ಯಾವ ಬೇದಭಾವಗಳಿಲ್ಲದೆ ಹಾಸುವಳು ತನ್ನ ಸೆರಗನ್ನು…ಜನಿಸುವ ಜೀವಗಳಿಗೆ ಸದಾ ಒದಗಿಸುವಳು ಆಶ್ರಯವನ್ನು…ಮುತ್ತು ರಾಮಪ್ರಸಾದ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಅಗಣಿತ ಜೀವಗಳಿಗೆ ನೆಲೆಯಾಗಿರುವ ಪೃಥ್ವಿಗೆ/
ಪೂಜ್ಯತೆಯಲ್ಲಿ ಉಪಾಸಿಸುವ ಉಸಿರುಸಿರಿನಲ್ಲಿ/
ಅಗಣಿತ ಜೀವಗಳಿಗೆ ನೆಲೆಯಾಗಿರುವ ಪೃಥ್ವಿಗೆ/
ಪವಿತ್ರತೆಯಲ್ಲಿ ಆರಾಧಿಸುವ ಜೀವಜೀವದಲ್ಲಿ/
ಯಾವ ಬೇದಭಾವಗಳಿಲ್ಲದೆ ಹಾಸುವಳು ತನ್ನ ಸೆರಗನ್ನು/
ಜನಿಸುವ ಜೀವಗಳಿಗೆ ಸದಾ ಒದಗಿಸುವಳು ಆಶ್ರಯವನ್ನು/
ಎಲ್ಲರಿಗೂ ಬಗೆಬಗೆಯಲ್ಲಿ ರೂಪಿಸುವಳು ಬಾಳ ಪಥವನ್ನು/
ಬದುಕುವುದಕ್ಕೆ ಏರ್ಪಡಿಸುವಳು ಪ್ರಕೃತಿಯ ಪರಿಸರವನ್ನು/
ಋತುಗಳಲ್ಲಿ ಪ್ರದರ್ಶಿಸುವಳು ತನ್ನ ಅಂತರಂಗದ ಸ್ವರೂಪಗಳ/
ಪ್ರಕೃತಿಯ ವೈಪರೀತ್ಯ ತೋರ್ಕೆಗಳಿಗೆ ತೋರುವಳು ಮಾರ್ಗಗಳ/
ಪ್ರತಿಬಿಂಬಿಸುವಳು ಭೇದವಿಲ್ಲದೆ ಎಲ್ಲಡೆ ನೆಡೆಯುವ ಪ್ರಸಂಗಗಳ/
ಮಾರ್ಧ್ವನಿಸುವಳು ನಿಸರ್ಗದಲ್ಲಿ ಪಲ್ಲವಿಸುವ ವಿಶಿಷ್ಟ ಧ್ವನಿಗಳ/
ಜೀವ ನಿರ್ಜೀವಗಳ ಹೊತ್ತಿರುವಳು ಅಗಾಧ ಅಖಂಡ ಶಕ್ತಿಯಲ್ಲಿ/
ಮಾರ್ಪಾಡಾಗುವ ಹವಾಮಾನಕೆ ಬದಲಾಗುವಳು ವಿಭಾವನೆಯಲ್ಲಿ/
ಎಲ್ಲರಿಗು ಆಶ್ರಯದಾತವಾಗಿರುವಳು ಹಗಲಿನಲ್ಲಿ ಇರುಳಿನಲ್ಲಿ/
ಜನನಕೆ ತೊಟ್ಟಿಲಾಗುವಳು ಮರಣಕೆ ಮಡಿಲಾಗುವಳು ದಯೆಯಲ್ಲಿ/
ಆಶ್ರಮ್
- ಮುತ್ತು ರಾಮಪ್ರಸಾದ