ಚೆನ್ನೆಮಣೆ ನೆನಪು – ಶಕುಂತಲಾ ಸವಿ

ಚೆನ್ನೆಮಣೆ ಆಟ ದಕ್ಷಿಣ ಕನ್ನಡ ತುಳುನಾಡಿನ ಜನಪ್ರಿಯ ಆಟದಲ್ಲಿ ಒಂದು. ಚೆನ್ನೆಮಣೆ ಆಟದ ಕುರಿತು ಲೇಖಕಿ ಶಕುಂತಲಾ ಸವಿ ಅವರು ಬರೆದಿರುವ ಒಂದು ಲೇಖನವನ್ನು ತಪ್ಪದೆ ಮುಂದೆ ಓದಿ ಮತ್ತು ತಪ್ಪದೆ ಶೇರ್ ಮಾಡಿ…

ಚೆನ್ನೆಮಣೆ  ಉಡುಪಿ ದಕ್ಷಿಣ ಕನ್ನಡ ತುಳುನಾಡಿನ ಜನಪ್ರಿಯ ಆಟ. ಇದನ್ನು ಕನ್ನಡದಲ್ಲಿ ‘ಅಳಗುಳಿ ಮನೆ’ ಎಂದು ಕರೆಯುತ್ತಾರೆ. ಇದರಲ್ಲಿ ಮನೆ ಅಂದರೆ ತುಳುವಿನ ಮಣೆ. ‘ಮಣೆ’ ಎಂದರೆ ಮರದಿಂದ ಮಾಡಿದ ಒಂದು ಅಡ್ಡವಾದ ವಸ್ತು. ಬೂಡಿನ ಬಲ್ಲಾಳ ಅರಸನು ಒಮ್ಮೆ ತನ್ನ ಹೆಂಡತಿ ಮಾಣಿ ಗಳನ್ನು ಚೆನ್ನೆಯಾಟಕ್ಕೆ ಕರೆಯುತ್ತಾರೆ. ಗಂಡ ಹೆಂಡತಿ ಚೆನ್ನೆಯಾಡುತ್ತಾರೆ. ಗಂಡ ಬಲ್ಲಾಳನು ಸೋಲುತ್ತಾನೆ. ಮಾಣಿಯನ್ನು ನೀರು ತರುವಂತೆ ಕಳುಹಿಸಿದ ಬಲ್ಲಾಳರು ಮಣಿ ತಿರುಗಿಸಿ ಇಡುತ್ತಾರೆ. ಇದರಿಂದ ಮಾಣಿಗಳಿಗೆ ಕೋಪ ಬರುತ್ತದೆ. ಅವಳು ಗಂಡನನ‍್ನ ಅಪಹಾಸ್ಯ ಮಾಡುತ್ತಾಳೆ. ಇದರಿಂದ ಸಿಟ್ಟುಗೊಂಡ ಬಲ್ಲಾಳರು ಮಾಣಿಗಳನ್ನು ಹೊಡೆಯುತ್ತಾರೆ. ಅವಳು ಮನೆಬಿಟ್ಟು ಹೋಗುತ್ತಾಳೆ. ಮತ್ತೇ ಮರಳಿ ಬಂದರು ‘ಜೂಮಾದಿ’ ಭೂತಕ್ಕೆ ಹರಕೆ ಹೇಳಿದ ಕಾರಣದಿಂದ ಮಾಣಿಗಳು ಸಾಯುತ್ತಾರೆ. ಹೀಗೆ ದುರಂತ ಕಥಾನಕವನ್ನು ಈ ಆಟವು ಹೊಂದಿದೆ. ಗಂಡ ಹೆಂಡತಿ ಈ ಆಟ ಆಡಬಾರದೆಂಬ ನಂಬಿಕೆಯಿದೆ. ಒಂದೇ ತಾಯಿಯ ಮಕ್ಕಳು ಈ ಆಟವನ್ನು ಆಡಬಾರದೆಂಬ ನಿಷೇಧವು ಕೆಲವು ಪ್ರದೇಶಗಳಲ್ಲಿ ಇದೆ. ಈ ಆಟವು ಭಾವನಾತ್ಮಕ ಸಂಘರ್ಷ ವನ್ನು ಉಂಟುಮಾಡಬಾರದೆಂಬ ಕಾರಣದಿಂದ ಇಂಥ ನಿಷೇಧಗಳು ಹುಟ್ಟಿವೆ ಎನ್ನಬಹುದು.

ಫೋಟೋ ಕೃಪೆ : google

ಚೆನ್ನೆ ಮಣೆ ತ ಪೊರ್ಲು

ಹೀಗಿದೆ ಚೆನ್ನೆಮಣೆ :

ಚೆನ್ನೆಮಣೆ ಸಾಮಾನ್ಯವಾಗಿ ಒಂದೂವರೆ ಅಡಿ ಉದ್ದ ಹೊಂದಿದ್ದು 5 ರಿಂದ 8 ಅಂಗುಲ ಅಗಲವಾಗಿರುತ್ತವೆ. ಮಣೆಯ ಉದ್ದಕ್ಕೂ ಎರಡೂ ಬದಿಗಳಲ್ಲಿ ತಲಾ ಏಳೇಳು ಗುಳಿಗಳಿರುತ್ತವೆ. ಮಣೆಯ ಎರಡೂ ಬದಿಗಳಲ್ಲಿ ಕಾಯಿಗಳನ್ನು ಸಂಗ್ರಹಿಸಲು ದೊಡ್ಡದಾಗ ಆಯತಾಕಾರದ ಸ್ಥಳಾವಕಾಶ. ತೇಗ, ಹಲಸು, ಬೀಟೆ, ಕರಿಮರಗಳಿಂದ ಸಾಮಾನ್ಯವಾಗಿ ಈ ಆಟದ ಮಣೆಯ ನಿರ್ಮಾಣ. ಪ್ರದಕ್ಷಿಣಾಕಾರದಲ್ಲಿ ಆಟ ಆಡುವುದು ದಕ್ಷಿಣ ಕನ್ನಡದಲ್ಲಿ ರೂಢಿ..

ನಾಮ ಹಲವು…
ಈ ಚೆನ್ನೆಮಣೆಗೆ ಹಲವು ಕಡೆಗಳಲ್ಲಿ ಹಲವು ಹೆಸರುಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚೆನ್ನೆಮಣೆ ಎಂದೇ ಪ್ರಸಿದ್ಧಿ ಪಡೆದರೆ , ಇತ್ತ ಘಟ್ಟದ ಮೇಲ್ಬಾಗದಲ್ಲಿ ಹಾಸನ ಮೊದಲಾದೆಡೆಗಳಲ್ಲಿ ಅಳಗುಳಿ ಮಣೆ ಎಂದೇ ಖ್ಯಾತಿ ಪಡೆದಿದೆ. ಅಟ್ಟಗುಳಿ ಎಂದೂ ಕರೆಯಲ್ಪಡುತ್ತದೆ.

ತಮಿಳ ಭಾಷೆಯಲ್ಲಿ ಪಲ್ಲಾಂಕುಣಿ ಹಾಗೂ ವಾನಗೊಂತು ಎಂದು ತೆಲುಗಿನಲ್ಲಿ ಈ ಮಣೆಯನ್ನು ಕರೆಯಲ್ಪಡುತ್ತದೆ. ಅಂತೂ ಮಣೆಯೊಂದೇ ನಾಮ ಹಲವು! ಕೇವಲ ಆಟವಲ್ಲ…!

ಚೆನ್ನೆಮಣೆ ಕೇವಲ ಸಮಯಕಳೆಯುವ ಆಟವಷ್ಟೇ ಅಲ್ಲ. ಇದೊಂದು ಗಣಿತ ಸೂತ್ರವೂ ಹೌದು. ಚೆನ್ನೆಮಣೆಯ ಮೂಲೆಕಟ್ಟು, ಸೇರಿದಂತೆ ಕೆಲವು ಪ್ರಮುಖ ಆಟಗಳಲ್ಲಿ ಆಟಗಾರ ಚಾಣಾಕ್ಷನಾಗಿ ತನ್ನ ಯೋಚನೆಗಳನ್ನು ಹರಿಸಿದ್ದೇ ಆದಲ್ಲಿ ಆತ ಆಟ ಗೆದ್ದಂತೆ… ಚೆನ್ನೆಮಣೆಯ ಆಟಗಳು ಗಣಿತದ ಸೂತ್ರಗಳ ಆಧಾರದಲ್ಲಿಯೇ ಇದೆ ಎಂಬುದು ಮತ್ತೊಂದು ಪ್ರಮುಖ ಅಂಶ. ಅಂತೂ ಚೆನ್ನೆಮಣೆ ಒಂದು ವೈಜ್ಞಾನಿಕ , ತಲೆಖರ್ಚುಮಾಡುವಂತಹ ಆಟ ಎಂಬುದು ಗಮನಾರ್ಹ ಅಂಶ.

ಇದು ಪದ್ದತಿ :

* ಆಷಾಢ, ಶ್ರಾವಣ ಮಾಸದಲ್ಲಷ್ಟೇ ಚೆನ್ನೆಮಣೆ ಆಟ ಆಡಬಹುದು.

* ಬಂಜೆ ಮಣೆಯನ್ನು ಇಡುವಂತಿಲ್ಲ

* ಆಡಲು ಕಲ್ಲು, ಹರಳುಗಳನ್ನು ಬಳಸಬಾರದು.

* ಚೆನ್ನೆಮಣೆಗೆ ಮರ್ಯಾದೆ ನೀಡಬೇಕು. ಅದನ್ನು ಕಾಲಿನಿಂದ ಒದೆಯುವುದು, ಬೆಂಕಿಯಲ್ಲಿ ಸುಡುವುದು ನಿಷಿದ್ದ.


  • ಶಕುಂತಲಾ ಸವಿ

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW