ಕನಸ್ಸುಗಳಿಗೆ ನೀರೆರೆಯುವ ಅಪ್ಪನಿಗೆ ಅಪ್ಪಂದಿರ ದಿನದ ಶುಭಾಶಯಗಳು…ಕವಿ ಹೆಚ್. ಪಿ. ಕೃಷ್ಣಮೂರ್ತಿ ಅವರ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಬಾಲ್ಯದಲಿ
ಅಪ್ಪನ ಹೆಗಲ ಮೇಲೆ
ನಾನು
ಈಗ ಮನದಲಿ
ಅವನ ನೆನಪುಗಳ
ಥಾನು!
***
ಗದರುತಿದ್ದರೂ ಅಪ್ಪ
ಮನದ ಮೂಲೆಯಲಿ
ಮರುಗುತಿದ್ದ
ಎಷ್ಟೇ ಸಂಕಷ್ಟ ಬಂದರೂ
ಲಂಚಕೆ ಕೈ ಒಡ್ಡದೆ
ನಿಯತ್ತಿನಲೇ ಬದುಕು ಗೆದ್ದ!
***
ಹಗಲೆಲ್ಲ ಆಫೀಸಿನಲಿ
ನಮಗಾಗಿ
ದುಡಿಯುತಿದ್ದ
ಸಂಜೆ ಮಠದಲ್ಲಿ
ರಾಯರಿಗಾಗಿ
ಗಂಧ ತೇಯುತ್ತಿದ್ದ!
***
ಹಲವರಿಗೆ
ದೇವರು
ತಿರುಪತಿಯ ತಿಮ್ಮಪ್ಪ
ನನಗೆ
ನಮ್ಮನೆಯ
ಅಪ್ಪ!
- ಹೆಚ್. ಪಿ. ಕೃಷ್ಣಮೂರ್ತಿ, ಬೆಂಗಳೂರು.
