ರಥಸಪ್ತಮಿ ಮಹತ್ವ



ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿಯಂದು ಬರುವುದು “ರಥಸಪ್ತಮಿ”. ಇಂದು ಅಂದರೆ ಫೆಬ್ರುವರಿ ೧೯, ೨೦೨೧ ರಂದು ಎಕ್ಕದೆಲೆ ಸ್ನಾನ ಮತ್ತು ೧೦೮ ಸೂಯ೯ನಮಸ್ಕಾರ ಮಾಡುವ ಪರಿಪಾಠವಿದೆ. ರಥಸಪ್ತಮಿ ಮಹತ್ವ…

ಇದೊಂದು ಸರಳ, ಸುಲಭ ಪರಿಣಾಮಕಾರಿ ವ್ಯಾಯಾಮ. ಯಾವುದೇ ವಯಸ್ಸಿನವರು ಮತ್ತು ಯಾವುದೇ ತೊಂದರೆಯಿಂದ ಬಳಲುತ್ತಿರವವರು ಹಾಗೂ ಸವ೯ರೋಗಗಳಿಂದ ಬಳಲುತ್ತಿರುವವರೂ ಕೆಲವೇ ಸಮಯದಲ್ಲಿ ಮಾಡಬಹುದಾದ ಆಸನಗಳ ಸಮೂಹ. ಸೂಯ೯ನಮಸ್ಕಾರದಲ್ಲಿ ಶರೀರದ ರಕ್ಷಣೆ, ಪೋಷಣೆ ,ಬೆಳವಣಿಗೆಗೆ ಮತ್ತು ಎಲ್ಲಾ ಸ್ನಾಯುಸಮೂಹಗಳಿಗೂ ಬೇಕಾಗುವ ಎಲ್ಲಾ ಅಂಶಗಳೂ ಅಡಕವಾಗಿದೆ. ಅತಿಯಾದ ಯಾವ ಖಚು೯ ವೆಚ್ಚಗಳು ಇಲ್ಲದೆಯೇ ಮಾಡಬಹುದಾತಂಹ ದಿನಚರಿಗಳಲ್ಲಿ ಒಂದು”ಯಮ” ನಿಯಮ ಸರಿಯಾಗಿ ಪಾಲಿಸಿದರೇ ಮಾತ್ರ ಉತ್ತಮ ಪರಿಣಾಮ ಕಾಣಬಹುದು😊

ಸೂಯ೯ದೇವನಿಗೆ ಕೋಟಿ ಕೋಟಿ ಪ್ರಣಾಮಗಳು:

ಮೂಡಣದಿ ಮೂಡುವನು ನೇಸರನು “ರಥಸಪ್ತಮಿ”ಯಂದು ಹೊನ್ನ ಕಿರಣ ಹೊತ್ತು ತರುವನು
ಸಪ್ತ ಕುದುರೆಗಳ ರಥವನೇರಿ ಬರುವನು ಆದಿದೇವನು
ಹೊಸತನದಲಿ ಕಂಗೊಳಿಸುವನು
ಜಗದ ಸಂಕುಲಕೆ ಒಡೆಯನು ಇವನು
ಕೋಟಿ ಕೋಟಿ ಜೀವಿಗಳಿಗೆ ನವ ಚೈತನ್ಯ ತುಂಬುವನು
ಆರೋಗ್ಯ , ಐಶ್ವಯ೯ ದತ್ತ ಇವನು
ಭಾಸ್ಕರನಿಗೆ “ಸೂಯ೯ನಮಸ್ಕಾರ”ದ ಕೃತಜ್ಞತೆ ಸಲ್ಲಿಸುವವು ತನು ಮನವು


  • ವಾಣಿರಾಜ್ ಜೋಶಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading