ಅವತ್ತು ಅಭಿ ಮನಸ್ಸು ಸ್ವಲ್ಪ ಸರಿ ಇರಲಿಲ್ಲ. ಅವನಿಗೆ ಇತರ ಹುಚ್ಚು ಹಿಡಿಯೋದು ಸಾಮಾನ್ಯವಾಗಿತ್ತು ಆದರೆ ಅವತ್ತು ಮಾತ್ರ ಆತನಿಗೆ ಏನು ಮಾಡಿದರು ಸಮಾಧಾನವಿರಲಿಲ್ಲ. ರೇಖಾ 15 ದಿನವಾದರೂ ಅವನ ಹತ್ತಿರ ಮಾತಾಡಿರಲಿಲ್ಲ. ಈಗ ಮೆಸೇಜ್ ಮಾಡಬಹುದು ಆಗ ಮೆಸೇಜ್ ಮಾಡಬಹುದು ಅಂತ ಕಾದು ಕಾದು ಫೋನಿನ ಚಾರ್ಜ್ ಕಾಲಿಯಾಗಿತ್ತು. ಮುಂದೇನಾಯಿತು ಯುವ ಕತೆಗಾರ ವಿಕಾಸ್. ಫ್. ಮಡಿವಾಳರ ಅವರ ಕತೆಯನ್ನು ತಪ್ಪದೆ ಓದಿ…
ತಾನೆ ಮೆಸೇಜ್ ಮಾಡಬೇಕು ಅಂತ ಅನಿಸಿತ್ತು ಆದರೆ ನಾನೇಕೆ ಮೆಸೇಜ್ ಮಾಡಬೇಕು? ಬೇಕಿದ್ರೆ ಅವಳ ಮಾಡ್ಲಿ ಅನ್ನೊ ಅಹಂಕಾರ ಅವನನ್ನ ತಡೆದು ಹಿಡಿದಿತ್ತು.
ಅಭಿ ಮುಗ್ದ ಮನಸ್ಸಿನ ಹುಡುಗ. ಹಾಗಂತ ನೀವು ತಿಳ್ಕೊಂಡ್ರೆ ನಿಮ್ಮ ತಪ್ಪೇನಿಲ್ಲ ಅಷ್ಟು ನಾಟಕ ಮಾಡೊ ನಟಸಾರ್ವಭೌಮ. ಅವನನ್ನ ತಿಳಿದವರು ಅವನಿಗೆ 420 ಅಂತ ನಾಮಕರಣ ಮಾಡಿದ್ರು. ಹೊರಗಡೆ ಮುಗ್ದನಂತೆ ಕಂಡರೂ ಒಳಗಡೆ ಪಕ್ಕ ಊರು ಉಡಾಳನಾಗಿದ್ದ. ಮನೆಯವರ ಮಾತು ವೇಧ ವಾಕ್ಯವಾಗಿತ್ತು. ಸಂಸ್ಕೃತ ಓದಲು ಬರದಿದ್ದಾಗ ವೇಧ ಹೇಗೆ ತಲೆಗೆ ಹೋಗುತ್ತೆ. ಹಾಗಾಗಿತ್ತು ನಮ್ಮ ಹೀರೊ ನ ಪರಿಸ್ಥಿತಿ. ಅದಕ್ಕೆ ನಮ್ಮ ಪಾತ್ರದಾರಿಗೆ ಮನೆಯವರ ಮಾತೆಂದರೆ ಅಲರ್ಜಿ. ಗೆಳೆಯರಿಗಂತು ಪ್ರಾಣ ಕೊಡುತ್ತಿದ್ದನೇನೊ ಆದರೆ ದುಡ್ಡು ಮಾತ್ರ ಕೊಡುತ್ತಿರಲಿಲ್ಲ. ಅಂತ ಕಂಜೂಸು ನಮ್ಮ ಹೀರೊ. ಅಪ್ಪಂದು 16 ಎಕರೆ ತೋಟ ಇದ್ರು, ಮನೆ ಇದ್ರು, ಹುಡುಗಿಯಲ್ಲ ನಾಯಿ ಕುನ್ನಿನು ಇವನನ್ನ ಮುಸು ನೋಡಲಿಲ್ಲ. ಆದರು ಆತ “ಬಂದೆ ಬರ್ತಾಳೆ ಚಿನ್ನು ಬಂದೆ ಬರ್ತಾಳೆ, ಇವತ್ತಿಲ್ಲ ನಾಳೇನಾದ್ರೂ ಬಂದೆ ಬರ್ತಾಳೆ ” ಅಂತ ಹಾಡ್ತಾ ಸಮಾಧಾನ ಪಡ್ತಾ ಇದ್ದ.
ಹೀಗಿದ್ದ ನಮ್ಮ ಅಭಿ ನಡುವಳಿಕೆಯನ್ನು ಚೇಂಜ್ ಮಾಡಿದ್ದು ಸ್ವೀಟ್ ಗರ್ಲ್ ರೇಖಾ. ಅವಳು ಎಷ್ಟು ಸ್ವೀಟ್ ಅಗಿದ್ದಳು ಅಂತ ಯಾರು ಟೇಸ್ಟ್ ಮಾಡಿರಲಿಲ್ಲ. ಇನ್ಸ್ಟಾಗ್ರಾಮ್ ಅಲ್ಲಿ ನಮ್ದು ಒಂದು ಇರ್ಲಿ ಅಂತ ಹಾಗೆ ಹೆಸರು ಇಟ್ಕೊಂಡಿದ್ಲು. ಅಕೌಂಟ್ ಅಲ್ಲಿ ಇರ್ಲಿ ಅಂತ ಒಂದೆರಡು ಫೋಟೊ ಹಾಕಿದ್ದಳು. ಮೂಕದಲ್ಲಿರೊ ಪಿಂಪಲ್ಸ್ ಕಾಣಬಾರದು ಅಂತ ಸ್ನ್ಯಾಪ್ ಚಾಟ್ ಯೂಸ್ ಮಾಡಿದ್ದಳು. ಯಾವಾಗೊ ಒಂದು ಸಾರಿ ಇನ್ಸ್ಟಾಗ್ರಾಮ್ ಯೂಸ್ ಮಾಡೋವಾಗ ಅಭಿಗೆ ಇವಳ ಐಡಿ ಸಿಕ್ಕಿತ್ತು. ಯಾರಪ್ಪ ಈ ಸುರಸುಂದರಿ ಅಂತ ತಿಳಿದು ಮೆಸೇಜ್ ಮಾಡಿದ್ದ. ಮೆಸೇಜ್ ಮಾಡಿದ ಮೂರನೆ ದಿನಕ್ಕೆ ರಿಪ್ಲೈ ಬಂದಿತ್ತು. ಮೊದಮೊದಲು ಗುಡ್ ಮಾರ್ನಿಂಗ್, ಊಟ ಆಯ್ತಾ, ಹೇಗೆ ಇದ್ದೀಯ ಅಂತ ಸ್ಟಾರ್ಟ್ ಆದ ಮಾತುಗಳು ಕೊನೆಗೆ ಚಿನ್ನಿ ಮುದ್ದು ಬಂಗಾರ ಕತ್ತೆ ಎಮ್ಮೆ ನಾಯಿ ಅನ್ನೊವರೆಗೂ ನಡೆಯಿತು. ಮೊದಮೊದಲು ಫ್ರೆಂಡ್ಸ್ ಅಂತ ಶುರುವಾಗಿ ಹಾಫ್ ಗರ್ಲ್ ಫ್ರೆಂಡ್ ವರೆಗೂ ತಲುಪಿತ್ತು.
ಫೋಟೋ ಕೃಪೆ : google.com
ಅದೊಂದು ದಿನ ರಾತ್ರಿ ಅಭಿಗೆ ತಡೆಯೋಕೆ ಆಗ್ಲಿಲ್ಲ. ಗಟ್ಟಿ ಧೈರ್ಯ ಮಾಡಿ ಪ್ರೊಪೋಸ್ ಮಾಡಿ ಬಿಟ್ಟ. ಪ್ರಪೋಸ್ ಮಾಡುವ ಸಲುವಾಗಿ ನಾಲ್ಕೈದು ಕವನಗಳನ್ನ ಒಂದೆರಡು ಡೈಲಾಗ್ಗಳನ್ನ ಕಲಿತಿದ್ದ. ಅದಕ್ಕವಳು ನಗುತ್ತಾ ಕಾಮಿಡಿ ಮಾಡ್ತಾ ಇದಿಯಾ ಅಂತ ಕೇಳಿದ್ದಳು. ಇವನು ಸೀರಿಯಸ್ ಅಂತ ಅಂದಾಗ ಕೂಡಲೆ ಆಫ್ ಲೈನ್ ಆಗಿದ್ದಳು.
ಇದಾದ ಕೆಲದಿನಗಳ ನಂತರ ಅಭಿಯ ಅದೃಷ್ಟ ತೆರೆದಿತ್ತು. ಸ್ವೀಟ್ ಗರ್ಲ್ ರೇಖಾ “ನಾನು ನಿನ್ನ ಜೊತೆ ಮಾತಾಡ್ಬೇಕು ಅನಂತ್ ಹೋಟೆಲ್ ಗೆ ಬಾ” ಅಂತ ಮೆಸೇಜ್ ಕಳಿಸಿದ್ದಳು. ಕೊನೆಗೂ ರೇಖಾ ಒಪ್ಪಿಕೊಂಡಳು ಅಂತ ತಿಳಿದು ಖುಷಿಯಲ್ಲಿ ಮೈ ಮರೆತು ಬಿಟ್ಟ. ಕೊನೆಗೂ ಒಂದು ಹುಡುಗಿ ಸಿಕ್ಕಳು ಅಂತ ಹಿಗ್ಗಿದ. ಅಮ್ಮನ ಮೇಕಪ್ ಸೆಟ್ ಅಲ್ಲಿ ಮೇಕಪ್ ಮಾಡ್ಕೊಂಡು, ಅಪ್ಪನ ಜೇಬಿನಿಂದ 1000 ರೂಪಾಯಿ ಕದ್ದು, ಅಣ್ಣನ ಬೂಟು ಹಾಕೊಂಡು ಅನಂತ ಹೋಟೆಲ್ ಗೆ ಹೋದ.
ಹೋಟೆಲ್ ಬರುತ್ತಿದ್ದಂತೆ ಎದೆಯಲ್ಲಿ ಡವ ಡವ ಅನ್ನೋಕೆ ಶುರುವಾಯಿತು. ಅವ್ಳು ಹೇಗೆ ಇರ್ಬೋದು ಅಂತ ಆಲೋಚನೆಗಳು ಶುರುವಾಯಿತು. ಒಪ್ಪುತ್ತಾಳ ಇಲ್ಲವ ಅನ್ನೊ ಪ್ರಶ್ನೆಗೆ ಕಾಡುತಿತ್ತು. ಏನೆ ಆಗ್ಲಿ ನೋಡೆಬಿಡೋಣ ಅಂತ ಹೋಟೆಲ್ ಒಳಗೆ ಕಾಲಿಟ್ಟು ರೇಖಾನ ಹುಡುಕತೊಡಗಿದ. ಕೂಡಲೆ ” ಏಪ್ರಿಲ್ ಪೂಲ್ ಮಿಸ್ಟರ್ 420″ ಅನ್ನೊ ಧ್ವನಿ ಕೇಳಿಸಿತು. ತಿರುಗಿನೋಡಿದರೆ ಅವನ ಗೆಳೆಯರು ನಿಂತಿದ್ದರು. ಅವನ ಗೆಳೆಯರು ಫೇಕ್ ಐಡಿ ಮಾಡಿ ಅವನನ್ನ ಫೂಲ್ ಮಾಡಿದ್ದರು. ಹಾಫ್ ಮೆಂಟಲ್ ಆಗಿದ್ದ ನಮ್ಮ ಹುಡುಗ ಫುಲ್ ಮೆಂಟಲ್ ಆದ. ತಿರುಪತಿ ನಾಮ ಹಾಕಿದ ಗೆಳೆಯರಿಗೆ ಬಯ್ಯತೊಡಗಿದ. ಗೆಳೆಯರಿಗೆ ಚೆಲ್ಲಾಟವಾಗಿ ಇವನಿಗೆ ಪ್ರಾಣಸಂಕಟವಾಗಿ ಕೊನೆಗೆ ನಮ್ಮ ಹುಡುಗ ಸಿಂಗಲ್ ಆಗಿ ಫೂಲ್ ಆದ.
ಇಂತಿ ನಿಮ್ಮ ಪ್ರೀತಿಯ…
- ವಿಕಾಸ್. ಫ್. ಮಡಿವಾಳರ