ಲೇಖಕರು, ಕವಿ ವೈ.ಎಂ.ಯಾಕೊಳ್ಳಿ ಅವರ ಹೈಕುಗಳನ್ನು ತಪ್ಪದೆ ಮುಂದೆ ಓದಿ…
ಗೆಲ್ಲಬಹುದು
ತಂತ್ರದಿಂದ ದ್ವೇಷವ
ಪ್ರೇಮವನ್ನಲ್ಲ
ದೇವನೊಲಿಸೆ
ಆದರದು ಸುಲಭ
ಅಲ್ಲ ಒಲವು
ಯಾರೋ ಸೋತರು
ಯಾರೋ ಗೆದ್ದರು ಅಲ್ಲ
ಇಬ್ಬರೊಡನೆ
ನೇಹದಾಟದಿ
ಸ್ಪರ್ಧೆ ಇರದು ಕೂಡಿ
ಹೋಗುವದಷ್ಟೇ
ಜೊತೆ ಬರುವ
ನೇಹವದು ದೈವದ
ನಿಯಾಮಕವು
- ವೈ.ಎಂ.ವೈ
