ಕವಿತೆ, ಕಥೆ ಪುಸ್ತಕಗಳನ್ನು ಓದುವ ಹಂಬಲವಿದ್ದರೂ ಪುಸ್ತಕ ಕೊಳ್ಳಲು ಮನೆಯಿಂದ ಹಣವು ಸಿಗುತ್ತಿರಲಿಲ್ಲ. ಲೇಖಕಿ ಸವಿತಾ ಮುದ್ಗಲ್ ಅವರಿಗೆ ಸಾಹಿತ್ಯ ಗಂಧಗಾಳಿ ಬಿಸಿದ್ದು ಹೇಗೆ? ಲೇಖಕ, ಕವಿ ನಾರಾಯಣಸ್ವಾಮಿ ಅವರ ಲೇಖನಿಯಲ್ಲಿ ಮೂಡಿ ಬಂದ ಸವಿತಾ ಮುದ್ಗಲ್ ಅವರ ಪರಿಚಯವನ್ನು ತಪ್ಪದೆ ಮುಂದೆ ಓದಿ…
ಬ್ಯಾಂಕಿನ ಉಪ ವ್ಯವಸ್ಥಾಪಕಿಯ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದು ಗೃಹಿಣಿಯಾಗಿ, ಬಿಡುವಿನ ಸಮಯದಲ್ಲಿ ಸಾಹಿತ್ಯದ ಕಡೆಗೆ ಒಲವನ್ನು ಬೆಳೆಸಿಕೊಂಡು ಮುಖಪುಟದಲ್ಲಿರುವ ಹಲವಾರು ಸಾಹಿತ್ಯದ ಗುಂಪುಗಳಲ್ಲಿ ಬರೆಯುತ್ತಾ, ಎರಡು ಕನ್ನಡದ ಕೃತಿಗಳನ್ನು ಬರೆದು ಲೋಕಾರ್ಪಣೆ ಮಾಡಿ ಕನ್ನಡ ಸಾಹಿತ್ಯಲೋಕದಲ್ಲಿ ಲೇಖಕಿಯಾಗಿ ಗುರುತಿಸಿಕೊಂಡಿದ್ದಾರೆ ಶ್ರೀಮತಿ ಸವಿತಾ ಮುದ್ಗಲ್ ರವರು.
ಶ್ರೀಮತಿ ಸವಿತಾ ಮುದ್ಗಲ್ ರವರು ಶ್ರೀ ಬಸವರಾಜ್ ಮತ್ತು ಶ್ರೀಮತಿ ಗಿರಿಜಮ್ಮನವರ ಎರಡನೇ ಮಗಳಾಗಿ ರಾಯಚೂರು ಜಿಲ್ಲೆಯ ಮದ್ಗಲ್ ಎಂಬ ಗ್ರಾಮದಲ್ಲಿ ಜನಿಸಿದರು. ಇವರ ಪ್ರಾಥಮಿಕ ವಿದ್ಯಾಭ್ಯಾಸ ಆರ್ ಸಿ ಮಿಷನ್ ಸ್ಕೂಲ್ ನಲ್ಲಿ ಏಳನೇ ತರಗತಿವರೆಗೂ, ನಂತರ ಗವರ್ನಮೆಂಟ್ ಗರ್ಲ್ಸ್ ಹೈಸ್ಕೂಲ್ ನಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ಮುಗಿಸಿದರು. ನಂತರ ಪದವಿಪೂರ್ವ ಶಿಕ್ಷಣದಲ್ಲಿ ವಾಣಿಜ್ಯ ವಿಷಯವನ್ನು (ಕಾಮರ್ಸ್ ) ಆಯ್ದುಕೊಂಡು, ತಮ್ಮ ಸ್ವಂತ ಜಿಲ್ಲೆಯಾದ ರಾಯಚೂರಿನ ಕಾಲೇಜಿನಲ್ಲಿ ಮುಗಿಸಿ, ಲಿಂಗಸೂಗೂರನ ಪ್ರಥಮ ದಜೆ೯ ಕಾಲೇಜಿನಲ್ಲಿ ಬಿ. ಕಾಂ ಪದವಿಯನ್ನು ಪಡೆದರು. ನಂತರ ಉನ್ನತ ಶಿಕ್ಷಣವಾದ ಸ್ನಾತಕೋತ್ತರ ಪದವಿ MBA ಫೈನಾನ್ಸ್ ನ್ನು ಹುಬ್ಬಳ್ಳಿಯ IBMR ಕಾಲೇಜು ಮತ್ತು Sikkim ಮಣಿಪಾಲ ಯೂನಿವರ್ಸಿಟಿಯಲ್ಲಿ 2005 ರಲ್ಲಿ ಪಡೆದರು.

ಶ್ರೀಮತಿ ಸವಿತಾ ಮುದ್ಗಲ್ ರವರು ವಿದ್ಯಾಭ್ಯಾಸ ನಂತರ ವೃತ್ತಿ ಜೀವನದ ಕಡೆಗೆ ಪಯಣವನ್ನು ಆರಂಭಿಸಿ ಮೊದಲು ಇವರು ಕಾರ್ವಿ ಫೈನಾಫೋಲೀಸ್ ನಲ್ಲಿ ಒಂದು ವರ್ಷ ಮಾಡಿ ವೃತ್ತಿಯನ್ನು ಮಾಡಿ ನಂತರ, HDFC ಬ್ಯಾಂಕ್ ನಲ್ಲಿ ಡೆಪ್ಯೂಟಿ ಮ್ಯಾನೇಜರ್ ಆಗಿ ಅಯ್ಕೆಯಾಗಿ ಸುಮಾರು ಒಂಭತ್ತು ವರ್ಷಗಳ ಕಾಲ ಅಂದರೆ 2007 ರಿಂದ 2015ರ ವರೆಗೆ ಸೇವೆನ್ನು ಸಲ್ಲಿಸಿದರು.
ಬ್ಯಾಂಕಿನಲ್ಲಿ ಉಪ ವ್ಯವಸ್ಥಾಪಕಿಯ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದು ಗೃಹಿಣಿಯಾಗಿ, ಬಿಡುವಿನ ಸಮಯದಲ್ಲಿ ಸಾಹಿತ್ಯದ ಕಡೆಗೆ ಒಲವನ್ನು ಬೆಳೆಸಿಕೊಂಡು ಮುಖಪುಟದಲ್ಲಿರುವ ಹಲವಾರು ಸಾಹಿತ್ಯದ ಗುಂಪುಗಳಲ್ಲಿ ಬರೆಯುತ್ತಾ, “ನೆರಳಿಗಂಟಿದ ಭಾವ” ಕವನ ಸಂಕಲನ ಮತ್ತು”ಕಥಾ ಸರೋವರ” ಎಂಬ ಎರಡು ಕನ್ನಡದ ಕೃತಿಗಳನ್ನು ಬರೆದು ಲೋಕಾರ್ಪಣೆ ಮಾಡಿ ಕನ್ನಡ ಸಾಹಿತ್ಯಲೋಕದಲ್ಲಿ ಲೇಖಕಿಯಾಗಿ ಗುರುತಿಸಿಕೊಂಡಿದ್ದಾರೆ ಶ್ರೀಮತಿ ಸವಿತಾ ಮುದ್ಗಲ್ ರವರು.
ಶ್ರೀಮತಿ ಸವಿತಾ ಮುದ್ಗಲ್ ರವರು ಜೆಸ್ಕಾಮ್ ಜಾಗೃತದಳದ ಪೋಲಿಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಶ್ರೀ ಉದಯ ರವಿಯ ಜೊತೆಯಲ್ಲಿ ವೈವಾಹಿಕ ಜೀವನ ಆರಂಭಿಸಿದರು. ಇವರಿಗೆ ಮೂರು ಜನ ಮಕ್ಕಳಿದ್ದು ಪ್ರಸ್ತುತ ಗಂಗಾವತಿಯಲ್ಲಿ ನೆಲೆಸಿದ್ದಾರೆ. ಪ್ರಸ್ತುತ ಗೃಹಿಣಿಯಾಗಿದ್ದರೂ, ಪ್ರವೃತ್ತಿಯಾಗಿ ಕನ್ನಡದ ಬರವಣಿಗೆಯಲ್ಲಿ ತೊಡಗಿಸಿಕೊಂಡು, ಮುಖಪುಟದ ಸಾಹಿತ್ಯ ಬಳಗದಲ್ಲಿ ಸಕ್ರಿಯವಾಗಿ ಸಾಹಿತ್ಯ ಸೇವೆ ಸಲ್ಲಿಸುತ್ತಾ ಕನ್ನಡದ ಬರವಣಿಗೆಯನ್ನು ಬರೆಯಲು ಪ್ರಾರಂಭ ಮಾಡಿದರು. ಸಾಹಿತ್ಯ ಬಳಗಗಳಲ್ಲಿ ಕವನ, ಲೇಖನ, ಹಲವು ಸಾಹಿತ್ಯ ಪ್ರಕಾರಗಳಲ್ಲಿ ಬರೆಯುವುದರ ಮೂಲಕ ಸಾಹಿತ್ಯ ಬಳಗದಿಂದ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ವಿನಯವಾಣಿ ಪತ್ರಿಕೆಯಲ್ಲಿ “ಭಾವಾಂತರಂಗ” ಎಂಬ ಅಂಕಣ ಬರಹವು ಸುಮಾರು ಒಂದು ವರ್ಷದವರೆಗೆ ಸುಮಾರು 57 ಲೇಖನಗಳು ಪ್ರಕಟವಾಗಿವೆ. ಜೊತೆಗೆ ಸಂಗಾತಿ ಪತ್ರಿಕೆಯಲ್ಲಿ ಹಲವಾರು ಪುಸ್ತಕ ವಿಮರ್ಶೆ, ಪುಸ್ತಕ ಪರಿಚಯವನ್ನು, ವೈಚಾರಿಕ ಲೇಖನಗಳನ್ನು ಬರೆದಿದ್ದಾರೆ. ರಾಜ್ಯದ ಹಲವಾರು ಪತ್ರಿಕೆಗಳಲ್ಲಿ, ಬ್ಲಾಗ್ ಗಳಲ್ಲಿ, ಸಂಪಾದಿತ ಕೃತಿಗಳಲ್ಲಿ ಇವರ ಲೇಖನ, ಕವಿತೆ ಕಥೆಗಳು ಪ್ರಕಟಿತವಾಗಿವೆ.
Momspresso ಟಾಪ್ ಬ್ಲಾಗ್ಗೆರ್ ಆಗಿ ಮೂರು ಸಲ ಆಯ್ಕೆಯಾಗಿರುವುದು ವಿಶೇಷ, ಸಾಹಿತ್ಯ ಬಳಗಗಳಲ್ಲಿ ಆಯ್ಕೆಯಾದ ಬರಹಗಳಿಗೆ ಹಲವಾರು ಪುಸ್ತಕ ಬಹುಮಾನಗಳನ್ನು ಕೂಡ ಪಡೆದಿದ್ದಾರೆ. ಒಂದು ಬಾರಿ ರೇಡಿಯೋ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುವ ಜೊತೆಗೆ ತಮ್ಮ ಸ್ವ ಕಥಾ ಸಂಕಲನದಿಂದ ಕಥೆ ಹೇಳುವ ಮೂಲಕ, ಲೋಕಲ್ ಟಿವಿ ಚಾನೆಲ್ ನಲ್ಲಿ ನ್ಯೂಸ್ ರೀಡರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.
ಶ್ರೀಮತಿ ಸವಿತಾ ಮುದ್ಗಲ್ ರವರು ರಾಜ್ಯಮಟ್ಟದ ಹಲವಾರು ಕಾರ್ಯಕ್ರಮ, ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಕವಿತೆಗಳನ್ನು ವಾಚನ ಮಾಡಿ ಸನ್ಮಾನ ಬಹುಮಾನಗಳನ್ನು ಸಹ ಪಡೆದಿದ್ದಾರೆ.
ರಾಜ್ಯಮಟ್ಟದ ಹಲವಾರು ಸಂಘಸಂಸ್ಥೆಗಳು ಇವರ ಸಾಹಿತ್ಯದ ಪ್ರತಿಭೆಯನ್ನು ಕಂಡು ಸನ್ಮಾನಿಸಿ ಗೌರವಿಸಿವೆ. ನವ ಪರ್ವ ಫೌಂಡೇಶನ್ ಸಂಘಟನೆ ಇವರಿಗೆ 2022 ರಲ್ಲಿ “ಸಾಹಿತ್ಯ ನವಚೇತನ” ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇವರ ಕಥಾ ಸರೋವರ ಕೃತಿಗೆ ಹುಬ್ಬಳ್ಳಿಯ ಉಮಾಶಂಕರ ಪ್ರತಿಷ್ಠಾನ 2023 ರ ಪುಸ್ತಕ ಪ್ರಶಸ್ತಿಯನ್ನು ಘೋಷಿಸಿದ್ದು ಬರುವ ಜೂನ್ ತಿಂಗಳಲ್ಲಿ ನಡೆಯುವ ಹುಬ್ಬಳ್ಳಿ ಕಾರ್ಯಕ್ರಮದಲ್ಲಿ ಪುಸ್ತಕ ಪ್ರಶಸ್ತಿಯನ್ನು ಪಡೆಯಲಿದ್ದಾರೆ.
ಇವರು ಗೃಹಿಣಿಯಾಗಿ ಮಕ್ಕಳ ಜವಾಬ್ದಾರಿಯನ್ನು ಪೂರೈಸುತ್ತಾ, ಪ್ರವೃತ್ತಿಯಲ್ಲಿ ಲೇಖಕಿಯಾಗಿ ರೂಪಗೊಂಡಿರುವುದಲ್ಲದೆ ಜೊತೆಗೆ ಡ್ರಾಯಿಂಗ್, ಆನ್ಲೈನ್ ಕ್ಲಾತ್ ಬಿಸಿನೆಸ್, ಗಾರ್ಡನಿಂಗ್ ಮಾಡುವ ಹವ್ಯಾಸವನ್ನು ಬೆಳೆಸಿಕೊಂಡಿರುವುದು ವಿಶೇಷವಾಗಿದೆ.

ನೀವು ಕನ್ನಡ ಸಾಹಿತ್ಯ ಲೋಕದಲ್ಲಿ ಲೇಖಕಿಯಾಗಲು ಪ್ರೇರಣೆ ಯಾರು? ಸಾಹಿತ್ಯದ ಒಲವು ಹೇಗೆ? ಮೂಡಿತು ಎಂಬ ಪ್ರಶ್ನೆಗೆ ಲೇಖಕಿ ಶ್ರೀಮತಿ ಸವಿತಾ ಮುದ್ಗಲ್ ರವರು ಉತ್ತರಿಸಿದ್ದು ಹೀಗೆ “ಬರಹ ಬರೆಯುವುದು ನನಗೆ ಹವ್ಯಾಸವೊ ಅಥವಾ ಆಸಕ್ತಿಯೋ ತಿಳಿದಿಲ್ಲ, ಮನದಲ್ಲಿ ಮೂಡುವ ಆಲೋಚನೆ, ಕೆಲವೊಂದು ನೆನಪು, ಯಾವುದಾದರು ಘಟನೆ ಹೀಗೆ ನೆನೆಪು ಮೂಡಿದಾಗ ಅದನ್ನು ಅಕ್ಷರ ರೂಪದಲ್ಲಿ ತರುವೆ. ಬಾಲ್ಯದಲ್ಲಿ ಸಾಹಿತ್ಯವಲ್ಲ ಮನೆಯಲ್ಲಿ ಶಾಲಾ ಪಠ್ಯವನ್ನು ಓದುವುದಕ್ಕೂ ಸಮಯ ಇರಲಿಲ್ಲ, ನಮ್ಮದು ಒಂದು ಅಂಗಡಿ ಇತ್ತು, ಅಂಗಡಿ ಕೆಲಸ ಮಾಡಿ ಶಾಲೆಗೆ ಹೋಗಬೇಕಿತ್ತು. ಬಿಡುವು ಅನ್ನೋದು ಸಿಗ್ತಾ ಇರಲಿಲ್ಲ ಬಾಲ್ಯದಲ್ಲಿ. ಕವಿತೆ ಕಥೆ ಇನ್ನಿತರ ವಿಷಯ ಓದುವ ಹಂಬಲವಿದ್ದರೂ ಮನೆಯಲ್ಲಿ ಪುಸ್ತಕ ತರಲು ಅದಕ್ಕೆ ತಕ್ಕಂತೆ ಹಣವು ಸಿಗುತ್ತಿರಲಿಲ್ಲ. ಶಾಲೆಯಲ್ಲಿ ನಿತ್ಯ ಬರುವ ಅದು ಪ್ರಜಾವಾಣಿಯ ಜೊತೆಗೆ, ಭಗವದ್ಗೀತೆಯ ಶ್ಲೋಕದೊಂದಿಗೆ ಮುಖ್ಯಾoಶಗಳನ್ನು ಪ್ರೇಯರ್ ನಲ್ಲಿ ಓದುವುದು ಅತೀ ಸಂತಸದ ವಿಷಯವಾಗಿತ್ತು.
ಸಮಯ ಬಿಡುವು ಮಾಡಿಕೊಂಡು ಬರೆಯೋದು ಇತ್ತೀಚಿಗೆ ಹವ್ಯಾಸವಾಗಿದೆ ಅಷ್ಟೇ. ಬರಹಕ್ಕೆ ಯಾರ ಪ್ರೇರಣೆ ಕೂಡ ನನಗಿಲ್ಲ, ಇದುವರೆಗೂ ನಾನು ನಮ್ಮ ಹಿರಿಯ ಸಾಹಿತಿಗಳ, ಕವಿಗಳ,ಬರಹಗಾರರ ಬಹಳಷ್ಟು ಕೃತಿ, ಕಾದಂಬರಿಗಳನ್ನು ಕೂಡ ಓದಿಕೊಂಡಿಲ್ಲ. ಸಾಹಿತ್ಯದ ಅರಿವು ಕೂಡ ನನಗೆ ಕಡಿಮೆ ಇದೆ ಅನ್ನಬಹುದು. ಹೀಗಾಗಿ ಬರಹಗಳಿಗೆ ಒಬ್ಬರನ್ನೇ ಪ್ರೇರಣೆಯಾಗಿ ತೆಗೆದುಕೊಳ್ಳೋದು ನನಗೆ ಇಷ್ಟವಾಗದೇ ಇರುವ ವಿಷಯ ಎನ್ನುತ್ತಾರೆ.
ಮುಂದಿನ ದಿನಗಳಲ್ಲಿ ಮತ್ತಷ್ಟು ಕೃತಿಗಳನ್ನು ಲೋಕಾರ್ಪಣೆ ಮಾಡಲು ತಯಾರಿಯಲ್ಲಿರುವ ಶ್ರೀಮತಿ ಸವಿತಾ ಮುದ್ಗಲ್ ರವನ್ನು. ಅಭಿನಂದಿಸುತ್ತಾ ಮುಂದೆ ಹಲವಾರು ಕೃತಿಯನ್ನು ಹೊರತಂದು ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಲಿ. ಆ ಕೃತಿಗಳು ಮನುಜನ ಬದುಕಿನ ತಲ್ಲಣಗಳಾಗಲಿ. ಬಡತನ ದೀನದಲಿತರ ಶೋಷಣೆಯನ್ನು ಖಂಡಿಸುವ ಕಾವ್ಯವಾಗಲಿ ತಮ್ಮ ಬರಹ ವೈಚಾರಿಕತೆಯ ಪ್ರಬುದ್ದತೆಯಡೆಗೆ ಸಾಗಲಿ ಮತ್ತು ತಮ್ಮ ಪ್ರತಿಭೆಗಾಗಿ ಸಮಾಜದಲ್ಲಿ ಗೌರವ ಪುರಸ್ಕಾರಗಳು ಸಿಗಲಿ ಎಂದು ಪತ್ರಿಕೆಯ ಪರವಾಗಿ ಮತ್ತು ವೈಯಕ್ತಿಕವಾಗಿ ಹಾರೈಸುತ್ತೇನೆ. ಶುಭವಾಗಲಿ…
ಹಿಂದಿನ ಸಂಚಿಕೆಗಳು :
- ಕನ್ನಡ ಸಾಹಿತ್ಯ ಲೋಕದಲ್ಲಿ ಅರಳುತ್ತಿರುವ – ಸುಮಾ
- ಮಾಲೂರಿನ ಉದಯೋನ್ಮುಖ ಲೇಖಕಿ – ಸುಮಂಗಳ ಮೂರ್ತಿ
- ಭಾವನೆಗಳ ಮಹಾಪೂರವೇ ಮನೋವಾರಧಿ
- ಕನ್ನಡದ ಸಾಹಿತ್ಯಲೋಕದ ಭಾವಧಾರೆ – ವಿದ್ಯಾ ಅರಮನೆ
- ವೃತ್ತಿಯಲ್ಲಿ ಶಿಕ್ಷಕಿ, ಲೇಖಕಿ, ಸಾಮಾಜಿಕ ಹೋರಾಟಗಾತಿ೯
- ಬಹುಮುಖ ಪ್ರತಿಭೆ ಉದಯೋನ್ಮುಖ ಲೇಖಕಿ – ಅಭಿಜ್ಞಾ ಪಿ ಎಮ್ ಗೌಡ
- ಅನುವಾದ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕವಯಿತ್ರಿ
- ಕನ್ನಡದ ಅಕ್ಷರ ಲೋಕದಲ್ಲಿ ಬೆಳಗುತ್ತಿರುವ ನಂದಾದೀಪ
- ಮನದ ಭಾವನೆಯನ್ನೇ ಭಾವಗೀತೆಯಾಗಿಸುವ ಕವಯಿತ್ರಿ
- ಚಿತ್ರದೊಳಗೆ ಪದವನರಳಿಸುವ ಕಲೆಗಾರ – ಜಬೀವುಲ್ಲಾ ಎಮ್ ಅಸದ್
- ಮಾಲೂರಿನ ಯುವ ಸಾಹಿತಿ – ನಾಗೊಂಡಹಳ್ಳಿ ಸುನಿಲ್
- ಯುವ ಬರಹಗಾರ್ತಿ – ನಳಿನಿ ಟಿ. ಭೀಮಪ್ಪ
- ಮಾಲೂರಿನ ಯುವ ಸಾಹಿತಿ ನಾಗೊಂಡಹಳ್ಳಿ – ಸುನಿಲ್
- ಕರುನಾಡಿನ ಉದಯೋನ್ಮುಖ ಲೇಖಕಿ – ಅನಿತಾ ಪಿ ಕೆ
- ಕನ್ನಡ ಸಾಹಿತ್ಯಲೋಕದಲ್ಲಿ ಯುವ ಲೇಖಕ – ಸಜ್ಜನ
- ನಾರಾಯಣಸ್ವಾಮಿ – ವಕೀಲರು ಮತ್ತು ಲೇಖಕರು, ಬಂಡಹಟ್ಟಿ, ಮಾಸ್ತಿ ಮಾಲೂರು ತಾಲ್ಲೂಕು
