ರತನ್ ಟಾಟಾ’ ಗೆ ಬಂಕಿಂಗ್ ಹ್ಯಾಮ್ ಪ್ಯಾಲೇಸ್ ಲ್ಲಿ ‘ಲೈಫ್ ಟೈಮ್ ಅಚೀವ್ಮೆಂಟ್ ಅವಾರ್ಡ್’ ನ್ನು ಕೊಡಲು ಕಾರ್ಯಕ್ರಮ ನಿಗದಿ ಪಡಿಸಿರುತ್ತಾರೆ, ಆದರೆ ರತನ ಅವರು ಹೇಳುತ್ತಾರೆ ಅವಾರ್ಡ್ ನ್ನು ಸ್ವೀಕರಿಸಲು ಹೋಗಲಾರದು ಎಂದು ಯಾಕೆ? ತಪ್ಪದೆ ಮುಂದೆ ಓದಿ…ಡಾ. ರಾಜಶೇಖರ ನಾಗೂರ ಅವರ ಜೀವನಕ್ಕೊಂದು ಸ್ಫೂರ್ತಿ ನೀಡುವ ‘ಸ್ಫೂರ್ತಿ ಸಿಂಚನ’ ಅಂಕಣ…
6 ಫೆಬ್ರವರಿ, 2018 ರಂದು ಬ್ರಿಟಿಷ್ ‘ಪ್ರಿನ್ಸ್ ಚಾರ್ಲ್ಸ್’ ನು ಪರೋಪಕಾರ (Philanthropy) ಮತ್ತು ಸಮಾಜ ಸೇವೆಗಾಗಿ ‘ರತನ್ ಟಾಟಾ’ ಗೆ ಬಂಕಿಂಗ್ ಹ್ಯಾಮ್ ಪ್ಯಾಲೇಸ್ ಲ್ಲಿ ‘ಲೈಫ್ ಟೈಮ್ ಅಚೀವ್ಮೆಂಟ್ ಅವಾರ್ಡ್’ ನ್ನು ಕೊಡಲು ಕಾರ್ಯಕ್ರಮ ನಿಗದಿ ಪಡಿಸಿರುತ್ತಾನೆ.
ಟಾಟಾ ಬ್ಯುಸಿನೆಸ್ ಮತ್ತು ಬ್ರ್ಯಾಂಡ್ ಕನ್ಸಲ್ಟೆಂಟ್ ‘ಸುಹೇಲ್ ಸೇತ್’ ನು ಫೆಬ್ರವರಿ 3 ರಂದು ಮುಂಚೆಯೇ ಲಂಡನ್ ತಲುಪುತ್ತಾನೆ. ಅವನು ಏರ್ಪೋರ್ಟ್ ಇಂದ ಇಳಿಯುವದರೊಳಗೆ ರತನ್ ಅವರಿಂದ 11 ಮಿಸ್ ಕಾಲ್ಸ್ ಇರುತ್ತವೆ. ಇದನ್ನು ನೋಡಿದವನೇ ಗಾಬರಿಗೊಂಡು ತಕ್ಷಣವೇ ಟಾಟಾ ರವರಿಗೆ ಕಾಲ್ ಮಾಡಿ ಏನು ವಿಷಯ ಸರ್ ಎಂದು ಕೇಳುತ್ತಾನೆ.
ಆಗ ರತನ್ ಹೇಳುತ್ತಾರೆ ನಾನು ಆ ಕಾರ್ಯಕ್ರಮಕ್ಕೆ ಬರಲಾಗುವುದಿಲ್ಲ ಏಕೆಂದರೆ ನನ್ನ ನಾಯಿ ‘ಟೀಟು’ ತುಂಬಾ ಅನಾರೋಗ್ಯದಿಂದ ಬಳಲುತ್ತಿದೆ. ಇಂತಹ ಸ್ಥಿತಿಯಲ್ಲಿ ಅದನ್ನು ಬಿಟ್ಟು ಬರಲು ಮನಸು ಒಪ್ಪುತ್ತಿಲ್ಲ ಎನ್ನುತ್ತಾರೆ. ಆಗ ಸುಹೇಲ್ ಹೇಳುತ್ತಾನೆ “ರತನ್ ಜೀ, ಕಾರ್ಯಕ್ರಮ ಆಯೋಜಿಸಿದವರು ಯಾರು ಗೊತ್ತೇ! ಪ್ರಿನ್ಸ್ ಚಾರ್ಲ್ಸ್” ಎನ್ನುತ್ತಾನೆ. ರತನ್ ನಗುತ್ತಾ ಫೋನ್ ಇಡುತ್ತಾರೆ. ಆ ಕಾರ್ಯಕ್ರಮಕ್ಕೆ ಗೈರಾಗುತ್ತಾರೆ.

ಫೋಟೋ ಕೃಪೆ : google
ಸುಹೇಲ್ ಸೇತ್ ಈ ವಿಷಯವನ್ನು ಪ್ರಿನ್ಸ್ ಚಾರ್ಲ್ಸ್ ಗೆ ತಿಳಿಸುತ್ತಾನೆ. ಆಗ ಪ್ರಿನ್ಸ್ ಹೇಳುವುದು ಒಂದೇ ಮಾತು ” That’s a man Ratan is… Thats why TATA house is so stable” ಎನ್ನುತ್ತಾನೆ.
ಅತೀ ಶ್ರೀಮಂತ ವ್ಯಕ್ತಿಯೊಬ್ಬ ಒಂದು ಸಾಕಿದ ನಾಯಿಗಾಗಿ ಜೀವನದ ಅತೀ ದೊಡ್ಡ ಅವಾರ್ಡ್ ನ್ನು ಸ್ವೀಕರಿಸಲು ಹೋಗಲಾರ ಎಂದರೆ ಅದೆಷ್ಟು ಮಾನವೀಯ ಮೌಲ್ಯಗಳು ಅವರಲ್ಲಿರಬೇಕು!
ಈ ಘಟನೆಯಿಂದ ಅದೆಷ್ಟು ಪಾಠಗಳನ್ನು ನಾವು ಕಲಿಯಬಹುದು.

ಫೋಟೋ ಕೃಪೆ : google
1) ಮನುಷ್ಯ ಮನುಷ್ಯನನ್ನು ನಿರ್ಧಯವಾಗಿ ಕತ್ತರಿಸಿ ಕೊಲೆ ಮಾಡುವ ಈ ಸಂದರ್ಭದಲ್ಲಿ ಪ್ರಾಣಿಯನ್ನು ಅಷ್ಟೊಂದು ಪ್ರೀತಿಸುವ ರತನ್ ಟಾಟಾ ರವರು ನಮಗೆ ಮಾನವೀಯತೆಗೆ ಉದಾಹರಣೆಯಾಗಿ ನಿಲ್ಲುವುದಿಲ್ಲವೇ!
2) ಇಂದು ತಮ್ಮ ಬಗ್ಗೆ ತಮಗೆ ಗೊತ್ತಿಲ್ಲದವರು, ನಿಷ್ಪ್ರಯೋಜಕ ವೇದಿಕೆಯೊಂದನ್ನು ಸೃಷ್ಟಿಸಿಕೊಂಡು ಯಾವುದೊ ಕೆಲಸಕ್ಕೆ ಬಾರದ ಪ್ರಶಸ್ತಿಗಳನ್ನು ಕೊಡಲು ಮುಂದಾದರೆ ಅದನ್ನು ಸ್ವೀಕರಿಸಲು ಏನನ್ನಾದರೂ ಮಾಡಲು ಸಿದ್ಧರಿರುವ ಸಾಕಷ್ಟು ಜನ ನಮ್ಮಲ್ಲಿದ್ದಾರೆ. ಇಂತಹ ಜನರಿಗೆ ಪ್ರಶಸ್ತಿಗಳು ವ್ಯಕ್ತಿತ್ವಕ್ಕಿಂತ ದೊಡ್ಡವುಗಳಲ್ಲ ಎಂದು ರತನ್ ರು ಉದಾಹರಣೆಯಾಗಲಾರರೇ!
3) ವ್ಯಕ್ತಿತ್ವದ ಘನತೆ ಗೌರವಗಳಿಗಿಂತ ಕೇವಲ ಗುರುತಿಸಿಕೊಳ್ಳಲು ಬಯಸುವ ಮನುಷ್ಯರ ಇಂದಿನ ಸ್ವಾರ್ಥಕ್ಕೆ ರತನ್ ರು ವ್ಯತಿರಿಕ್ತ ಉದಾಹರಣೆಯಲ್ಲವೇ!
4) ತೋರಿಕೆಯೇ ಜೀವನವಾಗಿಸಿಕೊಂಡು ಫಾಲ್ಸ್ ಇಮೇಜ್ ಗಾಗಿ ಬದುಕುವ ಅನೇಕರ ಮಧ್ಯ ರತನ್ ಜೀ ಒಂದು ರತ್ನವೆನಿಸಲಾರರೇ!
ಸ್ನೇಹಿತರೆ ಚಿಂತಿಸಿ…

‘ಸ್ಫೂರ್ತಿ ಸಿಂಚನ’ ಅಂಕಣದ ಹಿಂದಿನ ಸಂಚಿಕೆ :
- ನೀ ನನ್ನ ಮನ್ನಿಸು
- ನಿನ್ನ ನೀನು ಮರೆತರೇನು..!
- ಸಂಯುಕ್ತ ಪ್ರಗತಿಯ ಪರಿಣಾಮ
- ನೀವು ಕನಸು ಕಾಣುವವರೆ..!
- ಅಂತರಾಳದ ಮಾತು
- ಮನಸ್ಸೆಂಬ ಮನೆ
- ‘ಸೋಲೇ ಗೆಲುವಿನ ಸೋಪಾನ’
- ಬದುಕಿನಲ್ಲಿ ‘ಬದುಕಿ’ ನಲಿ
- ಕ್ಷಮಿಸುವ ಬ್ಯೂಟಿಫುಲ್ ಮನಸುಗಳು
- ಬದುಕುವ ಗತ್ತು
- ಹೀಯಾಳಿಸದಿರು ಮನವೆ!!
- ‘ಸಾವು ಬದುಕಲು ಕಲಿಸುತ್ತದೆ’
- ಪ್ರೇಮ ಭಕ್ತಿಯಾಗುವುದು ಯಾವಾಗ !
- ಇರುವಾಗ ಎಲ್ಲಾ ನೆಂಟರು, ಇರದಾಗ ಯಾರೂ ಇಲ್ಲಾ…
- ಬರಿ ವಿಶ್ವಾಸ Vs ಸಂಪೂರ್ಣ ಭರವಸೆ
- ಋಣಾನುಬಂಧ
- ಕಷ್ಟದಲ್ಲಿಯೂ ಇಷ್ಟದ ಬದುಕು
- ಡಾ. ರಾಜಶೇಖರ ನಾಗೂರ
