‘ದಿ ಲಾಸ್ಟ್ ಲೆಕ್ಚರ್’ ಕೃತಿ (ಭಾಗ-೩)

ಅಂತಿಮ ಉಪನ್ಯಾಸ ಕೊಡುವ ದಿನವಾಗಿತ್ತು. ಸಭಾಂಗಣ 400 ಆಸಕ್ತ ಜನರಿಂದ ತುಂಬಿ ಹೋಗಿತ್ತು. ಹಳೆಯ ವಿದ್ಯಾರ್ಥಿಗಳು, ಸ್ನೇಹಿತರು ಎದುರಿಗೆ ಇದ್ದರೂ ಯಾರನ್ನು ಮಾತನಾಡಿಸದೆ ರ್ಯಾಂಡಿ ವೇದಿಕೆ ಹತ್ತಿದನು. ರ್ಯಾಂಡಿಯ ಮಾನಸಿಕ ಒತ್ತಡ ಹಾಗೂ ಉದ್ವೇಗವನ್ನು ಇದು ತೋರಿಸುತ್ತದೆ. ಈ ಕೃತಿಯ ಕುರಿತು ಶಾರದಾ ಶ್ರಾವಣಸಿಂಗ್ ರಜಪೂತ ಅವರು ಸಂಚಿಕೆಯ ರೂಪದಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ದಿ ಲಾಸ್ಟ್ ಲೆಕ್ಚರ್
ಮೂಲ : ರ್‍ಯಾಂಡಿ ಪಾಶ್ ಹಾಗೂ ಜೆಫ಼್ರಿ ಜೆಸ್ಲೊ
ಕನ್ನಡಕ್ಕೆ : ಎಸ್.ಉಮೇಶ
ಬೆಲೆ : ೧೯೦/-
ಪ್ರಕಾಶನ :  ಧಾತ್ರಿ ಪ್ರಕಾಶನ, ಮೈಸೂರು.

ಅಂತಿಮ ಅಂತಿಮ ಉಪನ್ಯಾಸಕ್ಕೆ ಸಜ್ಜಾದ ರ್ಯಾಂಡಿ ಜೀವನ ಲ್ಯಾಪ್ ಟಾಪ್ ನಿಂದ ಪ್ರಾರಂಭವಾಗುತ್ತದೆ. 300 ಛಾಯಾಚಿತ್ರಗಳನ್ನು, ಪವರ್ ಪಾಯಿಂಟ್ ಸ್ಲೈಡ್ ಗಳಿಗೆ ಅಳವಡಿಸಿದನು. ಅದರಲ್ಲಿ ಅವನ ಕುಟುಂಬ, ವಿದ್ಯಾರ್ಥಿಗಳು, ಸಹೋದ್ಯೋಗಿಗಳು ಮತ್ತು ತನ್ನ ಬಾಲ್ಯದ ಕನಸನ್ನು ಸಾಕಾರಗೊಳಿಸಿದ ನೆನಪನ್ನು ಹೊತ್ತ ಛಾಯಾಚಿತ್ರಗಳು ಇದ್ದವು. ಇವೆಲ್ಲವುಗಳನ್ನು ಮಾಡುವಾಗ ‍್ಯಾಂಡಿ ಪ್ರತಿ 90 ನಿಮಿಷಗಳಿಗೊಮ್ಮೆ ಕುರ್ಚಿಯಿಂದ ಎದ್ದು ಮಕ್ಕಳ ಕಡೆ ಗಮನಹರಿಸುತ್ತಿದ್ದನಂತೆ, ಶಾಶ್ವತವಾಗಿ ಹೆಂಡತಿ ಮಕ್ಕಳನ್ನು ಬಿಟ್ಟು ಹೋಗುವ ಜೀವ ಕೊನೆಯ ಹಂತದಲ್ಲೂ ಅವರ ಬಗ್ಗೆ ಇದ್ದ ಅದಮ್ಯ ವಾತ್ಸಲ್ಯವನ್ನು ಸೂಚಿಸುತ್ತದೆ.

ಅಂದು ಅಂತಿಮ ಉಪನ್ಯಾಸ ಕೊಡುವ ದಿನವಾಗಿತ್ತು. ಸಭಾಂಗಣ 400 ಆಸಕ್ತ ಜನರಿಂದ ತುಂಬಿ ಹೋಗಿತ್ತು. ಹಳೆಯ ವಿದ್ಯಾರ್ಥಿಗಳು, ಸ್ನೇಹಿತರು ಎದುರಿಗೆ ಇದ್ದರೂ ಯಾರನ್ನು ಮಾತನಾಡಿಸದೆ ರ್ಯಾಂಡಿ ವೇದಿಕೆ ಹತ್ತಿದನು. ರ್ಯಾಂಡಿಯ ಮಾನಸಿಕ ಒತ್ತಡ ಹಾಗೂ ಉದ್ವೇಗವನ್ನು ಇದು ತೋರಿಸುತ್ತದೆ.

ಉಪನ್ಯಾಸ ಕೇಳಲು ಬಂದವರಿಗೆ ಧನ್ಯವಾದಗಳನ್ನು ಹೇಳಿ, ಜಠರದಲ್ಲಿ 10 ಕ್ಯಾನ್ಸರ್ ಗಡ್ಡೆ ಹೊಂದಿದ್ದ ರ್ಯಾಂಡಿ ಜೀವನದ ತನ್ನ ಪ್ರಸ್ತುತ ಹಂತದ ಆರೋಗ್ಯದ ಗಂಭೀರತೆಯನ್ನು ಹೇಳಿ ತನ್ನ ಉಪನ್ಯಾಸ ಪ್ರಾರಂಭಿಸುತ್ತಾನೆ. ಅದರಲ್ಲಿ ಬಾಲ್ಯದ ಕನಸುಗಳನ್ನು, ನನಸುಗೊಳಿಸಿದ್ದು ,ಹಲವಾರು ತಮ್ಮ ಜೀವನದ ಏಳು- ಬೀಳುಗಳ ಕುರಿತು ಉದಾಹರಣೆಯೊಂದಿಗೆ ಪ್ರಸ್ತುತಪಡಿಸುವನು. ಅಲ್ಲಿಂದ ಅದ್ಭುತವಾದ ಅವರ ಜೀವನದ ಹೋರಾಟ ಎಳೆ ಎಳೆಯಾಗಿ ಚದುರುತ್ತಾ ಹೋಗುತ್ತದೆ.

ನಂತರ ಜೀವನದಲ್ಲಿ ಸಾಹಸ ಮತ್ತು ಕಲಿತ ಪಾಠಗಳ ಬಗ್ಗೆ ತನ್ನ ಅನುಭವವನ್ನು ಪ್ರಸ್ತುತ ಪಡಿಸುವನು.ಆಗಲೇ ಅವರ ದೇಹವನ್ನು ಕ್ಯಾನ್ಸರ್ ಎಂಬ ಮಹಾಮಾರಿ ಆವರಿಸಿರುತ್ತದೆ. ಆಗ ಅವರಿಗೆ ವೈದ್ಯಕೀಯ ಚಿಕಿತ್ಸೆ ಪ್ರಾರಂಭವಾದದ್ದು 2006ರಲ್ಲಿ. ತಮಗೆ ಕ್ಯಾನ್ಸರ್ ಬಂದಿದೆ ಎಂದಾಗ ಗೂಗಲ್ ನಲ್ಲಿ ಅದರ ಕುರಿತು ಸರ್ಚ್ ಮಾಡಿ ತಮ್ಮ ವಾಸ್ತವತೆಯನ್ನು ಅರ್ಥೈಸಿಕೊಂಡ ಕೊಂಡ ಧೈರ್ಯ ವಂತ ರ್ಯಾಂಡಿ.ಅದನ್ನು ಡಾಕ್ಟರ್ ಪತ್ನಿ ಜೈ ಗೆ ಸಮಾಧಾನವಾಗಿ ಅರ್ಥಮಾಡಿಸುತ್ತಿದ್ದ ರೀತಿ ರ್ಯಾಂಡಿಗೆ ಸೋಜಿಗ ತಂದಿತ್ತು. ಜೀವನದ ಕಷ್ಟ ಕಳೆದು ಬದುಕು ಎಲ್ಲವನ್ನು ಪಡೆದು ಹಸಿರಾಗಿದೆ ಎಂದುಕೊಳ್ಳುವ ಸಮಯದಲ್ಲಿ ಇಂತಹ ಒಂದು ಸನ್ನಿವೇಶ ಅವರ ಜೀವನದಲ್ಲಿ ಬಂದದ್ದು ದುರಂತವೇ ಸರಿ. ಇಂತಹ ಸಮಯದಲ್ಲಿ ತನ್ನ ಜೀವನದಲ್ಲಿ ಕಂಡ ಹಲವಾರು ವೈದ್ಯರು ಹಾಗೂ ಕ್ಯಾನ್ಸರ್ ರೋಗಿಗಳ ಒಡನಾಟದ ಬಗ್ಗೆ ರ್ಯಾಂಡಿ ಹೇಳುವನು.

ಮುಂದಿನ ಜೀವನವನ್ನು ತನ್ನ ನಂತರ ಜೈ ಯಾವ ರೀತಿ ಒಬ್ಬಂಟಿಯಾಗಿ ನಡೆಸಬೇಕು ಜವಾಬ್ದಾರಿಗಳನ್ನು ನಿರ್ವಹಿಸಬೇಕೆಂಬುದನ್ನು ರ್ಯಾಂಡಿ ತುಂಬಾ ಅರ್ಥಪೂರ್ಣವಾಗಿ ಮಕ್ಕಳಿಗೆ ಕಲಿಸುತ್ತಾ ಹೋಗುತ್ತಾನೆ. ಸಾವಿಗೆ ಹತ್ತಿರವಾಗುತ್ತಾ ಹೋದಂತೆ ಮಕ್ಕಳಿಗೂ ಧನಾತ್ಮಕ ಗುಣಗಳನ್ನು ಕಲಿಸುವ ಪ್ರಯತ್ನ ಮಾಡುತ್ತಾನೆ. ಅವರನ್ನು ಮಾನಸಿಕವಾಗಿ ಸ್ಥಿರತೆಯನ್ನು ಕಾಪಾಡಿಕೊಳ್ಳುವ ಗುಣವನ್ನು ರೂಢಿ ಮಾಡಿಸುತ್ತಾನೆ.

ಅವನ ಅಂತಿಮ ಉಪನ್ಯಾಸದಲ್ಲಿ ಹೇಳುವ ಅವನ ಬದುಕಿನ ಸನ್ನಿವೇಶಗಳು, ಘಟನೆಗಳು ಅವನು ಅದನ್ನು ಸ್ವೀಕರಿಸಿದ ರೀತಿ ಅದನ್ನು ಉಪನ್ಯಾಸದಲ್ಲಿ ಹೇಳಿದ ಬಗೆ ಪರರ ಕನಸನ್ನು ಚಿಗುರಿಸಿದ್ದಲ್ಲದೇ ಅವರ ಬದುಕನ್ನು ಸ್ಮರಣೀಯ ಗೊಳಿಸಿಕೊಳ್ಳುವ ರೀತಿಯನ್ನು ಹೇಳಿ ಕೊಟ್ಟನು.

ಕೊನೆಯ ನುಡಿಯಲ್ಲಿ ಮಕ್ಕಳಿಗಾಗಿ ಅವನು ಕಂಡ ಕನಸುಗಳು, ಪತ್ನಿ ಜೈ ಜೊತೆಗಿನ ಅವರ ಅಪ್ಯಾಯಮಾನವಾದ ಬಾಂಧವ್ಯ ಪ್ರತಿ ಒಂದನ್ನೂ ಎಳೆಎಳೆಯಾಗಿ ಬಿಚ್ಚಿಟ್ಟಾಗ ಅರಿವಾಗದೇ ಎಲ್ಲರ ಕಣ್ಣಲ್ಲೂ ನೀರು ಜಿನುಗಿತು .ಸತತ ಒಂದು ಗಂಟೆಗಳ ಕಾಲ ಉಪನ್ಯಾಸ ನೀಡಿದರೆ ಕೊನೆಯಲ್ಲಿ ಹೇಳಿದ ಮಾತು ಎಂತವರ ಹೃದಯವನ್ನು ಕಲಕುವಂತಿತ್ತು!
“ನನ್ನ ಇಂದಿನ ಉಪನ್ಯಾಸ ಇಲ್ಲಿ ನೆರೆದಿರುವ ನಿಮ್ಮೆಲ್ಲರಿಗಾಗಿ ಅಲ್ಲ! ಇದು ನನ್ನ ಮಕ್ಕಳಿಗಾಗಿ ನಾನು ನೀಡಿದ ಉಪನ್ಯಾಸ” ಅಂದಾಗ ರ್ಯಾಂಡಿ ಬಲ ತೋಳಿನಲ್ಲಿ ಮಗ ‘ಲೋಗನ್’ನನ್ನು, ಎಡ ತೋಳಿನಲ್ಲಿ ‘ಚೋಲೆ’ಯನ್ನು ಪ್ರೀತಿಯಿಂದ ಗಟ್ಟಿಯಾಗಿದೆ ಹಿಡಿದಿಟ್ಟುಕೊಂಡಿರುತ್ತಾನೆ.

ರ್ಯಾಂಡಿ ಅದ್ಭುತ ವ್ಯಕ್ತಿ ಹಾಗೂ ಧೈರ್ಯವಂತ. ಅವನ ಉಪನ್ಯಾಸದ ಪ್ರತಿಯೊಂದು ಮಾತುಗಳು ಒಂದಲ್ಲ ಒಂದು ವ್ಯಕ್ತಿಯ ಬದುಕಿನಲ್ಲಿ ಹತ್ತಿರವಾದಂಥದ್ದು. ಹಾಗಾಗಿ ಜನಪ್ರಿಯ ಆಗಲಿಕ್ಕೆ ಕಾರಣವಾಯಿತು. ಬದುಕನ್ನು ಸಾರ್ಥಕಗೊಳಿಸುವ ರ್ಯಾಂಡಿ ಯ ಸಂದೇಶಗಳು ಜೀವನಕ್ಕೆ ಚೇತೋಹಾರಿ ಆಗಿವೆ.ಇದು ಒಂದು ಪವಿತ್ರ ಗ್ರಂಥವೇನೋ ಅನ್ನುವಂತಿದೆ!!!

(ಮುಕ್ತಾಯ)

ಹಿಂದಿನ ಸಂಚಿಕೆಗಳು :


  • ಶಾರದಾ ಶ್ರಾವಣಸಿಂಗ್ ರಜಪೂತ.

Leave a Reply

Home
Search
Menu
Recent
About
×