‘ನನ್ನ ಪ್ರೇಮದ ಬಲೆಯಲ್ಲಿ ಬೀಳಿಸಿದವರಾರು’.. ವಿಮಲಾ ಪದಮಗೊಂಡ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನ ತಪ್ಪದೆ ಮುಂದೆ ಓದಿ…
ಒಂಟಿಯಾಗಿದ್ದ ನಿನ್ನ ಎದೆಯ
ಬಡಿತಕೆ
ನನ್ನ ಹೃದಯದೂರಿನ ವಿಳಾಸ ಮುಟ್ಟಿಸಿದವರಾರು
ನೆಟ್ಟಗೆ ನಡೆದಾಡುತಿದ್ದ ನಿನ್ನ ಮನಸ್ಸಿಗೆ
ಆಯತಪ್ಪಿಸಿ
ನನ್ನ ಪ್ರೇಮದ ಬಲೆಯಲ್ಲಿ ಬೀಳಿಸಿದವರಾರು..!
ಅಲ್ಲಿ ನಿನ್ನ ಹೃದಯ ಮಾತಾಡುವಾಗ
ನನಗಿಲ್ಲಿ ಮುಗುಳ್ನಗೆಗೆ ಉತ್ತೇಜನ ನೀಡಿದವರಾರು
ನಮ್ಮ ನಡುವಿನ ದೂರದ ಅಂತರವನ್ನು
ಹತ್ತಿರಕ್ಕೆ ಸೆಳೆದವರಾರು..!!
ನೀನಲ್ಲಿ ನೋವುಂಡಾಗ ನನಗಿಲ್ಲಿ
ಕಣ್ಣುಗಳು ಬಿಕ್ಕಳಿಸಿದ್ಯಾಕೆ
ನೀನಲ್ಲಿ ಚುಕ್ಕೆ ತಾರೆ ಎಣಿಸುವಾಗ
ನಾನಿಲ್ಲಿ ದಿಂಬಿನೊಂದಿಗೆ ಮಾತಿಗಿಳಿದಿದ್ಯಾಕೆ…!!?
- ವಿಮಲಾ ಪದಮಗೊಂಡ