ಕವಿ ನಾಗರಾಜ ಬಿ.ನಾಯ್ಕ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಚುಕ್ಕಿ ಗೆರೆಗಳ ನಡುವೆ
ಭಾವ ಬದುಕಿನ ಹೊದಿಕೆ
ಬಣ್ಣ ಬಿಂಬಗಳಲ್ಲಿ
ಚಿತ್ರವಾಗುವ ಇರುವಿಕೆ
ನೋಟದೊಳು ಉಳಿದು
ಹೋದ ಹಸಿರಿನ ರಾಶಿಯ
ಸಿರಿ ಸಂಚಯದ ಬಂಧ
ಮುಗಿಯದಷ್ಟು ಸಲುಗೆಯ
ಉಳಿವ ಹಾಡಿನ ಚೆಂದ
ಮಣ್ಣ ಹಾಡು ಬುವಿಗೆ
ಬಿಂದು ಬಿಂದುವಿಗೂ ಹುರುಪು
ತುಂಬಿಕೊಂಡ ಗೂಡಿಗೂ
ನಗವ ನಗೆಯ ಚೆಲ್ಲಿ
ಕೂತ ಹಕ್ಕಿಗೂ ಪೂರ್ಣ ಭಾವ
ಹಸಿವೆ ನೀಗಿದ ಅಮ್ಮನಿಗೂ
ಮಗುವ ಹರುಷದ ನೋಟ
ಅರಳಿದ ಹೂವಿಗೂ
ಎಳೆಗಳ ಸಂಬಂಧ ಇಲ್ಲಿ
ಅರಿತಷ್ಟು ದೊಡ್ಡ ಗುಣದ
ನಗುವ ಒಮ್ಮೆ ಚೆಲ್ಲಿ
- ನಾಗರಾಜ ಬಿ. ನಾಯ್ಕ – ಹುಬ್ಬಣಗೇರಿ, ಕುಮಟಾ
