‘ಅಪ್ಪ ಪೊಲೀಸ ಅನ್ನೋ ಹೆಮ್ಮೆ…ಆದ್ರೆ ನೋಡೋದು ವಾರಕ್ಕೊ’ಮ್ಮೆ…ಶ್ರೀಕಾಂತ ಹಡಪದ ಅವರು ವೃತ್ತಿಯಲ್ಲಿ ಪೊಲೀಸ್ ಆಗಿದ್ದು, ಪೊಲೀಸಪ್ಪನ ಮಗಳ ಮನದಾಳದಲ್ಲಿ ಮೂಡುವ ಕವಿತೆಯನ್ನು ಓದುಗರ ಮುಂದೆ ತಂದಿದ್ದಾರೆ, ತಪ್ಪದೆ ಮುಂದೆ ಓದಿ…
ನಾನೇಳುವ ಮೊದಲ ಹೋಗ್ತಿ
ರಾತ್ರಿ ಮಲಗಿದಾಗ ಬರತಿ
ನೋಡಬೇಕೆಂದರೆ ನಾ ನಿನ್ನ
ನೀ ಇದ್ದಲ್ಲೇ ಬರಬೇಕಿನ್ನ
ಶಾಲೆಗೆ ಕಳಿಸಲು ಬರಲ್ಲ
ಕರ್ಕೊಂಡು ಹೋಗಾಕೂ ಇಲ್ಲ
ಯಾವ ಊರಿಗೆ ಒಯ್ಯಲಿಲ್ಲ
ಆಟ ಅಂತೂ ಎಂದೂ ಆಡಲಿಲ್ಲ
ಅಮಾವಾಸಿ ಇದ್ದಾಗ ನಾಕಾ ಬಂದಿ
ಹಬ್ಬಕ್ಕ ನೀನು ರೋಡ್ ಬಂದಿ
ವಿಐಪಿ ಬಂದ್ರೆ ಬಂದೋ ಬಸ್ತ್
ನಿನಗಾಗಲ್ವಾ ಎಂದು ಸುಸ್ತು
ರವಿವಾರನು ಡ್ಯೂಟಿ ಅನ್ನತಿ
ಜಾತ್ರೆಗೆ ಬಂದೋ ಬಸ್ತ್ ಅನ್ನತಿ
ರಜೆ ಹಾಕಂದ್ರೆ ಸಿಕ್ತಿಲ್ಲ ಅನ್ನತಿ
ಅಧಿವೇಶನ ಇದೆ ಸುಮ್ನಿರು ಅಂತಿ
ಇದು ಪೊಲೀಸರ ನೈತಿಕತೆಯೋ
ಹಾಳು ಹಣೆಬರಹವೋ ಗೊತ್ತಿಲ್ಲ
ಹಬ್ಬ ಹರಿದಿನಗಳಿಗೆ ರಜೆಯಿಲ್ಲ
ಶುಭ ಅಶುಭಗಳಿಗೆ ಬಿಡುವಿಲ್ಲ
ಹಗಲು ರಾತ್ರಿಗಳೆಂಬ ವ್ಯತ್ಯಾಸವಿಲ್ಲ
ಅಪ್ಪ ಪೊಲೀಸ ಅನ್ನೋ ಹೆಮ್ಮೆ
ಆದ್ರೆ ನೋಡೋದು ವಾರಕ್ಕೊಮ್ಮೆ
ನಮ್ಮ ಖುಷಿಗೆ ಕಳೆದೋದಿಯಲ್ಲ ಅಪ್ಪ
ನಾನು ದೊಡ್ಡಕ್ಕಿ ಆದಮೇಲೆ ನಿನ್ನನ್ನ ಚನ್ನಾಗಿ ನೋಡಿಕೊಳ್ಳತೇನಿ ಅಪ್ಪ ಖುಷಿಯಾಗಿರು ಅಪ್ಪ…
- ಶ್ರೀಕಾಂತ ಹಡಪದ
