ದುಡ್ಡಿನಾಸೆಗೆ ಹಸುಳೆಯನ್ನು ಕದ್ದೊಯ್ದು ಮಾರುವವರು, ಒಂಟಿ ಹೆಣ್ಣಿನ ಮೇಲೆ ಅತ್ಯಾಚಾರ ಮಾಡಿ ಕಾಮ ತೀರಿಸಿಕೊಳ್ಳುವವರು, ಯಾವುದಾದರೂ ಸಮಾರಂಭದ ತಯಾರಿಯ ಜವಾಬ್ದಾರಿ ವಹಿಸಿದರೆ ಅಧಿಕ ಹಣಪಡೆದು ಜೇಬು ತುಂಬಿಸಿಕೊಳ್ಳುವವರು ಇವರೆಲ್ಲಾ ಸಮಯ ಸಾಧಕರೇ.ಅಂಕಣಕಾರ್ತಿ ಮಂಗಳ ಎಂ ನಾಡಿಗ್ ಅವರ ‘ಅಂಗೈಯಲ್ಲಿ ಪ್ರಪಂಚ’ ಅಂಕಣದಲ್ಲಿ ‘ಸಮಯ ಸಾಧಕರು’ ತಪ್ಪದೆ ಮುಂದೆ ಓದಿ…
“ಸಮಯ ಸಾಧಕರೆಂದರೆ, ಎಂಥಹಾ ಪರಿಸ್ಥಿತಿಯನ್ನೂ ಸಹ ತಮಗೆ ಬೇಕಾದಂತೆ ಉಪಯೋಗಿಸಿಕೊಳ್ಳುವವರು ಎಂದರ್ಥ”. ಎಲ್ಲಾದರೂ ಸಾವಾಗಿರಲಿ, ನೋವಾಗಿರಲಿ ಅವರಿಗೆ ಯಾವುದೂ ಲೆಕ್ಕಕ್ಕಿರುವುದಿಲ್ಲ. ತಮ್ಮ ಸ್ವಾರ್ಥಕ್ಕೋಸ್ಕರ ಯಾರನ್ನು ಹೇಗೆ ಬೇಕಾದರೂ ಬಳಸಿಕೊಳ್ಳುತ್ತಾರೆ. ನಿಷ್ಠೆ, ಕರುಣೆ, ಪ್ರೀತಿ-ವಾತ್ಸಲ್ಯ, ಮಮತೆ ಎಂದರೇನೆಂದೇ ತಿಳಿಯದ ಮೂರ್ಖರವರು. ಅಂಥವರಿಂದ ಜೊತೆಗಿರುವವರಿಗೆ, ಸುತ್ತಮುತ್ತಲಿನವರಿಗೆ, ಸಮಾಜಕ್ಕೆ ಎಲ್ಲರಿಗೂ ತೊಂದರೆ ಕಟ್ಟಿಟ್ಟ ಬುತ್ತಿ.
ಒಮ್ಮೆ ಭೂಕಂಪದಿಂದಾಗಿ ಮನೆಗಳೆಲ್ಲಾ ಬಿದ್ದುಹೋಗಿ ನೂರಾರು ಜನರ ಸಾವಾಗಿತ್ತು. ಅವರನ್ನೆಲ್ಲಾ ಬೇರೆಡೆ ಸ್ಥಳಾಂತರಿಸಿದ್ದರು. ಅದೇ ಸಮಯದಲ್ಲಿ ಕಳ್ಳರು ಹೋಗಿ, ಸಿಕ್ಕಿದ್ದನ್ನೆಲ್ಲಾ ಬಾಚಿಕೊಂಡಿದ್ದರು. ಇನ್ನೂ ಕೆಲವರು ಕಿವಿಯೋಲೆಗೋಸ್ಕರ ಹೆಣದ ಕಿವಿಯನ್ನೇ ಕತ್ತರಿಸಿದರೆಂದು ಸುದ್ದಿಯಾಗಿತ್ತು. ಸಾವಿನ ಮನೆಗೆ ಹೋಗಿ ಕೊಟ್ಟ ಸಾಲಕ್ಕಿಂತ ಜಾಸ್ತಿ ಹಿಂತಿರುಗಿ ಪಡೆದವರೂ ಇದ್ದಾರೆ. ಕಳ್ಳತನ ಮಾಡಿ ಬೇರೆಯವರನ್ನು ಸಿಕ್ಕಿಹಾಕಿಸಿ ಅವರು ಶಿಕ್ಷೆ ಅನುಭವಿಸುವಂತೆ ಮಾಡಿ ತಾವು ಶಿಕ್ಷೆಯಿಂದ ತಪ್ಪಿಸಿಕೊಂಡು ಸಂಭ್ರಮಪಟ್ಟವರೂ ಇದ್ದಾರೆ. ಕೊಲೆ-ಸುಲಿಗೆ, ಕಳ್ಳತನ, ಜಗಳ, ಅಪಘಾತ, ಅಚಾನಕ್ಕಾಗಿ ಆಗುವ ಅವಘಡ, ಬೇಕೆಂತಲೇ ಮಾಡುವ ಹಿಂಸೆ, ಗಲಾಟೆ, ದೊಂಬಿ ಎಲ್ಲವೂ ಸಮಯ ಸಾಧಕರಿಗೆ ತಮ್ಮ ಬೇಳೆಬೇಯಿಸಿಕೊಳ್ಳಲು ಒಳ್ಳೆಯ ಸಮಯ.

ಇತ್ತೀಚಿನ ದುರಂತ ಎಂದರೆ, ಕೊರೋನಾ ಸಮಯದಲ್ಲೂ ಅನೇಕರು ದುಡ್ಡು ಮಾಡಿಕೊಂಡ ವಿಷಯ. ಇಡೀ ಜಗತ್ತೇ ಕಣ್ಣಿಗೆ ಕಾಣದ ಒಂದು ವೈರಾಣುವಿಗೆ ಸೋತು ಸುಣ್ಣವಾಗಿರುವಾಗ, ಅದರ ಚಿಕಿತ್ಸೆಯ ವಿಷಯದಲ್ಲಿ ಹಣ ಮಾಡುವ ಸಮಯ ಸಾಧಕರಿಗೆ ಏನು ಹೇಳಲು ಸಾಧ್ಯ? ಒಂದು ಕಡೆ ದುಡಿಮೆಯಿಲ್ಲದೇ, ಹೊಟ್ಟೆಗೆ ಹಿಟ್ಟಿಲ್ಲದೇ, ಇರುವ ದುಡ್ಡು ಖಾಲಿಯಾಗಿ, ಬರೀ ಕೈಯ್ಯಲ್ಲಿರುವಾಗ, ಬದುಕುವುದೇ ಕಷ್ಟವಾಗಿರುವಾಗ ಅಂತಹ ಸಮಯವನ್ನೂ ಸಹ ತಮ್ಮ ಸ್ವಾರ್ಥಕ್ಕಾಗಿ ಉಪಯೋಗಿಸಿಕೊಳ್ಳುವವರು ನಿಜವಾಗಲೂ ಮನುಷ್ಯರಾಗಿರಲು ಸಾಧ್ಯವೇ ಇಲ್ಲ.
ಇಂತಹ ಸಮಯದಲ್ಲೂ ”ಒಬ್ಬರ ಮೇಲೆ ಮತ್ತೊಬ್ಬರು ತಪ್ಪುಹೊರಿಸಿ ಕೆಸರೆರೆಚಾಟಗಳನ್ನು ಮಾಡಿಕೊಂಡು ಎಡವಟ್ಟಾಗಿ ತಾವೇ ಬೆತ್ತಲಾದವರೂ ” ಇದ್ದಾರೆ. ಅದಕ್ಕೇ ಹೇಳುವುದು, ನೀವು ಸಮಯ ಸಾಧಕರಾದರೆ ಅದನ್ನು ಮೆಟ್ಟಿ ನಿಲ್ಲುವ ಸಮಯ ಒಂದಲ್ಲಾ ಒಂದು ದಿನ ಖಂಡಿತಾ ಬಂದೇ ಬರುತ್ತದೆ ಎಂದು.
ದುಡ್ಡಿನಾಸೆಗೆ ಹಸುಳೆಯನ್ನು ಕದ್ದೊಯ್ದು ಮಾರುವವರು, ಒಂಟಿ ಹೆಣ್ಣಿನ ಮೇಲೆ ಅತ್ಯಾಚಾರ ಮಾಡಿ ಕಾಮ ತೀರಿಸಿಕೊಳ್ಳುವವರು, ಯಾವುದಾದರೂ ಸಮಾರಂಭದ ತಯಾರಿಯ ಜವಾಬ್ದಾರಿ ವಹಿಸಿದರೆ ಅಧಿಕ ಹಣಪಡೆದು ಜೇಬು ತುಂಬಿಸಿಕೊಳ್ಳುವವರು ಇವರೆಲ್ಲಾ ಸಮಯ ಸಾಧಕರೇ.
ಲಂಚ ತೆಗೆದುಕೊಂಡು ಶಾಲೆಗೆ ಪ್ರವೇಶ ನೀಡುವವರೂ ಇದ್ದಾರೆ. ಒಂದು ಮಗುವನ್ನು ಶಾಲೆಗೆ ಸೇರಿಸಿ ಅದರ ಭವಿಷ್ಯ ರೂಪಿಸಲು ನೂರಾರು ಕನಸು ಹೊತ್ತು ಬಂದವರಿಗೆ ಲಂಚಕೊಡದೇ ಪ್ರವೇಶವಿಲ್ಲ ಎನ್ನುವುದು ಎಂಥಹಾ ವಿಪರ್ಯಾಸ. ” ಇದಕ್ಕಾಗಿಯೇ ಇವರೆಲ್ಲಾ ವಿದ್ಯೆ ಕಲಿತು ಬಂದು ಈ ಜಾಗದಲ್ಲಿ ಕುಳಿತಿದ್ದಾರೆಯೇ?”
ಸಮಯ ಸಾಧಕರಿಗೆ ನನ್ನದೊಂದು ಕಿವಿಮಾತು. ನೀವು ಉಪಯೋಗಿಸಿಕೊಳ್ಳುತ್ತಿರುವ ಸಮಯ ಹೀಗೇ ಇರುವುದಿಲ್ಲ. ಒಮ್ಮೆಯಾದರೂ ಹಿಂತಿರುಗಿ ನೋಡಿ ಮಾಡಿದ ಪಾಪ ಕರ್ಮಗಳಿಗೆಲ್ಲಾ ಪಶ್ಚಾತ್ತಾಪಪಟ್ಟು ಸಾಧ್ಯವಾದರೆ ಸರಿಪಡಿಸಿ. ಅಸಾಧ್ಯವಾದರೆ ಕ್ಷಮೆಯನ್ನಾದರೂ ಕೇಳಿ. ಮುಂದೆ ಎಂದೂ ಬೇರೆಯವರ ಕಷ್ಟದ ಸಮಯವನ್ನು ನಿಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳಬೇಡಿ. ಅವರ ಕಣ್ಣೀರು, ನೋವು, ಸಂಕಟ, ದುಃಖ, ಹತಾಶೆ ಇವುಗಳಿಗೆಲ್ಲಾ ಮುಂದೊಂದು ದಿನ ನೀವು ತುಂಬಾ ದೊಡ್ಡಬೆಲೆ ತೆರಲೇಬೇಕಾಗುತ್ತದೆ. ಸಾಧ್ಯವಾದರೆ ನಾಲ್ಕು ಜನರಿಗೆ ಉಪಕಾರ ಮಾಡಿ, ಇಲ್ಲವಾದರೆ ಉಪದ್ರವ ಕೊಡಬೇಡಿ.
ತಂದೆ-ತಾಯಿ ಇಟ್ಟ ಹೆಸರಿಗೆ ಮಸಿ ಬಳಿಯಬೇಡಿ. ಅವರಿಗೆ ಅಗೌರವ, ಅವಮಾನವಾಗುವಂತಹ ಕೆಲಸ ಮಾಡದೇ ಒಳ್ಳೆಯ ನಾಗರಿಕರಾಗಿ ಬದುಕಿ. ಅದೇ ನೀವು ಸಮಾಜಕ್ಕೆ, ಹೆತ್ತವರಿಗೆ ಕೊಡುವ ಬಹು ದೊಡ್ಡ ಕೊಡುಗೆ ಮತ್ತು ಗೌರವ.
- ಸುತ್ತ ಮುತ್ತ – ಲೇಖನಗಳ ಸಂಕಲನದಿಂದ
- ಕೃಪೆ : ಸುತ್ತ ಮುತ್ತ ಲೇಖನಗಳ ಸಂಕಲನ
- ಹಿಂದಿನ ಸಂಚಿಕೆಗಳು :
- ಅಂಗೈಯಲ್ಲಿ ಪ್ರಪಂಚ (ಭಾಗ-೧)
- ಅಂಗೈಯಲ್ಲಿ ಪ್ರಪಂಚ (ಭಾಗ-೨)
- ಅಂಗೈಯಲ್ಲಿ ಪ್ರಪಂಚ ‘ಗಂಡು ಮಕ್ಕಳ ಮೇಲೆ ಉಂಟಾಗುವ ಲೈಂಗಿಕ ದೌರ್ಜನ್ಯ’ (ಭಾಗ-೩)
- ಅಂಗೈಯಲ್ಲಿ ಪ್ರಪಂಚ ‘ನಾನು… ನಿಮ್ಮ ದಿಂಬು’ (ಭಾಗ-೪)
- ಅಂಗೈಯಲ್ಲಿ ಪ್ರಪಂಚ ‘ಆಡಿಕೊಳ್ಳುವುದು’ (ಭಾಗ- ೫)
- ಅಂಗೈಯಲ್ಲಿ ಪ್ರಪಂಚ ‘ಕ್ರಿಯೆ ಇದ್ದ ಮೇಲೆ ಪ್ರತಿಕ್ರಿಯೆ’ (ಭಾಗ- ೬)
- ಅಂಗೈಯಲ್ಲಿ ಪ್ರಪಂಚ ‘ಹೈಸ್ಕೂಲ್, ಕಾಲೇಜು ಮಕ್ಕಳಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯಗಳ ವ್ಯಸನ’ (ಭಾಗ- ೭)
- ಅಂಗೈಯಲ್ಲಿ ಪ್ರಪಂಚ ‘ನಾನ್ರೀ ನಿಮ್ ದಾರಿ’ (ಭಾಗ- ೮)
- ಅಂಗೈಯಲ್ಲಿ ಪ್ರಪಂಚ ‘ಸಾಮಾಜಿಕ ಜವಾಬ್ದಾರಿ’ (ಭಾಗ- ೯)
- ಅಂಗೈಯಲ್ಲಿ ಪ್ರಪಂಚ ‘ಹರೆಯ ಉಕ್ಕಿ’ (ಭಾಗ- ೧೦)
- ಅಂಗೈಯಲ್ಲಿ ಪ್ರಪಂಚ ‘ಏನೇನೋ ಅಂದುಕೊಳ್ಳುವ ಮುನ್ನ’ (ಭಾಗ- ೧೧)
- ಅಂಗೈಯಲ್ಲಿ ಪ್ರಪಂಚ ‘ಮಗುವಿನ ಕಾಳಜಿ ಜೊತೆಗೆ ಜಾಗೃತಿ’ (ಭಾಗ- ೧೨)
- ಅಂಗೈಯಲ್ಲಿ ಪ್ರಪಂಚ ‘ವಯಸ್ಸಾದಂತೆ ಜೀವನ ಒಂದು ಬೋನಸ್ ’(ಭಾಗ- ೧೩)
- ಅಂಗೈಯಲ್ಲಿ ಪ್ರಪಂಚ ‘ವೃದ್ಧಾಶ್ರಮ ’ (ಭಾಗ- ೧೪)
- ಅಂಗೈಯಲ್ಲಿ ಪ್ರಪಂಚ ‘ಮಧ್ಯಮ ವರ್ಗದ ಬದುಕು’ (ಭಾಗ- ೧೫)
- ಅಂಗೈಯಲ್ಲಿ ಪ್ರಪಂಚ ‘ಕಣ್ಣೀರು’ (ಭಾಗ- ೧೬)
- ಅಂಗೈಯಲ್ಲಿ ಪ್ರಪಂಚ ‘ನಾನ್ರೀ…ನಿಮ್ ಮನೆ’ (ಭಾಗ- ೧೭)
- ಅಂಗೈಯಲ್ಲಿ ಪ್ರಪಂಚ ‘ರಸ್ತೆಯಲ್ಲಿ ವಾಹನದ ಮೇಲಿರಲಿ ಜವಾಬ್ದಾರಿ’ (ಭಾಗ- ೧೮)
- ಅಂಗೈಯಲ್ಲಿ ಪ್ರಪಂಚ ‘ವಿಘ್ನ ಸಂತೋಷಿಗಳುಶ್ರೀಲಕ್ಷ್ಮಿ ಬಹಳ ಮುದ್ದಾದ ಹುಡುಗಿ’ (ಭಾಗ- ೧೯)
- ಅಂಗೈಯಲ್ಲಿ ಪ್ರಪಂಚ ‘ಮನಸ್ಥಿತಿ’ (ಭಾಗ- ೨೦)
- ಅಂಗೈಯಲ್ಲಿ ಪ್ರಪಂಚ ‘ಮೂಡ್ ಇಲ್ಲ’ (ಭಾಗ- ೨೧)
- ಅಂಗೈಯಲ್ಲಿ ಪ್ರಪಂಚ ‘ಭಾವನಾತ್ಮಕ ಸಂಬಂಧ’ (ಭಾಗ- ೨೨)
- ಅಂಗೈಯಲ್ಲಿ ಪ್ರಪಂಚ ‘ನಗುವಿನ ಮಹತ್ವ’ (ಭಾಗ- ೨೩)
- ಅಂಗೈಯಲ್ಲಿ ಪ್ರಪಂಚ ಅಮ್ಮನೆಂಬ ಅಮೃತ (ಭಾಗ- ೨೪)
- ಅಂಗೈಯಲ್ಲಿ ಪ್ರಪಂಚ ‘ಕಾಡುವ ಶಾಪ’ (ಭಾಗ- ೨೬)
- ಅಂಗೈಯಲ್ಲಿ ಪ್ರಪಂಚ ‘ಇರಲಿ ನಿಮ್ಮ ಸ್ಪಂದನೆ’ (ಭಾಗ- ೨೭)
- ಅಂಗೈಯಲ್ಲಿ ಪ್ರಪಂಚ ‘ಬಾಲ್ಯ ಕಸಿಯುವ ಮುನ್ನ’’ (ಭಾಗ- ೨೮)
- ಅಂಗೈಯಲ್ಲಿ ಪ್ರಪಂಚ ‘ಆಯಮ್ಮನೆಂಬ ಅಮ್ಮ’ (ಭಾಗ- ೨೯)
- ಅಂಗೈಯಲ್ಲಿ ಪ್ರಪಂಚ (ಭಾಗ- ೩೦)
- ಅಂಗೈಯಲ್ಲಿ ಪ್ರಪಂಚ ‘ ಬಫೆ ಸಿಸ್ಟಮ್’ (ಭಾಗ- ೩೧)
- ಅಂಗೈಯಲ್ಲಿ ಪ್ರಪಂಚ ‘ ಸ್ನೇಹ ಸಂಬಂಧ’ (ಭಾಗ- ೩೨)
- ಅಂಗೈಯಲ್ಲಿ ಪ್ರಪಂಚ‘ಮಾತನಾಡುವುದೂ ಒಂದು ಕಲೆ’ (ಭಾಗ- ೩೩)
- ಅಂಗೈಯಲ್ಲಿ ಪ್ರಪಂಚ ‘ನೆರೆಹೊರೆಯ ಸಂಬಂಧ’ (ಭಾಗ- ೩೪)
- ಅಂಗೈಯಲ್ಲಿ ಪ್ರಪಂಚ ‘ಅನ್ನದಾತೋ ಸುಖೀಭವ’ (ಭಾಗ- ೩೫)
- ಅಂಗೈಯಲ್ಲಿ ಪ್ರಪಂಚ ‘ಸಂಬಂಧಗಳಲ್ಲಿ ಬಿರುಕು’ (ಭಾಗ- ೩೬)
- ಅಂಗೈಯಲ್ಲಿ ಪ್ರಪಂಚ ‘ನಾನು ಆಸ್ಪತ್ರೆ’ (ಭಾಗ- ೩೮)
- ಅಂಗೈಯಲ್ಲಿ ಪ್ರಪಂಚ ‘ಮಧ್ಯವರ್ತಿಗಳು’ (ಭಾಗ- ೩೯)
- ಅಂಗೈಯಲ್ಲಿ ಪ್ರಪಂಚ ‘ಸಂಬಂಧ’ (ಭಾಗ- ೪೦)
- ಅಂಗೈಯಲ್ಲಿ ಪ್ರಪಂಚ ‘ನಾನ್ರೀ…ನಿಮ್ ಬೆಂಗ್ಳೂರು’ (ಭಾಗ- ೪೧)
- ಅಂಗೈಯಲ್ಲಿ ಪ್ರಪಂಚ ‘ಮನೆಗೆ ಹೇಳದೆ ಬಂದ ಅತಿಥಿ’ (ಭಾಗ- ೪೩)
- ಅಂಗೈಯಲ್ಲಿ ಪ್ರಪಂಚ ‘ಸಂಬಂಧಗಳಲ್ಲಿ ಸ್ಥಾನಮಾನ’ (ಭಾಗ- ೪೪)
- ಹಿಂದಿನ ಸಂಚಿಕೆಗಳು :
- ಮಂಗಳ. ಎಂ. ನಾಡಿಗ್ – ಅಂಕಣಕಾರ್ತಿ, ಕವಿಗಳು, ಬೆಂಗಳೂರು.
