ಚಪಲಕ್ಕಾಗಿ ಮಾತನಾಡದೆ ಎಲ್ಲರ ಹಿತಕ್ಕಾಗಿ ಮಾತನಾಡಬೇಕು. ಅಂದರೆ ಕ್ರಿಯೆಯು ಯಾರಿಗೂ ಕೆಟ್ಟದ್ದನ್ನ ಮಾಡುವುದಿಲ್ಲ. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿದರೆ ನಮ್ಮ ಎಲ್ಲ ಇಂದ್ರಿಯಗಳು ಶುದ್ಧವಾಗುವವು ಪಕ್ಷ ಪಾತವಿಲ್ಲದ ಅನಂತವಾದ ನಾಮಗಳು ಜ್ಞಾನ ನೀಡಲೆಂದು ಅನುಸಂಧಾನ ಇರಬೇಕು. ಲೇಖಕರಾದ ಸಂಧ್ಯಾ ಟಿ ಅವರು ಹರಿ ಕಥಾಮೃತಸಾರ ಮಹತ್ವವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
“ನಾಹಂ ಕರ್ತಾ ಹರಿ: ಕರ್ತಾ”
ಶ್ರೀ ಗುರುಭ್ಯೋ ನಮಃ ಶ್ರೀ ಹರಿ ಓಂ
ಹಿಂದಿನ ಸಂಚಿಕೆಯಲ್ಲಿ ಪ್ರತಿಮೆಗಳಲ್ಲಿ ಪರಮಾತ್ಮನ ೫೧೩ರೂಪಗಳಿವೆ ಎಂದು ತಿಳಿಸಿದೆ. ವಿಚಾರಿಸಿ ನೋಡಿದರೆ ಮಾನವನ ಜೀವನವು ನಡೆಯುವದೆ ಅಕ್ಷರ ಮತ್ತು ಸಂಖ್ಯೆಗಳ ಮೇಲೆ ಅಲ್ವಾ? ಅಕ್ಷರಗಳಲ್ಲಿ ಸ್ವರ, ವ್ಯಂಜನ, ಅವರ್ಗೀಯ ವ್ಯಂಜನ ಇವೆಲ್ಲವು ಅಪೌರುಷೇಯ ಎಂಬುದಂತೂ ಅಕ್ಷರಶಃ ನಿಜ ತಾನೇ? ಮಾತನಾಡುವಾಗ, ಕೀರ್ತನೆ ಹಾಡು ಹೇಳುವಾಗ ಸ್ವರ ಅಕ್ಷರಗಳಲ್ಲಿಯೆ ಅವರ ವ್ಯಕ್ತಿತ್ವ ಮೂಡುತ್ತದೆ. ವ್ಯಂಜನ ನಾಲಿಗೆಗೆ ರುಚಿ ಕೊಡುವ ಸಂಕೇತ. ಕಾರಣ ಚಪಲಕ್ಕಾಗಿ ಮಾತನಾಡದೆ ಎಲ್ಲರ ಹಿತಕ್ಕಾಗಿ ಮಾತನಾಡಬೇಕು. ಅಂದರೆ ಕ್ರಿಯೆಯು ಯಾರಿಗೂ ಕೆಟ್ಟದ್ದನ್ನ ಮಾಡುವುದಿಲ್ಲ. ಸಂಖ್ಯೆಗಳು ಲಾಭ ನಷ್ಟಗಳಿಗೆ ವಯಸ್ಸು, ಮುಂತಾದವುಗಳಿಗೆ ಬೇಕು. ಇದರಲ್ಲಿ ಮುಖ್ಯವಾಗಿ ನಾವು ಗ್ರಹಿಸಬೇಕಾಗಿರುವದು ಸಂಖ್ಯೆಗಳ ಮುಂದೆ ಸೊನ್ನೆ ಬಂದರೆ ಪೂರ್ಣ ಎಂದು ತಿಳಿಯುವರು. ಅದಕ್ಕೆ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿದರೆ ನಮ್ಮ ಎಲ್ಲ ಇಂದ್ರಿಯಗಳು ಶುದ್ಧವಾಗುವವು ಪಕ್ಷ ಪಾತವಿಲ್ಲದ ಅನಂತವಾದ ನಾಮಗಳು ಜ್ಞಾನ ನೀಡಲೆಂದು ಅನುಸಂಧಾನ ಇರಬೇಕು. ಪ್ರತಿಮೆಯಲ್ಲಿಯ ಸಂಖ್ಯೆಗಳನ್ನು ತಿಳಿಯಬೇಕಾದರೆ.ವ್ಯಂಜನದಲ್ಲಿ ಐದು ಅಕ್ಷರಗಳ ಒಂದು ಗುಂಪು ಇರುವುದು.ಪ ಅಕ್ಷರವು ಗುಂಪಿನಲ್ಲಿ ಮೊದಲನೆ ಅಕ್ಷರವಾಗಿದೆ.ಅದರ ಒತ್ತುರ ಇರುವುದು.
ಪ+ರ=೧+೨=೩
ತ=೧ .ಮೆ=೫ =೩೧೫.
ಇದನ್ನು ತಿರುಗ ಮಾಡಿ ಬರೆದು ಓದಿದರೆ ಪ್ರತಿಮೆ ಸಿದ್ಧವಾಗಬೇಕಾದರೆ ಎಷ್ಟು ಸದ್ಗುಣಗಳ ಸಹಾಯ ಇರುವುದೋ ಎಲ್ಲವನ್ನು ಸ್ಮರಿಸಿದಂತೆ ಆಗುವುದು.ಅದಕ್ಕೆ ೫೧೩ ಪರಮಾತ್ಮನ ರೂಪಗಳೆಂದು ತಿಳಿಯಬೇಕು.ಹೀಗೆ ಪೂಜಾ ಸಾಮಗ್ರಿಗಳಾದ ಪಾತ್ರೆ, ಪುಷ್ಪ,ಹಾಲು ಮೊದಲಾದವುಗಳಲ್ಲಿ ಜ್ಞಾನಿಗಳು ತಿಳಿಯುವರು.
ಸೃಷ್ಟಿಯಲ್ಲಿ ವಾಯು ದೇವರ ಪಾತ್ರ ದೊಡ್ಡದು. ವಾಯು ದೇವರು ದಾಸ ಭಕ್ತಿ ಯಲ್ಲಿ ತುಂಬಾ ಶ್ರೇಷ್ಠವಾಗಿದ್ದಾರೆ.ಅವರಿಲ್ಲದಿದ್ದರೆ ಸೂರ್ಯನು ಸಹ ಸಂಚಾರ ಮಾಡುವುದಿಲ್ಲ.ಬ್ರಹ್ಮ ವಾಯು ಮುಕ್ತಿ ಯೋಗ್ಯರು . ಯಾವಾಗಲೂ ಹರಿಯ ಆದೇಶದಂತೆ ನಡೆಯುವರು.ಎಲ್ಲ ದೇವತೆಗಳಿಗಿಂತ ಜ್ಞಾನ ವಾಯುದೇವರಲ್ಲಿ ಹೆಚ್ಚು ಇರುವುದು.ಎಲ್ಲ ತತ್ವಾಭಿಮಾನಿಗಳಿಗೆ ಗುರು ಎನಿಸಿರುವರು.
ಪ್ರತಿ ಜೀವ ಜಡಗಳಲ್ಲಿ ವಾಯು, ಲಕ್ಷ್ಮೀ ನಾರಾಯಣ ಮೂವರು ತುಂಬಿದ್ದಾರೆ.ಇದನ್ನು ಅರ್ಥ ಮಾಡಿಕೊಂಡು ನಮ್ಮ ಜೀವನ ಮಂಗಲಮಯವಾಗಿ ಸಾರ್ಥಕವಾಗಬೇಕಾದರೆ ಶಿವನನ್ನು ಮನಸ್ಸಿನಲ್ಲಿ ಭಕ್ತಿಯಿಂದ ಸ್ಥಾಪಿಸಿ ಕೊಳ್ಳಬೇಕು. ಮನಸ್ಸು ಜೀವಿಗಳಿಗೆ ಮಿತ್ರನು ಹೌದು.ಶತ್ರುನು ಹೌದು.ಶಿವನನ್ನು ಯಾವ ರೀತಿಯಿಂದ ಉಪಾಸನೆ ಮಾಡುವೆವೊ ಅದೇ ರೀತಿ ಫಲ ಸಿಗುವುದು. ಇದರಿಂದ ಶಿವನಿಗೆ ಯಾವ ಲಾಭ ನಷ್ಟಗಳು ಇಲ್ಲಿ. ಸಖ್ಯದಿಂದ ಭಜಿಸಿದರೆ ಎಲ್ಲವೂ ಶಿವಮಯ. ಶ್ರೀಹರಿಯು ತೃಪ್ತಿಗೊಳ್ಳುವನು.ಇದೆಲ್ಲದಕ್ಕು ವಾಯು ದೇವರು ಮುಖ್ಯವಾಗಿರುವರು.

ನಾವು ಮಾಡಿದ ಕರ್ಮಗಳನ್ನು ವಾಯುದೇವರ ಮುಖಾಂತರ ಶ್ರೀ ಹರಿಗೆ ಸಮರ್ಪಿಸಬೇಕು.ವಾಯುದೇವರು ಮೊದಲನೆ ರೂಪದಿಂದ ದೇವತೆಗಳು, ಋಷಿಗಳು, ಪಿತೃಗಳು, ಚಕ್ರವರ್ತಿಗಳು ಮತ್ತು ಮನುಷೋತ್ತಮರು ಎಂಬ ಐದು ವಿಧ ಮುಕ್ತಿ ಯೋಗ್ಯರಲ್ಲಿ ನೆಲೆಸಿ ಅವರವರ ಸ್ವಭಾವಕ್ಕನುಗುಣವಾಗಿ ಕರ್ಮಗಳನ್ನು ಪರಮಾತ್ಮನ ಆಜ್ಞೆಯೆಂದು ತಾವು ಮಾಡಿ ಮಾಡಿಸುವರು.ಎರಡನೆಯದಾಗಿ ಕೂರ್ಮರೂಪದಿಂದ ಶೇಷ ದೇವರನ್ನು ಬ್ರಹ್ಮಾಂಡವನ್ನು ಧರಿಸಿ ಲೋಕಗಳನ್ನು ಪಾಲಿಸುವರು.
ಈ ಮೂವರನ್ನು ಶ್ರೀ ಹರಿಯು ಧರಿಸಿ ಪಾಲಿಸುವನೆಂದು ಜಗತ್ತಿಗೆ ತಿಳಿಸಿರುವರು. ವಾಯುದೇವರ ಮೂರನೆ ರೂಪವೆಂದರೆ ಹದಿನಾಲ್ಕು ಲೋಕದ ಜೀವಿಗಳಲ್ಲಿ ಗುಪ್ತವಾಗಿ ನೆಲೆಸಿ ದಿನಕ್ಕೆ ಇಪ್ಪತ್ತೊಂದು ಸಾವಿರದ ಆರುನೂರು ಶ್ವಾಸ ರೂಪವಾದ “ಹಂಸ” ಮಂತ್ರಜಪವನ್ನು ಮಾಡಿಸುವರು. ಈ ಜಪವನ್ನು ಸುಷುಪ್ತಿ,ಸ್ವಪ್ನ ಜಾಗ್ರತಾವಸ್ಥೆಯಲ್ಲೂ ಬಿಡದೆ ನಿರಂತರ ಮಾಡಿಸುವರು. ಅಲ್ಲದೆ ಸಾತ್ವಿಕ, ರಾಜಸ ತಾಮಸ ಈ ತ್ರಿವಿಧ ಜನರಲ್ಲಿ ಪಕ್ಷಪಾತವಿಲ್ಲದೆ ಮಾಡಿಸುವರು. ಋಜುಗಣಕ್ಕೆ ಸೇರಿದ ಜೀವರ ಸಂಖ್ಯೆಯು ಅನಂತ.
ವಾಯು ದೇವರು ನೂರು ಕಲ್ಪ ಸಾಧನವನ್ನು ಮಾಡಿದ ಮೇಲೆ ಅವರಿಗೆ ಕಲ್ಕಿ ಎನಿಸುವರು. ಪರಮಾತ್ಮನು ಸ್ವ ಇಚ್ಛೆಯಿಂದ ಕಲಿಯನ್ನು ನಾಶಮಾಡಿದರೆ ಪರಮಾತ್ಮನ ಆಜ್ಞೆಯೆಂದು ಕಲಿಯನ್ನು ನಾಶಮಾಡಿ ಸಜ್ಜನರಿಗೆ ಸುಖವನ್ನು ಕೊಡುವರು.ನಂತರ ತೊಂಭತ್ತೆಂಟು ಕಲ್ಪಗಳ ಸಾಧನೆಯ ಕೊನೆಯಲ್ಲಿ ವಾಯು ದೇವರು ಹನುಮಂತ, ಭೀಮಸೇನ, ಆನಂದತೀರ್ಥರು ಎಂಬ ಮೂರು ರೂಪಗಳಿಂದ ಅವತರಿಸಿ ಶ್ರೀ ಹರಿಗೆ ಪ್ರಥಮ ಅಂಗರು ಎನಿಸಿರುವರು.ಅಲ್ಲದೇ ಶ್ರೀ ಹರಿಯಂತೆ ಶುಚಿ, ಶುಚಿಷತ್ ಮತ್ತು ಹೋತಾ ಎಂಬ ನಾಮಗಳನ್ನು ಹೊಂದಿರುವರು.ಸಕಲರಿಗೂ ತತ್ವಗಳ ಮೂಲಕ ಪ್ರೇರಣೆ ಮಾಡಿ ತತ್ವಾಭಿಮಾನಿಯಾಗಿ ಪ್ರೇರಕ ಎನಿಸಿದ್ದಾರೆ.ಮತ್ತು ಶ್ರೀ ಹರಿಯು ತಮಗೆ ಪ್ರೇರಕನೆಂದು ನಂಬಿದ್ದಾರೆ.
ಬ್ರಹ್ಮ ಸರಸ್ವತಿ ಭಾರತೀಯರಿಂದೊಡಗೂಡಿ ಶಾಶ್ವತವಾದ ಸುಜ್ಞಾನ ಸ್ವರೂಪನಾದ ಶ್ರೀ ಹರಿಯ ರೂಪ ಗುಣಗಳಿಗೆ ಎಂದೂ ನಾಶವಿಲ್ಲವೆಂದು ಶ್ರುತಿ ಶಾಸ್ತ್ರಿಗಳೊಳಗೆ ಇದ್ದು ನಿರಂತರ ಧ್ಯಾನಿಸುತ್ತ ಕೊಂಡಾಡುವರು.ಆದುದರಿಂದ ಶ್ರೀ ಹರಿಗೆ ಸಾಕ್ಷಾತ್ ಪ್ರತಿಬಿಂಬ ಎನಿಸುವರು.ಹನುಮನ ನಾಮದಿಂದ ಅವತರಿಸಿದಾಗ ಚಿಕ್ಕ ಮಗುವಿದ್ದಾಗಲೆ ಸೂರ್ಯನ ಅಂತರ್ಗತನಾದ ನಾರಾಯಣನಿಂದ ಪೂರ್ಣ ಅನುಗ್ರಹ ಪಡೆದು ವೇದಶಾಸ್ತ್ರ ಪಾರಾಂಗತನಾಗಿ ವಜ್ರದೇಹಿ ಎನಿಸಿಕೊಂಡು “ಅನುಮಂತ”ಎಂದು ಕರೆಯಿಸಿಕೊಂಡನು.ಭಗವದ್ಗೀತೆಯ ಹದಿಮೂರನೆ ಅಧ್ಯಾಯದಲ್ಲಿ ಬಂದಿದೆ.
ಸುಜೀವಿಗಳಿಗೆ ರಕ್ಷಿಸುತ್ತ ಪರಮಾತ್ಮನ ಜ್ಞಾನ ನೀಡುವನು.ದುರ್ಮತಿಗಳಿಗೆ ಅಜ್ಞಾನ ನೀಡಿ ಸುಖದ ಭ್ರಮೆಯಲ್ಲಿ ಬೀಳಿಸುವನು.ಭೀಮಾವತಾರದಲ್ಲಿ ಅಧರ್ಮವನ್ನು ಖಂಡಿಸುತ್ತ ಕೃಷ್ಣನ ಆಜ್ಞೆಯಂತೆ ಕಲಿಯ ಆವೇಶದ ದುರ್ಯೋಧನನ್ನು ಸಂಹರಿಸಿದನು.ಮಣಿಮಂತ ಮೊದಲಾದ ಅನೇಕ ದೈತ್ಯರನ್ನು ಸಂಹಾರ ಮಾಡಿ ಧರ್ಮ ಸ್ಥಾಪನೆಗೆ ಸಹಾಯವಾದನು.ಭೀಮನು ಕೊಂದ ಮಣಿಮಂತ ಮೊದಲಾದ ದೈತ್ಯರು ಶಂಕರ ಮೊದಲಾದ ನಾಮದಿಂದ ಭೂಮಿಯಲ್ಲಿ ಜನಿಸಿ ಇಪ್ಪತ್ತೊಂದು ಕುಭಾಷ್ಯಗಳ ರಚಿಸಿ ಅಧರ್ಮವನ್ನು ಪ್ರಚಾರ ಮಾಡುತ್ತ ಸಜ್ಜನರಿಗೆ ತೊಂದರೆ ಕೊಡುತ್ತಿದ್ದರು.ಆ ಸಮಯದಲ್ಲಿ ವಾಯುದೇವರು ವಾಸುದೇವ ಎಂಬ ನಾಮದಿಂದ ಭೂಮಿಯಲ್ಲಿ ಅವತರಿಸಿ ಕುಭಾಷ್ಯಗಳನ್ನು ಸಾಕ್ಷಿ ಸಮೇತ ಖಂಡಿಸಿ ಅವರಿಗೆ ಸೋಲನ್ನುಂಟು ಮಾಡಿದರು.ನಂತರ ಸತ್ಯವಾದ ನಿರ್ಮಲವಾದ ಶಾಸ್ತ್ರ ತತ್ವಗಳನ್ನು ಸರಳವಾದ ರೀತಿಯಲ್ಲಿ ರಚಿಸಿ ಜೀವೋತ್ತಮ ತತ್ವವನ್ನು ಸಜ್ಜನರಿಗೆ ತಿಳಿಸಿ ಆನಂದ ಮಾರ್ಗವನ್ನು ತೋರಿಸಿ ಪ್ರಥಮ ಗುರುಗಳು ಎನಿಸಿದರು.ಬದರಿಯಲ್ಲಿ ಇರುವರೆಂದು ಪ್ರತೀತಿ.ವಾಯುಸಂಭೂತರು ಯಾರಿಗೂ ಯಾವ ಸಮಯದಲ್ಲಿ ಸಹಾಯ ಮಾಡುವರು.ಬದರಿ ಎಂದರೆ ಭಕ್ತಿ ರಸ ತುಂಬಿರುವ ಶುದ್ಧವಾದ ಪರಮಾತ್ಮನಿರುವ ಸ್ಥಳ.
ಯಾವುದೇ ಕಾರ್ಯವಾಗಬೇಕಾದರೆ ತಾಳ್ಮೆ ಸಹನೆ ಸಹಾಯ ಇರಬೇಕು. ಅದನ್ನು ಮಾನವರು ಮೊದಲು ತಿಳಿಯಬೇಕು.ಸಾತ್ವಿಕ ಭಾವನೆಯು ಮೊದಲನೆ ಧರ್ಮ. ಅದು ನಮ್ಮನ್ನು ಮಾನವರನ್ನಾಗಿ ಮಾಡುವುದು. ಇಲ್ಲದಿದ್ದರೆ ದೇವರು ಕೊಟ್ಟ ಸಾಧನ ಶರೀರ. ಸಹಾಯಕ್ಕೆ ಪ್ರಕೃತಿ ಅಲ್ಲದೇ ಅವನು ಕೊಟ್ಟ ದತ್ತು ಸ್ವಾತಂತ್ರ್ಯ ಎಲ್ಲವನ್ನು ಮರೆತು ಬಿಡುತ್ತೇವೆ. ಕಲಿಯ ಸಹಾಯಕರಾದ ವಿಪ್ರಚಿತ್ತಿ, ಕಾಲನೇಮಿ ನಮ್ಮಲ್ಲಿ ಸೇರಿಕೊಂಡು ಮಿಥ್ಯಾ ಜ್ಞಾನದಿಂದ ಮಾತುಗಳು, ಕ್ರಿಯೆಗಳು ಪ್ರಾರಂಭವಾಗಿ ನಮ್ಮನ್ನೂ ಪರಿಸರವನ್ನೂ ಹಾಳು ಮಾಡುತ್ತವೆ.
ನಮಗೆ ಕಲಿಯಲೆಂದೆ ಪ್ರಕೃತಿ ಯನ್ನು ಸೃಷ್ಟಿ ಮಾಡಿರುವನು.ಸೂರ್ಯನು ನಿತ್ಯವೂ ಅಂತರ್ಗತನಾದ ನಾರಾಯಣನನ್ನು ಚಿಂತನೆ ಮಾಡುತ್ತ ಸಮುದ್ರದ ನೀರನ್ನು ತೆಗೆದುಕೊಂಡು ವರುಣನ ಸಹಾಯದಿಂದ ಮೋಡವನ್ನು ಸೃಷ್ಟಿಸಿ ಮತ್ತೆ ಭೂಮಿಗೆ ಮಳೆ ಎಂಬ ಶಬ್ದದಿಂದ ಕಳೆಸುತ್ತಾನೆ. ಅದೇ ನೀರು ನದಿಯಲ್ಲಿಯೂ ಸಮುದ್ರ ದಲ್ಲಿ ಬೀಳುತ್ತದೆ. ಹಾಗೇ ನದಿಯ ನೀರು ಸಮುದ್ರಕ್ಕೆ ಸಾಗುವುದು. ಯಾರೂ ಇಲ್ಲಿ ನನ್ನಿಂದ ಎಂದು ಹೇಳಿಕೊಳ್ಳುವದಿಲ್ಲ. ಇದಕ್ಕೂ ವಾಯುದೇವರ ಸಹಾಯಬೇಕು. ಅದಕ್ಕೆ ವಾಯುದೇವರು ಮುಖ್ಯಪ್ರಾಣ ಎನಿಸಿದ್ದಾರೆ.
ಶ್ರೀ ಪುರಂದರ ದಾಸರು ತಮ್ಮ ಕೃತಿಯಲ್ಲಿ (ಹರಿ ಮಾಡೋ ವ್ಯಾಪಾರ ಬಲ್ಲ ಕಾರಣ ನಮ್ಮ ಪುರಂದರ ವಿಠಲನ ಚರಣಕ್ಕೆರಗಿ ನಿಂತು ಕರವ ಮುಗಿದಾ ಮುಖ್ಯಪ್ರಾಣ ಕರವ ಮುಗಿದ. ಎಲ್ಲ ಶಕ್ತಿ ಇದ್ದರೂ ಪರಮಾತ್ಮನ ಆಜ್ಞೆಗಾಗಿ ಕಾಯುವನು.ಹೀಗೆ ಎಲ್ಲವೂ ತಿಳಿದರೂ ನಾನು ಎನ್ನುವ ಅಜ್ಞಾನವೇ ಜೀವನವನ್ನು ಕೆಡಿಸುವುದು.ಸುಜ್ಞಾನ ಸ್ವರೂಪನಾದ ಶ್ರೀ ಹರಿ ವಾಯು ಗುರುಗಳ ಅನುಗ್ರಹ ಸದಾ ಎಲ್ಲರಿಗೂ ಸಿಗಲೆಂದು ಪ್ರಾರ್ಥಿಸಿ ನಮಿಸಿ ಈ ಸಂಚಿಕೆಯನ್ನು ಮುಗಿಸುತ್ತೇನೆ.
ಶ್ರೀ ಭಾರತೀ ರಮಣ ಮುಖ್ಯಪ್ರಾಣಾಂರ್ಗತ ಶ್ರೀ ಲಕ್ಷ್ಮೀ ಪ್ರೀತ್ಯರ್ಥಮ್ ಶ್ರೀ ಕೃಷ್ಣಾರ್ಪಣ ಮಸ್ತು.
ಹನುಮಂತ ಬಲವಂತ ಜಯವಂತ
ಆನಂದ ಮಾರ್ಗವ ತೋರುವ ಶ್ರೀಮಂತ
ದನುಜ ಕುಲವ ಘಾತಮಾಡಿ ಸವರಿದಾತ
ಮನುಜ ಕುಲಕೆ ದಾಸ ಭಕ್ತಿಯ ತೋರಿದಾತ
ಪರಮತ್ವವ ತಿಳುಹಿದ ಹನುಮಂತ
ರಾಮನಾಮವ ಬಲವ ತೋರಿದ ದೂತ
ದುರುಳ ದುರ್ಯೋಧನನ ಭಯ ಪಡಿಸಿದಾತ
ಮರುಳ ಕೀಚಕನ ಸಂಹರಿಸಿದಾತ
ತಿರುಳಿಲ್ಲದ ಶಕುನಿಯ ಪೀಡಿಸಿದಾತ
ವಾಯ್ವಾಂತರ್ಗತ ಕೃಷ್ಣನ ಒಲಿಸಿಕೊಂಡಾತ
ಇಪ್ಪತ್ತೊಂದು ಕುಭಾಷ್ಯಗಳ ಖಂಡಿಸಿದಾತ
ಅದ್ಭುತ ಶಾಸ್ತ್ರಾಮೃತವ ಉಣಿಸಿದಾತ
ಮಾತರಿಶ್ವಾಂರ್ಗತ ಶ್ರೀ ಹರಿಯ ಮತ
ಅಂತರಂಗದಿ ಇತ್ತು ಬದರಿಯಲಿ ನಿಂತ
ಹನುಮಂತ ಬಲವಂತ ಜಯವಂತ
ಶ್ರೀ ಕೃಷ್ಣಾರ್ಪಣ ಮಸ್ತು
ಹರಿ ಕಥಾಮೃತಸಾರ ಹಿಂದಿನ ಸಂಚಿಕೆಗಳು:
- ಹರಿ ಕಥಾಮೃತಸಾರ (ಭಾಗ – ೧)
- ಹರಿ ಕಥಾಮೃತಸಾರ (ಭಾಗ – ೨)
- ಹರಿ ಕಥಾಮೃತಸಾರ (ಭಾಗ – ೩)
- ಹರಿ ಕಥಾಮೃತಸಾರ (ಭಾಗ – ೪)
- ಹರಿ ಕಥಾಮೃತಸಾರ (ಭಾಗ – ೫)
- ಹರಿ ಕಥಾಮೃತಸಾರ (ಭಾಗ – ೬)
- ಹರಿ ಕಥಾಮೃತಸಾರ (ಭಾಗ – ೭)
- ಹರಿ ಕಥಾಮೃತಸಾರ (ಭಾಗ – ೮)
- ಹರಿ ಕಥಾಮೃತಸಾರ (ಭಾಗ – ೯)
- ಸಂಧ್ಯಾ ಟಿ – ಲೇಖಕರು, ಕವಿಗಳು, ಬೆಂಗಳೂರು.
