ರುಚಿಕರ ಪನ್ನೀರ್ ಪಸಂದ್ ಮಾಡುವುದು ಹೇಗೆ ಅಂದ್ರೆ…ಪತ್ತೇದಾರಿ ಕಾದಂಬರಿಗಾರ್ತಿ ಮೀನಾ ಅವರು ಪತ್ತೆ ಹಚ್ಚಿದ್ದಾರೆ. ತಪ್ಪದೆ ಪೂರ್ತಿಯಾಗಿ ಓದಿ ಮಾಡಿ ನೋಡಿ…
ಪನ್ನೀರ್ ಪುಡಿ : 1 ಜಾಮೂನ್ ಕಪ್
ತೆಂಗಿನ ತುರಿ : 2 ಚಮಚ
ಬೆಲ್ಲದ ಪುಡಿ : 2 ಚಮಚ
ಬಾದಾಮಿ ಪುಡಿ : 1 ಚಮಚ ( ಬೇಕಾದರೆ )
ಏಲಕ್ಕಿ ಪುಡಿ : ಸ್ವಲ್ಪ
ಪನ್ನೀರ್ ನ ಒಳ್ಳೆ ನೀರಿನಲ್ಲಿ ತೊಳೆದು ನಂತರ ಚೆನ್ನಾಗಿ ಪುಡಿ ಮಾಡಿ. ಅದಕ್ಕೆ ಮಿಕ್ಕ ಸಾಮಗ್ರಿಗಳನ್ನು ಹಾಕಿ ಚೆನ್ನಾಗಿ ಕಲಸಿ ನಿಮಗೆ ಇಷ್ಟವಾದ ಆಕಾರದಲ್ಲಿ ಉಂಡೆ ಮಾಡಿ.
ರುಚಿಯಾದ ಸರಳವಾದ ಪನ್ನೀರ್ ಪಸಂದ್ ರೆಡಿ.

ಬಾಳೆಕಾಯಿ ಮಸಾಲೆ ಬೊಂಡ :
- ಬಾಳೆ ಕಾಯಿ – 1
- ಕಡ್ಲೆ ಹಿಟ್ಟು – 1 ಬಟ್ಟಲು
- ಅಚ್ಚ ಖಾರದ ಪುಡಿ – 1 ಚಮಚ
- ಓಂ ಕಾಳು – ಸ್ವಲ್ಪ
- ಅರಿಶಿನ – ಸ್ವಲ್ಪ
- ಇಂಗು – ಚಿಟಕಿ
- ಉಪ್ಪು, ಎಣ್ಣೆ ಒಂದು ಚಮಚ
(1 ಚಿಟಕಿ ಅಡುಗೆ Soda ಬೇಕಾದರೆ ಮಾತ್ರ ) - ನೀರು
ಪನ್ನೀರ್ ಪುಡಿ, ಉಪ್ಪು, ಅಚ್ಚ ಖಾರದ ಪುಡಿ, ಹಸಿಮೆಣಸಿನ ಕಾಯಿ ಕೊತ್ತಂಬರಿ ಚಟ್ನಿ. ಪನ್ನೀರ್ ಪುಡಿಗೆ ಉಪ್ಪು, ಖಾರದ ಪುಡಿ, ಹಸಿರು ಚಟ್ನಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಇಡಿ.
ಬಾಳೆ ಕಾಯಿಯ ಸಿಪ್ಪೆ ತೆಗೆದು ಒಂದು ಅರ್ಧ ಇಂಚಿನ ಅಳತೆಯಲ್ಲಿ ರೌಂಡಾಗಿ ಕಟ್ ಮಾಡಿ. ನಂತರ ಇದನ್ನು ಮುಕ್ಕಾಲು ಸ್ಲಿಟ್ ಮಾಡಿ ಪನ್ನೀರ್ ಮಿಶ್ರಣವನ್ನು ಅದರೊಳಗೆ stuff ಮಾಡಿ ನಂತರ ಕಡಲೆ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ ಎಣ್ಣೆಯಲ್ಲಿ ಫ್ರೈ ಮಾಡಿ. ಸಣ್ಣ ಉರಿಯಲ್ಲಿ ಕರಿಯಿರಿ.
ರುಚಿಕರವಾದ ಬಾಳೆಕಾಯಿ ಮಸಾಲೆ ಬೊಂಡ ರೆಡಿ.
- ಹೆಚ್ ವಿ ಮೀನಾ – ಪತ್ತೇದಾರಿ ಕಾದಂಬರಿ, ಬೆಂಗಳೂರು.
