ಸಾಹಿತ್ಯ ಸಮ್ಮೇಳನ ಎಂಬ ಜಾತ್ರೆಗಳು

ಪ್ರತಿ ವರ್ಷ ತಾಲೂಕು ಮಟ್ಟದಲ್ಲಿ ಒಂದು ಸಮ್ಮೇಳನ ರಾಜ್ಯದಾದ್ಯಂತ ನಡೆಯುತ್ತದೆ. ತಾಲೂಕು ಸಾಹಿತ್ಯ ಸಮ್ಮೇಳನಕ್ಕೆಂದು ಸರಕಾರ ಒಂದು ಲಕ್ಷ ಹಣವನ್ನು ಕೇಂದ್ರ ಸಾಹಿತ್ಯ ಪರಿಷತ್ತಿನ ಮೂಲಕ ಕೊಡುತ್ತದೆ. ರಾಜ್ಯದಲ್ಲಿ ಇರುವ ೧೭೬ ತಾಲೂಕಿನಲ್ಲಿ ಒಂದು ಸಮ್ಮೇಳನ ಅಂದರೆ ಪ್ರತಿ ವರ್ಷ ೧೭೬ ಲಕ್ಷಗಳನ್ನು ಖಜಾನೆಯಿಂದ ತಾಲೂಕು ಸಮ್ಮೇಳನಕ್ಕಾಗಿ ವ್ಯಯಿಸಲಾಗುತ್ತದೆ. ಇದರ ಹೊರತಾಗಿ ತಾಲೂಕು ಕಸಾಪಗಳು ತಮ್ಮ ಶಕ್ತಿ ಮೀರಿ ವಿವಿಧ ಮೂಲಗಳಿಂದ ಕನಿಷ್ಠ ಇದರ ಎರಡು ಪಟ್ಟು ಹಣ ಸಂಗ್ರಹಿಸುತ್ತದೆ. ಅಂದರೆ ೫.೨೨ ಲಕ್ಷಗಳು ಪ್ರತಿ ವರ್ಷ ತಾಲೂಕು ಸಮ್ಮೇಳನ ಎಂಬ ಘನ ಕಾರ್ಯಕ್ಕೆ ಖರ್ಚಾಗುತ್ತದೆ.

ಆದರೆ ಇಲ್ಲಿ ತಿಂಡಿ – ಭೋಜನ, ಮೆರವಣಿಗೆ, ಸಾರಿಗೆ, ಸಮ್ಮೇಳನದ ಅದ್ದೂರಿ ವೇದಿಕೆ, ನೆನಪಿನ ಕಾಣಿಕೆಗಳು, ಪ್ರಚಾರ, ಟೆಂಟು – ಖುರ್ಚಿ ಬಾಡಿಗೆ, ಸ್ವಾಗತ ಕಮಾನುಗಳು, ಟಿ ಎಗಳು, ಭಾಷಣ ಮಾಡುವವರ – ಓದುವವರ ಸಂಭಾವನೆ ಎಂದೆಲ್ಲ ಖರ್ಚಾಗುತ್ತದೆ. ತಾಲೂಕಿನ ಲೇಖಕನಿಗೆ ಬಿಡಿಗಾಸಿನ ಸಹಾಯವು ಇಲ್ಲಿ ಸಿಗುವುದಿಲ್ಲ. ಯುವ ಲೇಖಕರಿಗಾಗಲೀ, ಹಿರಿಯ ಲೇಖಕರಿಗಾಗಲೀ, ಇದರಿಂದ ಅಂಥ ಯಾವ ಪ್ರಭಾವವೂ ಇಲ್ಲ. ಸಾಹಿತ್ಯ ಪರಿಷತ್ತು ಅಂದರೆ ಬರೀ ಸಾಹಿತಿಗಳೇ ಇರುವ ಸಂಸ್ಥೆ ಅಲ್ಲ ಎಂದು ಇತ್ತೀಚೆಗೆ ಹಲವರು ಮಾತಾಡುತ್ತಿದ್ದಾರೆ. ಕನ್ನಡ ನಾಡಿನಲ್ಲಿ ಹುಟ್ಟಿದ ತಮಿಳರು, ತೆಲುಗರು, ಮಲಯಾಳಿಗಳು ಮುಂದೊಂದು ದಿನ ಅಂತವರೂ ಕ.ಸಾ.ಪ.ದಲ್ಲಿ ಅಧ್ಯಕ್ಷರಾಗಬಹುದು. ಕನ್ನಡ ನಾಡಿನಲ್ಲಿ ಹುಟ್ಟಿದ ತಮಿಳರು, ತೆಲುಗರು, ಮಲಯಾಳಿಗಳು ಮುಂದೊಂದು ದಿನ ಅಂತವರೂ ಕ.ಸಾ.ಪ.ದಲ್ಲಿ ಅಧ್ಯಕ್ಷರಾಗಬಹುದು. ಪ್ರಜಾ ಪ್ರಭುತ್ವದಲ್ಲಿ ಅದು ಸಾಧ್ಯವೂ ಹೌದು. ಅಷ್ಟೇ ಏಕೆ ಮುಂದೊಂದು ದಿನ ಇಲ್ಲಿರುವ ಸಾಹಿತ್ಯ ಪದ ನಾಪತ್ತೆಯೂ ಆಗಬಹುದು.

ಈಗಂತೂ ಸಮ್ಮೇಳನದಲ್ಲಿ ಸಾಹಿತಿಗಳಿಗಿಂತ ಟೆಂಟಿನವನಿಗೆ, ಅಡುಗೆಯವನಿಗೆ, ಕೆಲವು ಸಾಹಿತಿಗಳಿಗೆ ದೊಡ್ಡ ಲಾಭ. ಅಂಥವರು ಇಂಥ ಸಮ್ಮೇಳನ ಆರು ತಿಂಗಳಿಗೊಮ್ಮೆಯಾದರೂ ನಡೆಯಲಿ ಅಂದುಕೊಂಡರೆ ಅಚ್ಚರಿಯಿಲ್ಲ. ಸಮ್ಮೇಳನದ ನಂತರ ಆಯಾ ತಾಲೂಕಿನಲ್ಲಿ ನೆನಪಲ್ಲಿ ಉಳಿಯುವುದೆಂದರೆ ಸಮ್ಮೇಳನದ ಹೆಸರಲ್ಲಿ ನಡೆದ ಗುಂಪುಗಾರಿಕೆ, ದುಂದು ಖರ್ಚು, ಲೆಕ್ಕ ಕೊಡದೇ ಇರುವ ಅಪವಾದ, ತಾಲೂಕಿನ ಕನ್ನಡಿಗರಲ್ಲಿ ಎರಡು ಮೂರು ವಿರೋಧಿ ಗುಂಪುಗಳು ಸೃಷ್ಟಿಯಾಗಿ ಪರಸ್ವರ ಕೆಸರು ಎರಚಾಡುತ್ತಾ ಸಾರ್ವಜನಿಕವಾಗಿ ಮನರಂಜನಾ ವೇದಿಕೆ ಆಗುವುದು. ಭಾಷೆ ಮತ್ತು ಸಾಹಿತ್ಯದ ಲಾಭ ಮಾತ್ರ ತಾಲೂಕಿಗೆ ಶೂನ್ಯ.

ಜಿಲ್ಲಾ ಸಾಹಿತ್ಯ ಸಮ್ಮೇಳನಗಳು : ಇವು ಪ್ರತಿ ಜಿಲ್ಲೆಯಲ್ಲಿ ವರ್ಷಕ್ಕೊಮ್ಮೆ ನಡೆಯುತ್ತವೆ. ಪ್ರತಿ ಜಿಲ್ಲಾ ಸಮ್ಮೇಳನಗಳಿಗೆ ಐದು ಲಕ್ಷ ರೂಪಾಯಿಗಳನ್ನು ಅನುದಾನ ಎಂದು ಕೊಡಲಾಗುತ್ತದೆ. ಇದರ ಹೊರತಾಗಿ ಜಿಲ್ಲಾ ಕಸಾಪದವರು ತಮ್ಮ ಶಕ್ತಿ ಮೀರಿ ಸಮ್ಮೇಳನದ ಹೆಸರಲ್ಲಿ ಹಣ ಸಂಗ್ರಹಿಸುತ್ತಾರೆ. ಇದರ ಲೆಕ್ಕ ಸಿಗುವುದು ಅಪರೂಪ. ಹತ್ತು ಲಕ್ಷಕ್ಕೂ ಕಡಿಮೆಯಿಲ್ಲದ ಬಜೆಟ್ಟಿನಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನಗಳು ನಡೆಯುತ್ತವೆ ಎಂದು ಕೆಲವರು ಹೇಳುತ್ತಾರೆ. ಇಲ್ಲೂ ಅದೇ ಮೆರವಣಿಗೆ, ಅದ್ದೂರಿ ವೇದಿಕೆ, ಸುಗ್ರಾಸ ಭೋಜನ- ತಿಂಡಿ, ಸ್ಮರಣಿಕೆ, ಟಿವಿ, ಮನರಂಜನೆ, ಗೌರವ ಸಂಭಾವನೆ, ಟೆಂಟು- ಖರ್ಚಿಗೇ ಸಮ್ಮೇಳನ ಬಜೆಟ್ಟು ಮುಗಿದುಹೋಗುತ್ತದೆ. ರಾಜ್ಯದ ಎಲ್ಲಾ ಜಿಲ್ಲಾ ಸಮ್ಮೇಳನಗಳ ಖರ್ಚನ್ನು ಒಟ್ಟು ಲೆಕ್ಕ ಹಾಕಿದರೆ ಮೂರು ಕೋಟಿಗೂ ಅಧಿಕ ಹಣ ಇಲ್ಲಿ ವಿನಿಯೋಗವಾಗುತ್ತದೆ.ಈ ಮೂರು ಕೋಟಿ ಹಣ ಸಾಹಿತ್ಯದ ಹೊರತಾಗಿ ಇತರ ಕೆಲಸಗಳಿಗೆ ಖರ್ಚಾಗುತ್ತದೆ. ಪುಸ್ತಕ ಪ್ರಕಟಣೆ , ಸಗಟು ಖರೀದಿ ಇತ್ಯಾದಿಗಳೆಲ್ಲಾ ಇಲ್ಲಿ ನಡೆಯುವುದಿಲ್ಲ. ಬಹುಪಾಲು ಹಣ ಸಾಹಿತ್ಯೇತರ ಕಾರ್ಯಕ್ರಮಗಳಿಗೇ ಹೋಗುತ್ತದೆ. ಹೆಸರು ಮಾತ್ರ ಸಾಹಿತ್ಯದ್ದು. ಸಾಹಿತಿ ಮತ್ತು ಸಾಹಿತ್ಯ ಇಲ್ಲಿ ಬಡಪಾಯಿಗಳು.

ಹೀಗೆ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಜಿಲ್ಲಾ ಕನ್ನಡ ಸಮ್ಮೇಳನಗಳಿಗಾಗಿ ಅಂದಾಜು ಒಂಭತ್ತು ಕೋಟಿ ಹಣ ರಾಜ್ಯದಲ್ಲಿ ಖರ್ಚಾಗುತ್ತದೆ. ಇನ್ನು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರತಿ ವರ್ಷ ಎಷ್ಟು ಖರ್ಚಾಗುತ್ತದೆ ಎಂದು ಕೇಳಬೇಡಿ. ಅದೆಲ್ಲ ಕೋಟಿಗಳ ಲೆಕ್ಕದಲ್ಲಿರುತ್ತದೆ. ಹೀಗೆ ಸಾಹಿತ್ಯ ಸಮ್ಮೇಳನಗಳೆಂಬ ಜಾತ್ರೆಗಳಿಗೆ ವರ್ಷಕ್ಕೆ ಇಪ್ಪತ್ತರಿಂದ ಮೂವತ್ತು ಕೋಟಿ ಖರ್ಚು ಮಾಡುವ ರಾಜ್ಯ ನಮ್ಮದು.

ಆದರೆ ಇದರ ಲಾಭ ಯಾರಿಗೆ?ಸಮ್ಮೇಳನಗಳಿಂದ ಕನ್ನಡ ಪುಸ್ತಕಗಳು ಓದುಗರನ್ನು ಸೃಷ್ಟಿಸಲು ಸಾಧ್ಯವೇ? ಮೌಲಿಕ ಸಾಹಿತ್ಯ ಸೃಷ್ಟಿಯಾಗಲು ಸಮ್ಮೇಳನಗಳು ಕಾರಣಗಳಾಗುತ್ತವೆಯೇ? ಯುವ ಸಾಹಿತಿಗಳಿಗೆ ಪ್ರೋತ್ಸಾಹ ನೀಡುವ ಯೋಜನೆಗಳು ರೂಪಗೊಳ್ಳುತ್ತವೆಯೇ? ಓದುಗರನ್ನು ಸೃಷ್ಟಿಸಲು ನಿರ್ದಿಷ್ಟ ರೂಪ – ರೇಷೆಗಳಿಲ್ಲ. ಪ್ರಾಥಮಿಕ ಶಾಲಾ ಶಿಕ್ಷಣದಲ್ಲಿ ಕನ್ನಡವೇ ರಾಜ ಭಾಷೆ ಎಂಬ ನಿಯಮಕ್ಕೆ ಹೋರಾಟಗಳಿಲ್ಲ. ಪುಸ್ತಕ ಖರೀದಿ ನಿಯಮ ಕಡ್ಡಾಯಗೊಳಿಸಲು ಯಾರಿಗೂ ಆಸಕ್ತಿಯಿಲ್ಲ. ಆದರೆ ಎರಡು- ಮೂರು ದಿನಗಳ ಸಮ್ಮೇಳನಕ್ಕೆ ಕೋಟಿ, ಕೋಟಿ ಹಣ. ಎಲ್ಲರ ಆಸಕ್ತಿ ಅದರತ್ತ. ಯಾಕಂದರೆ ಇವು ಕನ್ನಡ ಜಾತ್ರೆಗಳು. ಇವುಗಳಲ್ಲಿ ಸಾಹಿತ್ಯ ಹುಡುಕುವ ಕೆಲಸ ಯಾರಿಗೆ ಬೇಕು? ಎಲ್ಲ ದೀಪಾವಳಿ ಪಟಾಕಿಯಂತೆ. ಅದರ ಹೂಗೆ ಮಾತ್ರ ಕನ್ನಡಿಗರಿಗೆ. ಮಾತಾಡಲು ಇನ್ನೂ ಇದೆ. ಮತ್ತೆ ಭೇಟಿಯಾಗುತ್ತೇನೆ. ಇದರ ಬಗ್ಗೆ ನೀವು ಏನನ್ನುತ್ತೀರಿ?

– ಶ್ರೀವಲ್ಲಿ

  • ಕನ್ನಡ ವಿಶ್ವಮಾನ್ಯವಾಗಲು ಈ ಬಜೆಟ್ಟು, ಈ ದುಂದು ಸಮ್ಮೇಳನಗಳಿಂದ ಸಾಧ್ಯವಿಲ್ಲ. ಶ್ರೀವಲ್ಲಿಯವರು ಬರೆದ ಈ ಲೇಖನದ ಆಶಯ ಸಾಹಿತ್ಯದ ಓದು, ರಚನೆ, ವಿಸ್ತಾರ ರಚನಾತ್ಮಕವಾಗಿ ಬೆಳೆಯಬೇಕು ಎಂಬುದಾಗಿದೆ. ಲೇಖಕನ ಪುಸ್ತಕಗಳು ಮಾರಾಟವಾಗಬೇಕು. ಹೊಸ ತಲೆಮಾರಿನ ಮಂದಿ ಬರವಣಿಗೆಯಲ್ಲಿ ಆತ್ಮ ವಿಶ್ವಾಸ ಮೂಡಿಸಿಕೊಳ್ಳಬೇಕು. ಓದುಗರು ಮತ್ತು ಬರಹಗಾರರ ಮಧ್ಯೆ ನೇರ ಸಂವಾದ -ಸಂಪರ್ಕ ಏರ್ಪಡಬೇಕು ಎಂಬುದಾಗಿದೆ.

ನಿಮಗನಿಸಿದ್ದನ್ನು ನೀವೂ ಬರೆಯಿರಿ.

cropped-30411-bf2fb3_598d7b8de0f44f1280cea3ca2b5e61demv2.jpg

ಲೇಖನ – ಹೂಲಿ ಶೇಖರ್

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW