ನಳಪಾಕ ಪ್ರವೀಣೆ ಶಕುಂತಲಾ ಸವಿ ಅವರ ಕೈರುಚಿಯಲ್ಲಿ ‘ಪಾಲಕ್ ಪನೀರ್ ಕರ್ರಿ’ ಮಾಡುವ ವಿಧಾನವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮಾಡಿ ನೋಡಿ…
ಬೇಕಾಗುವ ಪದಾರ್ಥಗಳು :
- ಪಾಲಕ್ ಸೊಪ್ಪು – 2
- ಗೋಡಂಬಿ – 20
- ಈರುಳ್ಳಿ – 2 ದೊಡ್ಡದು
- ಬೆಳ್ಳುಳ್ಳಿ – 1 ದೊಡ್ಡ ಗೆಡ್ಡೆ
- ಶುಂಠಿ – 1 ಇಂಚು
- ಹಸಿ ಮೆಣಸಿನ ಕಾಯಿ – 3
- ಚಕ್ಕೆ – 1 ಇಂಚು
- ಲವಂಗ – 5
- ಪಲಾವ್ ಎಲೆ – 2
- ಧನಿಯಾ – 1ಸ್ಪೂನ್
- ಜೀರಿಗೆ – 1ಸ್ಪೂನ್
- ಕಾಳು ಮೆಣಸು – 1ಸ್ಪೂನ್
- ಅಚ್ಚ ಮೆಣಸಿನ ಪುಡಿ – 1 ಸ್ಪೂನ್
- ಉಪ್ಪು ರುಚಿಗೆ ತಕ್ಕಷ್ಟು
- ಬೀನ್ಸ್ – 100 ಗ್ರಾಂ
- ಕ್ಯಾರೆಟ್ – 2
- ಬಟಾಣಿ – 1ಕಪ್
- ಪನೀರ್ – 100 ಗ್ರಾಂ

ಮಾಡುವ ವಿಧಾನ :
ತರಕಾರಿಗಳನ್ನು ಸಣ್ಣದಾಗಿ ಹೆಚ್ಚಿ ಕುಕ್ಕರಿನಲ್ಲಿ ಬೇಯಿಸಿಕೊಳ್ಳಿ. ಮೇಲೆ ಹೇಳಿದ ಎಲ್ಲ ಸಾಮಗ್ರಿಗಳನ್ನು ಒಂದೊಂದಾಗಿ ಹುರಿದು ಕೊಂಡು ತಣ್ಣಗಾದ ನಂತರ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ಒಂದು ಬಾಣಲಿಗೆ ಎರಡು ಸ್ಪೂನ್ ಬೆಣ್ಣೆ ಎರಡು ಸ್ಪೂನ್ ತುಪ್ಪ , ಹಾಕಿ ಕರಗಿದ ನಂತರ ಅರ್ಧ ಸ್ಪೂನ್ ಜೀರಿಗೆ ಹಾಕಿ ರುಬ್ಬಿದ ಮಿಶ್ರಣವನ್ನು ಹಾಕಿ ರುಚಿಗೆ ತಕ್ಕಸ್ಟು ಉಪ್ಪು ಹಾಕಿ ಕುದಿಸಿ. ಕುದಿಯುವಾಗ ಬೇಯಿಸಿಟ್ಟ ತರಕಾರಿ, ಕತ್ತರಿಸಿದ ಪನೀರ್ ಹಾಕಿ ಚೆನ್ನಾಗಿ ಕುದಿಸಿ. ಪಾಲಕ್ ಪನೀರ್ ವೆಜ್ ಗ್ರೇವಿ ರೆಡಿ. ಚಪಾತಿ , ಪರೋಟ ಜೊತೆ ಸವಿಯಿರಿ.
- ಶಕುಂತಲಾ ಸವಿ
