ಮೂಳೆ ಸಂಬಂಧಿತ ಸಮಸ್ಯೆ ಇದ್ದಾಗ ಪುನರ್ನವದ ಕಷಾಯವನ್ನು ಕುಡಿಯುವುದರಿಂದ ನೋವು ಕಡಿಮೆಯಾಗುತ್ತದೆ, ಪುನರ್ನವ ಗಿಡದ ಮಹತ್ವದ ಕುರಿತು ನಾಟಿ ವೈದ್ಯರಾದ ಸುಮನಾ ಮಳಲಗದ್ದೆ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಇದನ್ನು ತರಕಾರಿ ರೂಪದಲ್ಲಿ ಉಪಯೋಗಿಸುತ್ತಾರೆ. ಹೊಟ್ಟೆಗೆ ತೆಗೆದುಕೊಳ್ಳುವುದು ಸ್ವಲ್ಪ ಉಷ್ಣ ಆದರೂ ಉತ್ತಮ ಔಷಧಿ ಗುಣಗಳನ್ನು ಹೊಂದಿದೆ. ಪುನರ್ನವ ಯಾವ ಅವಯವ ಡ್ಯಾಮೇಜ್ ಆದರೂ ಪುನಃ ಮೊದಲಿನ ಸ್ಥಿತಿಗೆ ತರುತ್ತದೆ.

ಫೋಟೋ ಕೃಪೆ : google
1) ಕೊಮ್ಮೆಗಿಡ ಅಥವಾ ಪುನರ್ನವ ಬೇರಿನ ಕಷಾಯವನ್ನು ಕುಡಿದರೆ ಕಾಲುಗಳ ಊತ ಕಡಿಮೆಯಾಗುತ್ತದೆ.
2) ಎಲೆಗಳನ್ನು ಪಲ್ಯ ಮಾಡಿ ಸೇವಿಸಿದರೆ ರುಮ್ಯಾಟಿಕ್ (ಸಂಧಿವಾತ) ಸಮಸ್ಯೆ ದೂರವಾಗುತ್ತದೆ.
3) ಬೇರನ್ನು ನೀರಲ್ಲಿ ಅರೆದು ಚರ್ಮಕ್ಕೆ ಹಚ್ಚಿದರೆ ಚರ್ಮದ ಸಮಸ್ಯೆ ನಿವಾರಣೆಯಾಗುತ್ತದೆ.
4) ಬೇರಿನ ಪುಡಿಗೆ ಬಿಸಿ ನೀರು ಸೇರಿಸಿ ಕುಡಿದರೆ ಹೊಟ್ಟೆ ಹುಳು ನಿವಾರಣೆಯಾಗುತ್ತದೆ.
5) ಬೇರಿನ ಪುಡಿಗೆ ಜೇನುತುಪ್ಪ ಹಾಗೂ ಬಜೆ ಪುಡಿ ಸೇರಿಸಿ ಮಿಶ್ರಣ ಮಾಡಿ ಸೇವಿಸಿದರೆ ಕಫ ಹಾಗೂ ಕೆಮ್ಮು ವಾಸಿಯಾಗುತ್ತದೆ.
6) ಕಷಾಯವನ್ನು ಮಲಗುವ ಮುನ್ನ ಕುಡಿದರೆ ಚೆನ್ನಾಗಿ ನಿದ್ದೆ ಬರುತ್ತದೆ.
7) ಬೇರಿನ ಪುಡಿಗೆ ಅರಿಶಿಣ ಪುಡಿ ಬೆರೆಸಿ ಬಿಸಿ ನೀರಿನಲ್ಲಿ ಕಲಸಿ ಕುಡಿದರೆ, ಆಸ್ತಮಾ ಕಡಿಮೆಯಾಗುತ್ತದೆ.
8) ಮೂಳೆ ಸಂಬಂಧಿತ ಸಮಸ್ಯೆಗಳಿದ್ದರೆ ಪುನರ್ನವದ ಕಷಾಯಕ್ಕೆ ಶುಂಠಿ ಮತ್ತು ಕರ್ಪೂರ ಸೇರಿಸಿ ಸೇವಿಸಿದರೆ ನೋವು ಕಡಿಮೆಯಾಗುತ್ತದೆ.
9)ನಾನು ತಯಾರಿಸುವ ನೋವಿನ ಎಣ್ಣೆಯಲ್ಲಿ ಇದನ್ನು ಉಪಯೋಗಿಸುತ್ತೇನೆ.
10) ಬೇರಿನ ಪುಡಿಯನ್ನು ಹರಳೆಣ್ಣೆ ಜತೆ ನಿಯಮಿತ ಪ್ರಮಾಣದಲ್ಲಿ ಸೇವಿಸಿದರೆ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.
11) ನಾನು ತಯಾರಿಸುವ ಕುಡಿಯಲು ಉತ್ತಮ ಪೇಯವಾದ ಕಷಾಯದ ಪುಡಿಯಲ್ಲಿ ಪುನರ್ನವ ಇರುತ್ತದೆ.
12) ನಿಯಮಿತ ಸೇವನೆ ಯಿಂದ ಮೂತ್ರ ವಿಸರ್ಜನೆ ಸರಿಯಾಗುತ್ತದೆ.
- ಸುಮನಾ ಮಳಲಗದ್ದೆ
