‘ಪ್ರಾಮಿಸ್’ ಕಿರುಚಿತ್ರ

ಅಮೀತ ಶುರ್ಪಾಲಿ ಅವರ ಕಥೆ, ಸಂಭಾಷಣೆ, ನಟನೆಯ ಮತ್ತು ಅರುಣ ಬಸರಗಿ ಅವರ ನಿರ್ದೇಶನದ ‘ಪ್ರಾಮಿಸ್’ ಗಂಡ ಹೆಂಡತಿ ಮಧ್ಯೆ ಬರುವ ಬಿರುಕಿನ ಕುರಿತಾದಂತಹ ಕಿರುಚಿತ್ರ. ರಾಘವೇಂದ್ರ ಅಪರಂಜಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ ತಪ್ಪದೆ ಮುಂದೆ ಓದಿ…

ಸಮಾಜದಲ್ಲಿ ನಡೆಯೋ ಘಟನೆಗಳೇ ತೆರೆ ಮೇಲೆ ಮೂಡಿದಾಗ ಮನಸ್ಸಿನ ಮೇಲೆ ಆಗೋ ಪರಿಣಾಮ ಅಗಾಧ. ಕಿರುಚಿತ್ರವಾದ್ರೂ ಹೇಳೋ ಸಂದೇಶನ ಅಚ್ಚುಕಟ್ಟಾಗಿ ಕಥೆ ಮೂಲಕ ಕಟ್ಟಿಕೊಡೋದಿದೆಯಲ್ಲ ಆ ಕಲೆ ಅದ್ಭುತ ಎನ್ನಬಹುದು. ಅಂತಹ ಒಂದು ಕಿರುಚಿತ್ರ ‘ಪ್ರಾಮಿಸ್’.

ಮದುವೆಯಾದ ದಂಪತಿ ತಮ್ಮ ಮುಂದಿನ ಜೀವನದ ಕುರಿತು ಕಂಡ ಕನಸು ನುಚ್ಚುನೂರಾದಾಗ ಮನಸ್ಸಿನ ಮೇಲೆ ಉಂಟಾಗುವ ಗಾಯ ಇದೆಯಲ್ಲ ಅದು ಮಾಯಲಾರದ್ದು. ವಿಚ್ಛೇದನ ಪಡೆದ ಮೇಲೆ ಎಲ್ಲ ಮುಗಿದೆ ಹೋಯಿತು ಅನ್ನೋದರೊಳಗೆ ಈ ಚಿತ್ರಕ್ಕೆ ಆರಂಭ ಕೊಟ್ಟ ನಿರ್ದೇಶಕರು ಹಿಂದಿನ ಜೀವನದ ನೆನಪುಗಳನ್ನು ನಾಯಕ ನಟನ ಮೂಲಕ ಎಳೆಎಳೆಯಾಗಿ ಬಿಚ್ಚಿಡತಾ ಹೋಗ್ತಾರೆ…

ಪತಿ ಇರುವಾಗಲೇ ನಿನಗೆ ಬೆಸ್ಟಿ ಫ್ರೆಂಡ್ ಯಾಕೆ ಬೇಕಿತ್ತು ಅಂತ ಪ್ರಶ್ನಿಸತ್ತಾನೆ. ನೀನು ಆಸ್ಪತ್ರೆಯಲ್ಲಿ ಇದ್ದಾಗ ನಾ ನೌಕರಿಗೆ ಹೋಗಿ ದುಡಿದು ಬಿಲ್ ಕಟ್ಟಿದ್ದಕ್ಕೆ ನಿನ್ನ ಡಿಸ್ಚಾರ್ಜ್ ಮಾಡಿದ್ದು. ಗೆಳೆಯ ಮೆಸೇಜ್ ಮಾಡಿ ಮಳ್ಳ ಮಾಡಿದ್ದಕ್ಕಲ್ಲ ಅಂತ ವಾಸ್ತವಿಕತೆಯನ್ನ ತೆರೆದು ಇಡತ್ತಾನೆ. ಅದಕ್ಕ ಪತ್ನಿ ನನ್ನ ಮನಸ್ಸಿನ ಭಾವನೆ ಹಂಚಕೋಳಾಕ ಗೆಳೆಯ ಸಿಕ್ಕಾನ. ನೀ ಬರೆ ನೌಕರಿ ಅಂತ ಹೋಗಿ ಬಿಡತಿದ್ದಿ. ಅದಕ್ಕ ಅವನ ನನಗ ಇಷ್ಟ ಅಂತಾಳ. ಈ ಮಾತಿನ ಲಹರಿ ಪ್ರೇಕ್ಷಕನ ಮನ ತಟ್ಟಿಬಿಡತದ…

ಕೊನೆಗೆ ಪತ್ನಿ ಪತಿಯನ್ನು ಬಿಟ್ಟು ಗೆಳೆಯನೊಂದಿಗೆ ಹೊರಡತಾಳ…ಇಲ್ಲ ಪತಿಯನ್ನೇ ಆಯ್ಕೆ ಮಾಡತಾಳ. ನಿರ್ದೇಶಕರು ನೀಡಿದ ಸಂದೇಶ ಏನು ಅನ್ನೋದೆ ಕುತೂಹಲಕರವಾಗಿದೆ.

ಅಮೀತ ಶುರ್ಪಾಲಿ ಅವರ ಕಥೆ, ಸಂಭಾಷಣೆ, ನಟನೆ ಕಣ್ಣಿಗೆ ಕಟ್ಟಿದಂತಿದೆ. ಅರುಣ ಬಸರಗಿ ಅವರ ನಿರ್ದೇಶನ, ಕ್ಯಾಮೆರಾ, ಎಡಿಟಿಂಗ್ ಸೂಪರ್ ಅಂತನೇ ಹೇಳಬಹುದು. ವಿನಾಯಕ ಮಹಾಲಿಂಗಪುರ ಅವರ ಸಂಗೀತ, ವಿದ್ಯಾ ಗುಂಡಿಮ್, ಅಡಿವೇಶ ಹಂದಿಗುಂದ, ಬಸವರಾಜ ಹಿರೇಮಠ ಅವರ ನೈಜ ನಟನೆ ಸಮಾಜಕ್ಕೊಂದು ಸಂದೇಶ ನೀಡುವ ಮೂಲಕ ಅಂತ್ಯವಾಗತದ…

ಯೂಟ್ಯೂಬ್ ನಲ್ಲಿ ameet shurpali pictures ಅಂತ ಟೈಪ್ ಮಾಡ್ರಿ ಅದರಾಗ ‘ಪ್ರಾಮಿಸ್’ ನೋಡ್ರೀ ಮತ್ತ…ಕಮೆಂಟ್ ವೊಳಗ ಹೆಂಗದ ತಿಳಿಸಿ ಸಿನಿಮಾ ತಂಡಕ್ಕ ಪ್ರೋತ್ಸಾಹ ಕೊಡ್ರಲ್ಲಾ…


  • ರಾಘವೇಂದ್ರ ಅಪರಂಜಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW