‘ಪದ್ದಣ ಮನೋರಮೆ’ ಕೃತಿ ಪರಿಚಯ

ಖ್ಯಾತ ಸಾಹಿತಿ ಸುಬ್ರಾಯ ಚೊಕ್ಕಾಡಿ ಅವರ ಮಾತಿನಲ್ಲಿ ಶಾಲಿನಿ ಹೂಲಿ ಪ್ರದೀಪ್ ಅವರ “ಪದ್ದಣ ಮನೋರಮೆ”, ತಪ್ಪದೆ ಮುಂದೆ ಓದಿ…

ಪುಸ್ತಕ: ಪದ್ದಣ ಮನೋರಮೆ
(ಮುದ್ದಣ ಮನೋರಮೆ ಅವರ ಕ್ಷಮೆ ಕೋರಿ.)
ಪ್ರಕಾರ : “ಲಘು ಪ್ರಸಂಗ-ಕಥೆಗಳು.
ಲೇಖಕಿ: ಶಾಲಿನಿ ಹೂಲಿ ಪ್ರದೀಪ್.
ಪ್ರಕಾಶನ: ಆಕೃತಿ ಕನ್ನಡ ಪ್ರಕಾಶನ.
ಬೆಲೆ: ರೂ.೧೫೦.
ಖರೀದಿಗಾಗಿ : 99459 39436

ಹಿಂದಿನ ಮುದ್ದಣ ಮನೋರಮೆಯರ ಸರಸ ಸಂಭಾಷಣೆಯಂತೆ ,ಇಂದಿನ ಅಭಿನವ ಮುದ್ದಣ ಮನೋರಮೆಯರೆನಿಸುವ ಪದ್ದಣ ಯಾನೆ ಪ್ರದೀಪ್ ಮತ್ತು ಶಾಲಿನಿ ಯಾನೆ ಮನೋರಮೆಯರ ಸರಸ ದಾಂಪತ್ಯದ ಮಧುರ ಕ್ಷಣಗಳ ಅಕ್ಷರ ರೂಪ ಇಲ್ಲಿದೆ.

ದಾಂಪತ್ಯದ ಸುಮಧುರ ಕ್ಷಣಗಳ, ಸರಸ ವಿರಸಗಳ ಬೇರೆ ಬೇರೆ ಝಲಕ್ ಗಳನ್ನು 24 ಪುಟ್ಟ ಪುಟ್ಟ ಬರಹಗಳಲ್ಲಿ ಲಘು ವಿನೋದ ಪೂರ್ಣ ಶೈಲಿಯಲ್ಲಿ ಹಿಡಿದಿಟ್ಟಿದ್ದೀರಿ. ಓದುವಾಗ ತೆಳುವಾದ ನಗುವಿನ ಮಿಂಚೊಂದು ತುಟಿಯಂಚಲ್ಲಿ ಹೊಳೆದು ಮಾಯವಾಗುವ ಹಾಗಿದೆ. ಓದಿ ಸಂತೋಷ ಪಟ್ಟೆ.

 

 

ಆದರೆ ಶಾಲಿನಿ, ಸಾಹಿತ್ಯದ ಮಟ್ಟಿಗೆ ನಾನು ಅಲ್ಪತೃಪ್ತ ಅಲ್ಲ, ಸದಾ ಅತೃಪ್ತ! ಮುದ್ದಣ ಮನೋರಮೆಯರು ತಮ್ಮ ಸರಸ ಮಾತುಕತೆಗಳ ಮೂಲಕವೇ ರಾಮಾಶ್ವಮೇಧದಂಥ ಗಂಭೀರ ಕಾವ್ಯ ರಚನೆಯತ್ತ ದಾಟಿಕೊಂಡರೋ ಹಾಗೆಯೇ ನೀವೂ ಈ ಲಘುಧಾಟಿಯ ಮಾತುಕತೆಗಳನ್ನೇ ಲಾಂಚಿಂಗ್ ಪ್ಯಾಡ್ ಆಗಿ ಮಾಡಿಕೊಂಡು ಗಂಭೀರ ಸಾಹಿತ್ಯ ನಿರ್ಮಾಣದತ್ತ ದಾಟಿಕೊಳ್ಳಬೇಕೆಂದು ಆಶಿಸುತ್ತೇನೆ.

‘ಪದ್ದಣ ಮನೋರಮೆ’ ಕೃತಿಯ ಕುರಿತು ಇನ್ನಷ್ಟು ಪರಿಚಯ :


  • ಸುಬ್ರಾಯ ಚೊಕ್ಕಾಡಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading