ಸಾಲದು ಕಾಲ ಪ್ರಿಯೆ! ಕವನ – ಮೇಗರವಳ್ಳಿ ರಮೇಶ್

ಸಾಲದು ಕಾಲ ಪ್ರಿಯೆ, ನನ್ನೊಳಗೆ ಕುದಿವ ಭಾವಗಳನ್ನು, ಕಾವ್ಯದ ಪೇಯವಾಗಿಸಲು…ಕವಿ ಮೇಗರವಳ್ಳಿ ರಮೇಶ್ ಅವರ ಲೇಖನಿಯಲ್ಲಿ ಅರಳಿದ ಸುಂದರ ಸಾಲುಗಳನ್ನು ತಪ್ಪದೆ ಓದಿ…

ಸಾಲದು ಕಾಲ ಪ್ರಿಯೆ,
ನಿನ್ನನ್ನು ಅಖ೦ಡವಾಗಿ ಪ್ರೀತಿಸಲು
ಸಾಲದು ಕಾಲ ಪ್ರಿಯೆ
ನಿನ್ನ ಚೆಲುವನ್ನೆಲ್ಲ ನನ್ನೊಳಗೆ
ಸ೦ಪೂರ್ಣ ತು೦ಬಿ ಕೊಳ್ಳಲು.

ಸಾಲದು ಕಾಲ ಪ್ರಿಯೆ
ನನ್ನ ವೈರಿಗಳನ್ನು ಕಟುವಾಗಿ ದ್ವೇಷಿಸಲು
ಮತ್ತವರ ಕುಹಕಗಳನ್ನು ಹತ್ತಿಕ್ಕಲು.

ಸಾಲದು ಕಾಲ ಪ್ರಿಯೆ
ನನ್ನೊಳಗೆ ಕುದಿವ ಭಾವಗಳನ್ನು
ಕಾವ್ಯದ ಪೇಯವಾಗಿಸಲು
ಅಕ್ಷರಕ್ಷರಗಳಲ್ಲಿ ತು೦ಬಿ
ಸಹೃದಯರಿಗೆ ನೀಡಲು.

ಸಾಲದು ಕಾಲ ಪ್ರಿಯೆ
ನನ್ನ ಹಸಿವುಗಳನ್ನೆಲ್ಲ ಹಿ೦ಗಿಸಲು
ಸಾಲದು ಕಾಲ ಪ್ರಿಯೆ
ನಿನ್ನನ್ನು ಅಖ೦ಡವಾಗಿ ಪ್ರೀತಿಸಲು!


  • ಮೇಗರವಳ್ಳಿ ರಮೇಶ್ – ನಿವೃತ್ತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿ, ಕವಿಗಳು, ಬೆಂಗಳೂರು.

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW