ಸವೆದರೂ ನಾಲಗೆಯಲುಳಿಯುವ ಸವಿ ಅಂಟು.. ಪೆಪ್ಪರಮೆಂಟು

ಕಂಸ ಕಂಚುಗಾರನಹಳ್ಳಿ ಸತೀಶ್ ಅವರ ‘ಕಂಸ ಪೆಪ್ಪರಮೆಂಟು’ ಅವರ ಕೃತಿಯ ಕುರಿತು ಕತೆಗಾರ ಸಂತೆಬೆನ್ನೂರು ಫೈಜ್ನಟ್ರಾಜ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಮಕ್ಕಳು ಬರೆಯುವುದು ಮತ್ತು ಮಕ್ಕಳಿಗೆ ಬರೆಯುವುದು ಎರಡೂ ಕಷ್ಟದ ಕೆಲಸ. ಮಕ್ಕಳ ಸಾಹಿತ್ಯ ಮಕ್ಕಳು ಬರೆಯಬೇಕೋ, ಮಕ್ಕಳಿಗಾಗಿ ದೊಡ್ಡವರು ಬರೆಯಬೇಕೋ ಎಂಬ ಜಿಜ್ಞಾಸೆ ಕಾಡುತ್ತಲೇ ಇರುವ ದಿನಮಾನಗಳಲ್ಲಿ ಮಕ್ಕಳ ಸಾಹಿತ್ಯ ವಿಫುಲವಾಗಿ ಕಾಣಿಸಿಕೊಳ್ಳುತ್ತಿರುವುದು ಆಶಾದಾಯಕ ಬೆಳವಣಗೆ. ಇದಕ್ಕೆ ಹೊಸ ಸೇರ್ಪಡೆ ಕಂಚುಗಾರನಹಳ್ಳಿ ಸತೀಶ್ ಅವರ ಈ ಮಕ್ಕಳ ಕವಿತೆಗಳ ಪೆಪ್ಪರ್ಮೆಂಟು.

ನೂರಾರು ನಿರೀಕ್ಷೆಗಳು ಒಮ್ಮೊಮ್ಮೆ ಒಂದೂ ಕೈಗೂಡದೇ ಹೋಗಬಹುದು ಆದರೆ ಸತತ ಯತ್ನ ಮತ್ತು ನಾಳಿನ ಭರವಸೆಯ ಕೋಟೆ ಕವಿ ಮಾತ್ರ ಕಟ್ಟಬಲ್ಲ. ಮಕ್ಕಳ ಮನಸ್ಸನ್ನು ಅರಿತವ, ಮಕ್ಕಳ ಒಡನಾಡಿಯಾದವನು ಮಾತ್ರ ಮಕ್ಕಳ ಸಾಹಿತ್ಯ ಸೂಕ್ಷ ಸಂವೇದನೆಯೊಂದಿಗೆ ಬರೆಯಬಲ್ಲ.

ಮಣ್ಣು ಸದಾ ಜೀವ ಕೊಡುವ ಜೀವದಾಯಿನಿ. ಅದೆಂದೂ ರಕ್ತ ಸುರಿಸಲಾರದು. ಅದನ್ನು ಕೆಂಪು ಮಾಡುವವರೇನಿದ್ದರೂ ನಾವು. ಆ ಮಣ್ಣಿನಲ್ಲಿ ಎಂತಹ ಬೀಜ ಚೆಲ್ಲಿದರೂ ನಾಳಿನ ಫಸಲು ಕಾಣಲು ಸಾಧ್ಯ. ಪೆಪ್ಪರುಮೆಂಟಿನ ಈ ಸವಿ ಮಕ್ಕಳಿಗೆ ರುಚಿಸುವ ಸವಿ ಕಾಣುತ್ತದೆ. ಒಬ್ಬ ಕವಿ ಸಮಾಜ ಸುಧಾರಕನಾಗುವ ದರ್ದಿಲ್ಲ, ಲೋಕ ಬದಲಾಯಿಸುವ ಉಮ್ಮೇದಿ ಇಲ್ಲ, ಜಗದ ಜನರ ಮನ ಗೆಲ್ಲುವ ಕಳಕಳಿ ಇಲ್ಲವೇ ಇಲ್ಲ. ಮುಂದಿನ ಪ್ರಜೆಗಳಾಗುವ ಮಕ್ಕಳಿಗೆ ಒಳ್ಳೆಯದನ್ನು ಓದಿಸುವ ಜವಾಬ್ದಾರಿಯಿದೆ. ಅದೂ ಕವಿತೆಯ ಮೂಲಕ.

ಇದಕ್ಕಿಂತ ಕವಿ ಬೇರೆ ಉದ್ಧಾರದ ಕೆಲಸ ಮಾಡಲಿಕ್ಕಾದರೂ ಏನಿದೆ? ಮಕ್ಕಳ ಪದ್ಯಗಳ ಮೂಲಕ ಹೊಸ ಲೋಕ ತೆರೆಯುವ ಪ್ರಾಮಾಣಿಕ ಯತ್ನ ಇಲ್ಲಿ ಸಫಲವಾಗಿದೆ. ಜಗತ್ತಿನಲ್ಲಿ ಎಷ್ಟು ಸುಂದರ ಇದೆಯೋ ಅಷ್ಟೇ ಪ್ರಮಾಣದಲ್ಲಿ ಕುರೂಪವೂ ಇದೆ. ಹಾಗೆಂದ ಕೂಡಲೇ ಸುಂದರವಾಗಿದ್ದ ಎಲ್ಲವೂ ನಮ್ಮದೆನ್ನಲು ಸಾಧ್ಯವೇ? ಮನಸಿಗೆ ತಾಕಿದ್ದು ಮಾತ್ರ ನಮ್ಮದಗಲು ಸಾಧ್ಯ. ಅಂತಹ ಸುಂದರವಾದ ಮಕ್ಕಳ ಪದ್ಯಗಳು ಓದುಗ ಮಕ್ಕಳಿಗೆ ಈ ಪೆಪ್ಪರುಮೆಂಟಿನಲ್ಲಿ ದಕ್ಕುತ್ತವೆ.

ಓದಿದ ಪ್ರತಿ ಸಲು ಓದಿದ ತಕ್ಷಣ ಇದು ನಮ್ಮದೇ ಸಾಲು ಅಂತನ್ನಿಸಿದಾಗ ಆ ಕವಿತೆ ಗೆಲ್ಲುತ್ತದೆ. ಅಂತಹ ಕವಿತೆಗಳು ಈ ಸಂಕಲನದಲ್ಲಿ ಸಹೃದಯನಿಗೆ ಅಲ್ಲಲ್ಲಿ ಮುಖಾ ಮುಖಿಯಾಗುತ್ತಲೇ ಹೋಗುತ್ತದೆ. ಕಾವ್ಯ ಎದೆಯ ಹಾಡದು, ಮನ ಮೈ ಹದವಾದಾಗ ಅದಾಗಿಯೇ ಹೊಮ್ಮಿ ಹೊರ ಬರುತ್ತದೆ ಎನ್ನುತ್ತಾರೆ ಅಡಿಗರು. ಅನುಭವ ಮತ್ತು ಹೃದಯದ ಭಾವಗಳ ಬೆಸುಗೆಯ ಅನುಸಂಧಾನವೂ ಹೌದು! ಇದು ಮಕ್ಕಳ ಸಾಹಿತ್ಯಕ್ಕೂ ಅನ್ವಯ. ಭಿನ್ನ ವಸ್ತು, ಭಿನ್ನ ದನಿ ಮೂಲಕ ಕವಿ ಮಕ್ಕಳ ಎದುರು ನಿಂತಾಗ ಚಿಂತನೆಗೆ ದಾರಿಯಾಗುತ್ತದೆ.
ಬೆಳೆ ಬೆಳೆಯುತ್ತಾ ಸಾಗುವ ಕ್ಕಳ ಲೋಕದಲ್ಲಿ ಸತ್ವಯುತ ಸಾಲು ಕೊಟ್ಟಾಗ ಅಪರೂಪದ ಸಂಸ್ಕಾರ ಮಕ್ಕಳಲ್ಲಿ ಮೈಗೂಡಲು ಸಾಧ್ಯ. ಅಂತಹ ಸಂಸ್ಕಾರದ ಕೆಲ ರಚನೆಗಳು ಇಲ್ಲಿ ನಮಗೆ ಮುಖಾಮುಖಿಯಾಗುತ್ತವೆ, ಕನ್ನಡ ನಾಡಿನ ಮಕ್ಕಳು ಈ ಪೆಪ್ಪರಮೆಂಟಿನ ಸ್ವಾದ ಸವಿಯಲಿ , ಅದರ ಆಹ್ಲಾದದ ಘಮ ಇತರರಿಗೂ ದಾಟಿಸಲಿ ಶುಭವಾಗಲಿ…


  • ಸಂತೆಬೆನ್ನೂರು ಫೈಜ್ನಟ್ರಾಜ್ – ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು, ಸಂತೆಬೆನ್ನೂರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW