗ್ರಹಕ್ಕೆ ಮುಂದಾಗುತ್ತಿದ್ದಂತೆ ರುಚಿನೋಡಲು
ಒಂದಿಷ್ಟು ಕೊಡುವ ಪ್ರಮೇಯ ಒದಗುವಂತೆ, ಪೇಂಟಿಂಗ್ ಮಾಡುವಾಗಲೂ ಕೂಡ ಬಣ್ಣ ನೋಡುವ ನೆಪದಲ್ಲಿ ಆಗಮಿಸಿ ಬಕೆಟ್ಗಾಗಿ ಬಕೆಟ್ ಹಿಡಿಯುವ ಬಕೆಟಿಗರೂ ಇರುವರು. ಹಪ್ಪಳ ತಯಾರಿಕೆಯಲ್ಲಿ ಉಪಯೋಗಿಸುವ ದೊಡ್ಡ ದೊಡ್ಡ ಪಾತ್ರೆಗಳನ್ನು ತೊಳೆಯುವಾಗ ಮನೆಗೆಲಸದವಳಿಗೂ ಕ್ಲೂ ಸಿಗುವುದರಿಂದ ಅವರನ್ನೂ ಲೆಕ್ಕಕ್ಕಿಡುವಂತೆ, ಮನೆಯ ಪೇಂಟಿಂಗ್ ಮಾಡಿಸುವಾಗ ಒಂದಿಷ್ಟು ಬಕೆಟ್ಗಳನ್ನು ಮನೆಗೆಲಸದವರಿಗೆ, ಗಾರ್ಡನ್ ಕೆಲಸದವರಿಗೆ, ಅಡುಗೆ ಮಾಡುವವರಿಗೆ ಮೀಸಲಿಡಬೇಕಾಗುವುದು.
ಒಂದಿಷ್ಟು ಕೊಡುವ ಪ್ರಮೇಯ ಒದಗುವಂತೆ, ಪೇಂಟಿಂಗ್ ಮಾಡುವಾಗಲೂ ಕೂಡ ಬಣ್ಣ ನೋಡುವ ನೆಪದಲ್ಲಿ ಆಗಮಿಸಿ ಬಕೆಟ್ಗಾಗಿ ಬಕೆಟ್ ಹಿಡಿಯುವ ಬಕೆಟಿಗರೂ ಇರುವರು. ಹಪ್ಪಳ ತಯಾರಿಕೆಯಲ್ಲಿ ಉಪಯೋಗಿಸುವ ದೊಡ್ಡ ದೊಡ್ಡ ಪಾತ್ರೆಗಳನ್ನು ತೊಳೆಯುವಾಗ ಮನೆಗೆಲಸದವಳಿಗೂ ಕ್ಲೂ ಸಿಗುವುದರಿಂದ ಅವರನ್ನೂ ಲೆಕ್ಕಕ್ಕಿಡುವಂತೆ, ಮನೆಯ ಪೇಂಟಿಂಗ್ ಮಾಡಿಸುವಾಗ ಒಂದಿಷ್ಟು ಬಕೆಟ್ಗಳನ್ನು ಮನೆಗೆಲಸದವರಿಗೆ, ಗಾರ್ಡನ್ ಕೆಲಸದವರಿಗೆ, ಅಡುಗೆ ಮಾಡುವವರಿಗೆ ಮೀಸಲಿಡಬೇಕಾಗುವುದು.
ಕೈತೋಟ ಬೆಳೆಸುವ ಆಸಕ್ತರು ಇತ್ತೀಚೆಗೆ ಮಣ್ಣು, ಪ್ಲಾಸ್ಟಿಕ್, ಸಿಮೆಂಟಿನ ಕುಂಡಗಳಿಗಿಂತ ಹೆಚ್ಚಾಗಿ ಬಣ್ಣದ ಬಕೆಟ್ಕುಂಡಗಳ ಮೊರೆಹೋಗಿರುವರು. ಅನೇಕ ಬಾರಿ ಮಕ್ಕಳ ಗಲ್ಲಿ ಕ್ರಿಕೆಟ್ ಆಟದಲ್ಲಿ ಎರಡೂ ಬದಿಗಳಲ್ಲಿ ನಿಲ್ಲಿಸುವ ಆಫ್ಸ್ಟಂಪ್, ಮಿಡಲ್ ಸ್ಟಂಪ್, ಲೆಗ್ ಸ್ಟಂಪ್ಗಳ ಸ್ಥಾನವನ್ನು ತ್ರಿಪಾತ್ರಧಾರಿಯಾಗಿ ಏಕೈಕ ಪೈಂಟ್ ಬಕೆಟ್ ನಿರ್ವಹಿಸುವುದಿದೆ. ಅದೆಂತಹ ವೇಗದ ಬೌಲಿಂಗ್ಗೂ ಪರ್ವತದಂತೆ ಅಚಲವಾಗಿ ಮಕಾಡೆ ನಿಂತಿರುವ ಬಕೆಟ್ ಸುಲಭವಾಗಿ ಕದಲಲಾರದು.
ಮಾರುಕಟ್ಟೆಯಲ್ಲಿ ಬಣ್ಣಬಣ್ಣದ ವಿವಿಧ ಅಳತೆಯ ಬಕೆಟ್ಟುಗಳು ಸಿಗಬಹುದು. ಆದರೆ ಬಣ್ಣದ ಬಕೆಟ್ಗಳ ಉಪಯೋಗದ ಮುಂದೆ ಅವುಗಳೆಲ್ಲ ಸಪೆಸಪ್ಪೆ. ಹಾಗಾಗಿ ಇತ್ತೀಚೆಗೆ ಖಾಲಿ ಬಣ್ಣದ
ಬಕೆಟ್ಗಳನ್ನೂ ಮಾರಾಟಕ್ಕಿಡುವುದಿದೆ. ಬೆಲೆ ಕಡಿಮೆ, ತಾಳಿಕೆ-ಬಾಳಿಕೆ ಹೆಚ್ಚು ಎನ್ನುವ ಹೆಗ್ಗಳಿಕೆ ಇದರದ್ದು. ‘ಇಟ್ಟರೇ ಸೆಗಣಿಯಾದೆ, ತಟ್ಟಿದರೆ ಕುರುಳಾದೆ, ಸುಟ್ಟರೆ ನೊಸಲಿಗೆ ವಿಭೂತಿಯಾದೆ, ತಟ್ಟದೇ ಹಾಕಿದರೆ ಮೇಲುಗೊಬ್ಬರವಾದೆ’ ಎನ್ನುವ ಎಸ್ಜಿ ನರಸಿಂಹಾಚಾರ್ಯರು ರಚಿಸಿದ ಕವಿತೆಯ ಸಾಲುಗಳಂತೆ, ಬಣ್ಣದ ಬಕೆಟ್ ಕೂಡಾ ಮನುಷ್ಯನ ದೈನಂದಿನ ಜೀವನದಲ್ಲಿ ಬಹುಪಯೋಗಿ ಕಾರ್ಯಗಳಿಗೆ ಹೇಳಿ ಮಾಡಿಸಿದ್ದಂತಿದೆ. ‘ಆವ ರೂಪದೊಳು ಬಂದರೂ ಸರಿಯೇ, ಆವ ವೇಷದೊಳು ನಿಂದರು ಸರಿಯೇ’ ಎಂಬಂತೆ ವಿವಿಧ ಅಳತೆಯ ಬಣ್ಣದ ಬಕೆಟ್ಗಳು, ತಮ್ಮ ಒಡಲೊಳಗೆ ಗೃಹಶೋಭೆಯ ಬಣ್ಣಗಳನ್ನು ಹೊತ್ತು ತರುವುದು ಹೌದಾದರೂ, ಬರಿದಾದಾಗ ಒಡಲು ‘ಬಹುಜನ ಸುಖಾಯ ಬಹುಜನ ಹಿತಾಯ’ ಎನ್ನುವ ಪರಿಕಲ್ಪನೆಯಂತೆ, ಮನೆಮಂದಿಯ ಒಡನಾಡಿಗಳಾಗಿ ಮತ್ತಷ್ಟು ಜನಸ್ನೇಹಿಯಾಗಿ ಅನೇಕ ಜನೋಪಯೋಗಿ ಕಾರ್ಯಗಳಿಗೆ ನಿರಂತರವಾಗಿ ಸೇವೆಸಲ್ಲಿಸುತ್ತಿರುವುದರಲ್ಲಿ ಸಂಶಯವಿಲ್ಲ.
ಬಕೆಟ್ಗಳನ್ನೂ ಮಾರಾಟಕ್ಕಿಡುವುದಿದೆ. ಬೆಲೆ ಕಡಿಮೆ, ತಾಳಿಕೆ-ಬಾಳಿಕೆ ಹೆಚ್ಚು ಎನ್ನುವ ಹೆಗ್ಗಳಿಕೆ ಇದರದ್ದು. ‘ಇಟ್ಟರೇ ಸೆಗಣಿಯಾದೆ, ತಟ್ಟಿದರೆ ಕುರುಳಾದೆ, ಸುಟ್ಟರೆ ನೊಸಲಿಗೆ ವಿಭೂತಿಯಾದೆ, ತಟ್ಟದೇ ಹಾಕಿದರೆ ಮೇಲುಗೊಬ್ಬರವಾದೆ’ ಎನ್ನುವ ಎಸ್ಜಿ ನರಸಿಂಹಾಚಾರ್ಯರು ರಚಿಸಿದ ಕವಿತೆಯ ಸಾಲುಗಳಂತೆ, ಬಣ್ಣದ ಬಕೆಟ್ ಕೂಡಾ ಮನುಷ್ಯನ ದೈನಂದಿನ ಜೀವನದಲ್ಲಿ ಬಹುಪಯೋಗಿ ಕಾರ್ಯಗಳಿಗೆ ಹೇಳಿ ಮಾಡಿಸಿದ್ದಂತಿದೆ. ‘ಆವ ರೂಪದೊಳು ಬಂದರೂ ಸರಿಯೇ, ಆವ ವೇಷದೊಳು ನಿಂದರು ಸರಿಯೇ’ ಎಂಬಂತೆ ವಿವಿಧ ಅಳತೆಯ ಬಣ್ಣದ ಬಕೆಟ್ಗಳು, ತಮ್ಮ ಒಡಲೊಳಗೆ ಗೃಹಶೋಭೆಯ ಬಣ್ಣಗಳನ್ನು ಹೊತ್ತು ತರುವುದು ಹೌದಾದರೂ, ಬರಿದಾದಾಗ ಒಡಲು ‘ಬಹುಜನ ಸುಖಾಯ ಬಹುಜನ ಹಿತಾಯ’ ಎನ್ನುವ ಪರಿಕಲ್ಪನೆಯಂತೆ, ಮನೆಮಂದಿಯ ಒಡನಾಡಿಗಳಾಗಿ ಮತ್ತಷ್ಟು ಜನಸ್ನೇಹಿಯಾಗಿ ಅನೇಕ ಜನೋಪಯೋಗಿ ಕಾರ್ಯಗಳಿಗೆ ನಿರಂತರವಾಗಿ ಸೇವೆಸಲ್ಲಿಸುತ್ತಿರುವುದರಲ್ಲಿ ಸಂಶಯವಿಲ್ಲ.
- ನಳಿನಿ ಟಿ. ಭೀಮಪ್ಪ – ಹಾಸ್ಯ ಲೇಖಕರು, ಧಾರವಾಡ.
