ತಾನೊಬ್ಬನೇ ಬೆಳಗಬೇಕೆಂಬ ಹಠ, ಅಕ್ಷರ ಪ್ರಪಂಚಕ್ಕೆ ಮುನ್ನುಡಿಗಾರನಾದ ‘ಅಕ್ಷರ ಮಾಂತ್ರಿಕ’ ರವಿ ಬೆಳೆಗೆರೆ ಇನ್ನಿಲ್ಲ ಎನ್ನುವ ವಾಸ್ತವವನ್ನು ಮನಸ್ಸಿಗೆ ಮನವರಿಕೆ ಮಾಡಬೇಕಿದೆ. ಕವಿಯತ್ರಿ ಶಿವಲೀಲಾ ಹುಣಸಗಿ ಅವರ ಕವನದಲ್ಲಿ ರವಿ ಬೆಳಗಿದ ಕ್ಷಣ…
ಮತ್ತೆ ಹುಟ್ಟಿಬಾ…
ರವಿಯೊಂದಿಗೆ ಅನುಸಂಧಾನ
ಅವಗೂ ಬೇಸರವಿತ್ತೆನೋ
ತಾನೊಬ್ಬನೇ ಬೆಳಗಬೇಕೆಂಬ ಹಠ
ಕಟ್ಟಬಿದ್ದು ಎದೆಗಪ್ಪಳಿಸಿದರೂ
ಸಿಗರೇಟ್ನ ಹೋಗೆಗೆ ಬೆಚ್ಚಿಬಿದ್ದಿದ್ದರೂ
ಮೋಡಗಳೊಂದಿಗೆ ನಲಿದವ
ಹೋಗೆಯಬ್ಬರಕೆ ನಡುಗಿದ್ದ ಸೂರ್ಯ
ರವಿಯೆಂದರೆ ಬರಿ ಹೆಸರಿಗಲ್ಲವನು
ಅಕ್ಷರ ಪ್ರಪಂಚಕ್ಕೆ ಮುನ್ನುಡಿಗಾರನು
ಅವ ರಾಕ್ಷಸನೋ,ಮಾಂತ್ರಿಕನೋ
ಓ ಮನಸೇ ಎಂದು ಚಿತ್ತದಲ್ಲಡಗಿದನೋ
ಅಂತೂ ದಶಕಗಳ ಹೋರಾಟ ಕಂಡವ
ನ್ಯಾಯ,ಅನ್ಯಾಯದ ಜಂಜಾಟದಲಿ
ನೇರ ದಿಟ್ಟ ನಿರಂತರದ ಹೊಂಗಿರಣದಿ
ಮಾಯಾನಗರಿಯ ಆಳಿದವನು
ಅಂತು ರವಿ,ರವಿಗೆ ಎದುರಾಗಿಯೇ
ಸಿಂಹದಂತೆ ಗರ್ಜಿಸುತ್ತಲೇ…
ಮೋಡವನ್ನೆರಿದನೆಂದರೆ ನಂಬಲಸಾಧ್ಯ.
ಮರೆಯಾದ ಅಕ್ಷರ ಲೋಕದ ನಕ್ಷತ್ರವೇ
ಅಸ್ತಂಗತ ಅಕ್ಷರ ಮೋಡಿಗಾರನೆ
ಮತ್ತೆ ಹುಟ್ಟಿ ಬಾ ಕನ್ನಡಿಗರ ಉಸಿರಲಿ
ನಿನಗೊಂದು ನುಡಿ ನಮನ…
- ಶಿವಲೀಲಾ ಹುಣಸಗಿ (ಯಲ್ಲಾಪುರ)
