ಹಳಿಗಳ ಆಚೆ, ಕಂಬಿಗಳ ನಡುವೆ, ಕಾದಿರುವ ರೈಲಿನ ನಿಲ್ದಾಣದಲಿ ಕ್ಷಣ ಕ್ಷಣವೂ ಹೊಸದೇ…ಕವಿಯತ್ರಿ ದೇವಿಕಾ ರಾಜ್ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಓದಿ…
ಕಾಯುವಿಕೆ ಇಲ್ಲ, ಕಾತರವೂ ಇಲ್ಲ,
ಯಾವುದೇ ಬಂಡಿಯ ಚಿಂತೆ ಇಲ್ಲ.
ಮನಸ್ಸಿನ ನಕ್ಷೆಯ ಮೇಲೆ ಹಚ್ಚಿದ
ತಹತಹಿಕೆಯ ಮನಸ್ಸಿನ ಮೌನ ನಿಲ್ದಾಣ
ಬರುವವರ ಅವಸರ, ಹೋಗುವರ ಗಡಿಬಿಡಿ,
ಕೂಗುವ ಕುಳಗಳ, ಸದ್ದು-ಗದ್ದಲವು.
ಎಲ್ಲವೂ ಹೊರಗೆ, ನನ್ನಿಂದ ದೂರ,
ತಹತಹಿಕೆಯ ತೊರೆ ಅಪ್ಪಳಿಸಿದಂತೆ
ಹಳಿಗಳ ಆಚೆ, ಕಂಬಿಗಳ ನಡುವೆ,
ಕಾದಿರುವ ರೈಲು, ನಿಂತು ನಿದಿರೆಯಲಿ.
ಅದರ ಪ್ರಯಾಣ, ಅರಿವಿನ ಆಚೆ,
ನನ್ನ ಅಂತರಂಗದ ಕನಸಿನ ಪಯಣ
ಕಾಲದ ಚಕ್ರ, ಸಾಗುವ ಬಂಡಿ,
ನಿಲ್ದಾಣದಲಿ ಕ್ಷಣ ಕ್ಷಣವೂ ಹೊಸದೇ.
ಆದರೆ ನಾನು, ಅಲುಗಾಡದ ಚಿಂತೆ,
ಗಾಢ ಮೌನದ ಮೃದು ಹೂವಂತೆ…..?!
- ದೇವಿಕಾ ರಾಜ್
