‘ಒಂದು ತೇಗದ ಕುರ್ಚಿ’ ಕೃತಿ ಪರಿಚಯ

ಕತೆಗಾರ ಸಿದ್ದು ಸತ್ಯಣ್ಣವರ ಅವರ ‘ಒಂದು ತೇಗದ ಕುರ್ಚಿ’ ಕತೆಯ ಕುರಿತು ಖ್ಯಾತ ಕತೆಗಾರರಾದ  ಚ.ಹ. ರಘುನಾಥ್ ಅವರು ಮುನ್ನುಡಿಯನ್ನು ಬರೆದಿದ್ದಾರೆ. ತಪ್ಪದೆ ಮುಂದೆ ಓದಿ…

ಶೀರ್ಷಿಕೆ: ಒಂದು ತೇಗದ ಕುರ್ಚಿ (ಕಥೆಗಳು)
ಲೇಖಕರು: ಸಿದ್ದು ಸತ್ಯಣ್ಣವರ
ಪ್ರಕಾಶನ : ಅಮೂಲ್ಯ ಪುಸ್ತಕ
ಬೆಲೆ: 110
ಪುಟಗಳು: 84

ಶೋಷಣೆಯನ್ನು ವಿರೋಧಿಸುತ್ತ, ಮಾನವೀಯತೆಯನ್ನು ಪ್ರತಿಪಾದಿಸುವ ನಮ್ಮ ನಡೆ-ನುಡಿಗಳು ಕೊಂಚ ಎತ್ತರ ತಪ್ಪಿದರೂ ಅಸೂಕ್ಷ್ಮಗೊಳ್ಳುವ ಸಂಕೀರ್ಣ ಸಂದರ್ಭದಲ್ಲಿ, ಮನುಷ್ಯರಾಗಿ ಉಳಿಯುವುದೇ ಬಹು ದೊಡ್ಡ ಸವಾಲಿನಂತೆ ಕಾಣಿಸುತ್ತದೆ. ಆ ಹೊಣೆಗಾರಿಕೆಯನ್ನು ನಿರ್ಲಕ್ಷಿಸುವ ಕೆಲವರು ಉತ್ಪಾದಿಸುವ ದೊಡ್ಡದೊಡ್ಡ ಮಾತುಗಳ ಬಲೂನಿಗೆ ತಾಗಿಸುವ ನಿಜದ ಸೂಜಿಮೊನೆಗಳಂಥ ಯುವ ಅಭಿವ್ಯಕ್ತಿಯ ರೂಪದಲ್ಲಿ ಸಿದ್ದು ಸತ್ಯಣ್ಣವರ `ಒಂದು ತೇಗದ ಕುರ್ಚಿ’ ಸಂಕಲನದ ಕಥೆಗಳು ಕಾಣಿಸುತ್ತಿವೆೆ.

ಪ್ರತಿರೋಧದ ಮನೋಭಾವ ಒಳಗೊಂಡಿರುವ ಈ ಅಭಿವ್ಯಕ್ತಿಯ ಭಿತ್ತಿ, ವಿವೇಕ ಹಾಗೂ ಸಂಯಮಗಳ ವಿಶಿಷ್ಟ ಸಮೀಕರಣವಾಗಿದೆ. ಈ ಸಮೀಕರಣದ ರೂಪದಲ್ಲಿ ಕಾಣಿಸುವ, ಏಳು ಕಥೆಗಳ ಈ ಸಂಕಲನದ ಕೇಂದ್ರದಲ್ಲಿ, ವ್ಯವಸ್ಥೆಯನ್ನು ಆರ್ದ್ರಗೊಳಿಸುವ, ಮಾನವೀಯಗೊಳಿಸುವ ಹಂಬಲ ಸ್ಪಷ್ಟವಾಗಿದೆ. ಸಿದ್ದು ಅವರ ಕಥೆಗಳು ಒಳಿತು-ಕೆಡುಕುಗಳ ಸರಳ ಮಾದರಿಗೆ ಸಮಾಧಾನಗೊಳ್ಳದೆ, ಬದುಕು ಒಡ್ಡುವ ಪರೀಕ್ಷೆಗಳಲ್ಲಿ ಈ ಮಾದರಿಗಳು ನಿಕಷಕ್ಕೊಳಪಡುವ ಸವಾಲಿಗೆ ತಮ್ಮನ್ನು ತಾವೇ ಒಡ್ಡಿಕೊಂಡಿರುವುದು ವಿಶೇಷ.

ಶೋಷಣೆ ಕುರಿತಾದ ನಮ್ಮ ವಿರೋಧದ ಅಸಲಿಯತ್ತನ್ನು ವಿಮರ್ಶೆಗೊಳಪಡಿಸುವ ಗುಣದ ಕಾರಣದಿಂದಲೇ ಇಲ್ಲಿನ ಕಥೆಗಳು ವಿಶಿಷ್ಟವಾಗಿ ಕಾಣಿಸುತ್ತವೆ.


  •  ಚ.ಹ. ರಘುನಾಥ್ – ಖ್ಯಾತ ಕತೆಗಾರರು, ವಾಗ್ಮಿಗಳು, ಪತ್ರಕರ್ತರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW