‘ಸಾಹಿತ್ಯ ಸೂರ್ಯ’ ಕವನ

ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆ, ಚುಟುಕು ಬ್ರಹ್ಮ ಡಾ. ದಿನಕರ ದೇಸಾಯಿಯವರ ಜನ್ಮ ಜಯಂತಿಯ ಶುಭಾಶಯಗಳೊಂದಿಗೆ ದಿಗ್ಗಜ ಸಾಹಿತಿಗೊಂದು ಕಾವ್ಯ ನಮನ…

ಉತ್ತರ ಕನ್ನಡವೆಂದರೆ ದಿನಕರ /
ಮೂಡಿದ ಸಾಹಿತ್ಯ ಸೂರ್ಯ /
ಚುಟುಕುಗಳನು ರಚಿಸಿದ ಕವಿವರ  /
ಮಾಡುತ ಸಾಮಾಜಿಕ ಕಾರ್ಯ //

ಶಿಕ್ಷಣ ಕ್ಷೇತ್ರದಿ ಧುಮುಕಿದ ವೀರ /
ಸಂಸ್ಥೆಗಳ ಕಟ್ಟಿದ ನೋಡಿ /
ತೆರೆದು ಬಡಮಕ್ಕಳಿಗೆ ಜ್ಞಾನದ ದ್ವಾರ /
ಉನ್ನತಿಯೆಡೆ ಕೈಮಾಡಿ //

ಬದುಕಿನ ಕಟುಸತ್ಯವ ತೆರೆದಿಡುತ /
ಬರಹದಿ ಅರಿವು ಮೂಡಿಸಿದ /
ಮತ ಭಿನ್ನತೆ ತೋರದ ಜನಮಿಡಿತ /
ಕುಂದು ಕೊರತೆಗಳ ನೀಗಿಸಿದ //

ಚುಟುಕು ಬ್ರಹ್ಮನ ಬರಹಗಳೆಲ್ಲ /
ಅಮೂಲ್ಯ ಮುತ್ತಿನ ಕಣಜ /
ಗುಟುಕು ನೀಡುವ ಮಾತುಗಳೆಲ್ಲ /
ಅಳವಡಿಸಿಕೊಳೊ ಮನುಜ //


  •  ದೀಪಾಲಿ ಸಾಮಂತ, ದಾಂಡೇಲಿ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading