ಶ್ರೀ ಪೂರ್ಣಚಂದ್ರ ತೇಜಸ್ವಿಯವರನ್ನು ನೆನಪಿಸುವ ಈ ಲೇಖನ

ಆಡು ಮುಟ್ಟದ ಸೊಪ್ಪಿಲ್ಲ. ಹಾಗೆಯೇ ಶ್ರೀ ತೇಜಸ್ವಿಯವರು ಕೈಹಿಡಿಯದ ವಿಷಯಗಳಿಲ್ಲ. ಅವರ ಕೃತಿಗಳಿಂದ ಸಾಕಷ್ಟು ಓದುಗರು ಪ್ರೇರಿಪಿತರಾಗಿದ್ದಾರೆ. ಅವರಲ್ಲಿ ಲೇಖಕ ಚಂದ್ರಶೇಖರ್ ಕುಲಗಾಣ ಅವರು ಕೂಡ ಒಬ್ಬರು. ಅವರು ಈಗಾಗಲೇ ಆಕೃತಿಕನ್ನಡ ಅಂತರ್ಜಾಲ ಪತ್ರಿಕೆಯಲ್ಲಿ ಗಲಾಟೆ ಗುಬ್ಬಿಗಳೆಲ್ಲಿ?, ಮಾತೃ ಹೃದಯಿ ಕಾಗೆಗಳು  ಎನ್ನುವ ಪಕ್ಷಿಗಳ ಕುರಿತಾದ ಲೇಖನವನ್ನು ರಚಿಸಿ, ಓದುಗರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಓದಿ, ತಪ್ಪದೆ ಶೇರ್ ಮಾಡಿ.

ಮಾನ್ಯ ಶ್ರೀ ಕುವೆಂಪುರವರು ‘ಶ್ರೀ ರಾಮಾಯಣ ದರ್ಶನಂ’ ರಚಿಸುತ್ತಿದ್ದ ಕಾಲವದು. ಕಾವ್ಯವನ್ನು ಆಗಷ್ಟೇ ರಚಿಸಲು ಶುರು ಮಾಡಿದ್ದರು. ಒಂದೇ ಸಮನೆ ಬರೆದು ಬರೆದು ಮುಂದಕ್ಕೆ ಸಾಗುತ್ತಿರುವಾಗ ಹಠಾತನೇ ಸ್ಫೂರ್ತಿ ನಿಂತು ಹೋಯಿತು. ವಾರನುಗಂಟಲೇ ಕಾವ್ಯ ಮುಂದಕ್ಕೆ ಹೋಗಲೇ ಇಲ್ಲಾ. ಹೀಗೆ ಶ್ರೀ ಕುವೆಂಪುರವರು ಚಡಪಡಿಸುತ್ತಿದ್ದಾಗ ತಮ್ಮ ಮಗು ಕೈಗೂಸು ತೇಜಸ್ವಿಯವರು ಊಟ ಮಾಡದೆ ರಚ್ಚೆ ಹಿಡಿದಿದ್ದರು. ಆ ಸಮಯದಲ್ಲಿ ಹಠಾತ್ತನೆ ಹೊಳೆದ ಸಾಲು “ಏಕೆ ಅಳುವೇ ತೇಜಸ್ವಿಯೇ”. ಇದರಿಂದ ಮಗು ಸಮಾಧಾನಪಟ್ಟಿತೋ ಇಲ್ಲವೋ ಗೊತ್ತಿಲ್ಲ. ಆದರೆ ಕುವೆಂಪುರವರ ಲೇಖನಿ ಅಲ್ಲಿಂದ ನಿಲ್ಲದೆ ಮುಂದೆ ಸಾಗಿ ‘ಶ್ರೀ ರಾಮಾಯಣ ದರ್ಶನಂ’ ರಚಿತವಾಯಿತು. ಮತ್ತು ಅದು ಸಾಕಷ್ಟು ಜನಪ್ರಿಯವಾಗಿದ್ದಷ್ಟೇ ಅಲ್ಲ, ಅವರಿಗೆ ಜ್ಞಾನಪೀಠ ಪ್ರಶಸ್ತಿಯು ತಂದುಕೊಟ್ಟಿತು.

poornachandratejaswi

ಫೋಟೋ ಕೃಪೆ : wordpress.com

ಹೀಗೆ ತಮ್ಮ ತಂದೆಗೆ ಮೊದಲು ಶ್ರೀ ತೇಜಸ್ವಿಯವರು ಸ್ಫೂರ್ತಿಯಾಗಿದ್ದರು. ತೇಜಸ್ವಿಯವರು ಹುಟ್ಟಿದ್ದು ಸೆಪ್ಟೆಂಬರ್ ೮, ೧೯೩೮  ಶಿವಮೊಗ್ಗದ ಕುಪ್ಪಳ್ಳಿಯಲ್ಲಿ. ತಾವು ಅನುವಾದಿಸಿದ ‘ಮಹಾಯುದ್ಧದ ಕಥೆ’ಗಳಲ್ಲಿ ಆ ಭೀಕರತೆಯ ಕಾಲದಲ್ಲಿ ತಾನು ಜನಿಸಿದ್ದು ಎಂದು ಬರೆದು ಕೊಂಡಿದ್ದಾರೆ. ಅವರು ಶಿಕ್ಷಣಾಭ್ಯಾಸವನ್ನು ಮೈಸೂರಿನಲ್ಲಿ ಮುಗಿಸಿದ್ದರು. ಕನ್ನಡದಲ್ಲಿ ಬಿ.ಎ ಹಾಗೂ ಎಂ.ಎ ಸ್ನಾತಕೋತ್ತರ ಪದವೀಧರರಾಗಿ ಯಾವುದೇ ಸರಕಾರಿ ಹುದ್ದೆಯನ್ನು ಅಪೇಕ್ಷಿಸದೆ ಚಿಕ್ಕಮಂಗಳೂರಿನ ಮೂಡಿಗೆರೆಯಲ್ಲಿ ಕೃಷಿ ಉದ್ಯಮದಲ್ಲಿ ತೊಡಗಿಕೊಂಡರು. ಅದಕ್ಕೆ ಮುಖ್ಯ ಕಾರಣ ಅವರಿಗಿದಿದ್ದ ಅದಮ್ಯ ನಿಸರ್ಗ ಪ್ರೇಮ.

ಆಡು ಮುಟ್ಟದ ಸೊಪ್ಪಿಲ್ಲ. ಹಾಗೆಯೇ ಶ್ರೀ ತೇಜಸ್ವಿಯವರು ಕೈಹಿಡಿಯದ ವಿಷಯಗಳಿರಲಿಲ್ಲ. ಮುಂದೆ ಕನ್ನಡ ಓದುಗರಿಗೆ “ಪೂಚಂತೇ” ಎಂದೇ ಜನಪ್ರಿಯರಾದರು. ಅವರು ಎಲ್ಲಾ ಬಗೆಯ ಕೃತಿಯನ್ನು ರಚಿಸುತ್ತಾ ಕನ್ನಡಾಂಭೆಯ ಸೇವೆಯಲ್ಲಿತಮ್ಮನ್ನು ತಾವು ತೊಡಗಿಸಿಕೊಂಡರು. ಅಂತರ್ಜಾಲವಿಲ್ಲದಿದ್ದ ಕಾಲದಲ್ಲಿಯೇ ಅವರು ಅನೇಕ ವಿಷಯಗಳನ್ನುಅನುವಾದಿಸಿ ಅವುಗಳನ್ನು ಕೃತಿಯಾಗಿಸಿದ್ದಾರೆ.’ ಫ್ಲೈಯಿಂಗ್ ಸಾಸರ್’ ನಲ್ಲಿ ಅನ್ಯಜೀವಿಗಳ ಬಗ್ಗೆ ವಿಜ್ಞಾನದ ಕುರಿತಾದ ಮಾಹಿತಿಯನ್ನು ಸಂಗ್ರಹಿಸಿ ಎರಡು ಪುಸ್ತಕಗಳನ್ನು ಪ್ರಕಟಿಸಿದರು. ‘ಏರೋಪ್ಲೇನ್ ಚಿಟ್ಟೆ’ ಎಂಬ ಕಥಾ ಸಂಕಲನದಲ್ಲಿ “ ಚಿಟ್ಟೆಗಳು, ಬಾವಲಿಯ ವಿಚಿತ್ರ ಸಂಗತಿಗಳು, ಕಪ್ಪೆಯನ್ನು ನುಂಗ ಬಯಸಿದ ಹಾವಿನ ಬಗ್ಗೆ ಹಾಗೂ ಇನ್ನು ಅನೇಕ ಕೀಟಗಳ ಬಗ್ಗೆ ಬರೆದಿದ್ದಾರೆ. ತಮ್ಮ ‘ಮಿಸ್ಸಿಂಗ್ ಲಿಂಕ್’ ಪುಸ್ತಕದಲ್ಲಿ ಮಾನವನ ಪೂರ್ವಜರನ್ನು ದಾಖಲೆಗಳ ಸಮೇತ ಪ್ರಕಟಿಸಿ, ಕನ್ನಡದ ಓದುಗರೆಲ್ಲರೂ ಹುಬ್ಬೇರಿಸುವಂತೆ ಮಾಡಿದರು. ಹಾಗೆ ಜೊತೆಗೆ ಪೆಸಿಫಿಕ್ ದ್ವೀಪಗಳು, ನೈಲ್ ನದಿಯ ಬಗ್ಗೆ, ಅಮೇಝೋನ್ ಕಾಡುಗಳ ಭೀಕರತೆಯನ್ನು ಪರಿಚಯಿಸುತ್ತಾ ಒಂದು ಕಡೆ ‘ಕರ್ವಾಲೋ’,’ ಚಿದಂಬರರಹಸ್ಯ’, ‘ಜುಗಾರಿ ಕ್ರಾಸ್’ ಮುಂತಾದ ಕಾದಂಬರಿಗಳನ್ನು ಬರೆದರು. ಕರ್ವಾಲೋ ಕಾದಂಬರಿಯಲ್ಲಿ ಬರುವ ಮಂದಣ್ಣನ ಪಾತ್ರವು ಈಗಿನ ತಲೆಮಾರಿಗೂ ಜನಪ್ರಿಯ. ತಮ್ಮ ಎಲ್ಲಾ ಕೃತಿಗಳಲ್ಲಿಯೂ ತಮ್ಮ ಅಗಾಧ ನಿಸರ್ಗ ಪ್ರೀತಿಯನ್ನು ತನ್ನ ಬುದ್ಧಿಶಕ್ತಿಯ ಜೊತೆ ಬೆರಸಿ ಕನ್ನಡದಲ್ಲಿ ಅನೇಕ ನವ್ಯ ಸಾಹಿತ್ಯ ಕೃತಿಗಳು ಬರಲು ಕಾರಣವಾದರು.

ಶ್ರೀ ತೇಜಸ್ವಿ ಎಂದರೆ ಒಂದು ಜೀವಂತ ವಿಶ್ವಕೋಶ. ಅವರು ಶ್ರೀ ಪ್ರದೀಪ್ ಕೆಂಜಿಗೆಯವರನ್ನು ಜೊತೆಯಾಗಿಟ್ಟುಕೊಂಡು ಶುರು ಮಾಡಿದ ಮಿಲೇನಿಯುಮ್ ಸರಣಿ ಈಗಲೂ ಜನಪ್ರಿಯ. ಸರಣಿಯಲ್ಲಿ ಪ್ರಕಟಗೊಂಡ ಪ್ಯಾಪಿಯೊನ್ ( ಭಾಗ ೧, ೨, ೩), ಮಹಾಪಲಾಯನ ಪುಸ್ತಕವು ಮಧ್ಯ ಶತಮಾನದ ಕಮ್ಯುನಿಸಂ ಕ್ರೂರತೆಯನ್ನು ಪರಿಚಯಿಸಿದರೆ, ದೇಶ- ವಿದೇಶ, (ಭಾಗ ೧, ೨, ೩, ೪) ಪಾಶ್ಚಿಮಾತ್ತ್ಯ ದೇಶದ ಸಂಸ್ಕೃತಿ ಹಾಗೂ ವಾಸ್ತವತೆಯನ್ನು ಪರಿಚಯಿಸಿತು. ಮಹಾಯುದ್ಧ (ಭಾಗ ೧, ೨, ೩) ಪುಸ್ತಕಗಳಲ್ಲಿ ಹಿಟ್ಲರ್, ಮಿತ್ರಪಡೆ, ಗ್ರೇಟ್ ಬ್ರಿಟನ್ ಹಾಗೂ ಅಮೇರಿಕಾ ಜಪಾನ್ ಮೇಲೆ ಹಾಕಿದ ಅಣು ಬಾಂಬಿನ ತೀವ್ರತೆಯನ್ನು ಮಾಹಿತಿ ಸಮೇತ ಅನುವಾದಿಸಿದರು. ಹೀಗೆ ಅವರ ಎಲ್ಲಾ ಪುಸ್ತಕಗಳು ಎಲ್ಲ ತಲೆಮಾರುಗಳಿಗೆ ಉಪಯೋಗವಾಗುವಂತದ್ದು, ಮತ್ತೆ ಮತ್ತೆ ಓದಬೇಕೆನಿಸುವುದು.

‘ಹಕ್ಕಿ ಪುಕ್ಕ’ ಪುಸ್ತಕದಿಂದ ಫೋಟೋ ಕೃಪೆ : Pinterest

ಶ್ರೀ ತೇಜಸ್ವಿಯವರು ನುರಿತ ಸ್ಥಿರ ಚಿತ್ರ ಛಾಯಾಗ್ರಾಹಕರಾಗಿಯೂ ಜನಪ್ರಿಯ. ತಮ್ಮ ‘ಹಕ್ಕಿ ಪುಕ್ಕ’ ಪುಸ್ತಕದಲ್ಲಿ ವರ್ಣಮಯ ಪಕ್ಷಿ ಚಿತ್ರಗಳು ತಮ್ಮ ಕ್ಯಾಮೆರಾದಲ್ಲೇ ತೆಗೆದಿದ್ದು. ಈಗಿನ ತಲೆಮಾರಿಗೆ ಜಿಮ್ ಕಾರ್ಬೆಟ್ ಹಾಗೂ ಕೆನ್ನೆತ್ ಆಂಡರ್ಸನ್ ಆಂಗ್ಲ ಬೇಟೆ ಕೃತಿಗಳನ್ನು ಅನುವಾದಿಸಿ ಎಷ್ಟೋ ಜನರಲ್ಲಿ ಪ್ರಾಣಿ ಪ್ರೀತಿಯನ್ನು ಹುಟ್ಟು ಹಾಕಿದರು.

ತೇಜಸ್ವಿಯವರ ಜ್ಞಾನ ಭಂಡಾರವೆಂದರೆ ತುಂಬಿಟ್ಟ ಅಕ್ಕಿ  ಮೂಟೆಯಂತೆ. ಅದರಲ್ಲಿನ ಅಕ್ಕಿ ಲೆಕ್ಕ ಹಾಕುವುದು ಎಷ್ಟು ಕಷ್ಟವೋ, ಅಷ್ಟೇ ಕಷ್ಟ ಅವರ ಜ್ಞಾನ ಭಂಡಾರವನ್ನು ಲೆಕ್ಕ ಹಾಕುವುದು. ಈ ದಿನ ಶ್ರೀ ಪೂರ್ಣಚಂದ್ರ ತೇಜಸ್ವಿಯವರ ಹುಟ್ಟಿದ ಹಬ್ಬ. ಅವರ ನೆನಪಲ್ಲಿ ಅವರ ಸಾಹಿತ್ಯ, ನೈಸರ್ಗಿಕ ಪ್ರೀತಿಯನ್ನು ನೆನೆಯೋಣ.

poornachandratejaswi
(ಪೂರ್ಣಚಂದ್ರ ತೇಜಸ್ವಿಯವರ ಸ್ಮಾರಕ) ಫೋಟೋ ಕೃಪೆ : YouTube


  • ಚಂದ್ರಶೇಖರ ಕುಲಗಾಣ

3

5 1 vote
Article Rating

Leave a Reply

2 Comments
Inline Feedbacks
View all comments
Revoji Rao

Good information about Poora chandra Tehaswi

Nikitha

ನಿಮ್ಮ ಲೇಖನಗಳು ಸೊಗಸಾಗಿರುತ್ತವೆ ಚಂದ್ರಶೇಖರ ಕುಲಗಾಣ ಅವರೆ. ಪೂಚಂತೇ ಬಗ್ಗೆ ಇನ್ನಷ್ಟು ವಿಷಯಗಳಿದ್ದರೆ ತಿಳಿಸಿ.

Home
Search
All Articles
Videos
About
2
0
Would love your thoughts, please comment.x
()
x
%d bloggers like this:
Aakruti Kannada

FREE
VIEW