ಶ್ರೀ ಎನ್ ವಿ ರಮೇಶ್ ಅವರ ಸಮಗ್ರ ಮಕ್ಕಳ ಸಾಹಿತ್ಯ

ಇವರಿಗೆ 85ಕ್ಕೂ ಹೆಚ್ಚು ವಿವಿಧ ಸಾಹಿತ್ಯ ಪ್ರಕಾರಗಳ ಪುಸ್ತಕಗಳನ್ನು ಪ್ರಕಟಿಸಿದ್ದಾರೆ ಶ್ರೀ ಎನ್ ವಿ ರಮೇಶ್ ಅವರು. ತಮ್ಮ ವೃತ್ತಿಯನ್ನು ಪ್ರೀತಿಸಿ ಅದನ್ನು ಪ್ರವೃತ್ತಿಯೊಂದಿಗೆ ಜೋಡಿಸಿ ಸಮರಸವಾಗಿರಿಸಿಕೊಂಡಿರುವುದಕ್ಕೆ ಇವರು ಅತ್ಯಂತ ಜ್ವಲಂತ ಉದಾಹರಣೆ. ಆಕಾಶವಾಣಿಯಲ್ಲಿನ ತಮ್ಮ ವೃತ್ತಿಯಲ್ಲಿನ ಅನೇಕ ಪ್ರಾಜೆಕ್ಟ್ ಗಳ ಸದುಪಯೋಗ ಮಾಡಿಕೊಂಡು ಅವುಗಳನ್ನೇ ಕನ್ನಡ ತಾಯಿಗೆ ಮಾಲೆಯನ್ನಾಗಿ ಅರ್ಪಿಸಿರುವುದುಶ್ರೀ ಎನ್ ವಿ ರಮೇಶ್ ಅವರ  ವಿಶೇಷ…

ಪುಸ್ತಕ :  ಶ್ರೀ ಎನ್ ವಿ ರಮೇಶ್ ಅವರ ಸಮಗ್ರ ಮಕ್ಕಳ ಸಾಹಿತ್ಯ
ಲೇಖಕರು : ಶ್ರೀ ಎನ್ ವಿ ರಮೇಶ್
ಮೊದಲ ಪ್ರಕಟಣೆ : 2024

ಪ್ರಸ್ತುತ ಈ ಪುಸ್ತಕ ಶ್ರೀ ರಮೇಶ ಅವರ ಮಕ್ಕಳ ಸಾಹಿತ್ಯದ ಸಮಗ್ರ ಕೃತಿ ಮಕ್ಕಳ ಸಾಹಿತ್ಯ ಎಂದರು ನಾಟಕಗಳೇ ಇವುಗಳ ಮುಖ್ಯ ಜೀವಾಳ ಒಟ್ಟು ನಾಲ್ಕು ಪುಸ್ತಕಗಳನ್ನು ಸೇರಿಸಿ ಈ ಬೃಹತ್ ಪುಸ್ತಕದ ಜನನವಾಗಿದೆ ಅವುಗಳೆಂದರೆ ಕಾಡಿನಲ್ಲಿ ಒಂದು ರಾತ್ರಿ ಬಾನುಲಿ ರಂಗ ಜಿಲೇಬಿಯ ಸಂಚಾರ ಮತ್ತು ನಾಟಕದ ಹಿಂದಿನ ನಾಟಕ ಈ ಪುಸ್ತಕಗಳು.

ಮೊದಲಿಗೆ ನಾಟಕ ಎಂದರೇನು? ನಟರು ಅಭಿನಯಿಸಬಹುದಾದ ರೀತಿಯಲ್ಲಿ ರಚಿಸಲ್ಪಡುವ ಸಾಹಿತ್ಯ ಪ್ರಕಾರ ಗದ್ಯ ಅಥವಾ ಪದ್ಯ ಎರಡನ್ನು ಒಳಗೊಂಡದ್ದು. ಇಂದಿಗೂ ತನ್ನ ಜನಪ್ರಿಯತೆ ಕಳೆದುಕೊಂಡಿರದ ಮಾಧ್ಯಮ ಪ್ರತಿ ಯುಗ ಅವಧಿಯಲ್ಲಿ ಯಾವಾಗಲೂ ಇದರ ವಿಮರ್ಶಾತ್ಮಕ ಅಧ್ಯಯನ ಕಂಡುಬರುತ್ತದೆ. ಹಂತೆಯೇ ಮಕ್ಕಳ ಸಾಹಿತ್ಯ ಮಕ್ಕಳ ಸಾಹಿತ್ಯ ಅಂದರೆ ಮಕ್ಕಳ ಮನಸ್ಸನ್ನು ಅರಳಿಸಿ ಕುತೂಹಲವನ್ನು ಕೆರಳಿಸಿ ಕಲ್ಪನೆಯನ್ನು ರೂಪಿಸಿ ಭಾವನೆಗಳನ್ನು ಪ್ರಚೋದಿಸಿ ಆನಂದದಲ್ಲಿ ಮೀಯಿಸಿ ಅವರ ವ್ಯಕ್ತಿತ್ವವನ್ನು ರೂಪಿಸುವಂತಹ ಸಾಹಿತ್ಯ ಕವಿತೆ ಕಥೆ ನಾಟಕಗಳು ಇವೆಲ್ಲ ಮಕ್ಕಳ ಸಾಹಿತ್ಯದ ಹಲವು ಪ್ರಕಾರಗಳು ಗದ್ಯ ಪದ್ಯ ಎರಡನ್ನು ಹೊಂದಿದ ನಾಟಕ ಪ್ರಕಾರ ತುಂಬಾ ಜನಪ್ರಿಯ. ಹಾವಭಾವ ದೇಶಭೂಷಣ ಚುರುಕದ ಸಂಭಾಷಣೆಗಳನ್ನು ಹೊಂದಿರುವ ನಾಟಕ ಪ್ರಕಾರ ಮಕ್ಕಳ ಮನಸ್ಸನ್ನು ಹಿಡಿದಿಟ್ಟುಕೊಳ್ಳುತ್ತದೆ ಹಾಗೂ ಪ್ರಭಾವ ಹೆಚ್ಚು.

ಆದರೆ ಒಂದು ವಿಷಾದದ ಸಂಗತಿ ಎಂದರೆ ಕನ್ನಡ ಸಾಹಿತ್ಯದಲ್ಲಿ ಮಕ್ಕಳ ಸಾಹಿತ್ಯವು ಹಾಗೂ ನಾಟಕ ರಚನೆಗಳು ಅಷ್ಟೊಂದು ಹೆಚ್ಚಿನ ಸಂಖ್ಯೆಯಲ್ಲಿಲ್ಲ ಈ ರೀತಿ ವಿರಳ ಪ್ರಕಾರಗಳ ಸಂಗಮವಾದ ಮಕ್ಕಳ ನಾಟಿ ನಾಟಕವು ನಿಜಕ್ಕೂ ಒಂದು ಅದ್ಭುತ ಸೃಜನಾತ್ಮಕ ಕಲಾ ಪ್ರಕಾರವೇ ಸರಿ ಅದನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿ ಈ ದಿಶೆಯಲ್ಲಿ ನಾಟಕಗಳನ್ನು ರಚಿಸುತ್ತಿರುವ ಎನ್ವಿರಮೇಶ ಅವರು ನಿಜಕ್ಕೂ ಅಭಿನಂದನ ಅರ್ಹರು.

ಈಗ ಸಂಕ್ಷಿಪ್ತವಾಗಿ ಇದರಲ್ಲಿನ ನಾಟಕಗಳ ವಿವರ ತಿಳಿಯೋಣ.

“ಕಾಡಿನಲ್ಲಿ ಒಂದು ರಾತ್ರಿ” ಈ ನಾಟಕದಲ್ಲಿ ಕಾಡಿನ ನಾಶಕ್ಕೆ ಕಾರಣವಾಗುತ್ತಿರುವ ಮನುಷ್ಯನ ವಿರುದ್ಧ ಕೋಪಗೊಂಡ ಕಾಡಿನ ವೃಕ್ಷಗಳು ಪ್ರಾಣಿ ಪಕ್ಷಿಗಳು ವನದೇವತೆಗೆ ಮೊರೆಯಿಟ್ಟು ಮನುಷ್ಯನನ್ನು ಕರೆಸಿ ಅವನಿಗೆ ಬುದ್ಧಿವಾದ ಹೇಳುವ ವಸ್ತುವುಳ್ಳದ್ದು.‌ ನಿಜಕ್ಕೂ ಇಂದಿನ ಪರಿಸರ ಮಾಲಿನ್ಯದ ಪರಿಸ್ಥಿತಿಯಲ್ಲಿ ಇದು ಕಣ್ತೆರಿಸುವಂತಹ ಪಾಠವೇ ನಿಜ. ಪ್ರಾಣಿ ಪಕ್ಷಿಗಳ ವಿವಿಧ ಸ್ವಭಾವಗಳನ್ನು ತೋರಿಸುವಂತಹ ಅವುಗಳ ಸಂಭಾಷಣೆಗಳು ಮಾನವನ ಕ್ರೌರ್ಯವನ್ನು ಎತ್ತಿ ಹಿಡಿಯುವಂತಹ ವಿಚಾರಗಳು ಇಲ್ಲಿ ಚರ್ಚಿತಗೊಂಡಿದೆ. ಕಡೆಯಲ್ಲಿ ವನ ದೇವಿ ಮನುಷ್ಯನಿಗೆ ಹಾಗೂ ಪ್ರಾಣಿ ಪಕ್ಷಿಗಳಿಗೆ ಸಂದೇಶ ನೀಡುವ ಮೂಲಕ ನಾಟಕ ಮುಕ್ತಾಯವಾಗುತ್ತದೆ. ಇದರಲ್ಲಿ ಮನದೇವತೆಯ ಈ ಸಂಭಾಷಣೆ ಸಾರ್ವಕಾಲಿಕ ಸತ್ಯ ಎನ್ನುವುದು ದೃಢವಾಗುತ್ತದೆ.

“ಈಗ ಕೇಳಿದಿರಲ್ಲ ಈ ಕಾಡಿನ ವರ್ಣನೆ ಇದು ಹಾಗೆಯೇ ಮುಂದಿನ ಪೀಳಿಗೆಗೆ ಉಳಿಯಬೇಕಾದರೆ ನೀವೆಲ್ಲ ಕಾಡನ್ನು ಪ್ರಾಣಿಗಳನ್ನು ಉಳಿಸುತ್ತೇವೆ ಅಂತ ಪ್ರಮಾಣ ಮಾಡಬೇಕು ಇಲ್ಲದಿದ್ದರೆ ಮುಂದಿನ ಪೀಳಿಗೆ ಮಕ್ಕಳು, ಕಾಡನ್ನು ಮರಗಳನ್ನು ವನ್ಯಜೀವಿಗಳನ್ನು ಕೇವಲ ಭಾವಚಿತ್ರಗಳಲ್ಲಿ ಅಥವಾ ಫೋಟೋಗಳಲ್ಲಿ ನೋಡುವಂತಹ ಕಾಲ ದೃಢವಾಗುತ್ತದೆ.

ಎರಡನೆಯದಾದ ಜಿಲೇಬಿಯ ಸಂಚಾರ ಪುಸ್ತಕದಲ್ಲಿ ಜಾನಪದ ಕಥೆಯೊಂದನ್ನು ತುಂಬಾ ಮಕ್ಕಳಿಗೆ ಪ್ರಿಯವಾಗುವ ರೀತಿಯಲ್ಲಿ ಅನಾವರಣಗಳಿಸುತ್ತಾ ಹೋಗುತ್ತಾರೆ ಒಬ್ಬ ಅಜ್ಜ ಅಜ್ಜಿ ತಿನ್ನಲು ಇಷ್ಟವಾಗಿ ಮಾಡಿಕೊಂಡ ಜಿಲೇಬಿ ಎಂದು ಮನೆಯಿಂದ ಹೊರಟು ಎಲ್ಲಾ ಕಡೆ ಸಂಚಾರ ಮಾಡುತ್ತಾ ಬೇರೆಲ್ಲ ಅಡೆತಡೆಗಳನ್ನು ನಿವಾರಿಸಿಕೊಂಡರು ಕಡೆಯಲ್ಲಿ ಕುಟಿಲ ನರಿಯ ಹೊಗಳಿಕೆ ಮಾತಿಗೆ ಬಲಿಯಾಗಿ ಅದಕ್ಕೆ ಆಹಾರ ವಾಗುವ ಕಥೆ ದಾರಿಯಲ್ಲಿ ಸಿಗುವ ವಿವಿಧ ಪ್ರಾಣಿ ಪಕ್ಷಿ ಪ್ರಭೇದಗಳು ಇದರ ವೈಶಿಷ್ಟ್ಯ ಈ ಪುಸ್ತಕದಲ್ಲಿ ನಾಟಕದ ಜೊತೆಗೆ ಅದನ್ನು ರಂಗಕ್ಕೆ ತಂದ ಸಂದರ್ಭದಲ್ಲಿ ಆ ಕ್ಷಣಗಳನ್ನು ಸೆರೆಹಿಡಿದ ಅನೇಕ ಫೋಟೋಗಳನ್ನು ಇಲ್ಲಿ ಪ್ರಕಟಿಸಿರುವುದು ಮತ್ತೊಂದು ಬೋನಸ್ ಸಂಗತಿ.

ಮೂರನೆಯ ಪುಸ್ತಕ ಬಾನುಲಿ ರಂಗ ಇದರಲ್ಲಿ ಒಟ್ಟು ನಾಲ್ಕು ನಾಟಕಗಳಿವೆ ಮೊದಲ ನಾಟಕ ಪೆದ್ದನ ಅದೃಷ್ಟ ಇದು ಒಂದು ಜಾನಪದ ಕಥೆಯ ಆಧಾರದಲ್ಲಿದೆ ಪೆದ್ದ ಅಜ್ಜಿ ಹೇಳಿದ ಏನು ಕೆಲಸಗಳನ್ನು ಮಾಡದೆ ದುಡಿಯಲೆಂದು ಅವಳು ಕಟ್ಟಿಕೊಟ್ಟ ದೋಸೆಗಳನ್ನು ತೆಗೆದುಕೊಂಡು ಹೋಗಿ ದಾರಿಯಲ್ಲಿ ಸಿಕ್ಕ ಇಲಿ, ಬೇತಾಳ ಹಾಗೂ ನರಿಗಳೊಂದಿಗೆ ದೋಸೆಗಳನ್ನು ಹಂಚಿಕೊಳ್ಳುತ್ತಾನೆ . ಆ ದೋಸೆಗಳ ಬದಲಾಗಿ ಅವು ಮೂರು ಇವನಿಗೆ ಒಂದೊಂದು ಮಂತ್ರವನ್ನು ಉಪದೇಶ ಮಾಡುತ್ತದೆ .ರಾತ್ರಿ ಮಳೆ ಗುಡುಗಿಗೆ ಹೆದರಿ ಒಂದು ಮರದ ಮೇಲೆ ಕುಳಿತಿದ್ದಾಗ ಆ ಮರದ ಕೆಳಗೆ ಬಂದ ಕಳ್ಳರು ಇವನ ಮಂತ್ರ ಕೇಳಿ ಹೆದರಿ ಓಡುತ್ತಾರೆ. ಅವರು ತಂದ ಹಣ ಒಡವೆ ಇವನ ಪಾಲಾಗುತ್ತದೆ ಹೀಗೆ ಕಥೆ ಸಾಗುತ್ತದೆ. ಪೆದ್ದನಾದರೂ ಅವನು ಅದೃಷ್ಟದಿಂದ ಎಲ್ಲವೂ ಇವನಿಗೆ ಅನುಕೂಲಕರವಾಗಿ ನಡೆಯುತ್ತದೆ ಎಂಬ ವಿಚಾರದೊಂದಿಗೆ ಗಳಿಸಿದ ಆ ಸಂಪತ್ತನ್ನು ಊರಿನವರು ಪಾಲು ಕೇಳದಂತೆ ಅಜ್ಜಿಯು ಮಾಡಿದ ಉಪಾಯವು ಸಹ ತುಂಬಾ ಕುತೂಹಲಕಾರಿಯಾಗಿದೆ.

ಎರಡನೆಯ ನಾಟಕ ಕ್ರಿಸ್ತಶಕ 3000 ಕನ್ನಡ ಇದರಲ್ಲಿ 3000 ಇಸವಿಯಲ್ಲಿ ಕನ್ನಡ ಎಲ್ಲಾ ಕಡೆಗೂ ಸರ್ವ ವ್ಯಾಪಕವಾಗಿ ಹರಡಿ ಬೇರೆ ಬೇರೆ ಗ್ರಹಗಳಲ್ಲಿಯೂ ಸಹ ಕನ್ನಡದ ಅಧಿಪತ್ಯ ಸ್ಥಾಪಿಸಿರುವುದನ್ನು ಕಲ್ಪನೆಯಲ್ಲಿ ಹೇಳುತ್ತಾ ಹೋಗುತ್ತಾರೆ ನಿಜಕ್ಕೂ ತುಂಬಾ ಸುಂದರ ಹಾಗೂ ಓದಲು ಖುಷಿ ಎನಿಸುವಂತಹ ನಾಟಕ ಇದು ಹಾಗೆಯೇ ಅಲ್ಲಿ ಇಂದಿನ ಪ್ರಸ್ತುತ ವಿದ್ಯಮಾನವನ್ನು ಮುಂದಿನವರು ನೋಡುವ ಒಂದು ಸಂದರ್ಭದಲ್ಲಿ ವಿವಿಧ ಕಡೆಯ ಭಾಷೆಗಳ ಪ್ರಯೋಗದ ಅವಾಂತರ ನಗೆ ಹುಟ್ಟಿ ಹುಟ್ಟಿಸುವಲ್ಲಿ ಸಫಲವಾಗುತ್ತದೆ.

ಮೂರನೆಯ ನಾಟಕ ಮೋಹದ ಮೋಹಕ ಜಾಲದ ಸುಳಿಯಲ್ಲಿ ಇದರಲ್ಲಿ ಇಂದಿನ ವರ್ತಮಾನದ ಯಥೇ ಯಾಗಿರುವ ಸಾಮಾಜಿಕ ಜಾಲತಾಣಗಳ ಮೇಲಿನ ವ್ಯಾಮೋಹದ ಬಗ್ಗೆ ತುಂಬಾ ಚೆನ್ನಾಗಿ ಚರ್ಚಿತವಾಗಿದೆ ಕಡೆಯಲ್ಲಿ ಅಜ್ಜ ಮನೋವಿಜ್ಞಾನಿ ಮಾನಸಿಕ ತಜ್ಞರು ಇವರೆಲ್ಲ ಹೇಳುವ ಸಂದೇಶ ನಿಜಕ್ಕೂ ಮನನಿಯ ಎಚ್ಚರಿಕೆಯ ಕರೆಗಂಟೆಯಂತೆ ಕೆಲಸ ಮಾಡುತ್ತದೆ ಈ ವ್ಯಸನದ ಸುಳಿಯಿಂದ ತಪ್ಪಿಸಿಕೊಳ್ಳಬೇಕಾದರೆ ಕುಟುಂಬದ ಎಲ್ಲರೂ ಹೇಗೆ ವರ್ತಿಸಬೇಕು ಎನ್ನುವುದು ತುಂಬಾ ಮನೋಜ್ಞವಾಗಿ ಪಾತ್ರಗಳ ಮೂಲಕ ಸನ್ನಿವೇಶಗಳ ಮೂಲಕ ಲೇಖಕರು ತುಂಬಾ ಸಮರ್ಥವಾಗಿ ಅಭಿವ್ಯಕ್ತಿಸಿದ್ದಾರೆ.

ನಾಲ್ಕನೇಯ ನಾಟಕ ಬೌಬೌ ಲೋಕದಲ್ಲಿ ಪ್ರಾಯಶಹ ಕರೋನಾ ಸಮಯದಲ್ಲಿ ಬರೆದ ನಾಟಕ ಮನುಷ್ಯರ ಕರೋನ ಸಂಕಟವನ್ನು ಪ್ರಾಣಿಗಳ ದೃಷ್ಟಿಯಲ್ಲಿ ನೋಡುತ್ತಾ ಅವುಗಳ ಪ್ರಪಂಚದ ಆಗುಹೋಗುಗಳನ್ನು ಭಾವನಾ ಗಳನ್ನು ತುಂಬಾ ಚೆನ್ನಾಗಿ ಹೇಳುತ್ತಾರೆ.

ತಮ್ಮದೇ ವೈಯುಕ್ತಿಕ ಅನುಭವ ಕಥನ ನನ್ನ ಆರೋಗ್ಯ ಫಸ್ಟ್ ಕ್ಲಾಸ್ ಆದರೆ ಅಂತೂ ಒಬ್ಬ ಯುವಕ ಹಾಗೂ ವೃದ್ಧನ ನಡುವಿನ ಸಂಭಾಷಣೆ ತನಗಿರುವ ಆರೋಗ್ಯದ ಸಮಸ್ಯೆಗಳನ್ನು ಒಂದೊಂದಾಗಿ ಹೇಳುತ್ತಾ ಹೇಳುತ್ತಾ ಹೋಗುವ ತನಕ ಮನೋಭಾವವನ್ನು ವ್ಯಕ್ತಪಡಿಸುತ್ತಾ ಹೋಗುವ ವೃದ್ಧನ ಸಂಭಾಷಣೆ ನಿಜಕ್ಕೂ ಎನ್ ವಿ ರಮೇಶ ಅವರ ಮಾತುಗಳೇ ಹೌದು. ತನ್ನ ವಯಸ್ಸು 70 ಆದರೆ ಇನ್ನು 80 90 ಆಗಿಲ್ಲ ನಾನು ಇನ್ನು ಯುವಕನೇ ಎಂದು ಹೇಳುವ ಇವರ ಅದಮ್ಯ ಜೀವನೋತ್ಸಾಹ ಈ ನಾಟಕದಲ್ಲಿ ತುಂಬಾ ಚೆನ್ನಾಗಿ ಮೂಡಿಬಂದಿದೆ.

ನಾಲ್ಕನೆಯ ಪುಸ್ತಕ ನಾಟಕದ ಹಿಂದಿನ ನಾಟಕ ಮೇಲಿನ ಪುಸ್ತಕಗಳು ನಾಟಕಗಳ ಇಡಿ ಸಾರಾಂಶದ ಪ್ರಕಟಣೆಗಳಾದರೆ ಈ ಪುಸ್ತಕದಲ್ಲಿ ಪ್ರತಿಯೊಂದು ನಾಟಕ ಬರೆಯುವ ಹಿನ್ನೆಲೆ, ಆ ನಾಟಕಗಳನ್ನು ಬರೆಯಬೇಕಾದ ಸಂದರ್ಭಗಳು ಮತ್ತು ತಮ್ಮ ವೃತ್ತಿ ಜೀವನದ ಕೆಲವೊಂದು ಅನುಭವಗಳು, ಈ ನಾಟಕಗಳನ್ನು ರಂಗಕ್ಕೆ ತರಲು ಮಾಡಿದ ಪ್ರಯತ್ನ ಆ ಸಮಯದ ಕೆಲವೊಂದು ಘಟನೆಗಳು ಹಾಗೂ ನಾಟಕಗಳ ಭಾವಚಿತ್ರಗಳು ಇವೆಲ್ಲವೂ ಪ್ರಕಟವಾಗಿದೆ. ಅನುಭವ ಎಂದರೆ ಅದು ನಿಜಕ್ಕೂ ಒಂದು ಅನನ್ಯ ಖಜಾನೆ. ಅವುಗಳ ಹಂಚಿಕೆ ಮುಂದಿನ ಪೀಳಿಗೆಗೆ ಮಾರ್ಗದರ್ಶಿ. ಆ ಕೆಲಸ ಈ ಪುಸ್ತಕದಿಂದ ಆಗಿದೆ ಎಂದು ಖಡಾಖಂಡಿತವಾಗಿ ಹೇಳಬಹುದು.

ನಾಟಕದ ಮುಖ್ಯ ಅಂಶಗಳಾದ ಕಥಾವಸ್ತು ಸೆಟ್ಟಿಂಗ್ ಕ್ರಿಯೆ ನಾಟಕ ಉದ್ವೇಗ ಸಾಂಕೇತಿಕತೆ ಪಾತ್ರಗಳು ಸಂಭಾಷಣೆ ಇವೆಲ್ಲವೂ ಈ ಮೇಲಿನ ನಾಟಕಗಳಲ್ಲಿ ತುಂಬಾ ಉತ್ತಮವಾಗಿ ಪ್ರದರ್ಶಿತವಾಗಿರುವುದು ಕಂಡುಬರುತ್ತದೆ ಮಕ್ಕಳಿಗೆ ಇಷ್ಟವಾಗುವ ವಿಷಯಗಳು ಪ್ರಾಣಿಗಳು ಪ್ರಾಣಿಗಳ ಸಂಭಾಷಣೆಗಳು ಮಾತ್ರವಷ್ಟೇ ಅಲ್ಲದೆ ಅವುಗಳಿಂದ ಒಂದು ನೀತಿ ಹೇಳುವುದು ಇವರ ನಾಟಕಗಳ ಲಕ್ಷಣ ಮುಖ್ಯವಾಗಿ ಮಕ್ಕಳ ಸಾಹಿತ್ಯ ಹೀಗೆಯೇ ತಾನೆ ಇರಬೇಕಾದದ್ದು. ತಂದೆ ವಾಮನ್ ರಾವ್ ಅವರೊಂದಿಗಿನ ಒಡನಾಟ ಆಕಾಶವಾಣಿಯ ಸಹವಾಸ ಮುಂದೆ ತಾವು ಆಕಾಶವಾಣಿಯ ಉದ್ಯೋಗಿ ಯಾದದ್ದು ಇವೆಲ್ಲವೂ ಇವರ ಈ ನಾಟಕ ಕಲೆಯ ಅಭಿರುಚಿಗೆ ಇಂಬು ಕೊಟ್ಟಿದ್ದಂತೂ ಸತ್ಯ ಎಂದು ಲೇಖಕರೇ ಹೇಳಿಕೊಂಡಿದ್ದಾರೆ.

ಇಂದು ಟಿವಿ ಅಥವಾ ಕಂಪ್ಯೂಟರ್ ಇವುಗಳಿಗೆ ಅಂಟಿ ಹೋಗಿರುವ ಇಂದಿನ ಯುವ ಜನಾಂಗ ಈ ರೀತಿಯ ಸೃಜನಾತ್ಮಕ ಕಲೆಗಳಲ್ಲಿ ಕಲೆಗಳ ಕಡೆ ಗಮನಹರಿಸುವಂತೆ ಮಾಡಬೇಕಾದದ್ದು ನಮ್ಮಂತ ಹಿರಿಯರ ಕರ್ತವ್ಯ ಬಹಳ ಹಿಂದಿನ ಕಾಲದಿಂದಲೂ ನೀತಿ ಬೋಧಗಳು ಶುಷ್ಕವಾಗಿರದೆ ಕಥೆ ನಾಟಕಗಳ ಮೂಲಕ ರಂಜನೀಯವಾಗಿರುವುದು ಎಲ್ಲಾ ದೇಶದ ಸಾಹಿತ್ಯಗಳಲ್ಲೂ ಮುಖ್ಯವಾಗಿ ನಮ್ಮ ಭಾರತೀಯ ಸಾಹಿತ್ಯದಲ್ಲಿ ಕಂಡುಬರುವ ಮುಖ್ಯಾಂಶ. ರಾಮಾಯಣ ಮಹಾಭಾರತ ಪಂಚತಂತ್ರ ಕಥೆಗಳು ಇವೆಲ್ಲವೂ ಅದಕ್ಕೆ ಉದಾಹರಣೆ. ನಾಟಕ ಈ ಎಲ್ಲಾ ಅವಶ್ಯಕತೆಗಳನ್ನು ಪೂರೈಸುವ ಒಂದು ಸಮೃದ್ಧ ಮಾಧ್ಯಮ ಅದರ ಮೂಲಕ ಮಕ್ಕಳಿಗೆ ಒಂದು ಸಂಪೂರ್ಣ ಪ್ಯಾಕೇಜ್ ಸಿಗುತ್ತದೆ. ಒಂದು ಸಂಶೋಧನೆಯ ಪ್ರಕಾರ ನಾಟಕಗಳ ಮೂಲಕ ಶಿಕ್ಷಣ ಕೊಟ್ಟಾಗ ಮಕ್ಕಳಲ್ಲಿ ಆತ್ಮವಿಶ್ವಾಸ, ಸಂವಹನ ಕೌಶಲ್ಯ, ಸೃಜನಶೀಲತೆ, ಟೀಮ್ ವರ್ಕ್, ಸಹಾನುಭೂತಿ, ಸಮಸ್ಯೆ ಬಗೆಹರಿಸುವ ಕೌಶಲ್ಯ, ಏಕಾಗ್ರತೆ ಮತ್ತು ಗಮನ, ಭಾವನಾತ್ಮಕ ಬುದ್ಧಿವಂತಿಕೆ, ಬೌದ್ಧಿಕ ಬೆಳವಣಿಗೆ, ಸಾಂಸ್ಕೃತಿಕ ಜಾಗೃತಿ, ಸ್ವಯಂ ಅಭಿವ್ಯಕ್ತಿ ಈ ಎಲ್ಲಾ ಗುಣಗಳು ಬೆಳೆಯುತ್ತದೆ. ಒಂದು ಕಲ್ಲಿನಲ್ಲಿ ಎಷ್ಟೊಂದು ಹಣ್ಣುಗಳನ್ನು ಉದುರಿಸಬಹುದು‌ ಆದರೆ ನಮ್ಮ ಶಿಕ್ಷಣ ಪದ್ಧತಿ ಏಕೆ ಈ ಕಡೆ ಗಮನ ಕೊಡುತ್ತಿಲ್ಲ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆ.

ಕನ್ನಡದಲ್ಲಿ ಮಕ್ಕಳ ನಾಟಕಗಳು ಅಂದ್ರೆ ಕುವೆಂಪು ಅವರ ಮೋಡಣ್ಣನ ತಮ್ಮ, ಹೊಯ್ಸಳರ ಮಕ್ಕಳ ಮಂಟಪ, ಚಂದ್ರಹಾಸ ಶಿವರಾಮ ಕಾರಂತರ ಹೊಟ್ಟೆಯ ಹಾಡು ನಾಲ್ಕನೇ ಪಿಶಾಚಿ, ಜಿ ಪಿ ರಾಜರತ್ನಂ ಅವರ ಬೆಳೆಯುವ ಪೈರು, ಧ್ವಜ ವಂದನೆ ಚಂದ್ರಶೇಖರ ಕಂಬಾರರ ಅಲಿಬಾಬಾ ಮತ್ತು 40 ಮಂದಿ ಕಳ್ಳರು, ವೈದೇಹಿಯವರ ಕೆಲವು ನಾಟಕಗಳು ಇವೆಲ್ಲವನ್ನ ಪ್ರಮುಖವಾಗಿ ಹೆಸರಿಸಬಹುದು. ಈಗ ಈ ಸಾಲಿನಲ್ಲಿ ಖಂಡಿತ ಎನ್ ಬಿ ರಮೇಶ್ ರ ಈ ಪುಸ್ತಕವನ್ನು ಹೆಸರಿಸಬಹುದು ಅಂತಾನೇ ಹೇಳಬಹುದು.

ಮಕ್ಕಳ ಸಾಹಿತ್ಯ ಬರೀ ಮನರಂಜನೆಯ ಮಾತ್ರವಾಗಿರದೆ ಹೆಚ್ಚು ಕ್ಲಿಷ್ಟದ ತತ್ವಗಳನ್ನು ಸುಲಭವಾಗಿ ನೀತಿಗಳನ್ನು ನೋಡಿ ಅನುಸರಿಸುವಂತೆ ಮಾಡುವಂತಹ ಸಾಮಾಜಿಕ ಬದ್ಧತೆ ಬೇಕು ಅಂತಹ ಬದ್ಧತೆ ರಮೇಶ ಅವರಲ್ಲಿ ನಾವು ಕಾಣಬಹುದು.

ಸ್ವಾನುಭವ, ದೇಶದ ಸಂಸ್ಕೃತಿ, ಪಡೆದ ವಿದ್ಯೆ ತಾನು ಹುಟ್ಟಿದ ಮತ್ತು ಬೆಳೆದ ಸುತ್ತಣ ಸನ್ನಿವೇಶ, ಮಹಾಪುರುಷ ಸಂಚಯ ಮೊದಲಾವುಗಳ ಪ್ರಭಾವದಿಂದ ಮೂಡುವ ಬುದ್ಧಿ ಸ್ಥಿತಿಯನ್ನು “ಜೀವನದೃಷ್ಟಿ” ಎಂದು ಸಂಕೇತಿಸಬಹುದು . ಅಂತಹ ಜೀವನ ದೃಷ್ಟಿ ರಸಾನುಭೂತಿಗೇರಿದರೆ “ದರ್ಶನ”ವಾಗುತ್ತದೆ.

ಅಂತಹ ಮಹಾದರ್ಶನವನ್ನು ಈ ನಾಟಕಗಳ ಮೂಲಕ ಎನ್ ವಿ ರಮೇಶ್ ಅವರು ಕನ್ನಡ ಜನತೆಗೆ ಮಾಡಿಸಿದ್ದಾರೆ ಎಂದರೆ ಖಂಡಿತ ಅದು ಅತಿಶಯೋಕ್ತಿಯಲ್ಲ.

ಪ್ರತಿಯೊಂದು ಗ್ರಂಥಾಲಯ ಹಾಗೂ ಶಾಲೆಗಳಲ್ಲಿ ಇರಲೇಬೇಕಾದ ಪುಸ್ತಕ ಇದು ಈ ನಾಟಕಗಳ ಪ್ರಯೋಗಗಳು ಮತ್ತು ಹೆಚ್ಚು ಹೆಚ್ಚಾಗಿ ನಡೆಯಲಿ ಕನ್ನಡದ ಕಂದಮ್ಮಗಳು ಇದರಿಂದ ಹೆಚ್ಚಿನ ಪ್ರಯೋಜನ ಪಡೆಯಲಿ. ಇದರಿಂದ ಪ್ರೇರಿತರಾಗಿ ರಮೇಶ ಅವರು ಇನ್ನೂ ಇನ್ನೂ ಮಕ್ಕಳ ನಾಟಕಗಳನ್ನು ಬರೆಯಲಿ ಎಂದು ಹಾರೈಕೆ.


  • ಸುಜಾತಾ ರವೀಶ್ – ಮೈಸೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading