ಕರಾವಳಿ ಶೈಲಿಯ ಅವಲಕ್ಕಿ: ಶಕುಂತಲಾ ಸವಿ

ಅವಲಕ್ಕಿ ಮಾಡೋದು ಗೊತ್ತು, ಆದರೆ ಈ ರೀತಿ ಮಾಡಿ. ಅವಲಕ್ಕಿ ರುಚಿಯಾಗಿ ಇರುತ್ತೆ ಎನ್ನುತ್ತಾರೆ ನಳಪಾಕ ಪ್ರವೀಣೆ ಶಕುಂತಲಾ ಸವಿ ಅವರು, ಹೇಗೆ ಅಂತ ತಪ್ಪದೆ ಮುಂದೆ ನೋಡಿ…

ಬೇಕಾಗುವ ಪದಾರ್ಥಗಳು :

  •  ತೆಳು ಅವಲಕ್ಕಿ  – ಕಾಲು ಕೇಜಿ
  • ಬೆಲ್ಲ – 2 ಅಚ್ಚು
  • ಅಚ್ಚ ಮೆಣಸಿನ ಪುಡಿ ಅಥವಾ ಸಾರಿನ ಪುಡಿ – ಸ್ವಲ್ಪ
  • ತೆಂಗಿನ ತುರಿ – ಸ್ವಲ್ಪ
  • ಈರುಳ್ಳಿ – 1 ಮಧ್ಯಮ ಗಾತ್ರದ್ದು
  • ಉಪ್ಪು ರುಚಿಗೆ ತಕ್ಕಷ್ಟು .
  • ಅರಶಿನ – ಅರ್ಧ ಸ್ಪೂನ್

ಒಗ್ಗರಣೆಗೆ ಸಾಸಿವೆ, ಉದ್ದಿನಬೇಳೆ, ಕಡ್ಲೆಬೇಳೆ, ಕರಿಬೇವಿನ ಸೊಪ್ಪು, ಒಂದೆರಡು ಒಣ ಮೆಣಸಿನ ಕಾಯಿ.

ಮಾಡುವ ವಿಧಾನ :

ಬಾಣಲಿಗೆ ಮೂರು ಸ್ಪೂನ್ ಎಣ್ಣೆ ಹಾಕಿ. ಸಾಸಿವೆ, ಉದ್ದಿನಬೇಳೆ, ಕಡ್ಲೆಬೇಳೆ, ಕರಿಬೇವಿನ ಸೊಪ್ಪು,ಈರುಳ್ಳಿ,  ಕಟ್ ಮಾಡಿದ ಒಂದೆರಡು ಒಣ ಮೆಣಸಿನ ಕಾಯಿ ಎಲ್ಲವನ್ನೂ ಒಂದೊಂದಾಗಿ ಹಾಕಿ ಚೆನ್ನಾಗಿ ಫ್ರೈ ಮಾಡಿ ಈಗ ಬೆಲ್ಲ ಮತ್ತು ತೆಂಗಿನ ತುರಿಯನ್ನು ಕೂಡ ಹಾಕಿ ಚೆನ್ನಾಗಿ ಫ್ರೈ ಮಾಡಿ ಸ್ಟವ್ ಆಫ್ ಮಾಡಿ ಅವಲಕ್ಕಿ ಹಾಕಿ ಚೆನ್ನಾಗಿ ಹುರಿಯಿರಿ. ಇದನ್ನು ಸೌಟ್ ಗಿಂತ ಕೈಯಲ್ಲಿ ಕಲಸಿ. ಸರ್ವಿಂಗ್ ಪ್ಲೇಟ್ ಗೆ ಹಾಕಿ ಸರ್ವ್ ಮಾಡಿ. ನಮ್ಮ ಕರಾವಳಿ ಕಡೆ ಇದರ ಜೊತೆ ರವೆ ಉಪ್ಪಿಟ್ಟು ಸ್ಪೆಷಲ್. ಜೊತೆಗೆ ಟೀ ಕೂಡ ಇದ್ದರೆ ಮಸ್ತ್.. ಬಜಿಲ್ ಸಜ್ಜಿಗೆ ಅಂತಾನೆ ಫೇಮಸ್ ಅಲ್ಲಿ .

ತೆಂಗಿನ ಕಾಯಿ ಫ್ರೈ ಮಾಡಿರುವುದರಿಂದ ಪ್ರಯಾಣದಲ್ಲಿ ಕೂಡ ಬಳಸಬಹುದುಎರಡು ಮೂರು ದಿನ ಆದ್ರೂ ಏನಾಗುವುದಿಲ್ಲ. ಬೆಲ್ಲ ಸ್ವಲ್ಪ ಜಾಸ್ತಿ ಹಾಕಿದರೆ ಚೆನ್ನಾಗಿರುತ್ತದೆ .ಈರುಳ್ಳಿ ನಿಮ್ಮ ಆಯ್ಕೆ.


  • ಶಕುಂತಲಾ ಸವಿ – ನಳಪಾಕ ಪ್ರವೀಣೆ , ಮೈಸೂರು

Leave a Reply

Home
Search
Menu
Recent
About
×