ಬೇಸಿಗೆಯಲ್ಲಿ ಪುದಿನಾ ಸೇವನೆ ಬೆಸ್ಟ್

ಬೇಸಿಗೆಯ ತಾಪ ಮನಸ್ಸು, ಶರೀರವನ್ನು ಕಾಡುವ ಸಮಯ ಇದು. ಈ ಸಂದರ್ಭದಲ್ಲಿ ದಿನಾ ಪುದಿನಾ ಸೇವನೆಯಿಂದ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳಿವೆ. ಏನವು ಮುಂದೆ ಓದಿ…

ಪುದಿನಾ ದೇಹ ಹಾಗೂ ಮನಸ್ಸಿಗೆ ಚೈತನ್ಯ ಒದಗಿಸುವ ನೈಸರ್ಗಿಕ ಪರಿಹಾರ. ಪುರಾತನ ಕಾಲದಿಂದಲೂ ಅಡುಗೆಯಲ್ಲಿ ಬಳಕೆಯಲ್ಲಿದೆ ಪುದಿನಾ. ಖಾದ್ಯಗಳ ರುಚಿ ಹಾಗೂ ಪರಿಮಳವನ್ನು ಹೆಚ್ಚಿಸುವ ಗುಣ ವಿಶೇಷ ಇದರದ್ದು. ಇದರ ಜತೆಗೆ ಹಲವು ಆರೋಗ್ಯ ಪ್ರಯೋಜನಗಳೂ ಇವೆ ಎನ್ನಿ.

  • ಕೆಮ್ಮು-ನೆಗಡಿಗೆ ಪರಿಹಾರ.
  • ಪುದಿನಾದಲ್ಲಿ ಮೆಂಥಾಲ್‌ ಅಂಶವಿದೆ. ಇದು ಕೆಮ್ಮು ಹಾಗೂ ಶೀತ ಸಮಸ್ಯೆ ನಿವಾರಿಸುವುದಕ್ಕೆ ಸಹಾಯ ಮಾಡುತ್ತದೆ.
  • ಬಿಪಿ ನಿಯಂತ್ರಣ.
  • ಪುದಿನಾದಲ್ಲಿರುವ ಮೆಂಥಾಲ್‌ ಅಂಶವು ರಕ್ತದೊತ್ತಡ ನಿಯಂತ್ರಣದಲ್ಲಿರಿಸುತ್ತದೆ. ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರು ಆಹಾರದಲ್ಲಿ ಪುದಿನಾ ಸೇವಿಸುವುದು ಉತ್ತಮ.
  • ಜೀರ್ಣಕ್ರಿಯೆಗೆ ಸಹಕಾರಿ.
  • ಪುದಿನಾ ಪಿತ್ತರಸದ ಹರಿವನ್ನು ಹೆಚ್ಚಿಸಲು ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸುವ ಕೆಲಸ ಮಾಡುತ್ತದೆ. ಆ ಮೂಲಕ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಆಹಾರದಿಂದ ಪೋಷಕಾಂಶ.
  • ಹೀರಿಕೊಳ್ಳಲು ಇದು ಸಹಕಾರಿ. ಇದರಿಂದ ಚಯಾಪಚಯ ಪ್ರಮಾಣ ಹೆಚ್ಚುವ ಕಾರಣ ತೂಕನಷ್ಟಕ್ಕೂ ಪ್ರಯೋಜನಕಾರಿ.
  • ಚರ್ಮದ ಆರೋಗ್ಯ ಸುಧಾರಣೆ :ಚರ್ಮದ ಆರೋಗ್ಯದ ಬಗ್ಗೆ ನಿಮಗೆ ಕಾಳಜಿ ಇದೆಯೇ? ಹಾಗಾದ್ರೆ ದಿನಾಲೂ ಪುದಿನಾ ಸೇವಿಸಿ. ಅದು ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ. ಪುದಿನಾ ಎಲೆಗಳಲ್ಲಿ ರೋಸ್ಮರಿನಿಕ್ ಆಮ್ಲವಿದೆ. ಇದು ಉತ್ಕರ್ಷಣ ವಿರೋಧಿ. ಚರ್ಮದಲ್ಲಿ ರಕ್ತಪರಿಚಲನೆಯನ್ನು ಹೆಚ್ಚಿಸಲು ಹಾಗೂ ತೇವಾಂಶ ನೀಡುವಲ್ಲಿ ಸಹಕಾರಿ. ಫ್ರಿ ರಾಡಿಕಲ್ಸ್‌ ವಿರುದ್ಧ ಹೋರಾಡಿ ಚರ್ಮಕ್ಕೆ ಹಾನಿ ಉಂಟಾಗುವುದನ್ನು ಇದು ತಡೆಯುತ್ತದೆ. ಚರ್ಮದ ಸುಕ್ಕನ್ನು ನಿವಾರಣೆಗೂ ಇದು ರಾಮಬಾಣ. ಇದರಲ್ಲಿರುವ ಸ್ಯಾಲಿಸಿಲಿಕ್ ಆಮ್ಲ ಮತ್ತು ವಿಟಮಿನ್ ಎ ಚರ್ಮದಲ್ಲಿ ಮೇದೋಗ್ರಂಥಿಗಳ ಸ್ರಾವ ನಿಯಂತ್ರಕವಾಗಿ ಕೆಲಸ ಮಾಡುತ್ತದೆ.
  • ಸ್ಟ್ರೆಸ್ ನಿವಾರಣೆಗೆ ರಾಮಬಾಣ :ಪುದಿನಾದಲ್ಲಿ ಚೈತನ್ಯ ಹೆಚ್ಚಿಸುವ ಸುವಾಸನೆ ಇದೆ. ಇದು ಸ್ಟ್ರೆಸ್ ಅನ್ನು ಕಡಿಮೆ ಮಾಡುತ್ತದೆ. ಶರೀರ ಹಾಗೂ ಮನಸ್ಸು ರಿಫ್ರೆಶ್‌ ಆಗಿರುವಂತೆ ನೋಡಿಕೊಳ್ಳುತ್ತದೆ. ಇದರ ಅಪೊಪ್ಟೋಜೆನಿಕ್ ಚಟುವಟಿಕೆಯು ರಕ್ತದ ಕಾರ್ಟಿಸೋಲ್ ಮಟ್ಟ ನಿಯಂತ್ರಣಕ್ಕೆ ಸಹಕಾರಿ. ಪರಿಣಾಮ ನೈಸರ್ಗಿಕವಾಗಿಯೇ ಸ್ಟ್ರೆಸ್ ಪ್ರಮಾಣ ಕಡಿಮೆಯಾಗುತ್ತದೆ.
0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW