ಒಡಪು ಕಟ್ಟಿ ಗಂಡನ ಹೆಸರ ಹೇಳೇ?…ನಾಚಿ ಹೇಳಿದ ಹೆಸರೇ ‘ಧರ್ಮಪ್ಪ’…ಪವಿತ್ರ ಗೀತಾ ಅವರ ಒಡಪಿನಲ್ಲಿ ಗಂಡನ ಹೆಸರು..ಮುಂದೆ ಓದಿ…ನೀವು ಒಡಪು ಕಟ್ಟಿ…
ಒಲವಿನ ಮಹಾಪೂರ ಹರಿಯಲು
ದುಃಖದುಮ್ಮಾನದ ಗೋಡೆ ನುಚ್ಚು -ನೂರು,
ಬಡತವನವೇ ಅಪ್ಪಿದ್ದರೂ ಮನದ #ಪ್ರೀತಿ ಹಾಲು-ಕೀರು,
ನೀ ಜೊತೆಗಿರಲು ನಿತ್ಯ ಸಾಗುವುದು ಸಂತೋಷದ ಪ್ರೀತಿ-ತೇರು,
ಹೃದಯಕ್ಕಿಳಿಯಲಿ ಪ್ರೀತಿಯಬೇರು ಎಂದು ನಾನು ಧರ್ಮಪ್ಪ ಕೂಡಿ ಎಳೆಯುವೆವು ಸಂಸಾರದ ತೇರು”
****
ಮನೆ, ಮನದ ಧೈವ,
ಪ್ರೀತಿಗವರೇ ಭಾವಜೀವ,
ಧರ್ಮಪ್ಪನಿಗೆ ಕನಸಿನಲ್ಲಿಯೂ
ನೋಯಿಸಲಾರೆ ನನಗವರೇ ಜೀವ
- ಪವಿತ್ರ ಗೀತಾ ( ವೃತ್ತಿಯಲ್ಲಿ ವಕೀಲರು, ಹವ್ಯಾಸಿ ಬರಹಗಾರರು, ಕವಿಯತ್ರಿ )
