ಹಕ್ಕಿಗೆ ಗೂಡಿನಾಸರೆ ಗೂಡಿಗೆ ಮರದುಪಕಾರ…ಮರಕ್ಕೆ ಮಣ್ಣಿನ ಋಣ… ಮಣ್ಣಿಗೆ ನೀರು ಬೇರಿನಾಸರೆ…ಕವಿ ನಾಗರಾಜ ಬಿ ನಾಯ್ಕ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಗುಬ್ಬಚ್ಚಿ ತರ ಬದುಕು ಇದು
ಬದುಕಬೇಕು ಹಾಗೆ…
ಪುಟ್ಟ ಗೂಡೊಳಗೆ ಪ್ರೀತಿ ಇಟ್ಟು
ಉಳಿಯಬೇಕು ಹೀಗೆ…
ಮಾತು ಕತೆಯ ಜೊತೆ ಮೌನ
ಜೀವನವ ಹರವಿಟ್ಟು ಸುಮ್ಮನೇ
ಹಕ್ಕಿಯಂತೆ ಬಾಳುತಾ ಬುವಿಯಲಿ
ನಮ್ಮದೇ ಭಾವದ ಝರಿಯಲಿ
ಇಷ್ಟ ಕಷ್ಟದ ನಡುವೆ
ಉಳಿದಷ್ಟು ನಮ್ಮದು
ದುಡಿವ ಕನಸಿನ ಜೊತೆಗೆ
ಬದುಕ ಒಳಿತು ದೊಡ್ಡದು
ಹಕ್ಕಿಗೆ ಗೂಡಿನಾಸರೆ
ಗೂಡಿಗೆ ಮರದುಪಕಾರ
ಮರಕ್ಕೆ ಮಣ್ಣಿನ ಋಣ
ಮಣ್ಣಿಗೆ ನೀರು ಬೇರಿನಾಸರೆ
ಜೀವ ನೆರಳಿನದ್ದು
ಭಾವ ಉಳಿವಿನದ್ದು
ಉಸಿರು ಜೀವದ್ದು
ನಾಳೆಯ ನಿರೀಕ್ಷೆಯದ್ದು.
- ನಾಗರಾಜ ಬಿ ನಾಯ್ಕ – ಹುಬ್ಬಣಗೇರಿ, ಕುಮಟಾ.
