‘ಪದ್ದಣ ಮನೋರಮೆ’ ಕೃತಿ ಪರಿಚಯ

ಶಾಲಿನಿ ಹೂಲಿ ಪ್ರದೀಪ್  ಅವರ ‘ಪದ್ದಣ ಮನೋರಮೆ’ ಕೃತಿಯ ಕುರಿತು ಶ್ರೀರಾಮ ಲಾಲ್ಗುಳಿ ಅವರು ತಮ್ಮ ಅಭಿಪ್ರಾಯವನ್ನು ತಪ್ಪದೆ ಓದಿ…  

ಈ ಕಥಾ ಪ್ರಸಂಗಗಳ ಕಥಾ ಒಂಥರಾ ಮಜವಾಗಿದೆ. ಪಕ್ಕದ ಮನೆಯ ಸುದ್ದಿಯನ್ನೋ ಅಥವಾ ನೆಂಟರಿಷ್ಟರ ಸುದ್ದಿಯನ್ನೋ ಮನೆಯಲ್ಲಿ ಗುಸುಗುಸು ಮಾತನಾಡಿದಂತೆ.

ಪುಸ್ತಕ : ಪದ್ದಣ ಮನೋರಮೆ
ಲೇಖಕರು: ಶಾಲಿನಿ ಹೂಲಿ ಪ್ರದೀಪ್
ಪ್ರಕಾಶಕರು : ಆಕೃತಿ ಕನ್ನಡ ಪ್ರಕಾಶನ ಬೆಂಗಳೂರು
ಮೊದಲ ಮುದ್ರಣ : 2025
ಪುಟಗಳು : 88
ಬೆಲೆ : 150
ಖರೀದಿಗಾಗಿ :
ಸಾಹಿತ್ಯಲೋಕ – 99459 39436
ಪುಸ್ತಕಗಾರ – 81820 83840

ಇವತ್ತಿನ ತರಾತುರಿ ಧಾವಂತದ ಜೀವನದಲ್ಲಿನ ಅನಗತ್ಯ ಒತ್ತಡ ನಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಮಿಸುತ್ತದೆ ಎಂಬ ಗಾಢವಾದ ಗೂಡಾರ್ಥವನ್ನು ಸೊಗಸಾಗಿ, ಅಷ್ಟೇ ಹಾಸ್ಯಭರಿತವಾಗಿ ಹೇಳಿದ್ದಾರೆ. ಕೆಲವೊಂದು ಕಥೆಗಳನ್ನ ಓದುತ್ತಿರುವಾಗ, ಇನ್ನೊಬ್ಬರ ನೋವನ್ನ ನಾವು ವ್ಯಂಗ್ಯವಾಗಿ ಕೇಳ್ತಾ ಇದ್ದೀವೇನೋ ಎಂಬ ಭಾವ ಮನದಲ್ಲಿ ಸುಳಿದದ್ದು ಸುಳ್ಳಲ್ಲ. ಸಾಮಾಜಿಕ ಜಾಲತಾಣಗಳಲ್ಲಿನ ಅರ್ಥಾನರ್ಥಗಳನ್ನ , ಹೊಸ ಆಕರ್ಷಣೆಗಳಿಗೆ ಮನ ತುಡಿಯುವ ಪರಿ ಹಾಗೂ ಆನಂತರದ ಪರಿಣಾಮ ಎರಡನ್ನೂ ಮನ ಮುಟ್ಟುವಂತೆ ಅರುಹಿದ್ದು ಇಷ್ಟವಾಯಿತು.

ಹೂಲಿ ಶಾಲಿನಿ ಪದ್ಧಣ್ಣರ ಸರಳವಾದ ಬರೆಹ ಹಾಗೂ ಶಬ್ಧ ಸಾಹಿತ್ಯ ಅಂಬೆಗಾಲಿಡುವ ಓದುಗರಿಗೂ ಅರ್ಥವಾಗುವಂತಿದೆ. ಒಟ್ಟಿನಲ್ಲಿ ಪದ್ದಣ ಮನೋರಮೆಯರ ಈ ಸರಳ ಸುಂದರ ಕಥಾ ಹಂದರ ಮನಸ್ಸಿಗೆ ಮುದ ನೀಡುವುದರಲ್ಲಿ ಸಂಶಯವಿಲ್ಲ.

‘ಪದ್ದಣ ಮನೋರಮೆ’ ಕೃತಿಯ ಕುರಿತು ಇನ್ನಷ್ಟು ಪರಿಚಯ :


  • ಶ್ರೀರಾಮ ಲಾಲ್ಗುಳಿ, ಯಲ್ಲಾಪುರ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW