3 ಭಾಗಗಳಲ್ಲಿ ತೆರೆ ಕಂಡ ಸಾಂಗ್ಲಿಯಾನ ಭರ್ಜರಿ ಯಶಸ್ಸನ್ನು ಕಂಡಿತ್ತು, ಪೊಲೀಸ್ ವಲಯದಲ್ಲಿ ‘ಸಿಂಹ’ ಎಂದೇ ಖ್ಯಾತರಾಗಿದ್ದ ನಮ್ಮ ಹೆಮ್ಮೆಯ ಸಾಂಗ್ಲಿಯಾನ ವಯೋ ಸಹಜವಾಗಿ ಕುಗ್ಗಿ ಹೋಗಿದ್ದನ್ನು ಫೋಟೋದಲ್ಲಿ ಗಮನಿಸಬಹುದು. ಖ್ಯಾತ ಪತ್ರಕರ್ತರಾದ ಗಣೇಶ ಕಾಸರಗೊಂಡು ಅವರು ಸಾಂಗ್ಲಿಯಾನ ಕುರಿತು ಬರೆದ ಪುಟ್ಟ ಲೇಖನವನ್ನು ಓದುಗರ ಗಮನಕ್ಕೆ ತಂದಿದೆ, ತಪ್ಪದೆ ಓದಿ…
ನನ್ನ ಅರಿವಿಗೆ ಬಂದಂತೆ ಒಬ್ಬ ಪೊಲೀಸ್ ಅಧಿಕಾರಿಯ ಬದುಕನ್ನಾದರಿಸಿ ಮೂರು ಭಾಗದಲ್ಲಿ ಸಿನಿಮಾ ಬಂದದ್ದು ಖಡಕ್ ಪೊಲೀಸ್ ಅಧಿಕಾರಿಯಾಗಿದ್ದ ‘ಸಿಂಹ’ ಸಾಂಗ್ಲಿಯಾನ ಹೊರತಾಗಿ ಮತ್ತೊಂದಿಲ್ಲವೇನೋ…
ಮೊದಲ ಭಾಗ ತೆರೆ ಕಂಡದ್ದು ಶಂಕರನಾಗ್ ಅಭಿನಯದ ಸಾಂಗ್ಲಿಯಾನ 1988ರಲ್ಲಿ. ಎರಡನೇ ಭಾಗ ತೆರೆಕಂಡದ್ದು ಅದೇ ಶಂಕರನಾಗ್ ಅಭಿನಯ ‘ಸಾಂಗ್ಲಿಯಾನ ಭಾಗ -2’ 1990ರಲ್ಲಿ. ಇದರ ಮೂರನೇ ಭಾಗ ತೆರೆ ಕಂಡದ್ದು 1997 ರಲ್ಲಿ. ಆದರೆ ಈ ಸಿನಿಮಾದ ನಾಯಕ ಶಂಕರನಾಗ್ ಅಲ್ಲ, ಬದಲಿಗೆ ದೇವರಾಜ್! ಹೀಗೆ 3 ಭಾಗಗಳಲ್ಲಿ ತೆರೆ ಕಂಡು ಭರ್ಜರಿ ಯಶಸ್ಸು ಕಂಡ ಮತ್ತೊಂದು ಕನ್ನಡ ಸಿನಿಮಾ ಇಲ್ಲವೆಂದೇ ಹೇಳಬೇಕು! ಅಂಥಾ ಪೊಲೀಸ್ ಅಧಿಕಾರಿಯಾಗಿದ್ದರು ಸಾಂಗ್ಲಿಯಾನ. ಪೊಲೀಸ್ ವಲಯದಲ್ಲಿ ‘ಸಿಂಹ’ ಎಂದೇ ಖ್ಯಾತರಾಗಿದ್ದ ನಮ್ಮ ಹೆಮ್ಮೆಯ ಸಾಂಗ್ಲಿಯಾನ ವಯೋ ಸಹಜವಾಗಿ ಕುಗ್ಗಿ ಹೋಗಿದ್ದನ್ನು ಈ ವಿಡಿಯೋದಲ್ಲಿ ಗಮನಿಸ ಬಹುದು.


ಅಂದಹಾಗೆ ಈ ಫೋಟೋ ವನ್ನು ನನಗೆ ಕಳಿಸಿಕೊಟ್ಟಿದ್ದು ‘ಟೈಗರ್’ ಎಂದೇ ಕರೆಯಲ್ಪಡುವ ಮತ್ತೊಬ್ಬ ನಿವೃತ್ತ ಪೊಲೀಸ್ ಅಧಿಕಾರಿ ಅಶೋಕ್ ಕುಮಾರ್. ಕಳೆದ 35 ವರ್ಷಗಳಿಂದ ನನ್ನ ಹೆಮ್ಮೆಯ ಗೆಳೆಯರಾಗಿರುವ ಇವರ ಬದುಕು ಕೂಡಾ ಯಾವ ಸಿನಿಮಾಕ್ಕೂ ಕಮ್ಮಿಯಿಲ್ಲದ್ದು. ಯಾರಾದರೂ ಮನಸ್ಸು ಮಾಡಿದರೆ ಇವರ ಬದುಕಿನ ರೋಚಕ ಘಟನೆಗಳ ಸಿನಿಮಾ ಕನಿಷ್ಠ 5 ಭಾಗಗಳಲ್ಲಾದರೂ ತರಬಹುದು!
- ಗಣೇಶ ಕಾಸರಗೊಂಡು
