ಗೋಧಿ ಹಿಟ್ಟಿನ ಕೇಕ್ ಮಾಡುವುದು ಸುಲಭ ಮತ್ತು ಆರೋಗ್ಯಕ್ಕೆ ಒಳ್ಳೆಯದು. ಈ ಕೇಕ್ ನಲ್ಲಿ ಬೆಲ್ಲವನ್ನು ಬಳಸಿರುವುದರಿಂದ ಸಕ್ಕರೆ ಖಾಯಿಲೆ ಇರುವವರು ಸಹ ತಿನ್ನಬಹುದು. ಮಾಡಲು ಸುಲಭ ಹಾಗೂ ವಿಶಿಷ್ಟ ರುಚಿ ಇರುವ ಈ ಕೇಕ್ ನ್ನು ನಿಮ್ಮ ಮನೆಯಲ್ಲೂ ಮಾಡಿ ನೋಡಿ.
ನಿಮ್ಮ ಅಭಿಪ್ರಾಯವನ್ನು aakritikannada@gmail.com ನಲ್ಲಿ ಅಥವಾ ವೆಬ್ ಸೈಟ್ ನ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.
ಬೇಕಾಗುವ ಸಾಮಗ್ರಿಗಳು:
ಗೋಧಿ ಹಿಟ್ಟು – ೧ಕಪ್
ಬೇಕಿಂಗ್ ಪೌಡರ್ – ೧/೨ ಟೇಬಲ್ ಸ್ಪೂನ್
ಬೇಕಿಂಗ್ ಸೋಡಾ -೧/೨ ಟೇಬಲ್ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ದ್ರಾಕ್ಷಿ – ಅಲಂಕಾರಕ್ಕೆ ಸ್ವಲ್ಪ
ತುರಿದ ಬೆಲ್ಲ – ೩/೪ ಕಪ್
ಮೊಸರು -೧/೨ ಕಪ್
ಎಣ್ಣೆ ೧/೨ ಕಪ್ ಗಿಂತ ಸ್ವಲ್ಪ ಕಮ್ಮಿ
ನೀರು – ಬೆಲ್ಲ ಕರಗಿಸಲು
ಬೆಣ್ಣೆ – ಕೇಕ್ ಪ್ಯಾನ್ ಹಚ್ಚಲು ಬೇಕಾಗುವಷ್ಟು
ಮಾಡುವ ವಿಧಾನ :
೧. ಒಂದು ದೊಡ್ಡ ಪಾತ್ರೆಯಲ್ಲಿ ಗೋದಿಹಿಟ್ಟುಗೆ ಉಪ್ಪು, ಬೇಕಿಂಗ್ ಪೌಡರ್ ಮತ್ತು ಬೇಕಿಂಗ್ ಸೋಡಾವನ್ನು ಹಾಕಿ ಮಿಕ್ಸ ಮಾಡಿ. ಒಂದು ಕಡೆ ಬದಿಯಲ್ಲಿ ತಗೆದಿಡಿ. (ಜರಡಿಯನ್ನು ಬಳಸುವುದರಿಂದ ಮಿಕ್ಸ್ ಚನ್ನಾಗಿ ಆಗುತ್ತದೆ.) ಮೈಕ್ರೋ ಓವೆನ್ ನನ್ನು ೧೮೫ ಡಿಗ್ರಿಗೆ ೫ನಿಮಿಷ ಪ್ರಿ ಹೀಟ್ ಮಾಡಿರಿ.
೨. ಇನ್ನೊಂದು ಪಾತ್ರೆಯಲ್ಲಿ ಎರಡರಿಂದ ಮೂರು ಲೋಟದಷ್ಟು ನೀರು ಹಾಕಿ ಸ್ಟೋವ್ ಮೇಲೆ ಕುದಿಯಲು ಬಿಡಿ. ನೀರು ಕುದಿದ ನಂತರ ಅದಕ್ಕೆ ತುರಿದ ಬೆಲ್ಲ ಸೇರಿಸಿ. ಬೆಲ್ಲ ಕರಗಿದ ನಂತರ ಸ್ಟೋವ್ ನಿಂದ ಕೆಳಗಿಳಿಸಿ. ಸ್ವಲ್ಪ ಹೊತ್ತು ತಣ್ಣಗೆ ಆಗಲು ಬಿಡಿ.
೩. ಬೆಲ್ಲದ ನೀರು ತಣ್ಣಗಾದ ಮೇಲೆ ಅದಕ್ಕೆ ಮೊಸರು, ಎಣ್ಣೆ ಹಾಕಿ ಚನ್ನಾಗಿ ಮಿಕ್ಸ್ ಮಾಡಿ. ಅದು ಒಂದು ಹದಕ್ಕೆ ಬರಬೇಕು.
೪. ತಗೆದಿಟ್ಟಿದ್ದ ಗೋಧಿಹಿಟ್ಟಿನ ಮಿಶ್ರಣಕ್ಕೆ ಬೆಲ್ಲದ ಮಿಶ್ರಣವನ್ನು ಸೇರಿಸಿ. ಚನ್ನಾಗಿ ಮಿಕ್ಸ್ (ಬೀಟ್) ಮಾಡಿ.
೫. ಕೇಕ್ ಪ್ಯಾನ್ ಗೆ ಸ್ವಲ್ಪ ಎಣ್ಣೆ ಸವರಿ, ತಯಾರಾದ ಮಿಶ್ರಣವನ್ನು ಸುರಿಯಿರಿ. ಅದಕ್ಕೆ ಮೇಲೆ ದ್ರಾಕ್ಷಿ ಹಾಕಿ ಅಲಂಕಾರ ಮಾಡಿ.
೬. ಕೇಕ್ ಪ್ಯಾನ್ ನನ್ನು ಮೈಕ್ರೋ ಓವೆನ್ ನಲ್ಲಿ ೧೮೫ ಡಿಗ್ರಿ ಸೆಟ್ ಮಾಡಿ ೩೦ ರಿಂದ ೪೦ ನಿಮಿಷಗಳವರೆಗೂ ಬೇಯಲು ಬಿಡಬೇಕು.
೭. ಅರ್ಧಗಂಟೆಯ ನಂತರ ಕೇಕ್ ಬೆಂದಿದೆಯೋ,ಇಲ್ಲವೋ ಎಂದು ಪರೀಕ್ಷಿಸಲು ಒಣ ಚಾಕುವಿನಿಂದ ಚುಚ್ಚಿ ನೋಡಿ. ಬೆಂದಿದ್ದರೆ ಚಾಕುವಿಗೆ ಹಸಿ ಹಿಟ್ಟು ಅಂಟಿಕೊಳ್ಳುವುದಿಲ್ಲ.
೧೦ಈಗ ಸವಿ ಸವಿಯಾದ ಸಕ್ಕರೆರಹಿತ, ಆರೋಗ್ಯಕರ ಗೋಧಿ ಹಿಟ್ಟಿನ ಕೇಕ್ ರೆಡಿಯಾಗಿದೆ.
#ಬಯರಚ