ಪ್ರೊಬಯಾಟಿಕ್ ಆಹಾರದ ಮಹತ್ವ

ಮಾರ್ಕೆಟಿನಲ್ಲಿ ಸಿಗುವ ಯೋಗರ್ಟ್ ಸೋಯಾ, ಮೊಸರು, ಈ ತರದವುಗಳೂ ಪ್ರೋಬಯಾಟಿಕ್ ಆಹಾರಗಳೇ ಆದರೂ ನಮ್ಮ ಟ್ರೆಡಿಷನಲ್ ಸಮಕ್ಕೆ ಬರಲಾರವು. ಪ್ರೊಬಯಾಟಿಕ್ ಆಹಾರದ ಮಹತ್ವದ ಕುರಿತು ಲೇಖಕಿ ನಂದಿನಿ ಹೆದ್ದುರ್ಗ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಆಹಾರದ ವಿಷಯ ಬಂದಾಗ ಇದು ತಂಪು, ಇದು ಉಷ್ಣ, ಇದು ಪಿತ್ತ, ಅಂತೆಲ್ಲ ‌ಮಾತಾಡಿಕೊಳ್ತೀವಿ. ಏನು ತಿಂತಿವೋ ಅದೇ ನಾವಾಗಿರ್ತಿವಿ ಅಂತೊಂದು ಮಾತಿದೆ. you are what you eat ಅಂತ ಅದರ ಅರ್ಥ. ಆದಷ್ಟೂ ಸಾತ್ವಿಕ ಆಹಾರ ಒಳ್ಳೆಯದು. ಆದರೆ ಸದಾ ತಾಮಸ ರಾಜಸ ತಿಂತಿರುವವರೂ ಚಂದವೇ ಇರ್ತಾರೆ.

ನಾವು ಪ್ರೈಮರಿ ಸ್ಕೂಲಿಗೆ ಹೋಗುವಾಗ ದಾರಿಯಲ್ಲಿ ಕುಡಿದ ಬಿದ್ದಿರುತ್ತಿದ್ದ ಒಬ್ಬಾತ ಈಗಲೂ ಆರೋಗ್ಯವಾಗೇ ಇದ್ದಾನೆ. ಬಹಳ ಕಟ್ಟುನಿಟ್ಟಿನ ಜೀವನಶೈಲಿ ಅನುಸರಿಸಿದವರು ಯಾತ್ರೆ ಮುಗಿಸಿದ್ದಾರೆ. ಆರೋಗ್ಯಕ್ಕೆ ಅಂತಿಮ ವ್ಯಾಖ್ಯಾನ ಇಲ್ಲ ಅನ್ನುವುದು ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಹೆಚ್ಚೇ ಅರಿವಿಗೆ ಬರ್ತಿದೆ.

ನಮ್ಮ ದೇಹ ತೂಕದ ಮೂರು ಕೆಜಿ ಬ್ಯಾಕ್ಟೀರಿಯಾ ಇರ್ತದೆ ಅಂತ ಬರೆದಿದ್ದೆ ಮೊನ್ನೆ. ಅವು ಉಪಯೋಗಿ ಬ್ಯಾಕ್ಟೀರಿಯಾಗಳು. ಮೊನ್ನೆ ಯಾವುದೋ ಸಮಸ್ಯೆಗೆ ಡಾಕ್ಟರ್ ಹತ್ರ ಹೋದಾಗ ಬಾಯಿಯ ಉಪಯೋಗಿ ಬ್ಯಾಕ್ಟೀರಿಯಾ ಗಳು ಯಾವುದಾದರೂ ಕಾರಣದಿಂದ ನಾಶ ಆದರೆ ಕೂಡ ಈ ಸಮಸ್ಯೆ ಆಗಬಹುದು(ಆಗಬಹುದು ಮತ್ತು ಇತರೆ ಕಾರಣಗಳೂ ಇರಬಹುದು) ಅಂದರು. ನಾನು ಹೋದ ಸಮಸ್ಯೆ ಪ್ರಿ ಮೆನೋಫಾಸಲ್ ಗೆ ಸಂಬಂಧಿಸಿದ್ದು!!

ಅವರು ಹೇಳಿದ್ದು ಕೇಳಿದಾಗ ಶಾಕ್ ಆಗಿ ಅದು ಹೇಗೆ ಅಂತ ಒಂದಿಷ್ಟು ಅದರ ಬಗ್ಗೆ ಓದಿದೆ. Even the anus and the private parts ಅವುಗಳ ಕೆಲಸವನ್ನು ಆರೋಗ್ಯವಾಗಿ ಸಾವಕಾಶವಾಗಿ ಮಾಡ್ತಿರುವುದೇ ಈ ಉಪಯೋಗಿ ಬ್ಯಾಕ್ಟೀರಿಯಾ ಗಳಿಂದ. ಹಂಗಾಗಿಯೇ ಪ್ರೈವೇಟ್ ಪಾರ್ಟಗಳನ್ನು ಸಾಬುನಿಂದ ಹೆಚ್ಚು ತೊಳೆಯಬಾರದು ಅಂತ ವೈದ್ಯರು ಹೇಳುವುದು.

ಮುಖ್ಯವಾಗಿ ಕರುಳಿನಲ್ಲಿ ಈ ಉಪಯೋಗಿ ಬ್ಯಾಕ್ಟೀರಿಯಾಗಳು ದಟ್ಟವಾಗಿರುತ್ತವೆ ಮತ್ತು ಇಡೀ ಜೀರ್ಣಕ್ರಿಯೆಯ ಮೇಲೆ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಆರೋಗ್ಯ ಕೆಟ್ಟಾಗ ಬಳಸುವ ಮಾತ್ರೆಗಳು ಆ್ಯಂಟಿಬಯಾಟಿಕ್ ಗಳು ರೋಗ ಗುಣ ಪಡಿಸುವುದರ ಜೊತೆಗೇ ದೇಹದ ಈ ಉಪಯೋಗಿ ಬ್ಯಾಕ್ಟೀರಿಯಾ ಗಳನ್ನೂ ನಾಶ ಮಾಡ್ತಾವೆ.

ಅ್ಯಂಟಿ ಬಯಾಟಿಕ್ ಗಳ ಸೇವನೆಯ ನಂತರ ನಾಲಿಗೆ ರುಚಿ ಕಳ್ಕೊಳ್ತಿವಿ. ಬಳಲಿಕೆ ಆಗ್ತದೆ. ಅದಕ್ಕೆ ಕಾರಣ ಕರುಳಿನಲ್ಲಿರಬೇಕಾಗಿದ್ದ ಈ ಪ್ರೋಬಯಾಟಿಕ್ ಗಳು ನಾಶವಾಗಿರುವುದು.
every action has equal and opposite reaction ಅನ್ನುವ ‌ಹಾಗೆ ಇದು.

ಇರಲಿ. ಆಹಾರದ ಮೂಲಕ ಸಹಜವಾಗಿ ಈ ಉಪಯೋಗಿ ಬ್ಯಾಕ್ಟೀರಿಯಾಗಳನ್ನು ಪಡೆಯಲಿಕ್ಕೆ ಸಾಧ್ಯವಿದೆ. ಅವೇ ಪ್ರೋಬಯಾಟಿಕ್ ಫುಡ್ಸ್. ಮೊಸರು ಮತ್ತು ಮಜ್ಜಿಗೆ ಅತೀ ಸುಲಭವಾಗಿ ‌ಸಿಗುವ‌ ಮತ್ತು ದಿನಚರಿಯಲ್ಲಿ ಬಳಸುವ ಪ್ರೋಬಯಾಟಿಕ್ ಆಹಾರಗಳು. ಉಪ್ಪಿನಕಾಯಿ ಕೂಡ. ದೋಸೆ ಇಡ್ಲಿ ಕೂಡ ಅತ್ಯುತ್ತಮ ಪ್ರೋಬಯಾಟಿಕ್ ಆಹಾರ.

ಈಗ ಹತ್ತಿಪ್ಪತ್ತು ವರ್ಷ ಹಿಂದೆ ಹೋದರೆ ಅಜ್ಜಿಯರಿದ್ದ ಮನೆಯಲ್ಲಿ (ನಮ್ಮ ಕಡೆಗೆ) ರಾಗಿ ಹಿಟ್ಟನ್ನು ಹಿಂದಿನ ದಿನ ನೆನೆಯಿಟ್ಟು ಹುದುಗು ಬಂದ ನಂತರ ಮಾರನೆಯ ದಿನ ಅಂಬಳಿ ಮಾಡ್ತಿದ್ರು. ಅದಕ್ಕೊಂದು ವಿಶಿಷ್ಟ ಪರಿಮಳ ಇರ್ತಿತ್ತು. ಆಗಿನ ಬಹುತೇಕ ಮನೆಗಳಲ್ಲಿ ಹಿಂದಿನ ದಿನ ನೆನೆಸಿದ ಅಕ್ಕಿ ತರಿಯನ್ನು ಕುದಿಸಿ ಬೆಂದ ನಂತರ ಆ ಗಂಜಿಗೆ ಹುದುಗಿದ ರಾಗಿ ಹಿಟ್ಟನ್ನು ಹಾಕಿ ಅರ್ಧತಾಸು ಕೈಯಾಡಿ ಹರಿವಾಣಕ್ಕೆ ಸುರಿದು ಅದನ್ನು ಎರಡು ಮೂರು ದಿನ ಇಟ್ಟು ಮೊಸರಿನೊಂದಿಗೆ ‌ಊಟ ಮಾಡ್ತಿದ್ದರು. ನಾನು ತಿಂದಿರುವ ಅತ್ಯಂತ ರುಚಿಯಾದ ಊಟ ಅದು. ನಂಚಿಕೊಳ್ಳಲು ಉಪ್ಪಿನಕಾಯಿ.  a complete probitic meal. ಯಾವ ಗೂಗಲ್ ನೋಡದೆ ಹಿಂದಿನ ಪೀಳಿಗೆ ಕಲಿತಿದ್ದು ಅದು.

ಈಗ ಆರೇಳು ವರ್ಷದ ಹಿಂದೆ ಅನ್ನವನ್ನು ಎರಡು ದಿನ ನೆನೆಯಿಟ್ಟು ಅದು ಹುದುಗಿದ ನಂತರ‌ ತಿನ್ನುವುದರಿಂದ ದೇಹಕ್ಕೆ ಅತ್ಯಧಿಕ ಪ್ರಮಾಣದಲ್ಲಿ ಪ್ರೊಬಯಾಟಿಕ್ ಅಂಶ ಸಿಕ್ತದೆ ಎನ್ನುವುದನ್ನು ಪತ್ರಿಕೆಗಳು ಪ್ರಕಟ ಮಾಡಿದ್ದವು. ಅನ್ನವನ್ನು ಚೆನ್ನಾಗಿ ಬೇಯಿಸಿ ಎರಡರಷ್ಟು ‌ನೀರು ಸುರಿದು ಎರಡು ದಿನ ಹುದಗಲು‌ ಬಿಟ್ಟು ಅದಕ್ಕೆ ‌ಶುಂಠಿ ಈರುಳ್ಳಿ ಹಾಕಿದ ಮೊಸರು ಬೆರೆಸಿ ತಿಂದರೆ ತಂಪಿನ ಅನುಭವ ಮತ್ತು ದೇಹದ ಹಗೂರತನ‌ ತಕ್ಷಣಕ್ಕೆ ಅರಿವಿಗೆ ಬರ್ತದೆ. ಇದನ್ನೇ ಪಂತಾಬಾತ್ ಅಂತಾರೆ ಅನಿಸುತ್ತೆ.

ಮಾರ್ಕೆಟಿನಲ್ಲಿ ಸಿಗುವ ಯೋಗರ್ಟ್ ಸೋಯಾ, ಮೊಸರು, ಈ ತರದವುಗಳೂ ಪ್ರೋಬಯಾಟಿಕ್ ಆಹಾರಗಳೇ ಆದರೂ ನಮ್ಮ ಟ್ರೆಡಿಷನಲ್ ಸಮಕ್ಕೆ ಬರಲಾರವು. Even wine is also a good pro biotic.

ಉಪ್ಪಿನಕಾಯಿಗೆ ಅತೀ ಉಪ್ಪು ಪ್ರಿಸರ್ವೆಟಿವ್ ಬಳಸಿದ್ರೆ ಅದರ ಉಪಯೋಗಿ ಗುಣ ಹೋಗ್ತದೆ‌.

ಬಟಾಣಿ ಸುಲಭವಾಗಿ ಸಿಗುವ ಪ್ರೋಬಯಾಟಿಕ್ ತರಕಾರಿ ಅಂತಾರೆ. ಹುದುಗಿದ ಹಿಟ್ಟಿನಲ್ಲಿ ಮಾಡಿದ ರಾಗಿ ಅಂಬಳಿ‌, ಮೊಸರು, ಉಪ್ಪಿನಕಾಯಿ ‌ಒಮ್ಮೆ ‌ಮಾಡಿ ನೋಡಿ. ರಾಗಿಯಲ್ಲಿ ಕ್ಯಾಲ್ಷಿಯಂ ಕಬ್ಬಿಣ ರಿಚ್ ಇರುತ್ತೆ. ಜೊತೆಗೆ ಈ ಪ್ರೊಬಯಾಟಿಕ್ ಶೈಲಿಯಲ್ಲಿ ಮಾಡಿಕೊಂಡಾಗ ಮೌಲ್ಯವರ್ಧಿತ ರಾಗಿಯಾಗ್ತದೆ. ಟ್ರೈ ಮಾಡಿ. ಖಂಡಿತವಾಗಿ ಮತ್ತೆ ಬೇಕೂಂತಿರಾ.


  • ನಂದಿನಿ ಹೆದ್ದುರ್ಗ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading