ಇವು ನಮ್ಮ ದೇಶದಲ್ಲಿ ಸಾಮಾನ್ಯ ಜನರ ಪ್ರವೇಶಕ್ಕೆ ನಿಷಿದ್ಧವಾಗಿರುವ ಕೆಲವು ವಿಶೇಷ ಸ್ಥಳಗಳು. ಇವುಗಳ ಬಗ್ಗೆ ನಾವು ವಿಷಯ ತಿಳಿಯಬಹುದೇ ಹೊರತು ಅವುಗಳನ್ನು ನೋಡಿ ಆನಂದಿಸುವ ಅವಕಾಶಗಳು ಮಾತ್ರ ತೀರಾ ವಿರಳ.

- ಬ್ಯಾರೆನ್ ದ್ವೀಪ: ಇದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದಲ್ಲಿರುವ ಒಂದು ಸುಂದರವಾದ ಪ್ರದೇಶ. ಆದರೆ ಇಲ್ಲಿಗೆ ನಾವು ಹೋಗೋದಿಕ್ಕೆ ಅವಕಾಶ ಇಲ್ಲ, ಕಾರಣ ಇಲ್ಲಿ ಇರೋ ಸಕ್ರಿಯ ಜ್ವಾಲಾಮುಖಿಯಿಂದಾಗಿ. ಆದರೆ ದೂರದಿಂದ ಅದರ ಉರಿಯುವ ಲಾವಾ ಮತ್ತು ಹಲಗೆಯನ್ನು ನೋಡೋದಕ್ಕೆ ಯಾವುದೇ ಸಮಸ್ಯೆ ಇಲ್ಲವಾದರೂ ದ್ವೀಪದೊಳಗೆ ಹೋಗೋದು ಅಸಾಧ್ಯ.

- ಅಕ್ಸೈಚೀನ್ : ಇದು ಭಾರತ ಮತ್ತು ಚೀನಾದ ಗಡಿ ಭಾಗದಲ್ಲಿದ್ದು, ಭಾರತ ಇದು ತನ್ನದೇ ಭಾಗ ಎಂದರೆ ಚೀನಾ ತನ್ನದು ಎನ್ನುತ್ತದೆ. ಈ ಭೂಭಾಗದ ಬಳಿಯೇ ಎಲ್ಎಸಿ ಹಾದು ಹೋಗುವುದರಿಂದ ಇಲ್ಲಿ ಜನರಿಗೆ ಪ್ರವೇಶ ಇಲ್ಲ. ಇದೊಂದು ಮರುಭೂಮಿಯಂತ ಪ್ರದೇಶ ಆಗಿದ್ದು ಉಪ್ಪು ನೀರಿನ ಸರೋವರಗಳು ಇವೆ. ಇಲ್ಲಿ ಸುಂದರವಾದ ಪೆಂಗೋಮ್ ಸೋ ಸರೋವರ ಕೂಡಾ ಇದೆ.

- ಜಿಪಿ ಬ್ಲಾಕ್ : ಮಧ್ಯಪ್ರದೇಶ ಮೀರತ್ ನ ಸೈನ್ಯದ ನಿಯಂತ್ರಣದಲ್ಲಿರುವ ಇರುವ ಈ ಪ್ರದೇಶದಲ್ಲಿ ಬಂಗಲೆ ಒಂದಿದ್ದು, ಇದು ಭೂತ ಬಂಗಲೆ ಎಂದೇ ಹೆಸರುವಾಸಿ, ಡಿಸೋಜ ಎಂಬ ಅಧಿಕಾರಿ ಇಲ್ಲಿ ಸತ್ತು ಆತ್ಮವಾಗಿದ್ದಾನೆ ಎಂದಿದ್ದು, ಕೆಲವರು ಬಂಗಲೆಯ ಮೇಲೆ ಕೆಂಪು ಸೀರೆ ಉಟ್ಟ ಮಹಿಳೆ ಕಾಣುವಳು ಎನ್ನುತ್ತಾರೆ. ಭಯದಿಂದ ಜನರು ಇಲ್ಲಿ ಯಾರೂ ಬರುವುದಿಲ್ಲ.

ಫೋಟೋ ಕೃಪೆ: traveltriangle
- ಸಿಯಾಚಿನ್ ಗ್ಲೇಷಿಯರ್: ಇದು ಹಿಮಾಲಯದ ಕಾರಾಕೋರಂ ಪರ್ವತ ಶ್ರೇಣಿಯಲ್ಲಿದ್ದು, ವಿಶ್ವದ ಅತಿ ಎತ್ತರದ ಯುದ್ಧ ಭೂಮಿಯಾಗಿದೆ. ಭಾರತದ ಈ ಭೂಭಾಗದಲ್ಲಿ ಅತೀವ ಚಳಿ, ಯೋಧರು ಸದಾ ಇಲ್ಲಿ ಗಡಿ ಕಾಯುತ್ತಿರುತ್ತಾರೆ. ಇಲ್ಲಿಗೆ ಹೋಗಲು ಧೈರ್ಯ, ಸಾಹಸಗಳ ಜೊತೆ ದೇಶಪ್ರೇಮವೂ ಇರಬೇಕು. ರಕ್ಷಣಾ ದೃಷ್ಟಿಯಿಂದ ಸಾಮಾನ್ಯ ಜನರಿಗೆ ಇಲ್ಲಿ ಪ್ರವೇಶ ಇಲ್ಲ.

ಫೋಟೋ ಕೃಪೆ: kannadaprabha
- ಚಂಬಲ್ ಕಣಿವೆ: ಮಧ್ಯಪ್ರದೇಶ ಚಂಬಲ್ ಡಕಾಯಿತರ ಆವಾಸಸ್ಥಾನ. ಅದಕ್ಕೆ ಸಾಮನ್ಯ ಜನರು ಇಲ್ಲಿಗೆ ಹೋಗಲು ಹೆದರುತ್ತಾರೆ. ಬಾಲಿವುಡ್ ನ ಕೆಲವು ಸಿನಿಮಾಗಳು ಇಲ್ಲಿ ನಿರ್ಮಾಣವಾಗಿವೆ. ಪ್ರಕೃತಿ ಸೌಂದರ್ಯ ಸಮೃದ್ಧವಾಗಿದ್ಧೂ ಡಾಕುಗಳ ಭಯದಿಂದ ಜನರು ಇಲ್ಲಿಗೆ ಬರುವುದಿಲ್ಲ.

ಫೋಟೋ ಕೃಪೆ: sikkim tourism
- ಚೋಲುಮು ಸರೋವರ: ಸಿಕ್ಕಿಂ ನ ಈ ಸರೋವರ ಬಹಳ ಸುಂದರವಾಗಿದ್ದು, ನೋಡುಗನ ದೃಷ್ಟಿಯನ್ನು ತನ್ನತ್ತ ಸೆಳೆಯುತ್ತದೆ. ಇದನ್ನು ನೋಡಲು ಅದೃಷ್ಟದ ಜೊತೆಗೆ ಸಿಕ್ಕಿಂ ಪೋಲಿಸರ ಅನುಮತಿ ಕೂಡಾ ಅವಶ್ಯಕವಾಗಿದೆ.

ಫೋಟೋ ಕೃಪೆ: prajavani
- ನಿಕೋಬಾರ್ ದ್ವೀಪ: ಇದು ಭೂಮಿಯ ಮೇಲಿನ ಸ್ವರ್ಗದಂತೆ ಪ್ರಕೃತಿ ಸೌಂದರ್ಯದ ತಾಣವಾಗಿದ್ದು, ಮನುಷ್ಯನ ಪ್ರವೇಶವಾದರೆ ಇಲ್ಲಿನ ರಮ್ಯ ವಾತಾವರಣ ಹಾಳಾಗಬಹುದೆಂದು ಜನರ ಪ್ರವೇಶ ನಿಷೇಧ ಮಾಡಲಾಗಿದೆ. ಯುನೆಸ್ಕೋ ಇದನ್ನು ಜೈವಿಕ ಸೂಕ್ಷ್ಮ ವಲಯ ಎಂದು ಗುರುತಿಸಿದೆ. ವಿಜ್ಞಾನಿಗಳು ಹಾಗೂ ಸಂಶೋಧಕರು ಬೇಕಿದ್ದರೆ ಅನುಮತಿ ಪಡೆದು ಇಲ್ಲಿ ಪ್ರವೇಶ ಮಾಡಬಹುದು.

ಫೋಟೋ ಕೃಪೆ: mumbai live
- ಮುಖೇಶ್ ಮಿಲ್ : ಮುಂಬೈನ ಈ ಮಿಲ್ ದಶಕಗಳ ಹಿಂದೆ ಬೆಂಕಿ ಅನಾಹುತದಿಂದ ಹಾಳಾಗಿ ಶಾಪಿತ ಸ್ಥಳದ ಹಾಗೆ ಕಾಣುತ್ತದೆ. ಬೆಂಕಿ ಅನಾಹುತಕ್ಕೆ ಇದುವರೆಗೂ ಕಾರಣ ತಿಳಿದಿಲ್ಲ. ಕೆಲವು ವರ್ಷಗಳ ಹಿಂದೆ ಬಾಲಿವುಡ್ ನಿರ್ದೇಶಕರೊಬ್ಬರು ಸಿನಿಮಾ ಮಾಡಲು ಹೋದಾಗ ಇಲ್ಲಿ ಭೂತದ ಅನುಭವವಾಗಿತ್ತು ಎನ್ನುತ್ತಾರೆ. ಅಲ್ಲದೇ ಸಿನಿಮಾ ನಾಯಕಿಗೂ ತೊಂದರೆ ಆದ ಕಾರಣ ಅಲ್ಲಿ ಈಗ ಯಾರಿಗೂ ಪ್ರವೇಶಕ್ಕೆ ಅನುಮತಿ ಇಲ್ಲ.

ಫೋಟೋ ಕೃಪೆ: ED times
- ಸೆಂಟಿನಲ್ ಐಲ್ಯಾಂಡ್: ಅಂಡಮಾನ್ ಮತ್ತು ನಿಕೊಬಾರ್ ದ್ವೀಪ ಸಮೂಹದ ಈ ದ್ವೀಪದಲ್ಲಿ ಸೆಂಟಿನೆಲ್ಸ್ ಎಂಬ ಜನಾಂಗ ಇದ್ದು ಇವರು ಇನ್ನೂ ಆದಿ ಮಾನವರಂತೆ ಬದುಕುತ್ತಿದ್ದಾರೆ. ಇವರ ಒಡನಾಟ ಸಾಧಿಸುವುದು ಕಷ್ಟ. ಅದಕ್ಕೆ ಸರ್ಕಾರ ಈ ದ್ವೀಪಕ್ಕೆ ಹೊರಗಿನ ಜನರನ್ನು ಇಲ್ಲಿಗೆ ಹೋಗಲು ಅನುಮತಿ ನೀಡಿಲ್ಲ.
- ಅನಿತಾ ನಿತಾ