ಹಿಂದಿನ ರಾಜರು ಲೋಕೋದ್ಧಾರಕ್ಕಾಗಿ ಗುರುಗಳಿಂದ ಯಾಗ, ಯಜ್ಞ ಮಾಡುತ್ತಿದ್ದರು. ಈಗ ದೇಶಕ್ಕಾಗಿ ಪ್ರಾರ್ಥಿಸುವವರನ್ನು ನೋಡಿ ಅಪಹಾಸ್ಯ ಮಾಡುವವರಾಗಿದ್ದಾರೆ. ಪರಮಾತ್ಮನ ಇಚ್ಛೆಯಿಂದಲೇ ಎಲ್ಲವೂ ನಡೆಯುವುದು ನಿಜ. ಆದರೆ ಅವರವರ ಕರ್ಮ ಫಲ ಅವರೇ ಅನುಭವಿಸಬೇಕು ಇದು ಕೂಡ ಸತ್ಯ. ಲೇಖಕರಾದ ಸಂಧ್ಯಾ ಟಿ ಅವರ ಸನಾತನ ಧರ್ಮದ ಮಹತ್ವವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಓದಿ…
ಸನಾತನ ಇದರ ಅರ್ಥ ಸತ್ಯ ಹಾಗೂ ಶಾಶ್ವತದ ಅಂಶವಾಗಿದೆ. ಪ್ರಳಯ ಕಾಲದಲ್ಲೂ ಶಾಶ್ವತವೆನ್ನುವ ಸೃಷ್ಟಿ ಒಂದು ವಿಶಿಷ್ಟವಾದ ರೂಪದಲ್ಲಿ ಇರುವುದು. ನಾವು ಪ್ರಳಯ ಕಾಲವನ್ನೇ ನೋಡಿಲ್ಲ ನಂಬುವುದು ಹೇಗೆ?. ನಮ್ಮ ಜನನ, ಮರಣ ನಾವು ನೋಡಿಲ್ಲ. ಆದರೆ ಬೇರೆಯವರ ಜನನ, ಮರಣ ನೋಡಿ ನಂಬುತ್ತೇವೆ. ಅದರಂತೆ ಆತ್ಮ, ಪರಮಾತ್ಮ, ಗಾಳಿಯೂ ಕಣ್ಣಿಗೆ ಕಾಣದಿದ್ದರೂ ಅವರವರ ಯೋಗ್ಯತೆಗೆ ಅನುಗುಣವಾಗಿ ನಂಬುತ್ತಾರೆ. ಆದರೆ ಅದರಲ್ಲಿ ವಿಶ್ವಾಸವಿಟ್ಟು ನಾವು ಸಮಯಾನುಸಾರವಾಗಿ ಮಾಡುವ ವಿಹಿತ ಕರ್ಮಗಳೆ ಧರ್ಮ ಎನಿಸಿಕೊಂಡಿದೆ. ಸದಾವಕಾಶ ಸಿಕ್ಕಾಗೂ ಯೋಚಿಸದೆ ದುರಾಸೆಯಲ್ಲಿ ಅಹಿತ ಕರ್ಮಗಳಾಗುವವು. ಇವು ನಮಗರಿವಿಲ್ಲದೆ ಅಧರ್ಮವೆನಿಸುವದು. ಇವೆರಡೂ ಆದಿಕಾಲದಿಂದಲೂ ಬಂದಿವೆ. ಪ್ರತಿಯೊಬ್ಬ ಮನುಷ್ಯನು ಸತ್ಯಾಸತ್ಯತೆಯನ್ನು ಪರಾಮರ್ಶಿಸಿ ಅರಿತರೆ ಸನಾತನ ಧರ್ಮ ಮತ್ತು ವಿನಾಶತನ ಅಧರ್ಮ ಎರಡು ತಿಳಿಯುವುದು.
ಆದಿ ಕಾಲದಲ್ಲಿ ನಿರ್ಮಿಸಿದ ದೇವಾಲಯಗಳನ್ನು, ಪರ್ವತ ಶಿಖರಗಳನ್ನು, ನದಿ ಸಮುದ್ರ ಅವುಗಳ ಉಗಮ, ಹೆಸರು, ಸೌಂದರ್ಯ ಮತ್ತು ಅವುಗಳ ಉಪಯೋಗ ಯಾವ ಯಾವ ಕಾಲದಲ್ಲಿ ಯಾರು ಯಾವ ರೀತಿ ಉಪಯೋಗಿಸಿದರು ಮತ್ತು ಯಾರು ಯಾವ ರೀತಿ ದೇವಾಲಯಗಳನ್ನು ಧ್ವಂಸ ಮಾಡಿದರು? ಇವತ್ತಿಗೂ ಆ ದೇವಾಲಯಗಳು ಧರ್ಮ ಸಂಕೇತವಾಗಿ ಉಳಿದಿವೆಯೆಂದರೆ ಸನಾತನವನ್ನು ಭಾರತದ ಗಾಳಿ, ನೀರು, ಆಹಾರ ಸೇವನೆ ಮಾಡುವವರೆಲ್ಲರೂ ಅಧರ್ಮ ಸೇರಿಸದೆ ಕಾಯಾ, ವಾಚಾ ಮನಸಾ, ವಿಹಿತ ಕಾರ್ಯಗಳಲ್ಲಿ ಅವರವರ ಧರ್ಮಕ್ಕೆ ಚ್ಯುತಿ ಬಾರದಂತೆ ಅನುಸರಿಸಿ ನಡೆಯುವದೆ ಮಾನವ ಧರ್ಮ. ಹಿಂದಿನ ರಾಜರು ಲೋಕೋದ್ಧಾರಕ್ಕಾಗಿ ಗುರುಗಳಿಂದ ಯಾಗ ಯಜ್ಞ ಮಾಡುತ್ತಿದ್ದರು. ಈಗ ದೇಶಕ್ಕಾಗಿ ಪ್ರಾರ್ಥಿಸುವವರನ್ನು ನೋಡಿ ಅಪಹಾಸ್ಯ ಮಾಡುವವರಾಗಿದ್ದಾರೆ.

ಪರಮಾತ್ಮನ ಇಚ್ಛೆಯಿಂದಲೇ ಎಲ್ಲವೂ ನಡೆಯುವುದು ನಿಜ. ಆದರೆ ಅವರವರ ಕರ್ಮ ಫಲ ಅವರೇ ಅನುಭವಿಸಬೇಕು ಇದು ಕೂಡ ಸತ್ಯ. ಎಲ್ಲರೂ ಒಂದೇ ರೀತಿ ಇರುವುದಿಲ್ಲ. ಉನ್ನತ ಸ್ಥಾನದಲ್ಲಿರುವವರು ಅಲ್ಲಿಯೇ ಕುಳಿತು ಎಲ್ಲರ ಹಿತವನ್ನು ಬಯಸಿ ದುರಾಸೆಗೆ ಬಲಿಯಾಗದೆ ತಮ್ಮ ಸ್ಥಾನಕ್ಕೆ ಮರ್ಯಾದೆಯಿಂದ ಸಿಕ್ಕ ಸಮಯವನ್ನು ನಿರ್ವಂಚನೆಯಿಂದ ಮಾಡುವುದು ಸುಕರ್ಮ. ಕಾರಣ ಸಮಾನತೆ ಅಮಾನತೆ ಎನ್ನದೆ ಕರ್ಮ ಭೂಮಿಯಲ್ಲಿ ಬಂದ ಮೇಲೆ ಅದನ್ನು ಯುದ್ಧ ಭೂಮಿ ಮಾಡದೆ ಇನ್ನೊಬ್ಬರನ್ನು ಹೀಯಾಳಿಸಿ ಆಗಲಿ, ತೊಂದರೆ ಕೊಡುವುದಾಗಲಿ ಮಾಡದೆ ಹಿತವಾದ ಧರ್ಮ ಆಚರಿಸಿ ಭರತನಾಳಿದ ಭಾರತವನ್ನು ಈ ಹೆಸರು ಸನಾತನದಿಂದ ಬಂದಿದೆ.
ಜ್ಞಾನೇಂದ್ರಿಯ, ಕರ್ಮೇಂದ್ರಿಯಗಳ ಸಹಿತ ಈ ಸಾಧನ ಶರೀರಕ್ಕೆ ಮಾನವ ಧರ್ಮ ಧರಿಸಿ ಭೂಮಿಯ ಮೇಲೆ ಬಂದಾಯ್ತು. ಸತ್ಕರ್ಮ ಮಾಡಿ ಶುದ್ಧ ಹಸ್ತದಿಂದ ಹೊರಡಲು ತಯಾರಾಗಿರಬೇಕು. ಹಿಂದುಗಳ ಸನಾತನ ಧರ್ಮ ಅಳಿಸಿ ಹಾಕುತ್ತೇನೆ ಎನ್ನುವುದು ನಮ್ಮನ್ನು ನಾವು ತಿಳಿದಿಲ್ಲ ಎಂದು ಅರ್ಥ. ವಿಶಾಲವಾದ ಈ ಬ್ರಹ್ಮಾಂಡದಲ್ಲಿಯ ಎಷ್ಟು ಧರ್ಮ ಇವೆ ಎನ್ನುವುದೇ ಗೊತ್ತಿಲ್ಲ. ಒಂದು ನಿಮಿಷ ನಮ್ಮ ಶ್ವಾಸೋಚ್ಛ್ವಾಸದಲ್ಲಿ ಏರು ಪೇರಾದರೆ ವಿಚಾರಿಸಿ. ಕಾರಣ ಭ್ರಮೆ ತೊರೆದು ಅವರವರ ಧರ್ಮವನ್ನು ಅರ್ಥೈಸಿಕೊಂಡು ಅಳತೆ ಮೀರದಂತೆ ಕಾಯಾ ವಾಚಾ ಮನಸಾ ಒಳ್ಳೆಯದನ್ನು ಆಚರಿಸುತ್ತ ನಿಮ್ಮ ಸ್ಥಾನಕ್ಕೆ ಮರ್ಯಾದೆಗೆ ಕುಂದು ಬರದಂತೆ ದೇಶಕ್ಕೆ ಹಿತವಾಗುವಂತೆ ಆತ್ಮಕ್ಕೆ ಶಾಂತಿ ಸಿಗುವಂತೆ ಭಾರತಾಂಬೆಯ ಮಕ್ಕಳಿಂದ ಭಾರತಾಂಬೆಗೆ ಜಯ ಸಿಗಲಿ. ಸನಾತನ ಧರ್ಮಕ್ಕೆ ಜಯವಾಗಲಿ.
ಸನಾತನ ನುಡಿ
ಅರಳಿದ ಹೂವು ಮರಳಿ ಅರಳದು
ಉರುಳಿದ ಮರ ಮತ್ತೆ ನಿಲ್ಲದು
ತೆರಳಿದ ಜೀವ ಮರಳಿ ಬಾರದು
ಬಳಿಗಿದ್ದ ಸಮಯ ವ್ಯರ್ಥವಾಗಬಾರದು
ಯಾವ ಭೂಮಿಯಲಿ ಜನನ
ಯಾವ ಗಾಳಿಯಲಿ ಪ್ರಾಣ
ಯಾವ ಬೆಳೆ ಉಸಿರಿಗೆ ಕಾರಣ
ಆ ತಾಯಿಗೆ ಹೇಗೆ ತೀರುಸುವಿ ಋಣ
ಮಿಥ್ಯ ಕಲ್ಪನೆ
ಗ್ಯಾರಂಟಿ ಗ್ಯಾರಂಟಿ ಎಲ್ಲೆಲ್ಲೂ ಗ್ಯಾರಂಟಿ
ಮನೆ ಮನ ಒಳ ಹೊರಗು ಗ್ಯಾರಂಟಿ
ಗುಡಿ ಗುಂಡಾರಗಳಲ್ಲೂ ಗ್ಯಾರಂಟಿ
ದುಡಿಯುವ ಕೈಗಳು ನಿಂತಿವೆ ಗ್ಯಾರಂಟಿ
ಕಿಚ್ಚು ಹುಚ್ಚೆದ್ದು ಕುಣಿಯುತಿದೆ ಗ್ಯಾರಂಟಿ
ಜನ್ಮ ದಿನದಲಿ ಎಣ್ಣೆಯ ಭರಾಟೆ
ಮರಣೋತ್ತರದಲಿ ಆಸ್ತಿಯ ಕರಾಟೆ
ಜನ ಮನದಲಿ ಕಲಿಯ ಪಾರು ಪತ್ಯ
ಕಲಿಕೆಯಲ್ಲಿ ಏನಿದೆ ಹೇಳು ನೀ ಸತ್ಯ
- ಸಂಧ್ಯಾ ಟಿ – ಕವಿ, ಲೇಖಕರು, ಬೆಂಗಳೂರು
