ಕರ್ನಾಟಕದ ಸಾಧಕಿಯರು (ಭಾಗ ೨) : ರಾಜೇಶ್ವರಿ ಚಟರ್ಜಿ



ಕರ್ನಾಟಕದ ಮೊಟ್ಟಮೊದಲ ಮಹಿಳಾ ಎಂಜಿನಿಯರ್ ಕನ್ನಡತಿ ರಾಜೇಶ್ವರಿ ಚಟರ್ಜಿ, ಭಾರತೀಯ ವಿಜ್ಞಾನ ಮಂದಿರದ ಇಂಜಿನೀಯರಿಂಗ್ ವಿಭಾಗಕ್ಕೆ ನೇಮಕವಾದ ಮೊತ್ತಮೊದಲ ಮಹಿಳಾ ಉದ್ಯೋಗಿಯಾಗಿದ್ದರು. ಅವರ ಕುರಿತು ಇನ್ನಷ್ಟು ವಿಷಯಗಳನ್ನು ಲೇಖಕರು ರಘುರಾಂ ಅವರು ಓದುಗರಿಗೆ ನೀಡಿದ್ದಾರೆ…

ಈ ದಿನ  ಎಲ್ಲಾ  ವಿಭಾಗಗಳಲ್ಲಿ  ಮಹಿಳಾ ಇಂಜನೀಯರ್ಸ  ಕೆಲಸ ಮಾಡುತ್ತಿದ್ದಾರೆ. ವೃತ್ತಿ ಜೀವನದಲ್ಲಿ ಯಶಸ್ಸು ಪಡೆದವರು ಬೇಕಾದಷ್ಟು ಮಹಿಳೆಯರು ಇದ್ದಾರೆ.  ಆದರೆ ಈ ಸ್ಥಿತಿ ಮೊದಲು ಇರಲಿಲ್ಲ. ಇಂಜನೀಯರ್ ಹಾಗಿರಲಿ ಸಾಮಾನ್ಯ ವಿದ್ಯಾಭ್ಯಾಸವನ್ನು ಮಾಡಲು ಮಹಿಳೆಯರಿಗೆ  ಎಡರು ತೊಡರುಗಳು ಇದ್ದ ಕಾಲದಲ್ಲಿ  IISc ಯಲ್ಲಿ  ೧೯೫೩ ರಲ್ಲಿ  ಮಹಿಳೆ ಒಬ್ಬರು  ಡಾಕ್ಟರೇಟ್ ಪದವಿಯೊಂದಿಗೆ ELECTRICAL COMMUNICATION ENGINEERING  ವಿಭಾಗದಲ್ಲಿ  ಉಪನ್ಯಾಸಕರಾಗಿ  ಸೇರುತ್ತಾರೆ.   ಅವರೇ  ಶ್ರೀಮತಿ  ರಾಜೇಶ್ವರಿ ಚಟರ್ಜಿ ಯವರು. ಬನ್ನಿ  ಕರ್ನಾಟಕದ ಪ್ರಥಮ ಮಹಿಳಾ ಇಂಜನೀಯರ್  ಎಂದು ಗುರುತಿಸಲಾಗಿರುವ  ಇವರ ಬಗ್ಗೆ ತಿಳಿದುಕೊಳ್ಳೋಣ.

ಫೋಟೋ ಕೃಪೆ : The life of Science

1922ರಲ್ಲಿ ಕರ್ನಾಟಕದಲ್ಲಿ ಹುಟ್ಟಿದರು.  ಅವರ  ಅಜ್ಜಿ ಕಮಲಮ್ಮ ದಾಸಪ್ಪ (ಇವರು ಕೂಡ ಆಗಿನ ಕಾಲದಲ್ಲಿ  ಪದವಿಯನ್ನು ಪಡೆದ ಕೆಲವೇ ಮಹಿಳೆಯರಲ್ಲಿ ಒಬ್ಬರು) ಸ್ಥಾಪಿಸಿದ Special English School ನಲ್ಲಿ ಓದಿದರು.  ಚರಿತ್ರೆಯನ್ನು ಓದಲು ಇಷ್ಟ ಪಟ್ಟರು. ಆದರೆ ಕೊನೆಗೆ   ಭೌತಶಾಸ್ತ್ರ ಮತ್ತು ಗಣಿತದಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಓದಿ  BSc ಮತ್ತು MSc ಪದವಿಯನ್ನು  ಪ್ರಥಮ Rank ತೆಗೆದುಕೊಂಡು ಪಾಸಾದರು.  ಮುಮ್ಮುಡಿ ಕೃಷ್ಣರಾಜ ಓಡೆಯರ್ ಪ್ರಶಸ್ತಿ  BSc ಪದವಿಗೆ  ಮತ್ತು MSc ಗೆ  M.T.ನಾರಾಯಣ್ ಅಯ್ಯಂಗಾರ್ ಮತ್ತು Water’s Memorial  ಪ್ರಶಸ್ತಿ ಬಂದಿತು.

೧೯೪೩ ರಲ್ಲಿ  IISc ಯಲ್ಲಿ  ಸಂಶೋಧನಾ ವಿದ್ಯಾರ್ಥಿಯಾಗಿ  ಇಲೆಕ್ಟ್ರಿಕಲ್ ತಂತ್ರಜ್ಞಾನ ವಿಭಾಗದಲ್ಲಿ  ಸೇರಿಕೊಂಡರು.  ೧೯೪೭ ಭಾರತದ ಸ್ವಾತಂತ್ರ್ಯದ ಮೊದಲು ಅಸ್ತಿತ್ವದಲ್ಲಿ ಇದ್ದ  Interim Government ನವರು ಕೊಟ್ಟ ಶಿಷ್ಯ ವೇತನವನ್ನು ತೆಗೆದುಕೊಂಡು, ೩೦ ದಿನ ಹಡಗಿನಲ್ಲಿ ಪ್ರಯಾಣ ಮಾಡಿ ಅಮೆರಿಕಾ ತಲುಪಿದರು. ಅಲ್ಲಿ ಮಿಚಿಗನ್ ವಿಶ್ವವಿದ್ಯಾಲಯದಲ್ಲಿ  ಇಲೆಕ್ಟ್ರಿಕಲ್ ಇಂಜನೀಯರಿಂಗ್ ವಿಭಾಗದಲ್ಲಿ MS ಮತ್ತು PhD ಪದವಿ ಪಡೆದರು.

ನಂತರ ೧೯೫೩ ರಲ್ಲಿ   ಭಾರತಕ್ಕೆ ಹಿಂತಿರುಗಿ, IISc ಯಲ್ಲಿ ಪ್ರಥಮ ಮಹಿಳಾ ಇಂಜನೀಯರ್  ಉಪನ್ಯಾಸಕರಾಗಿ ಸೇರಿದರು.  ಅವರು IISc ಯಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದ ಶ್ರೀ ಸಿಸಿರ್ ಕುಮಾರ್ ಚಟರ್ಜಿಯವರನ್ನು ಮದುವೆ ಅಗಿದ್ದರು.  ಇವರು ಇಬ್ಬರು ಸೇರಿ ಪ್ರಥಮ ಬಾರಿಗೆ Microwave Engineering  ಸಂಶೋಧನಾ ವಿಭಾಗ ಸ್ಥಾಪಿಸಿದರು ಮತ್ತು ಅದರಲ್ಲಿ ಸಂಶೋಧನೆದಲ್ಲಿ ತೊಡಗಿಕೊಂಡರು.  ಆ ಕಾಲದಲ್ಲಿ   ಭಾರತದಲ್ಲೇ ಪ್ರಥಮ  ಬಾರಿಗೆ ಈ ವಿಭಾಗದಲ್ಲಿ  ಸಂಶೋಧನೆ ಪ್ರಾರಂಭ ಆಗಿದ್ದು.  ಕೊನೆಗೆ ೧೯೮೨ ರಲ್ಲಿ  ಅದೇ ಸಂಸ್ಥೆಯ Electrical Commnication Engineering ವಿಭಾಗದಲ್ಲಿ Chairperson ಆಗಿ ನಿವೃತ್ತಿ ಹೊಂದಿದರು.



ಇವರು ೧೦೦ ಕ್ಕೂ ಹೆಚ್ಚು ಸಂಶೋಧನಾ ಪ್ರಪಂಧವನ್ನು ಪ್ರಕಟಿಸಿದ್ದಾರೆ. ಇವರ ಸಂಶೋಧನೆಗೆ ಬಂದಿರುವ  ಅನೇಕ ಪ್ರಶಸ್ತಿಗಳು ಬಂದಿವೆ.  ಅದರಲ್ಲಿ Electrical and Radio Engineering ವಿಭಾಗದಲ್ಲಿ ಅತ್ಯುತ್ತಮ ಸಂಶೋಧನಾ  ಪ್ರಬಂಧಕ್ಕೆ ಇಂಗ್ಲೆಂಡ್ ನ   ಮೌಂಟ್ ಬ್ಯಾಟನ್   ಪ್ರಶಸ್ತಿ,  Institution Of Engineers ವತಿಯಿಂದ ಕೊಡುವ J C Bose Memorial ಪ್ರಶಸ್ತಿ. Institute of Electronics and Telecommunicationsರವರು ಕೊಟ್ಟಿರುವ Ramial Wadhwa Award  ಕೆಲವು.  ೨೦ ಕ್ಕೂ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳಿಗೆ (PhD students) ಮಾರ್ಗದರ್ಶನ ಮಾಡಿದ್ದಾರೆ.  ೭ ಪಠ್ಯ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.  ಇವರ ಮಗಳು ಇಂದಿರಾ ಚಟರ್ಜಿ  ಅಮೇರಿಕಾದ ವಿಶ್ವವಿದ್ಯಾಲಯದಲ್ಲಿ ಫ್ರೋಫೆಸರ್ ಆಗಿದ್ದಾರೆ.

ನಿವೃತ್ತಿ ನಂತರವೂ ಸಾಮಾಜಿಕ ವಲಯದಲ್ಲಿ ಕೆಲಸಮಾಡಿ  Indian Association for Women’s Studies ಮೂಲಕ  ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮಹಿಳೆಯರ  ವಿದ್ಯಾಭ್ಯಾಸವನ್ನು  ಪ್ರೋತ್ಸಾಹಿಸಿದರು.  ಕೊನೆಯವರೆಗೂ  ಕಾರ್ಯ ನಿರತರಾಗಿದ್ದ  ಇವರು  ೨೦೧೦ರಲ್ಲಿ  ಸ್ವರ್ಗಸ್ಥರಾದರು.

ಈ ಮಹಿಳಾ ಸಾಧಕಿ ನಮ್ಮ ಕರ್ನಾಟಕದ ಹೆಮ್ಮೆ.


  • ಎನ್.ವಿ.ರಘುರಾಂ. (ನಿವೃತ್ತ ಅಧೀಕ್ಷಕ ಅಭಿಯಂತರ (ವಿದ್ಯುತ್ ), ಕ.ವಿ.ನಿ.ನಿ, ಬೆಂಗಳೂರು)

 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW