‘ಸಕ್ಕರೆ’ ಸಿನಿಮಾ ಕನಸು ಅಭಯ ಸಿಂಹನದ್ದು

ನಟ ಗಣೇಶ ಅಭಿನಯದ ಸಕ್ಕರೆ ಸಿನಿಮಾದ ನಿರ್ದೇಶಕ, ಮಂಗಳೂರಿನ ಯುವ ಚಿಲುಮೆ ಅಭಯ ಸಿಂಹ ಅವರ ಕುರಿತು ಲೇಖಕ ಅಶೋಕ ವರ್ಧನ ಅವರು ಬರೆದ ಒಂದು ಲೇಖನ, ತಪ್ಪದೆ ಓದಿ…

ಚೌತಿ ಮುಗಿಯುತ್ತಿದ್ದಂತೆ ಗದ್ದಲ ಮಾಡಿ ‘ಗಣೇಶನನ್ನು ನೀರಿಗೆ ಬಿಟ್ಟರೂ ಮರೆಯಲಾಗದ ‘ಗಣೇಶ ಇಲ್ಲಿದ್ದ!. ಮಂಗಳಾರತಿ ತೆಗೆದ ಮೇಲೆ ದೀಪಸಾನ್ನಿಧ್ಯ ದೂರಾದರೂ ‘ದೀಪಾ ಸನ್ನಿಧಿ ಇಲ್ಲಿದ್ದಳು!!. ಅಂದಂದಿನ ಕಜ್ಜಾಯಗಳು ಮುಗಿದರೂ ‘ಸಕ್ಕರೆ ಬೇಡಿಕೆ ಸಾರ್ವಕಾಲಿಕ, ಸಾರ್ವಜನಿಕ.

ಅಂಥಾ ‘ಸಕ್ಕರೆಯದೇ ಕನಸು ಅಭಯ ಸಿಂಹನದ್ದು!!! ಸಿನಿಮಾ, ‘ಸಕ್ಕರೆ ಬೆಳೆಯುವಲ್ಲಿ ವರ್ಷ ಮೀರಿದರೂ ಸಜ್ಜಾಗಿತ್ತು, ಮಾಗಿತ್ತು. ಆಡಿಯೋ ಬಿಡುಗಡೆ ಮುಗಿದಿತ್ತು. ಇನ್ನೇನು ಕೆಲವೇ ದಿನಗಳಲ್ಲಿ ‘ಸಕ್ಕರೆ ಸಿನಿಮಾವೇ ತೆರೆಯ ಮೇಲೆ ಜನರಂಜಿಸಲಿತ್ತು. ನಿರ್ಮಾಪಕ (ಬಿ.ಸುರೇಶ ಮತ್ತು ಶೈಲಜಾ ನಾಗ್), ವಿತರಕ, ಪ್ರಚಾರಕ, ಊರೂರಿನ (ಥಿಯೇಟರ್) ಮಾಲೀಕ ಎಲ್ಲಾ ಇದ್ದರೂ ನಿರ್ದೇಶಕನ ಮುದ್ರೆಗೆ ಅಭಯ ಸಿಂಹನೇ ಸೈ ಎಂದು ಒತ್ತಡ ಹೆಚ್ಚಿದ್ದ ದಿನಗಳು. ಆದರೆ ಕದ್ರಿ ಕ್ರಿಕೆಟರ್ಸ್ ಮಂಗಳೂರು, ಇವರಿಗೆ ತಮ್ಮ ವರ್ಷಾವಧಿ ಅಷ್ಟಮಿಯ ತಾರಾರಂಜಿತ ಮಹೋನ್ನತ ಕಾರ್ಯಕ್ರಮಕ್ಕಾಗುವಾಗ ‘ಸಕ್ಕರೆ ತುಸು ಭಿನ್ನವಾಗಿ ಆಕರ್ಷಿಸಿತು.

ಫೋಟೋ ಕೃಪೆ : google

ಅಭಯ ಸಿಂಹ ‘ಊರ್ದಾಯೆ – ನಮ್ಮ ಮಂಗಳೂರಿನವ. ತಮ್ಮ ಭರ್ಜರಿ ವೇದಿಕೆಯ ಮೇಲೆ ಅಭಯ ಸಮ್ಮಾನ ಗಟ್ಟಿ ಮಾಡಿದರು. ಬೆಂಗಳೂರಿನ ಕೆಲಸದ ಒತ್ತಡಗಳನ್ನು ಒಂದೇ ದಿನದ ಮಟ್ಟಿಗೆ, ಅಂದರೆ ಕೇವಲ ಇಪ್ಪತ್ನಾಲ್ಕು ಗಂಟೆಗಳಿಗಷ್ಟೇ ಒತ್ತಟ್ಟಿಗಿಟ್ಟು ಮರುಪಯಣದ ಟಿಕೆಟ್ ಕಿಸೆಯೊಳಗೇ ಇಟ್ಟು ಅಭಯ ಮಂಗಳೂರಿನ ರಾತ್ರಿ ಬಸ್ ಹಿಡಿದ.

ಮಂಗಳೂರಿನ ಕತೆಯೇ ಬೇರೆ. ಬೆಳಿಗ್ಗೆ ಸ್ಪಷ್ಟವಾಗುತ್ತಿದ್ದಂತೆ ಅಭಯನನ್ನು ಮಾತಾಡಿಸಿದ್ದಾತನ ಚರವಾಣಿ ಸಂಪರ್ಕ ದೂರವಾಗಿ ಹೋಯ್ತು. ಏನೇನೋ ಸಂಪರ್ಕ ಬೆಳೆದು ಸಂಜೆ ಏಳು ಗಂಟೆಗೆ ‘ಸ್ವಾಗತ ಕಚೇರಿಗೆ ಅಭಯ ಹಾಜರಾದರೂ ಕದ್ರಿಗೆ, ವೇದಿಕೆಗೆ ಏರುವುದು ತಡವಾಯ್ತು. ಸಭಾ ಕಲಾಪಗಳ ಉದ್ದಕ್ಕೆ ರಾತ್ರಿಯೆಲ್ಲ ತೆರೆದಿಟ್ಟಂತಿತ್ತು. ಆದರೆ ಅಭಯನಿಗೆ ಹಿಂದಿರುಗುವ ರಾತ್ರಿ ಬಸ್ಸಿನ ಸಮಯಮಿತಿ ಕಿಸೆಯಲ್ಲಿ ಚುಚ್ಚುತ್ತಲೇ ಇತ್ತು. ಸಂಘಟಕರು ಅತೀವ ಪ್ರೀತಿಯಲ್ಲೇ ಸಮ್ಮಾನಿಸಿದರು, ಜನಸಮ್ಮರ್ದದ ನಡುವೆ ದಾರಿಬಿಡಿಸಿ, ಕಾರೇರಿಸಿ ಬಸ್ ನಿಲ್ದಾಣಕ್ಕೇ ನೇರ ಮುಟ್ಟಿಸಿದರು. ಅವನ ಚೀಲ, ತವರುಮನೆಯ ‘ಹರಕೆಗಳನ್ನು ನಾವಿಬ್ಬರು ರಾತ್ರಿ ಬಸ್ಸಿನ ಬಾಗಿಲಿಗೇ ಒಯ್ದು ಮುಟ್ಟಿಸಿದೆವು. ಅಬ್ಬ! ಹೇಗೂ ತಲಪಿದಿಯಲ್ಲ. ಊಟ ಇಲ್ಲದಿದ್ದರೇನು ಇಕೋ ಸ್ವೀಟ್ ತಿನ್ನು, ನೀರು ಕುಡೀ. . . ಎಂದು ದೇವಕಿ ಅನ್ನುತ್ತಿರುವಂತೇ ಬಸ್ಸಿನೊಳಗಿನಿಂದ ಗಟ್ಟಿ ಧ್ವನಿಯಲ್ಲಿ…


  • ಅಶೋಕ ವರ್ಧನ (ಅತ್ರಿ ಬುಕ್ ಸೆಂಟರ್ ನಿರ್ದೇಶಕರು, ಲೇಖಕರು) 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading