ಭೂಮಿ ಬರಡಾದಾಗ ಯಾವ ಗಿಡವು ಚಿಗುರಲಿಲ್ಲ ಪ್ರಿಯೆ…ಕವಿ ನಾರಾಯಣ ಸ್ವಾಮಿ ಅವರ ಲೇಖನಿಯಲ್ಲಿ ಅರಳಿದ ಸುಂದರ ಸಾಲುಗಳನ್ನು ತಪ್ಪದೆ ಮುಂದೆ ಓದಿ…
ಮಾತು ಮೌನವಾದಾಗ ಒಲವು ಮೂಡಲಿಲ್ಲ ಪ್ರಿಯೆ
ಭೂಮಿ ಬರಡಾದಾಗ ಯಾವ ಗಿಡವು ಚಿಗುರಲಿಲ್ಲ ಪ್ರಿಯೆ
ನೋವು ನಲಿವುಗಳಲಿ ಬೆಂದು ನೊಂದು ಹೋದ ಜೀವದ
ದೇಹವು ದಹನವಾದಾಗ ಬೆಂಕಿಯಲಿ ನರಳಲಿಲ್ಲ ಪ್ರಿಯೆ
ಸಂಜೆಯಾದೊಡನೆ ಕೆಂಬಣ್ಣ ಮೂಡುತಿದೆ ಆಗಸದಲಿ
ಮಧ್ಯಾಹ್ನ ಹೊತ್ತಿಗೆ ಯಾವ ಹೂವು ಅರಳಲಿಲ್ಲ ಪ್ರಿಯೆ
ಸೂರ್ಯಕಾಂತಿಯು ಸೂರ್ಯನು ತಿರುಗಿದ ಕಡೆ ತಿರುಗುತಿದೆ
ಹೊಂಗೆಯ ಮರವೆಂದು ಗಂಧದ ಘಮಲನ್ನು ಬೀರಲಿಲ್ಲ ಪ್ರಿಯೆ
ನರಮನುಜ ಹುಟ್ಟಿದ ಮೇಲೆ ಮಣ್ಣಾಗಲೆಬೇಕಿದೆ ಭುವಿಯಲಿ
ಪ್ರೀತಿಯೆ ಅಮೃತವೆಂದ ನಾನಿ ಮತ್ತೇನು ಸಾಧಿಸಲಿಲ್ಲ ಪ್ರಿಯೆ
- ನಾರಾಯಣ ಸ್ವಾಮಿ – ವೃತ್ತಿಯಲ್ಲಿ ವಕೀಲರು, ಹವ್ಯಾಸಿ ಬರಹಗಾರರು, ಕವಿಗಳು, ಮಾಲೂರು.
