ಪುಲ್ವಾಮ ದಾಳಿ: ಭಾರತೀಯ ಸೈನ್ಯದ ಪ್ರತೀಕಾರದ ಕಥೆ.

ಈ ದಿನವನ್ನು ಇಡೀ ಜಗತ್ತಿನಾದ್ಯಂತ ಪ್ರೇಮಿಗಳ ದಿನ ಆಚರಿಸುತ್ತಿದ್ದರೆ,ಅದರೆ ಭಾರತೀಯರು ಮಾತ್ರ ಈ ದಿನವನ್ನು ಬ್ಲ್ಯಾಕ್ ಡೇಯನ್ನಾಗಿ ಆಚರಿಸುತ್ತಾರೆ. ಕಾರಣ ಐದು ವರ್ಷಗಳ ಹಿಂದೆ ನಮ್ಮ ಹೆಮ್ಮೆಯ ಕೇಂದ್ರ ಮೀಸಲು ಪೊಲೀಸ್ ಪಡೆಯ ಸೈನಿಕರ ಮೇಲೆ ಇದೇ ದಿನ ಉಗ್ರರು ಭೀಕರ ದಾಳಿ ನಡೆಸಿ 40 ಯೋಧರ ದುರಂತ ಸಾವಿಗೆ ಕಾರಣರಾದರು, ಇದೇ ಪುಲ್ವಾಮಾ ದಾಳಿಯನ್ನು ಭಾರತೀಯರು ಬ್ಲ್ಯಾಕ್ ಡೇ ಎಂದು ಕರೆಯುತ್ತಾರೆ. – ಡಾ.ಗುರುಪ್ರಸಾದ ರಾವ್ ಹವಲ್ದಾರ್ , ತಪ್ಪದೆ ಮುಂದೆ ಓದಿ…

ಅದರೆ ಸೇನೆಯ 40 ವೀರ ಯೋಧರ  ಬಲಿದಾನವನ್ನು ವ್ಯರ್ಥವಾಗಿ ಬಿಡದೇ ಜೊತೆಗೆ ಪ್ರತಿಯೊಬ್ಬ ಭಾರತೀಯ ಆಕ್ರೋಶವನ್ನು ಪ್ರತೀಕಾರವಾಗಿ ತೀರಿಸಿಕೊಳ್ಳುವುದರ ಭಾರತೀಯ ಸೈನ್ಯವು ಯೋಧರ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡಿತು.

ಪುಲ್ವಾಮಾ ದಾಳಿ

ಪ್ರತಿ ವರ್ಷವೂ ಜಮ್ಮು ಕಾಶ್ಮೀರದಲ್ಲಿ ಚಳಿಗಾಲದಲ್ಲಿ ಅತಿಯಾದ ಹಿಮಪಾತದಿಂದ ಜಮ್ಮು ಶ್ರೀನಗರದ ಹೆದ್ದಾರಿಯನ್ನು ಸಂಚಾರಕ್ಕೆ ಮುಚ್ಚಲಾಗಿರುತ್ತದೆ.ಯೋಧರು ಹಲವಾರು ದಿನಗಳು transit ಕ್ಯಾಂಪಿನಲ್ಲೇ ಕಳೆಯಬೇಕಾದ ಪರಿಸ್ಥಿತಿ ಇರುತ್ತದೆ.ಆ ಸಮಯದಲ್ಲಿ CRPF ಯೋಧರು ಪ್ರತಿ ವರ್ಷ ದಂತೆ ರಜೆ ಮುಗಿಸಿಕೊಂಡು ಮರಳಿ ಜಮ್ಮುವಿನ ತರಬೇತಿ ಕ್ಯಾಂಪಿಗೆ ಜಮಾವಣೆ ಆಗುವುದು ವಾಡಿಕೆ . ಅಲ್ಲಿಯಿಂದ ಮುಂದೆ  ಬಸ್ಸಿನಲ್ಲಿ ಶ್ರೀನಗರಕ್ಕೆ ಪ್ರಯಾಣ.  ಅಂತೂ ಕೊನೆಗೆ ಫೆಬ್ರವರಿ 13 ರಂದು ಹೆದ್ದಾರಿಯನ್ನ ಸಂಚಾರಕ್ಕೆ ತೆರವುಗೊಳಿಸಲಾಗುತ್ತದೆ. ಅದರೆ 2019 ಫೆಬ್ರವರಿ14 ರಂದು ಭಯೋತ್ಪಾದಕ ದಾಳಿ ಇಡೀ ದೇಶವನ್ನೇ ತಲ್ಲಣಗೊಳಿಸಿತು,ಈ ದಾಳಿ ಭಾರತೀಯಸೇನಾ ವಾಹನಗಳ ಮಧ್ಯಾಹ್ನದ ಜಮ್ಮುವಿನಿಂದ ಪುಲ್ವಾಮ ಮಾರ್ಗವಾಗಿ ಮಧ್ಯಾಹ್ನದ ಹೊತ್ತಿಗೆ  2547 ಜನ CRPF  ಯೋಧರ ಹೊತ್ತಿದ್ದ  78 ಸೈನ್ಯದ ವಾಹನಗಳು ರಾಷ್ಟ್ರೀಯ ಹೆದ್ದಾರಿ ಮೂಲಕ ಪುಲ್ವಾಮ ಮಾರ್ಗವಾಗಿ ಶ್ರೀನಗರಕ್ಕೆ ತಲುಪಲು ಸಂಚರಿಸುತ್ತವೆ ,ಇತ್ತ ಈ ಭಯೋತ್ಪಾದಕರಿಗೆ   ಹಾದುಹೋಗುವ ಮಾಹಿತಿಯನ್ನು ತಿಳಿದುಕೊಂಡು  ಸುಮಾರು 100 ಕೆಜಿಯಷ್ಟು ಸ್ಪೋಟಕಗಳನ್ನು ತುಂಬಿದ ವಾಹನವನ್ನು  ಅದಿಲ್ ಅಹ್ಮದ್ ದರ್ ಎಂಬ ಉಗ್ರ, ರಾಷ್ಟ್ರೀಯ ಹೆದ್ದಾರಿಯಲ್ಲಿ ಪುಲುವಾಮ ಜಿಲ್ಲೆಯ ಲೇತ್ಪುರ ಎನ್ನುವ ಗ್ರಾಮದಲ್ಲಿ ಹೊಂಚು ಹಾಕಿ ಇರುತ್ತಾನೆ.

ಫೋಟೋ ಕೃಪೆ : google

ಸುಮಾರು ಇಪ್ಪತೈದು ಮುೂವತ್ತು ವಾಹನಗಳು ಹಾದು ಹೋದ ನಂತರ ತನ್ನ ವಾಹನವನ್ನು ಜೋರಾಗಿ ಚಲಾಯಿಸಿ ಒಂದು ಬಸ್ಸಿಗೆ ಡಿಕ್ಕಿ ಹೊಡೆದು ಬಿಡುತ್ತಾನೆ. ಕ್ಷಣಾರ್ಧದಲ್ಲಿ ಭೀಕರ ಸ್ಪೋಟ ಉಂಟಾಗಿ ಸೈನ್ಯದ ವಾಹನ ಮತ್ತು ಭಯೋತ್ಪಾದಕನ ವಾಹನ ಛಿದ್ರಗೊಂಡುಬಿಡುತ್ತವೆ. ಬಸ್ಸಿನಿಂದ ಹೊರಚಿಮ್ಮಿದ ದೇಹಗಳು ಹೆದ್ದಾರಿಯ ಸುತ್ತಲೂ ಚೆಲ್ಲಾಪಿಲ್ಲಿಯಾಗುತ್ತವೆ. ಘಟನೆಯಲ್ಲಿ ನಲವತ್ತು ವೀರ ಯೋಧರು ಹುತಾತ್ಮರಾಗುತ್ತಾರೆ,ಇದರಲ್ಲಿ ಕನ್ನಡಿಗ, ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ. ಎಂ. ದೊಡ್ಡಿ ಸಮೀಪದ ಗುಡಿಗೆರೆ ಗ್ರಾಮದ ಗುರು (33) ಹುತಾತ್ಮರಾಗಿದ್ದರು. ಗುರು ಸಿಆರ್ಪಿಎಫ್ 82ನೇ ಬೆಟಾಲಿಯನ್ ಯೋಧರಾಗಿದ್ದರು.ಈ ಯೋಧರ ಬಲಿದಾನವು ಇಡೀ ದೇಶವೇ ಅಶ್ರುತರ್ಪಣದೊಂದಿಗೆ ಮುಳುಗಿತು.
ವಿಶ್ವದ ಹಲವಾರು ದೇಶಗಳು ಈ ಘಟನೆಯನ್ನು ವ್ಯಾಪಕವಾಗಿ ಖಂಡಿಸುತ್ತವೆ. ಭಾರತದ ಪಾಕಿಸ್ತಾನದೊಂದಿನ ಸಂಬಂಧ ಇನ್ನಿಲ್ಲದಂತೆ ಹದಗೆಟ್ಟುಹೋಗುತ್ತದೆ. ಜೈಷ್ ಎ ಮೊಹಮ್ಮದ್ ತನ್ನ ತಂತ್ರ ಫಲಿಸಿತು, ಮತ್ತೊಮ್ಮೆ ಯುದ್ಧದ ವಾತಾವರಣ ಸೃಷ್ಟಿಯಾಯಿತು.

ಈ ದಾಳಿಗೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಯಿತು. ಪಕ್ಷಭೇದ ಮರೆತು ರಾಜಕೀಯ ನಾಯಕರು, ಸಮಾಜದ ಗಣ್ಯರು ಘಟನೆಯನ್ನು ಖಂಡಿಸಿದರು. ಪ್ರಧಾನಿ ನರೇಂದ್ರ ಮೋದಿ ಈ ದಾಳಿ ನಂತರ ನನ್ನ ಹೃದಯದೊಳಗೆ ಸಹ ಅದೇ ರೀತಿ ದಾಳಿ ಮಾಡಬೇಕೆಂಬ ಆಕ್ರೋಶ ಕುದಿಯುತ್ತಿದೆ,ಯೋಧರನ್ನು ಕಳೆದುಕೊಂಡ ಕಣ್ಣೀರಿಗೆ ಪ್ರತೀಕಾರ ಖಂಡಿತ ತೀರಿಸುತ್ತೇವೆ.
ಇದಕ್ಕಾಗಿ ನಮ್ಮ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಘೋಷಿಸಿದರು.

ಭಾರತೀಯ ಸೈನ್ಯದ ಪ್ರತಿಕಾರ

ಪಾಕ್‍ಗೆ ತಕ್ಕ ಉತ್ತರ ನೀಡಲು ನಿರ್ಧರಿಸಿ ಈ  ದಾಳಿ ನಡೆದು ಸರಿಯಾಗಿ 12 ದಿನಗಳ ನಂತರ ಅಂದರೆ ಕಳೆದ ವರ್ಷ ಫೆಬ್ರವರಿ 26ರಂದು ಭಾರತೀಯ ವಾಯುಪಡೆಯು ಗಡಿ ನಿಯಂತ್ರಣ ರೇಖೆಯನ್ನು ದಾಟಿ ಸುಮಾರು 85 ಕಿ.ಮೀ. ಒಳನುಗ್ಗಿದ  ಮಿರಾಜ್-2000 ಯುದ್ಧ ವಿಮಾನಗಳು ಜೈಷ್‍ನ ತರಬೇತಿ ಶಿಬಿರಗಳ ಮೇಲೆ ಅತ್ಯಾಧುನಿಕ ಬಾಂಬ್‍ಗಳನ್ನು ಹಾಕಿ ಸಂಪೂರ್ಣ ನಾಶ ಮಾಡಿದ್ದವು. ನಸುಕಿನ ಜಾವ 3.30ರಿಂದ 3.55ರ ಅವಧಿಯಲ್ಲಿ ನಡೆದ ಈ ದಾಳಿಯಲ್ಲಿ ಸುಮಾರು 300 ಉಗ್ರರನ್ನು ಹೊಡೆದು ಹಾಕಿತು. ಆದರೆ ಪಾಕಿಸ್ತಾನ ತನ್ನ ಉಗ್ರ ಪೋಷಣೆಯನ್ನು ಮುಚ್ಚಿಕೊಳ್ಳಲು ದಾಳಿಯನ್ನು ಅಲ್ಲಗಳೆದಿತ್ತು. ಯಾವುದೇ ದಾಳಿಗಳು ನಡೆದಿಲ್ಲ ಎಂದು ಹೇಳಿಕೊಂಡಿತ್ತು. ಅದರೆ ಬಾಲಕೋಟ್ ದಾಳಿಗೆ ಪ್ರತಿಯಾಗಿ ಪಾಕ್ ತನ್ನ ಮೂರು ಎಫ್-16 ಯುದ್ಧ ವಿಮಾನಗಳ ಮೂಲಕ ಭಾರತ ಮೇಲೆ ದಾಳಿ ನಡೆಸಲು ಮುಂದಾಗಿತ್ತು. ಈ ವೇಳೆ ಪಾಕ್‍ನ ವಿಮಾನಗಳು ಭಾರತ ಗಡಿದಾಟಲು ಬಂದಾಗ  ತಕ್ಷಣ ನಮ್ಮ  ಮಿಗ್-21 ವಿಮಾನಗಳು ಪಾಕ್ ವಿಮಾನಗಳನ್ನು ಹಿಮ್ಮೆಟ್ಟಿಸಲು ಮುಗಿಬಿದ್ದವು. ಈ ವೇಳೆ ಮಿಗ್-21 ವಿಮಾನದಲ್ಲಿದ್ದ ವಿಂಗ್ ಕಮಾಂಡರ್ ಅಭಿನಂದನ್, ಪಾಕ್‍ನ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದರು. ಈ ವೇಳೆ ಅವರ ವಿಮಾನ ಅಪಘಾಕ್ಕೀಡಾಗಿತ್ತು. ನಂತರ ಪಾಕ್ ಸೇನೆ ಅವರನ್ನು ವಶಕ್ಕೆ ಪಡೆದಿತ್ತು. ಭಾರತ ಹಾಗೂ ಜಾಗತಿಕ ಮಟ್ಟದ ಒತ್ತಡಕ್ಕೆ ಮಣಿದ ಪಾಕ್ ಅಭಿನಂದನ್ ಅವರನ್ನು ಭಾರತಕ್ಕೆ ಹಸ್ತಾಂತರಿಸಿತು.ನಮ್ಮ ಸೇನೆಯು ಸತತವಾಗಿ ಕಾಶ್ಮೀರದಲ್ಲಿ ಉಗ್ರ ರ ವಿರುದ್ಧ ಕಾರ್ಯಚರಣೆ ನಡೆಸುತ್ತಿತು,ಪುಲ್ವಾಮಾ ದಾಳಿ ನಡೆಸಿದ 45 ದಿನಗಳಲ್ಲಿ ನಮ್ಮ ಸೇನೆಯು ವಿಶೇಷ ಕಾರ್ಯಾಚರಣೆ ಮೂಲಕ ಜೈಷೆ ಸಂಘಟನೆಯ ಪುಲ್ವಾಮದಲ್ಲಿ ನಡೆದ ಉಗ್ರನ ಆತ್ಮಾಹುತಿ ದಾಳಿಯ ಮಾಸ್ಟರ್ಮೈಂಡ್ ಎನ್ನಲಾದ ಜೈಶ್ ಉಗ್ರ ಸಂಘಟನೆಗೆ ಸೇರಿದ ಅಬ್ದುಲ್ ರಶೀದ್ ಘಾಜಿಯನ್ನು ಹತ್ಯೆ ಮಾಡುವ ಮೂಲಕ ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಂಡಿತು,ಮತ್ತು ಪುಲ್ವಾಮಾ ದಾಳಿಯ ಸಂಚುಕೋರನಲ್ಲಿ ಒಬ್ಬನಾದ ಮಹಮ್ಮದ್ ಇಸ್ಮಾಲ್ ಅಲ್ವಿ ಅಲಿಯಾಸ್ ಲಂಬೂ ಅಲಿಯಾಸ್ ಅದ್ನಾನ್ ನ್ನು ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ನಲ್ಲಿ ಹತನಾಗಿದ್ದಾನೆ.ಅಲ್ಲದೇ ಜೈಷ್ ಸಂಘಟನೆಯ ಮತ್ತೋರ್ವ ಕಮಾಂಡರ್ ಕಮ್ರಾನ್‍ನನ್ನು ಸಹ ಯೋಧರು ಹತ್ಯೆ ಮಾಡಿದರು.ನಿಸಾರ್​ ಅಹಮದ್​ ತಂತ್ರೆ ಮತ್ತು ಸಾಜದ್​ ಎಂಬಿಬ್ಬರು ಉಗ್ರರರು ಸದ್ಯಕ್ಕೆ NIA ವಶದಲ್ಲಿದ್ದಾರೆ.

ಫೋಟೋ ಕೃಪೆ :google

ಈ ಮೂಲಕ  ಭಾರತದ 40 ಯೋಧರ ಬಲಿ ಪಡೆದಿದ್ದ ದಾಳಿಯ ಸಂಚುಕೋರರನ್ನು ಸೇನೆ ಹೊಡೆದುರುಳಿಸಿ ಸೇನೆಯು ತನ್ನ ಸೇಡು ತಿರಿಸಿಕೊಂಡು ವೀರ ಯೋಧರ ಬಲಿದಾನವನ್ನು ವ್ಯರ್ಥವಾಗದೆ ಬಿಡಲಿಲ್ಲ.

ನಮ್ಮ ಸೇನೆ ನಮ್ಮ ಹೆಮ್ಮೆ.


  • ಡಾ.ಗುರುಪ್ರಸಾದ ರಾವ್ ಹವಲ್ದಾರ್ – ಲೇಖಕರು ಮತ್ತು ಉಪನ್ಯಾಸಕರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW