ಕವಯತ್ರಿ ರೇಶ್ಮಾ ಗುಳೇದಗುಡ್ಡಾಕರ್ ಅವರು ಬರೆದಿರುವ ‘ಹಣೆಯಲ್ಲಿ ಬರೆದಿದೆಯೊ ಇಲ್ಲವೂ ನಾ ಕಾಣೆ, ಒಲವ ಬಿಂಬ… ಸುಂದರ ಸಾಲುಗಳು ಓದುಗರಿಗಾಗಿ, ಮುಂದೆ ಓದಿ…
ಹಣೆಯಲ್ಲಿ ಬರೆದಿದೆಯೊ ಇಲ್ಲವೂ
ನಾ ಕಾಣೆ ….
ಆದರೆ ಮನದಲಿ ಅಚ್ಚಾದ ನಿನ್ನೊಲವ
ಭಾವ ಪಟ
ಎಂದೂ ಮಾಸದು ಇನಿಯಾ
ನೀ ಇನಿಯಾನಾಗುವೆಯೂ
ಗೆಳೆಯನಾಗುವೆಯೂ ಕಾಲವೇ ಬಲ್ಲದು
ಆದರೆ ಆ ಕಾಲಕ್ಕೂ ನನ್ನ ಅರಿಕೆ ಇದೆ
ನನ್ನುಸಿರಿಗೆ ನಿನ್ನುಸಿರೆ ವರವಗಲೆಂದು
ಜನುಮಗಳು ಇದೆಯೊ ಇಲ್ಲವೊ
ನಾ ಅರಿಯೇ …
ಇರುವ ಈ ಜೀವನ ಇದರಲ್ಲಿ ಎಂದೆದಿಗೂ
ನೀನೆ ಅದರ ನಾಯಕ
ಬಾಳ ಪಯಣದ ಲ್ಲಿ ತಿರುವುಗಳು ಇದೆಯೊ
ಇಲ್ಲವೊ ನಾ ತಿಳಿಯೇ
ಪಯಣದ ಪ್ರತಿ ಕ್ಷಣವೊ ನಿನ್ನ
ಒಲವೇ ನನಗೆ ನೆರಳು ….
ಜಗದ ಸ್ವಾರ್ಥದ ಗದ್ದಲಗಳ ನಡುವೆ
ನನ್ನ ದನಿಯು ನಿನಗೆ ಕೇಳುವದೂ
ಇಲ್ಲವೂ ನಾ ಅರಿಯೆ ,ಆದರೆ
ಎದೆಯಾಳದ ಮಾತು ನಿನಗೆ ತಲುಪಿವದು
ಗಡಿಗಡಿಗಳ ದಾಟಿ ….
ಸಪ್ತ ಸಾಗರವು ಅಬ್ಬರಿಸುವವು
ಅನುರಾಗದ ಅಲೆಗಳ ಮೋರೆತ ….
- ರೇಶ್ಮಾ ಗುಳೇದಗುಡ್ಡಾಕರ್