ಬುದ್ದಿ ಹೇಳದ ಗುರು, ಬಿದ್ದಿರಲು ಬಂದು ನೋಡದ ತಾಯಿ, ವಿದ್ಯೆ ಕಲಿಸದ ತಂದೆ, ಹುಟ್ಟಿಸಿದ ಮಾತ್ರಕೆ ತಂದೆಯಾಗಲಾರರು, ಕಲಿಸಿದ ಮಾತ್ರಕೆ ಗುರುವಾಗಲಾರರು, ಹಡೆದ ಮಾತ್ರಕೆ ತಾಯಿ ಆಗಲಾರಳು, ಈ ಮೂರು ಸಂಗತಿಗಳು ಅಷ್ಟೇ ಸತ್ಯ, ಸವಿತಾ ಮುದ್ಗಲ್ ಅವರ ಈ ವಚನಕ್ಕೊಂದು ಅರ್ಥ ತಿಳಿಯಿರಣ್ಣ.
“ವಿದ್ಯೆ ಕಲಿಸದ ತಂದೆ
ಬುದ್ದಿ ಹೇಳದ ಗುರು
ಬಿದ್ದಿರಲು ಬಂದು
ನೋಡದ ತಾಯಿ
ಶುದ್ಧ ವೈರಿಗಳು ಸರ್ವಜ್ಞ”.
ವಿದ್ಯೆ ಕಲಿಸದ ತಂದೆ
ಎಷ್ಟು ಅರ್ಥವಿದೆ ಈ ಮೇಲಿನ ನುಡಿಯಲ್ಲಿ ಅಲ್ವಾ, ಹುಟ್ಟಿಸಿದ ಮಾತ್ರಕೆ ತಂದೆಯಾಗಲಾರರು, ಕಲಿಸಿದ ಮಾತ್ರಕೆ ಗುರುವಾಗಲಾರರು, ಹಡೆದ ಮಾತ್ರಕೆ ತಾಯಿ ಆಗಲಾರಳು, ಈ ಮೂರು ಸಂಗತಿಗಳು ಅಷ್ಟೇ ಸತ್ಯ. ಒಬ್ಬೊಬ್ಬರ ಬಾಳಿನಲಿ ಇಂತಹ ಘಟನೆ ನಡೆದಿರುತ್ತೆ.
ಒಂದು ಮನೆಯಲಿ ಒಬ್ಬ ಜವಾಬ್ದಾರಿ ಇರುವ ತಂದೆಯು ಕೇವಲ ದುಡಿದ ಮಾತ್ರಕೆ ಅವನ ಕೆಲಸ ಮುಗಿತು ಅನ್ನುವ ಭಾವನೆ ಇರುತ್ತದೆ. ಅದು ತಪ್ಪು. ಮನೆಯ ಮಕ್ಕಳಿಗೆ ಅವನ ಜವಾಬ್ದಾರಿ ಏನೆಂದರೆ ಅವರಿಗೆ ತಕ್ಕ ಶಿಕ್ಷಣ ಕೊಡುವುದು. ಮಕ್ಕಳಿಗೆ ಉನ್ನತ ಶಾಲೆಗೆ ಸೇರಿಸಿದ ಮಾತೃಕೆ ಅವನ ಜವಾಬ್ದಾರಿ ಮುಗಿಯೋದಿಲ್ಲ. ಮಕ್ಕಳಿಗೆ ಮೌಲ್ಯಗಳನ್ನು ತಿಳಿಸುವ ಶಿಕ್ಷಣ ಅತೀ ಅವಶ್ಯಕತೆ ಇದೆ.
ಮಕ್ಕಳು ಒಂದು ಹಸಿ ಮಣ್ಣಿನಂತೆ ನಾವು ಹೇಗೆ ಆಕಾರ ಕೊಡುತ್ತೇವೆ ಅದೇ ರೀತಿಯಲ್ಲಿ ಆಕೃತಿ ಹೊಂದುತ್ತವೆ. ಒಂದು ಮನೆಯ ಸಂಪೂರ್ಣ ನಿರ್ವಹಣೆ ನಿರ್ವಹಿಸಬೇಕಾದರೆ ಹೆಣ್ಣು ಮತ್ತು ಗಂಡು ಎಂಬ ಬೇಧ ಭಾವವಿಲ್ಲದೆ ನೋಡಿಕೊಂಡು ಹೋಗಬೇಕು.
ಒಂದು ಮಗು ಶಾಲೆಯಲ್ಲಿ ಕೇವಲ ಶೈಕ್ಷಣಿಕವಾಗಿ ಕಲಿತರೆ ಉಳಿದಂತೆ ಮನೆಯೇ ಅವಕ್ಕೆ ಪಾಠಶಾಲೆ. ತಾನು ಮಾಡುವ ಕಾರ್ಯವೊಂದೆ ತನಗೆ ಶ್ರೇಷ್ಠವೆಂದು ಕುಳಿತರೆ ಅದು ತಪ್ಪು.
ಒಂದು ಶ್ರೀಮಂತ ಕುಟುಂಬದಲಿ ಒಬ್ಬ ದುಡಿಯಲು ವ್ಯಕ್ತಿ ಇರತಾನೆ,ಅವನಿಗೆ ಕೇವಲ ದುಡಿಮೆ ಮತ್ತು ದಿನದ ಊಟಕ್ಕೆ ಸಿಕ್ಕರೆ ಆಯ್ತು. ಅವನಿಗೆ ಮುಂದಿನ ಭವಿಷ್ಯದ ಮಕ್ಕಳ ಶಿಕ್ಷಣದ ಚಿಂತೆ ಇರೋದಿಲ್ಲ. ತಾಯಿಗೆ ಗಂಡನ ಮಾತೆ ವೇದವಾಕ್ಯ. ಇತ್ತ ಮಕ್ಕಳು ಶಾಲೆಗೂ ಹೋಗದೆ ಸರಿಯಾದ ಜೀವನ ದೊರೆಯದೆ ಅವರ ಶಿಕ್ಷಣವನ್ನು ಕಳೆದುಕೊಂಡು ಪುನ್ಹ ಅವರು ಇನ್ನೊಬ್ಬರ ಮನೇಲಿ ದುಡಿಯುವ ಪರಿಸ್ಥಿತಿ ಉಂಟಾಗುತ್ತದೆ.
ಇಂತಹ ತಂದೆ ತನ್ನ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಮಾಡದೆ ಇದ್ರೆ ಏನು ಪ್ರಯೋಜನ???.ಅದಕ್ಕೆ ಹೇಳೋದು ವಿದ್ಯೆ ಕಲಿಸದ ತಂದೆ ಶತ್ರುವಿನ ಹಾಗೇ ಅಂತ!!!!.
ಬುದ್ದಿ ಹೇಳದ ಗುರು :
ಇತ್ತೀಚಿಗೆ ಶಿಕ್ಷಕರ ವ್ಯವಸ್ಥೆ ಹೇಗಿದೆ ಅಂದರೆ ಕೇವಲ ಪಠ್ಯಪುಸ್ತಕದ ಪಾಠ ಮುಗಿಸಿದರೆ ಆಯ್ತು, ಮಕ್ಕಳು ಹೇಗೆ ತಮ್ಮ ಜೀವನದಲಿ ಮೌಲ್ಯಗಳನ್ನು ಬೆಳೆಸುತ್ತಾರೆ ಮತ್ತು ಮೌಲ್ಯ ಶಿಕ್ಷಣ ಅಂದ್ರೆ ಏನು ಅನ್ನುವ ಬಗ್ಗೆ ವಿಚಾರವಿಲ್ಲ.
ಒಬ್ಬ ವಿದ್ಯಾರ್ಥಿ ತನ್ನ ಶಿಕ್ಷಕರ ಹೇಳಿದ್ದು ಚಾಚು ತಪ್ಪದೆ ಕಲಿತು ಅಂಕಗಳನ್ನು ಗಳಿಸಿದ ಮಾತೃಕೆ ಅವನು ಒಳ್ಳೆ ವಿದ್ಯಾರ್ಥಿ ಆಗಲಾರ, ಏಕೆಂದರೆ ಅವ್ರಿಗೆ ಮೌಲ್ಯಧಾರಿತ ಶಿಕ್ಷಣ ಕೊಡಬೇಕು.
ಒಂದು ವಿದ್ಯಾರ್ಥಿ ತಪ್ಪು ಮಾಡಿದಾಗ ಅವನಿಗೆ ಸರಿಯಾದ ರೀತಿಯಲ್ಲಿ ಶಿಕ್ಷೆ ಕೊಟ್ಟು ಸರಿಯಾಗಿ ನಡೆದುಕೊಳ್ಳುವ ಹಾಗೇ ಮಾಡೋದು ಒಬ್ಬ ಉತ್ತಮ ಶಿಕ್ಷಕರ ಜವಾಬ್ದಾರಿ ಆಗಿರುತ್ತೆ.
ಇತ್ತ ತಂದೆ ತಾಯಿಗಳು ಕೂಡ ಮಕ್ಕಳು ಯಾವುದೇ ತಪ್ಪು ಮಾಡಿದರು ಅದನ್ನ ಪರಿಗಣಿಸದೆ ಇರ್ಲಿ ಬಿಡು ಅನ್ನುವ ಮಟ್ಟಿಗೆ ವರ್ತಿಸಿ ಅದು ಮುಂದೊಂದ್ದಿನ ದೊಡ್ಡ ಮಟ್ಟದಲ್ಲಿ ತಪ್ಪಾದರೆ ಅದಕ್ಕೆ ಯಾರು ಹೊಣೆ??? ಶಿಕ್ಷಕರು ಶಾಲೆಯಲಿ ಒಡೀಬಾರ್ದು ಅಂತ ನಾವೇ ಹೇಳಿದಾಗ ಅವರಾದ್ರು ಏನು ಮಾಡೋಕೆ ಸಾಧ್ಯವಿಲ್ಲ!. ಏನೇ ಆಗಲಿ ಮಕ್ಕಳು ತಪ್ಪು ಮಾಡಿದಾಗ ಅದನ್ನ ಗುರ್ತಿಸಿ ತಿದ್ದಿದರೆ ಅವರು ಸರಿಯಾದ ದಾರಿಯಲಿ ಬೆಳೆಯೋದು. ಅದಕ್ಕೆ ಹೇಳೋದು ಬುದ್ದಿ ಹೇಳದ ಗುರು ಕೂಡ ಒಂದು ಶತ್ರುವಿನಂತೆ!!.
ಬಿದ್ದಿರಲು ಬಂದು ನೋಡದ ತಾಯಿ :
ಒಂದು ತಾಯಿ ಮಗುವನ್ನು ಒಂಬತ್ತು ತಿಂಗಳು ಹೊತ್ತು ಹೆತ್ತಿದ ಮಾತ್ರಕೆ ತಾಯಿ ಆಗಲು ಸಾಧ್ಯವಿಲ್ಲ. ಅವಳ ಕರ್ತವ್ಯ ಮಗು ಜನನ ಅದ್ಮೇಲಿಂದ ಶುರು ಅಗುತ್ತೆ. ಒಂದು ಶ್ರೀಮಂತ ಕುಟುಂಬದ ಹೆಣ್ಣು ಮಗಳಿಗೆ ಮದುವೆ ಮಾಡಿ ಕೊಡುತ್ತಾರೆ. ಒಂದೆರೆಡು ವರ್ಷದಲ್ಲಿ ಆಕೆ ಗರ್ಭಿಣಿಯಾಗಿ ಒಂದು ಮುದ್ದಾದ ಮಗುವಿಗೆ ಜನ್ಮ ಕೊಡುತ್ತಾಳೆ. ಒಂದು ವರ್ಷ ನಂತರ ಅದಕ್ಕೆ ಪೋಲಿಯೋ ಅಥವಾ ಇನ್ನಾವುದೋ ಸಮಸ್ಯೆಯಿಂದ ತನ್ನ ಕಾಲುಗಳ ಸ್ವಾದೀನ ಕಳೆದುಕೊಳ್ಳುತ್ತದೆ. ಅದು ಹಸಿವಿನಿಂದ ಅಳಲು ಶುರುಮಾಡುತ್ತೆ. ತಾಯಿ ಅಲ್ಲೇ ಇದ್ದರು ಕಿಂಚಿತ್ತೂ ಗಮನ ಕೊಡದೆ ತನ್ನ ಮೊಬೈಲ್ನಲಿ ಮಗ್ನವಿರುತ್ತಾಳೆ. ಕೆಲಸದಾಕೆ ಬಂದ್ ಮೇಲೆ ತಿನ್ನಲು ಕೊಡುತ್ತಾಳೆ ಅಲ್ಲಿವರೆಗೂ ತಾಯಿಯಾಗಿ ನೋಡಿ ಸುಮ್ಮನೇ ಇರುತ್ತಾಳೆ.
ಹಾಲುಣಿಸುವುದು ಮಾತ್ರ ಆಕೆ ಉಳಿದ ಮಗುವಿನ ಆರೈಕೆ ಮಾಡಲು ಆಕೆ ನಿರಾಕರಿಸಿ ಮಗುವಿಗೆ ನೋಡಿಕೊಳ್ಳಲು ಒಬ್ಬಾಕೆಯನ್ನು ನೇಮಿಸತ್ತಾರೆ. ಆಕೆಯು ಕೂಡ ಮಗುವಿಗೆ ಸರಿಯಾಗಿ ನೋಡಿಕೊಳ್ಳದೆ ಆ ಮಗುವಿಗೆ ಹಿಂಸೆ ಕೊಡುತ್ತಾಳೆ. ಇದನ್ನೆಲ್ಲಾ ನೋಡಿಯೂ ತಾಯಿ ಆಕೆಗೆ ಒಂದು ಮಾತು ಹೇಳದೆ ಸುಮ್ಮನಿರುತ್ತಾಳೆ. ಪಾಪ ಆ ಮಗುವಿನ ಮನಸ್ಸಿನ ಭಾವನೆಗಳಿಗೆ ಎಷ್ಟು ಧಕ್ಕೆ ಆಗಿರಬೇಕು ನೀವೇ ಹೇಳಿ.
ಕಾಲಕ್ರಮೇಣ ದೇವರ ಅನುಗ್ರಹದಿಂದ ಮಗುವಿನ ಕಾಲುಗಳು ಸರಿಯಾಗಿ ಮತ್ತೆ ನಡೆಯಲು ಪ್ರಾರಂಭ ಮಾಡುತ್ತೆ. ಹೌದು, ಮಗು ಅಳುತ್ತಾ ಕರೆದಾಗ ಬರದ ತಾಯಿ ಇದ್ರು ಅಷ್ಟೇ ಇಲ್ಲದೆ ಇದ್ರು ಅಷ್ಟೇ ಅಲ್ವಾ!!.
ಸರ್ವಜ್ಞ ಹೇಳಿದ ಒಂದೊಂದು ವಾಕ್ಯವು ಸಾವಿರ ಅರ್ಥಗಳನ್ನು ಹೇಳುತ್ತೆ.
- ಸವಿತಾ ಮುದ್ಗಲ್ – ಗಂಗಾವತಿ
