ಹಿರಿಯ ಸಾಹಿತಿ ಬಿಟ್ಟೀರ ಚೋಂದಮ್ಮ ಅವರ ಹುಟ್ಟುಹಬ್ಬಕ್ಕೆ ಆಕೃತಿಕನ್ನಡ ಶುಭ ಕೋರುವುದರ ಜೊತೆಗೆ ಅವರ ರಚನೆಯ ಸುಂದರ ಕವನ ಓದುಗರ ಮುಂದಿದೆ, ತಪ್ಪದೆ ಮುಂದೆ ಓದಿ…
ಬೊಮ್ಮನ ಕುಂಚದ ಕಲೆಯಲ್ಲರಳಿದ
ಸುಂದರ ಹಸಿರಿನ ಮಡಿಲಿನಲಿ
ಚಿಮ್ಮುತ ಕಾಂತಿಯ ರಕುತದ ಬಣ್ಣದಿ
ಹೊಳೆದಿದೆ ಕಣ್ಮನ ಸೆಳೆಯುತಲಿ
ನವಿಲಿನ ನಾಟ್ಯದ ಪರಿಯೊಳಗರಳಿದೆ
ಯಾರನು ಸೆಳೆಯಲು ನಿನ್ನೆಡೆಗೆ
ನವಿರಿನ ಭಾವನೆ ಕಚಗುಳಿಯಿಟ್ಟಿದೆ
ಮುದ ನೀಡುತ ಹೊಸ ಚಿಂತನೆಗೆ
ಅರಳಿದ ಕುಸುಮವೊ ಹಾರುವ ಹಕ್ಕಿಯೊ
ನೋಡುಗರಿಗೆ ಬೆಮೆ ಮೂಡಿಸಿದೆ
ತರುಣಿಯರೆದೆಯಲಿ ತದ್ಧಿಮಿ ತಕಧಿಮಿ
ತಾಳವ ಹಾಕಿಸಿ ಕುಣಿಸುತಿದೆ
ಪ್ರಕೃತಿಯ ವಿಸ್ಮಯ ಸೃಷ್ಟಿಯ ಹೆಸರಲಿ
ಬಣ್ಣಿಸಲಸದಳ
ಕುಶಲತೆಯು
ವಿಕಸಿತ ಕುಸುಮಕೆ ಮುತ್ತಿನ ಮಣಿಯೊಲು
ಮಂಜಿನ ಹನಿಗಳ ಬಿತ್ತನೆಯು
- ಬಿಟ್ಟೀರ ಚೋಂದಮ್ಮ, ಬೆಂಗಳೂರು
