ಅಕ್ಟೋಪಸ್ಸುಗಳಿಗೆ ಮೂರು ಹೃದಯಗಳಿವೆ.ಆಮ್ಲಜನಕೀಕರಣಕ್ಕಾಗಿ ಕಿವಿರುಗಳಿಗೆ ರಕ್ತವನ್ನು ಪಂಪ್ ಮಾಡುವ ಎರಡು ಹೃದಯಗಳು ಇದ್ದು ಮತ್ತು ದೇಹದ ಉಳಿದ ಭಾಗಗಳಿಗೆ ಆಮ್ಲಜನಕಯುಕ್ತ ರಕ್ತವನ್ನು ಪಂಪ್ ಮಾಡುವ ಒಂದು ವ್ಯವಸ್ಥಿತ ಹೃದಯ ಹೆಚ್ಚುವರಿಯಾಗಿದೆ. ಅಕ್ಟೋಪಸ್ಸು ಕುರಿತಾದ ಕುತೂಹಲಕಾರಿ ವಿಷಯವನ್ನು ಪಶುವೈದ್ಯಕೀಯ ಪ್ರಾಧ್ಯಾಪಕರಾದ ಡಾ.ಎನ್.ಬಿ.ಶ್ರೀಧರ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಅಕ್ಟೋಪಸ್ ಒಂದು ವಿಚಿತ್ರದ ಸಮುದ್ರ ಜೀವಿ. ಇವುಗಳಿಗೆ ಇರುವ 8 ಕಾಲುಗಳಿಂದ ಇವುಗಳಿಗೆ ಈ ಹೆಸರು ಬಂದಿದೆ. ಪ್ರಪಂಚದಲ್ಲಿ ಅಕ್ಟೋಪಸ್ಸುಗಳು 298 ಮಿಲಿಯನ್ ವರ್ಷಗಳಿಂದ ಇವೆ. ಆಕ್ಟೋಪಸ್‌ಗಳು ವಿಸ್ಮಯಕಾರಿಯಾಗಿ ಬುದ್ಧಿವಂತ ಅಕಶೇರುಕಗಳಾಗಿವೆ. ಅವು ತಮ್ಮ ದೇಹದ ಗಾತ್ರಕ್ಕೆ ಸಂಬAಧಿಸಿದ0ತೆ ದೊಡ್ಡ ಮೆದುಳನ್ನು ಹೊಂದಿರುತ್ತವೆ.
• ಆಕ್ಟೋಪಸ್‌ಗಳು ಸೆಫಲೋಪೊಡಾ ವರ್ಗಕ್ಕೆ ಸೇರಿವೆ, ಇದರಲ್ಲಿ ಸ್ಕ್ವಿಡ್, ಕಟ್ಲ್ಫಿಶ್ ಮತ್ತು ನಾಟಿಲಸ್‌ಗಳು ಸೇರಿವೆ. ಇವುಗಳಲ್ಲಿ ಸುಮಾರು 300 ಪ್ರಬೇಧಗಳಿವೆ. ಈ ಜೀವಿಗಳು ಉತ್ತಮವಾಗಿ ಬೆಳವಣಿಗೆ ಹೊಂದಿದ ನರಮಂಡಲಗಳು, ಸುಧಾರಿತ ದೃಷ್ಟಿ ಮತ್ತು ಗ್ರಹಣಾಂಗಗಳAತಹ ಅನೇಕ ಗುಣಲಕ್ಷಣಗಳನ್ನು ಹೊಂದಿವೆ. ಆದರೆ ಪ್ರತಿಯೊಂದು ಜಾತಿಯು ತನ್ನದೇ ಆದ ವಿಶಿಷ್ಟ ರೂಪಾಂತರಗಳು ಮತ್ತು ನಡವಳಿಕೆಗಳನ್ನು ಹೊಂದಿದೆ.
• ಎಲ್ಲಾ ಅಕ್ಟೋಪಸ್ ಪ್ರಬೇಧಗಳು ಸಮುದ್ರದ ಉಪ್ಪು ನೀರಿನ ವಾಸಿಗಳು. ಸಿಹಿನೀರಿನ ಯಾವುದೇ ಪ್ರಬೇಧ ಇಲ್ಲ. ಇವು ಸಮುದ್ರದ ತಳದಲ್ಲಿಯೇ ಇರುತ್ತಿದ್ದು ಎಂದೂ ಮೇಲೆ ಬಂದ ನಿದರ್ಶನಗಳಿಲ್ಲ. ಇವು ಮನುಷ್ಯನನ್ನು ಕಂಡರೆ ಹೆದರಿ ಸಾಯುತ್ತವೆ. ಮನುಷ್ಯನನ್ನು ಇವು ನುಂಗಿದ ನಿದರ್ಶನಗಳಿಲ್ಲ. ಅವುಗಳ ಗಾತ್ರ ಮನುಷ್ಯನಿಗಿಂತ ಬಹಳ ಕಡಿಮೆ. ಇವೆಲ್ಲಾ ಸಿನಿಮಾದಲ್ಲಿ ತೋರಿಸುವ ದೃಶ್ಯಗಳು.

• ಅಕ್ಟೋಪಸ್ಸುಗಳು 10 ಗ್ರಾಂ ನಿಂದ 75 ಕಿಲೋ ತೂಕದ ವರೆಗೆ ಪ್ರಬೇಧಗಳನ್ನು ಹೊಂದಿವೆ. ಇವುಗಳ ಆಹಾರ ಸಾಮಾನ್ಯವಾಗಿ ಏಡಿಗಳು, ಮ್ರದ್ವಂಗಿಗಳು ಮತ್ತು ಮೀನುಗಳು.
• ಇವುಗಳು 8 ಕಬಂದ ಬಾಹುಗಳನ್ನು ಹೊಂದಿವೆ. ಇವುಗಳ ಹಿಡಿತ ಅಸಾಧಾರಣ.ಇವುಗಳು ಯಾವುದೇ ಎಲುಬು ಹೊಂದಿರದ ಅಕಶೇರುಕಗಳು.
• ಅಕ್ಟೋಪಸ್‌ಗಳು ಅತ್ಯುತ್ತಮ ಅಡಗು ತಜ್ಞರುಗಳು. ಇವು ಅಪಾಯ ಎದುರಾದಾಗ ತಮ್ಮ ಚರ್ಮದ ಬಣ್ಣ ಮತ್ತು ವಿನ್ಯಾಸವನ್ನು ತಮ್ಮ ಸುತ್ತಮುತ್ತಲಿನ ಪ್ರದೇಶಗಳೊಂದಿಗೆ ಸಂಯೋಜಿಸುವ ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿವೆ. ಊಸರವಳ್ಳಿಗಳು ಬಣ್ಣ ಬದಲಾಯಿಸಲು ಕೆಲವು ನಿಮಿಷ ತೆಗೆದುಕೊಂಡರೆ ಅಕ್ಟೋಪಸ್ಸುಗಳು ಕೆಲವೇ ನಿಮಿಷದಲ್ಲಿ ಇದನ್ನು ಸಾಧಿಸುತ್ತವೆ. ಇದನ್ನು ಕ್ರೊಮಾಟೊಫೋರ್ಸ್ ಎಂಬ ವಿಶೇಷ ಕೋಶಗಳ ಮೂಲಕ ಸಾಧಿಸುತ್ತವೆ. ಕೆಲವೇ ಕ್ಷಣಗಳಲ್ಲಿ ವಿವಿಧ ಬಣ್ಣಗಳು ಮತ್ತು ಮಾದರಿಗಳನ್ನು ರಚಿಸಲು ಅಗತ್ಯವಿರುವ ವರ್ಣದ್ರವ್ಯಗಳನ್ನು ಹೊಂದಿರುತ್ತವೆ.
• ಅಕ್ಟೋಪಸ್ಸುಗಳ ಜೀವಿತಾವಧಿ ಬಹಳ ಕಡಿಮೆ. ಹೆಚ್ಚಿನ ಪ್ರಭೇದಗಳು ಒಂದರಿ0ದ ಎರಡು ವರ್ಷಗಳವರೆಗೆ ಮಾತ್ರ ಜೀವಿಸುತ್ತವೆ. ಗಂಡು ಅಕ್ಟೋಪಸ್ಸು ಮಿಲನದ ನಂತರ ಕೆಲವೇ ಗಂಟೆಯಲ್ಲಿ ಇಹಲೋಕ ತ್ಯಜಿಸಿದರೆ ಹೆಣ್ಣು ಅಕ್ಟೋಪಸ್ಸು ಮೊಟ್ಟೆ ಇಟ್ಟು ಅವು ಮರಿ ಆದ ಕೂಡಲೇ ಸತ್ತು ಹೋಗುತ್ತದೆ. ಇವುಗಳ ಜೀವನದ ಅಂತಿಮ ಗುರಿಯೇ ಸಂತಾನೋತ್ಪತ್ತಿ.
• ಹೆಣ್ಣು ಅಕ್ಟೋಪಸ್ಸ್ ಒಮ್ಮೆ 100000 ಮೊಟ್ಟೆಗಳನ್ನಿಡುತ್ತದೆ. ಈ ಮೊಟ್ಟೆಗಳನ್ನು ಇದು ಅದರ ಜೀವಕ್ಕಿಂತ ಹೆಚ್ಚಿನ ಜತನದಿಂದ ಹಗಲು ರಾತ್ರಿ ಕಾಯುತ್ತದೆ. ಮೊಟ್ಟೆ ಇಟ್ಟ ಮೇಲೆ ಅದು ಅವುಗಳನ್ನು ರಕ್ಷಿಸುವ ಭರದಲ್ಲಿ ಹೊಟ್ಟೆ ತುಂಬಿಸಿಕೊಳ್ಳುವುದನ್ನೇ ಮರೆಯುತ್ತದೆ. ಮರಿಯಾದಕೂಡಲೇ ಸುಸ್ತಾಗಿ ಸತ್ತು ಹೋಗುತ್ತದೆ.
• ಆಕ್ಟೋಪಸ್‌ಗಳು ತಮ್ಮ ತಪ್ಪಿಸಿಕೊಳ್ಳುವ ಸಾಮರ್ಥ್ಯಗಳಿಗೆ ಪ್ರಸಿದ್ಧವಾಗಿವೆ. ಇವುಗಳ ದೇಹದಲ್ಲಿ ಮೂಳೆಗಳಿರುವುದಿಲ್ಲ. ಇವು ತಮ್ಮ ಮೃದುವಾದ ದೇಹವನ್ನು ತಮ್ಮ ಗಾತ್ರದ ನೂರರಷ್ಟು ರಂದ್ರದಲ್ಲಿ ತಮ್ಮನ್ನು ತೂರಿಸಿಕೊಂಡು ಬೆನ್ನತ್ತಿ ಬರುವ ವೈರಿಗಳಿಂದ ಪಾರಾಗುತ್ತವೆ. ಇವು ಶಾಯಿಯಂತ ಕಪುö್ಪ ವಸ್ತುವನ್ನು ಬಿಡುವ ಮೂಲಕ ತಮ್ಮ ಸುತ್ತ ಕತ್ತಲ ಲೋಕವನ್ನು ಸೃಷ್ಟಿಸಿಕೊಂಡು ತಪ್ಪಿಸಿಕೊಳ್ಳುತ್ತವೆ.

ಫೋಟೋ ಕೃಪೆ : google
• ಅಕ್ವೇರಿಯಂನಲ್ಲಿ ಇವುಗಳನ್ನು ಸಾಕಿದರೆ ನೀರು ಖಾಲಿ ಮಾಡುವಾಗ ಅದರ ರಂದ್ರದಿAದ ಇವು ಪಾರಾಗಿ ಬಿಡಬಹುದು ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ. ಇದಲ್ಲದೇ ಅಕ್ಟೋಪಸ್ಸುಗಳನ್ನು ಸಾಕಿ ಆಹಾರ ಕೊರತೆ ನೀಗಬಹುದು ಎಂಬುದು ಸಹ ಸುಳ್ಳು.
• ಯಾವುದೇ ಪ್ರಾಣಿಯ ಅಂಗ ಊನವಾದರೆ ಅದು ಪುನ: ಬೆಳೆಯುವ ಸಾಮರ್ಥ್ಯ ಹೊಂದಿಲ್ಲ. ಹಲ್ಲಿಗಳಿಗೆ ಬಾಲ ಉದುರಿ ಹೋದರೆ ಅವುಗಳನ್ನು ಬೆಳೆಸಿಕೊಳ್ಳುವ ಸಾಮರ್ಥ್ಯವಿದ್ದರೂ ಅದು ಮೊದಲಿನ ಬಾಲದ ಹಾಗೆ ಶಕ್ತಿಶಾಲಿಯಾಗಿರುವುದಿಲ್ಲ. ಆದರೆ ಆಕ್ಟೋಪಸ್‌ಗಳು ಅವುಗಳ ಬಾಹುಗಳು ಕಡಿದು ಹೋದರೂ ಅವುಗಳನ್ನು ಪುನರುತ್ಪಾದಿಸುವ ಗಮನಾರ್ಹ ಸಾಮರ್ಥ್ಯವನ್ನು ಹೊಂದಿವೆ. ಪರಭಕ್ಷಕ ದಾಳಿ ಅಥವಾ ಅಪಘಾತದಲ್ಲಿ ಆಕ್ಟೋಪಸ್ ಒಂದು ತೋಳನ್ನು ಕಳೆದುಕೊಂಡರೆ, ಅದು ಕಾಲಾನಂತರದಲ್ಲಿ ಹೊಸದನ್ನು ಮತ್ತೆ ಬೆಳೆಯಬಹುದು. ಅದು ಮೂಲ ಭಾಹುವಿನಷ್ಟೆ ಶಕ್ತಿಶಾಲಿಯಾಗಿರುವುದು ಆಶ್ಚರ್ಯ. ಈ ಪುನರುತ್ಪಾದನೆಯು ಅವುಗಳ ವಿಕೇಂದ್ರೀಕೃತ ನರಮಂಡಲದಿ0ದ ಸಾಧ್ಯವಾಗಿದೆ. ಪ್ರತಿ ತೋಳಿನಲ್ಲಿಯೂ ಅದರದೇ ಆದ ಮೆದುಳಿನಂತ ನರವ್ಯೂಹವಿದೆ.
• ಆಶ್ಚರ್ಯ ಪಡಬೇಡಿ !!. ಅಕ್ಟೋಪಸ್ಸುಗಳಿಗೆ ಮೂರು ಹೃದಯಗಳಿವೆ. ಆಮ್ಲಜನಕೀಕರಣಕ್ಕಾಗಿ ಕಿವಿರುಗಳಿಗೆ ರಕ್ತವನ್ನು ಪಂಪ್ ಮಾಡುವ ಎರಡು ಹೃದಯಗಳು ಇದ್ದು ಮತ್ತು ದೇಹದ ಉಳಿದ ಭಾಗಗಳಿಗೆ ಆಮ್ಲಜನಕಯುಕ್ತ ರಕ್ತವನ್ನು ಪಂಪ್ ಮಾಡುವ ಒಂದು ವ್ಯವಸ್ಥಿತ ಹೃದಯ ಹೆಚ್ಚುವರಿಯಾಗಿದೆ. ಇವುಗಳ ನೀಲಿ ಬಣ್ಣದ್ದಾಗಿದೆ. ಏಕೆಂದರೆ ಇದು ಆಮ್ಲಜನಕವನ್ನು ಸಾಗಿಸುವ ಹಿಮೋಸಯಾನಿನ್ ಎಂಬ ತಾಮ್ರ ಭರಿತ ಪ್ರೋಟೀನ್ ಹೊಂದಿರುತ್ತದೆ. ಆದರೆ ಮನುಷ್ಯನೂ ಸೇರಿದಂತೆ ಇತರ ಜೀವಿಗಳ ರಕ್ತ ಕಬ್ಬಿಣಯುಕ್ತವಾಗಿದೆ.

ಫೋಟೋ ಕೃಪೆ : google
• ಆಕ್ಟೋಪಸ್‌ಗಳು ಪ್ರಾಥಮಿಕವಾಗಿ ಏಕಾಂಗಿಯಾಗಿರುವ ಒಂಟಿ ಪ್ರಾಣಿಗಳು. ಅವು ಎಂದೂ ಗುಂಪಿನಲ್ಲಿ ಸಂಚರಿಸುವುದಿಲ್ಲ. ಆದರೆ ಮಿಲನದ ಸಮಯದಲ್ಲಿ ಮಾತ್ರ ಸಂಗಾತಿಯ ಜೊತೆಗಿರುತ್ತವೆ. ಮತ್ತು ಸಾಮಾನ್ಯವಾಗಿ ಸಂಯೋಗಕ್ಕಾಗಿ ಮಾತ್ರ ಒಟ್ಟಿಗೆ ಬರುತ್ತವೆ. ಮಿಲನಕ್ರಿಯೆ ಮುಗಿದ ಮೇಲೆ ಗಂಡು ಇಹಲೋಕ ತ್ಯಜಿಸಿದರೆ ಹೆಣ್ಣು ಮೊಟ್ಟೆ ಮರಿ ಮಾಡಿಸಿ ಸತ್ತು ಹೋಗುತ್ತದೆ. ಆದರೆ ಕೆಲವೊಮ್ಮೆ ಅಪರೂಪಕ್ಕೆ ಇವು ಸಂಘ ಜೀವಿಗಳಾಗುತ್ತವೆ. ಆಸ್ಟ್ರೇಲಿಯಾದ ಅಕ್ಟೋಪಸ್ಸುಗಳ ಒಂದು ಪ್ರಬೇಧ ಸಮುದ್ರದ ಅಡಿಗೆ ಒಂದು ದ್ವೀಪವನ್ನೇ ಸ್ಥಾಪಿಸಿಕೊಂಡಿವೆಯ0ತೆ!.
• ಅಕ್ಟೋಪಸ್ಸುಗಳು ಸಂಚಾರಕ್ಕಾಗಿ ವಿಶೇಷ ವ್ಯವಸ್ಥೆ ಹೊಂದಿವೆ. ತಮ್ಮ ಬಾಹುಗಳಲ್ಲಿರುವ ರಂದ್ರಗಳ ಮೂಲಕ ನೀರನ್ನು ಜೋರಾಗಿ ಚಿಮ್ಮಿ ಆ ಬಲದಿಂದ ಅವು ಮುಂದೆ ಸಾಗುತ್ತವೆ. ಆದರೆ ಇದರ ಉಪಯೋಗ ಬೇಟೆಯಾಡಲು ಮತ್ತು ಅವುಗಳನ್ನು ತಿನ್ನಲು ಬರುವ ವೈರಿಗಳಿಂದ ತಪ್ಪಿಸಿಕೊಂಡು ದೂರ ಓಡಲು ಸಮಯದಲ್ಲಿ ಮಾತ್ರ. ಆದರೆ ಸಾದಾರಣ ಚಲನೆಯ ಸಮಯದಲ್ಲಿ ತಮ್ಮ ಬಾಹುಗಳಿಂದ ನೀರನ್ನು ಬಗೆದು ಮುನ್ನುಗ್ಗುತ್ತವೆ. ನಮ್ಮ ಹಡಗುಗಳು ಇದೇ ರೀತಿ ಪ್ರೊಪೆಲ್ಲರುಗಳ ಸಹಾಯದಿಂದ ಚಲಿಸುತ್ತವೆ.
• ಪ್ರಪಂಚದಲ್ಲಿ ಮನುಷ್ಯನನ್ನು ಬಿಟ್ಟರೆ ಯಾವುದೇ ಪ್ರಾಣಿಗಳು ನೈಸರ್ಗಿಕವಾದ ಆಯುಧಗಳನ್ನು ಬಿಟ್ಟರೆ ಬಂದೂಕು, ಕತ್ತಿ ಕೊಡಲಿಯಂತ ಆಯುಧಗಳನ್ನು ಆತ್ಮರಕ್ಷಣೆಗಾಗಿ ಬಳಸುವುದಿಲ್ಲ. ಇವು ತೆಂಗಿನ ಚಿಪ್ಪನ್ನು ಹೊತ್ತುಕೊಂಡು ಹೋಗಿ ಅಪಾಯ ಎದುರಾದಾಗ ಅವುಗಳಲ್ಲಿ ಅಡಗಿಕೊಳ್ಳುವ ಬುದ್ಧಿವಂತಿಗೆ ಹೊಂದಿವೆ. ಸಾಕಿದ ಅಕ್ಟೋಪಸ್ಸುಗಳು ಆಹಾರದ ಬುಟ್ಟಿ ತೆರೆಯುವ, ಟ್ಯಾಂಕಿನಿ0ದ ತಪ್ಪಿಸಿಕೊಳ್ಳುವ ಚಾಕಚಕ್ಯತೆ ಮತ್ತು ಹೊಸದನ್ನು ಕಲಿಯುವ ಸಾಮರ್ಥ್ಯ ಹೊಂದಿವೆ.
• ಕೆಲವೊಂದು ಜಾತಿಯ ಅಕ್ಟೋಪಸ್ಸುಗಳು ಅತ್ಯಂತ ವಿಷಕಾರಿ ಜಂತುಗಳು.ಆಸ್ಟ್ರೇಲಿಯಾದ ನೀಲಿ ರಿಂಗ್ ಅಕ್ಟೋಪಸ್ಸುಗಳು ಎಷ್ಟೋಂದು ವಿಷಕಾರಿಯೆಂದರೆ ಕೇವಲ 5-8 ಇಂಚ್ ಅಗಲದ 10-15 ಗ್ರಾಂ ತೂಗುವ ಇವುಗಳು ವಿಷ ದೇಹಕ್ಕೆ ಚುಚ್ಚಿದರೆ 30 ಜನ ಮನುಷ್ಯರು ಏಕಕಾಲದಲ್ಲಿ ಸತ್ತು ಹೋಗಬಹುದು. ಇವು ಅತ್ಯಂಚ ಸಂಕೋಚದ ಜೀವಿಗಳಾಗಿದ್ದು ಅವುಗಳಿಗೆ ತೊಂದರೆ ನೀಡಿದರೆ ಮಾತ್ರ ಕಡಿಯುತ್ತವೆ. ಇವು ಟೆಟ್ರಡೋಟಾಕ್ಸಿನ್ ಎಂಬ ಅತ್ಯಂತ ತೀಕ್ಷ÷್ಣ ವಿಷ ಹೊಂದಿವೆ.
- ಡಾ.ಎನ್.ಬಿ.ಶ್ರೀಧರ – ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ.
