ಕೋರ್ಟ್ ನೋಟೀಸ್ ಹಿಡಿದುಕೊಂಡು ಬಂದಿದ್ದ ಅವನು ಸೋತು ಹೋಗಿದ್ದನು. ಜೀವನದಲ್ಲಿ ಆಸಕ್ತಿ ಕಳೆದು ಕೊಂಡಿದ್ದನು. ಇದು ಬಂಗಾರದ ಮನುಷ್ಯನಾಗಲು ಹೊರಟವನ ಕಥೆ. ಪ್ರಕಾಶ ವಸ್ತ್ರದ ಅವರ ‘ನ್ಯಾಯದ ಕಣ್ಣು’ ಅಂಕಣವನ್ನು ತಪ್ಪದೆ ಮುಂದೆ ಓದಿ…
ಪುಸ್ತಕ : ”ಅಡ್ವೋಕೇಟ್ ಡೈರಿ ವೃತ್ತಿ ಬದುಕಿನ ಬುತ್ತಿ”
ಬೆಲೆ : 200/
ಖರೀದಿಗಾಗಿ : 9448015613
ಅಂದು ಭಾನುವಾರ. ಮಧ್ಯಾಹ್ನನದ ನಿದ್ದೆಯಿಂದ ಎಚ್ಚರ ಆಗಿತ್ತು. ಕಾಲ್ ಬೆಲ್ಲ್ ಮೃದುವಾಗಿ ಒಂದೆ ಸಲ ಹೊಡೆದುಕೊಂಡು ನಿಂತಿತು. ನಾನೆ ಬಾಗಿಲು ತೆಗೆದೆ. ಒಂದು ಜೋಡಿ ನಮಸ್ಕಾರ ಹೇಳಿ ಪರಿಚಯದ ನಗೆ ನಕ್ಕರು. ನೋಡಿದ ಕೂಡಲೆ, ಗಂಡ ಹೆಂಡತಿ ಕಾರ್ಯಕ್ರಮಕ್ಕೆ ಅಹ್ವಾನಿಸಲು ಬಂದಿದ್ದಾರೆ ಎಂದು ಗೊತ್ತಾಯಿತು. ಒಳಗೆ ಬನ್ನಿ ಎಂದು ಕರೆದು ಹಾಲನಲ್ಲಿ ಕುಳಿತುಕೊಳ್ಳಲು ಹೇಳಿದೆ. ಅಪರಿಚತರು ಅನಿಸಿತು. ಹೆಂಡತಿ ತಾನಾಗಿಯೆ ‘ ಸರ್, ನಾವು ಯಾರು ಗೊತ್ತು ಹಿಡಿದಿರಲಿಕ್ಕಿಲ್ಲ. ಸುಮಾರು ಹದಿನೈದು ವರ್ಷದ ಹಿಂದೆ… ಬಂಗಾರದ ಮನುಷ್ಯ..” ಎಂದು ಗಂಡನ ಕಡೆಗೆ ನೋಡಿ ನಸುನಕ್ಕಳು. ಗೊತ್ತಾಯಿತು, ಹೇಗಿದ್ದೀರಿ ಎಂದು ಔಪಚಾರಿಕವಾಗಿ ಕೇಳಿದೆ. “ಸರ್, ನಮ್ಮ ಮಗಳ ಮದುವೆಗೆ ತಪ್ಪದೆ ಬಂದು ಆಶೀರ್ವಾದಿಸಿ. ನೀವು ಅಂದು ಸರಿಯಾಗಿ ಮಾರ್ಗ ದರ್ಶನ ಮಾಡಿರದಿದ್ದರೆ, ಭಾವ ಪರವಷವಾಗಿ ಜೀವನ ಏನೊ ಆಗಿ ಹೋಗುತ್ತಿತ್ತು. ಫ್ಯಾಮಿಲಿ ಜೊತೆ ಬನ್ನಿ ” ಎಂದು ಗಂಡ
ಮ್ಯಾರೇಜ್ ಕಾರ್ಡ್ ಕೊಟ್ಟ, ಇಬ್ಬರು ತೆರಳಿದರು. ನೆನಪಿನ ಸುರುಳಿ ಬಿಚ್ಚಿತು.
ಕೋರ್ಟ್ ನೋಟೀಸ್ ಹಿಡಿದುಕೊಂಡು ಬಂದಿದ್ದ ಅವನು ಸೋತು ಹೋಗಿದ್ದನು. ಜೀವನದಲ್ಲಿ ಆಸಕ್ತಿ ಕಳೆದು ಕೊಂಡಿದ್ದನು. ನಾನು ಈಗ ಏನು ಹೇಳಿದರೂ ರುಚಿಸದು. ಸಮಯ ಸಂದರ್ಭ ನೋಡಿ ನಡೆದು ಕೊಳ್ಳಬೇಕಾಗುತ್ತದೆ. ಆ ವೇಳೆಯಲ್ಲಿ ಅತಿಯಾಗಿ ತಿಳುವಳಿಕೆ ಹೇಳಿದರೆ, ನಮ್ಮ ಮೇಲಿನ ವಿಶ್ವಾಸ ಕಳೆದುಕೊಂಡು ಬಿಡುತ್ತಾರೆ. ವಿವೇಚನ್ನಾತ್ಮಕ ನಡೆಯನ್ನು, ಹಗ್ಗದ ಮೇಲೆ ನಡೆದ ಹಾಗೆ ನಿಭಾಯಿಸ ಬೇಕು. ಅನ್ನದ ಅಗಳು ಪರೀಕ್ಷಿಸಿದ ಹಾಗೆ ಅಂದಿನ ಅವನ ಮನೋಭಾವನೆಯನ್ನು ಅರಿತು ಅವನಿಚ್ಛೆಯಂತೆ ಮಾತನಾಡಿ ಮನಗೆಲ್ಲಬೇಕು.

ಸುಮ್ಮನೆ ಅವನ ಮಾತಿಗೆ ಕಿವಿಯಾದೆ. ಅಲ್ಪ ವಿರಾಮ, ಪೂರ್ಣ ವಿರಾಮ ಇಲ್ಲದ ಮಾತುಗಳಿಗೆ ಬೇಸರ ಪಟ್ಟು ಕೊಳ್ಳಲಿಲ್ಲ. ಅವನ ಹೆಂಡತಿ, ಪುಟ್ಟ ಒಂದು ಗಂಡು, ಒಂದು ಹೆಣ್ಣು ಮಗಳು ಮಾತಿಗೆ ಸಾಕ್ಷಿಯಾದರು. ಭಾವುಕನಾಗಿದ್ದ. ಮಾತು ಪ್ರಾರಂಭಿಸಲು ತಡ ಕಾಡಿದ. ನೀರು ಬೇಕೇನು ಎಂದು ಕೇಳಿದ್ದಕ್ಕೆ ಹ್ನು ಅಂದಿದ್ದರಿಂದ ನೀರು ಕೊಟ್ಟೆ. ಜೊತೆಗೆ ಹೆಂಡತಿ ಬಂದಿದ್ದಳು. “ಸರ್, ನಾನು ಎಂ ಎ ಪದವೀಧರ. ತಂದೆ ತೀರಿಕೊಂಡಾಗ, ಕೊನೆಯ ವರ್ಷ ಎಂ ಎ ಓದುತ್ತದ್ದೆ. ತಾಯಿ ಮೊದಲೆ ತೀರಿಕೊಂಡಿದ್ದಳು. ಆ ಸ್ಥಾನ ನನ್ನ ಅಕ್ಕ ನಿಭಾಯಿಸಿದ್ದಳು. ತಂದೆ ತೀರಿಕೊಳ್ಳುವ ಒಂದು ವರ್ಷ ಮೊದಲು ಮದುವೆಯಾಗಿ ಗಂಡನ ಮನೆ ಸೇರಿಕೊಂಡಳು. ಮೂರು ಜನ ಗಂಡು ಮಕ್ಕಳು ವಿದ್ಯಾಭ್ಯಾಸಕ್ಕೆ ಪಟ್ಟಣ ಸೇರಿದ್ದೆವು. ಕಿರಿಯ ತಮ್ಮ ಎರಡನೆ ವರ್ಷ ಎಂ ಬಿ ಬಿ ಎಸ್ ಓದುತ್ತಿದ್ದ. ಕೊನೆಯ ತಮ್ಮ ಇಂಜಿನಿಯರಿಂಗ್ ಮೊದಲ ವರ್ಷ ಓದುತ್ತಿದ್ದ. ಮನೆತನಕ್ಕೆ ಸುಮಾರು ಐವತ್ತು ಎಕರೆ ಜಮೀನು. ಎತ್ತು ಎಮ್ಮೆ, ಆಳು ಕಾಳುಗಳಿಂದ ಸಮೃದ್ಧ ಆಗಿತ್ತು. ತಂದೆ ಚೆನ್ನಾಗಿ ನಿಭಾಯಿಸಿ ಆರೋಗ್ಯದಿಂದ ಇದ್ದರು. ಎಷ್ಟೇ ಹೊಲಗಳಿದ್ದರು. ರೈ ತನಿಗೆ ಮೂರು ಮಕ್ಕಳ ಓದು ನಿಭಾಯಿಸಲು ಆಗದು, ಮೈತುಂಬ ಸಾಲ ಮಾಡಿಕೊಂಡಿದ್ದರು. ಹೀಗೊಂದು ವ್ಯವಸ್ಥೆ ಸರಾಗವಾಗಿ ನಡೆದಿತ್ತು. ಮನೆತನಕ್ಕೆ ಯಾರ ಕಣ್ಣು ತಾಗಿತೋ ಏನೊ, ಅಕಾಲಿಕವಾಗಿ ತಂದೆ ಹೃದಯಾಘಾತದಿಂದ ತೀರಿಕೊಂಡರು. ಏನು ಮಾಡಬೇಕು ಎಂದು ಯಾರಿಗೂ ತಿಳಿಯಲಿಲ್ಲ. ಹಳ್ಳಿ ಯ ಹಿರಿಯರು ಸೂಕ್ತ ಸಲಹೆ ನೀಡಿದರು. ಮನೆಯಲ್ಲಿ ದೊಡ್ಡವನು ನೀನೆ, ನೀನೆ ಮನೆತನದ ಜವಾಬ್ದಾರಿ ಹೊತ್ತುಕೊಂಡು ನಿಭಾಯಿಸು. ನೀನು ಓದು ನಿಲ್ಲಿಸು ಅನ್ನುವ ಸಲಹೆಗೆ ಇಲ್ಲ ಅನ್ನಲು ಆಗಲಿಲ್ಲ. ಓದು ನಿಲ್ಲಿಸಿದೆ. ಸಹೋದರರ ಓದು ಮುಖ್ಯವಾಯಿತು. ಹೊಲ ಹದಗೊಳಿಸುವದು, ಉತ್ತುವ, ಬಿತ್ತುವ ಆವಿಶ್ರಾಂತ ದುಡಿಮೆಯಲ್ಲಿ ತೊಡಗಿಕೊಂಡೆ. ಏನು ದುಡಿದರು ಸಹೋದರರ ವಿದ್ಯಾಭ್ಯಾಸದ ಖರ್ಚು ನಿಭಾಯಿಸಲು ಆಗುತ್ತಿರಲಿಲ್ಲ. ಸಾಲ ಬೆಳೆಯಿತ್ತಿತ್ತು.
ಆಗೆಲ್ಲ 70ರ ದಶಕ ಮನರಂಜನೆ ನೀಡುವ, ನೀತಿ ಪಾಠ ಹೇಳುವ ಬಂಗಾರದ ಮನುಷ್ಯ, ಸಾಕ್ಷಾತ್ಕಾರ, ನನ್ನ ತಮ್ಮ,ಭಲೇ ಜೋಡಿ, ಬಾಳು ಬೆಳಗಿತು, ಪರೋಪಕಾರಿ, ಕರುಳಿನ ಕರೆ, ಹಸಿರು ತೋರಣ, ಗೆಜ್ಜೆ ಪೂಜೆ, ಕೃಷ್ಣ ದೇವರಾಯ ಹೀಗೆ ಸಾಲು ಸಾಲು ಸಿನೆಮಾ ಬಿಡುಗಡೆ ಆಗುತ್ತಿದ್ದ ಕಾಲಘಟ್ಟ. ಸಿನೆಮಾ ಕೇವಲ ಮನರಂಜನೆ ಆಗದೆ, ಆದರ್ಶ ಆಗಿರುತ್ತಿದ್ದವು. ನಾವೆಲ್ಲ ಗೆಳೆಯರು ಗೊಂದಲದ ಆದರ್ಶ ರೂಪಿಸಿಕೊಂಡವರು.ನನ್ನ ಜೀವನವನ್ನು ಮನೆತನ, ಸಹೋದರ ಕಲ್ಯಾಣಕ್ಕೆ ಮುಡುಪಿಟ್ಟೆ.ಹಗಲು ರಾತ್ರಿ ದುಡಿಯುವದು ತಮ್ಮಂದಿರ ವಿದ್ಯಾಭ್ಯಾಸಕ್ಕೆ ದುಡ್ಡು ಕೂಡಿಸಿ ಕ ಳುಹಿಸುತ್ತಿದ್ದೆ. ಸಹೋದರನ ಎಂ ಬಿ ಬಿ ಎಸ್ ಮುಗಿಯಿತು, ಡಾಕ್ಟರ್ ಆದನು. ಎಂ ಡಿ ಮಾಡತೀನಿ ಎಂದು ಇಚ್ಛೆ ವ್ಯಕ್ತಪಡಿಸಿದ. ಇನ್ನೊಬ್ಬನದು ಇಂಜಿ ನಿಯರಿಂಗ್ ಮುಗಿತು, ಇಂಜಿನಿಯರ್ ಆದನು.ಎಂ ಬಿ ಎ ಮಾಡತೀನಿ ಎಂದು ಇಚ್ಛೆ ವ್ಯಕ್ತಪಡಿಸಿದ. ಇಬ್ಬರ ಆಶೆ ಈಡೇರಿಸಿದೆ.

ನಾನು ಎಂ ಎ ಪದವೀಧರನಾದರೂ ಗಮಾರನಂತೆ ಕಾಣುತ್ತಿದೆನು. ವಯಸ್ಸು ನಿಲ್ಲಲಿಲ್ಲ. ಯಾರೂ ನೀ ನೇಕೆ ಹೀಗೆ, ಮದುವೆ ಎಂದು ಕೇಳಲಿಲ್ಲ.ತಮ್ಮಂದಿ ರು ಹಳ್ಳಿಗೆ ಬರಲು ಇಚ್ಛೆಸಿಸಲಿಲ್ಲ. ನಗರದಲ್ಲಿ ತಮ್ಮ ವೃತ್ತಿ ಪ್ರಾರಂಭಿಸಿದರು. ಮದುವೆ ಆಗುತ್ತೇನೆ ಎಂದ ರು ಮದುವೆ ಮಾಡಿದೆ.ಹಣ ಸಾಲುವದಿಲ್ಲ,ಕೃಷಿ ಉ ತ್ಪನ್ನ ಮಾರಿ ಹಣ ಕಲಿಸಲು ಒತ್ತಾಯಿಸಿದರು. ಕಳಿಸಲು ಪ್ರಾರಂಭಿಸಿದೆ. ಹಳ್ಳಿಯ ಜನರ ಒತ್ತಾಯದಿಂದ ಮದುವೆಯಾದೆ. ಮೂರು ಹೆಣ್ಣುಮಕ್ಕಳು ಹುಟ್ಟಿದರು. ಸಹೋದರರ ಸೇವೆಗೆ ಮೂಡುಪಿಟ್ಟ ದೇಹ ಸೇವೆ ಮುಂದುವರೆಸಿದೆ. ಕೊನೆಗೆ ಪಾಲು ಕೇಳಿ, ಬಹುಮಾನ ನೀಡಿದರು. ಎಲ್ಲವನ್ನು ನೀವೆ ತೆಗೆದು ಕೊಳ್ಳಿರಿ ಅಂದೆನು. ಸಾಲ ನೀನೆ ತೀರಿಸು ಅಂದರು. ಹೆಂಡತಿ ಉಗ್ರವಾದಳು. ನಿನಗೆ ಹೆಂಡತಿ ಮಕ್ಕಳು ಇರುವದಾಗಿ ಎಚ್ಚರಿಸಿದಳು, ಹಿರಿಯರನ್ನು ಸೇರಿಸಿದಳು. ನಮ್ಮನ್ನು ಸಾಲದಲ್ಲಿ ಮುಳುಗಿಸಿದ್ದಾನೆ ಎಂದು ಡಾಕ್ಟರ್, ಇಂಜಿನಿಯರ್ ಆರೋಪಿಸಿದರು. ಹಿರಿಯರು ವ್ಯಾಘ್ರರಾಗಿ ನಿರಾಕರಿಸಿದರು. ಸರ್, ಈಗ ಪಾಲು ಕೇಳಿ ಹಿಸ್ಸೆ ಕೇಳಿ ದಾವೆ ಮಾಡಿದ್ದಾರೆ ನೋಡಿ. ಅವ ರಿಗೆ ಎಲ್ಲ ಬಿಟ್ಟುಕೊಡುವೆ. ” ಮಾತು ಮುಗಿಸಿದನು. ಹೆಂಡತಿ ” ಸರ್, ನೋಡ್ರಿ ಇವರಿಗೆ ಹೆಂಡತಿ ಮಕ್ಕಳ ಚಿಂತೆಯ ಲ್ಲಿ ಎಲ್ಲವನ್ನು ತ್ಯಾಗ ಮಾಡಿ ಹೋಗುತ್ತೇ ನೆ ಅನ್ನುತ್ತಾ ರೆ. ನಾವೆಲ್ಲಿ ಹೋಗಬೇಕು? ” ಎಂದು ರೋಧಿಸಿದಳು. ಎಲ್ಲವೂ ಸರಿ ಹೋಗುವದು ಎಂದು
ಸಮಾಧಾನಿಸಿದೆ.
ನ್ಯಾಯಾಲದಲ್ಲಿ, ಕಕ್ಷಿದಾರನ ಪರವಾಗಿ ವಕಾಲತನ್ನು ನ್ಯಾಯಾಲಯದಲ್ಲಿ ಸಲ್ಲಿಸಿದೆ. ವಾದಿ ಸಹೋದರರು. ನನ್ನ ಕಕ್ಷಿದಾರ ಅವನ ಹೆಂಡತಿ ಮಕ್ಕಳು ಹಾಜರು ಇದ್ದರು. ಸಹೋದರಿ ಕೂಡ ಹಾಜರಿದ್ದಳು. ನನ್ನ ಕಕ್ಷಿ ದಾರ ತನ್ನ ಸಹೋದರನ್ನು ವಿದ್ಯಾವಂತರಾಗಿ ಮಾಡಿದ ಎಲ್ಲ ವಿಷಯ ಕೋರ್ಟಿನ ಗಮನಕ್ಕೆ ತಂದು ಸಹೋದರರಿಗೆ, ಸಹೋದರಿಗೆ ಪಾಲು ಕೊಡಲು ಸಿದ್ದ ನಿದ್ದಾನೆ ಎಂದು ನಿವೇದಿಸಿದೆ. ವಾದಿಯರು ಸಾಲ ಭರಿಸುವದಿಲ್ಲ ಎಂದು ಕಡಾ ಖಂಡಿತವಾಗಿ ಹೇಳಿದರು. ಕಕ್ಷಿದಾರ ಹೆಂಡತಿ ಮದ್ಯ ಪ್ರವೇಶಿಸಿ, ನ್ಯಾಯಾಲಯಕ್ಕೆ, ಸರ್ ಇವನು ಎಲ್ಲವನ್ನು ಸಹೋದರರಿಗೆ ತ್ಯಾಗ ಮಾಡಿ ಬಂಗಾರದ ಮನುಷ್ಯ ಆಗಬೇಕೆಂದಿರುವನು. ತಮ್ಮಂದಿರು ಅಣ್ಣನ ತ್ಯಾಗ ಮರೆತು ಎಲ್ಲ ಆಸ್ತಿ ಎತ್ತಿ ಹಾಕಬೇಕೆಂದಿರುವರು. ನಾವು ಹೆಂಡತಿ ಮಕ್ಕಳು ಏನು ಮಾಡಬೇಕು?. ಎಂದು ಕಂಬನಿ ಮಿಡಿದಳು. ಸಹೋದರಿ ಅವಳ ಮಾತಿಗೆ ಧ್ವನಿ ಗೂಡಿಸಿ ತನಗೆ ಪಾಲು ಬೇಡ ಎಂದಳು. ಉಭಯ ವಕೀಲರಿಗೆ ನಿಮ್ಮ ಕಕ್ಷಿದಾರರಿಗೆ ತಿಳಿಹೇಳುವಂತೆ ಸಲಹೆ ನೀಡಿದರು. ಕಕ್ಷಿದಾರರನ್ನು ಕೂಡಿಸಿಕೊಂಡು ತಿಳಿಹೇಳಿ ದೆ. ಕೊನೆಗೆ ವ್ಯಾಜ್ಯ ರಾಜಿಯಲ್ಲಿ ಮುಕ್ತಾಯಗೊಂಡಿತು. ಸಹೋದರರು ಆಸ್ತಿ, ಸಾಲ ಸಮನಾಗಿ ವಿಭಜಿಸಿ ಕೊಂಡರು. ಭಾವವೇಶದಲ್ಲಿ ತೆಗೆದುಕೊಂಡ ನಿರ್ಣಯ ಹೆಂಡತಿ ಮಕ್ಕಳನ್ನು ರಸ್ತೆಗೆ ತರುತ್ತಿತ್ತು.
ಖುಷಿಯಿಂದ ವಿವಾಹಕ್ಕೆ ಹಾಜರಾಗಿ ಹಾರೈಸಿ ಬಂದೆ.
‘ನ್ಯಾಯದ ಕಣ್ಣು’ ಅಂಕಣದ ಹಿಂದಿನ ಸಂಚಿಕೆಗಳು :
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೧)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೨)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೩)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೪)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೫)
- ಪ್ರಕಾಶ ವಸ್ತ್ರದ
