“ಶ್ರೀಮಂತಿಕೆ” ಸಣ್ಣಕತೆ : ಬಿ ಆರ್ ಯಶಸ್ವಿನಿ

ಒಬ್ಬ ವ್ಯಕ್ತಿಗೆ ಜ್ಞಾನದ ಜೊತೆಗೆ ಒಳ್ಳೆಯ ಗುಣನಡತೆಗಳು ಇರಬೇಕು. ಸೌಂದರ್ಯಕ್ಕಿಂತ ಗುಣ ನಡತೆ ಮುಖ್ಯ.ಶ್ರೀಮಂತಿಕೆ ಎನ್ನುವುದು ಬರುತ್ತೆ, ಹೋಗುತ್ತೆ.ಆದರೆ ನಮ್ಮ ಹೃದಯವೆಂಬ ಅಂಗಳದಲ್ಲಿ ವಿನಯವೆಂಬ ಶ್ರೀಮಂತಿಕೆ ರಾರಾಜಿಸಬೇಕು. ಬಿ ಆರ್ ಯಶಸ್ವಿನಿ ಅವರ ಈ ಕತೆಯನ್ನು ಪೂರ್ತಿಯಾಗಿ ಓದಿ…

ಕೈ ತುಂಬಾ ಹಣ,ಮೈ ತುಂಬಾ ಒಡವೆ, ಮನೆಗೆಲಸಕ್ಕೆ ಆಳು,ಸುಖಸುಪತ್ತಿಗೆಯಲ್ಲೇ ವಿಜೃಂಭಿಸುತ್ತಿದ್ದವರು ರಾಘವ, ರಾಗಿಣಿ. ಇವರಿಬ್ಬರೂ ಮಧುಸೂದನ್, ಗಾಯಿತ್ರಿಯ ಮಕ್ಕಳು.
ಮುತ್ತಾತನ ಕಾಲದಿಂದಲೂ ಶ್ರೀಮಂತರಾಗಿದ್ದರು.

ರಾಘವ, ರಾಗಿಣಿ ಕಾಲೇಜಿನಲ್ಲಿ ಓದುವಾಗ ಓದಿನ ಕಡೆಗೆ ಗಮನ ಕೊಡದೆ ಫ್ರೆಂಡ್ಸ್ ಪಾರ್ಟಿ ಅಂತ ಕಾಲಕಳೆಯುತ್ತಿದ್ದರು.ಇವರ ಈ ವರ್ತನೆ ಕಂಡು ಮಧುಸೂದನ್ ಗೆ ತುಂಬಾ ಬೇಸರವಾಯಿತು. ಎಷ್ಟು ಬುದ್ಧಿಮಾತು ಹೇಳಿದರು ಕೇಳುತ್ತಿರಲಿಲ್ಲ. ಇದೇ ಚಿಂತೆಯಲ್ಲೇ ಮಧುಸೂದನ್ ಗೆ ಒಂದೆರಡು ಬಾರಿ ಹೃದಯಾಘಾತವಾಗಿ ಪ್ರಾಣಪಾಯದಿಂದ ಪಾರಾಗಿದ್ದರು. ಆದರೂ ಮಕ್ಕಳಿಗೆ ಬುದ್ಧಿ ಬರಲೇ ಇಲ್ಲ.

ತನ್ನ ದುಃಖವನ್ನು ತನ್ನ ಬಾಲ್ಯದ ಗೆಳೆಯ ನಿರಂಜನ್ ಹತ್ತಿರ ಹೇಳಿಕೊಳ್ಳುತ್ತಿದ್ದರು. ನಿರಂಜನ್ ಅವರಿಗೆ ಒಬ್ಬಳು ಮಗಳಿದ್ದಳು. ಅವಳೇ ಮೃದುಲಾ. ಆಕೆ ಅಷ್ಟೊಂದು ನೋಡಲು ಸುಂದರವಾಗಿರಲಿಲ್ಲ, ಆದರೆ ಬುದ್ಧಿವಂತಿಕೆಯಲ್ಲಿ ಚುರುಕಾಗಿದ್ದಳು, ಗುಣವಂತೆಯಾಗಿದ್ದಳು. ಯಾವುದೆ ಕೆಲಸವಾದರೂ ಸರಿ ಕಷ್ಟಪಟ್ಟು ಮಾಡಿಯಾದರೂ ಅದರಲ್ಲಿ ಯಶಸ್ವಿಯಾಗುತ್ತಿದ್ದಳು. ಮೃದುಲಾಳನ್ನು ಕಂಡರೆ ಮಧುಸೂದನ್ ಗೆ ಅಚ್ಚುಮೆಚ್ಚು. ರಾಗಿಣಿಗೆ ಪ್ರೀತಿ ತೋರಿಸುವಾಗೆಯೇ ಮೃದುಲಳಿಗೂ ಪ್ರೀತಿ ತೋರಿಸುತ್ತಿದ್ದನು.

ಮೃದುಲಾ ತನ್ನ ಬುದ್ಧಿವಂತಿಕೆಯಿಂದ ಯಾರ ಹಂಗಿಲ್ಲದೆ ಸ್ವಂತವಾಗಿ ಸಣ್ಣದೊಂದು ಗಾರ್ಮೆಂಟ್ಸ್ ಶುರುಮಾಡಿ ನೊಂದು ಬೆಂದು ಬಡತನದಿಂದ ಬಸವಳಿದು ಮನೆಯಿಂದ ಹೊರಗೆ ಬಂದಂತಹ ಮಹಿಳೆಯರಿಗೆ, ಪುರುಷರಿಗೆ ಕೆಲಸಕೊಟ್ಟು ಅವರಿಗೆ ಸಣ್ಣದೊಂದು ಆಶ್ರಮ ಮಾಡಿಕೊಂಡು ಅವರುಗಳಿಗೆ ಅಲ್ಲಿಯೇ ಇರಲು ಅವಕಾಶ ಮಾಡಿಕೊಟ್ಟಿದ್ದಳು. ಅವರುಗಳಿಗೆ ಅವಳು ಯಾವತ್ತೂ ಅಹಂಭಾವದಿಂದ ನೋಡದೆ ಅವರಲ್ಲೇ ನಾನು ಒಬ್ಬಳು ಎನ್ನುವಂತೆ ಇದ್ದಳು. ಆಕೆಗೆ ತಾಯಿ ಇರದ ಕಾರಣ ಅವರಲ್ಲಿಯೇ ತನಗೆ ತಾಯಿ ಇಲ್ಲ ಅನ್ನುವುದನ್ನು ಮರೆತು ಅವರೊಡನೆ ಖುಷಿಯಾಗಿರುತ್ತಿದ್ದಳು. ಇದೆ ಅವಳ ಕುಟುಂಬ ಎನ್ನುವಂತೆ ಅವರುಗಳನ್ನು ಹಚ್ಚಿಕೊಂಡಿದ್ದಳು.

ಹೀಗೆಯೇ ಇವರುಗಳು ಜೀವನ ಸಾಗುತ್ತಿತ್ತು. ಅಂದು ರಾತ್ರಿ ಮಧುಸೂದನ್ ಗಾಯಿತ್ರಿಯ ಹತ್ತಿರ ಮಕ್ಕಳ ಜವಾಬ್ದಾರಿ ಇನ್ನೂ ಮುಂದೆ ನಿನ್ನದೇ. ನನ್ನಿಂದಾಗಿ ಅವರುಗಳನ್ನು ಸರಿಯಾದ ದಾರಿಗೆ ತರಲು ಆಗಲಿಲ್ಲ. ನೀನಾದರೂ ಪ್ರಯತ್ನ ಮಾಡು. ಹಾಗೆಯೇ ನನಗೊಂದು ಆಸೆ ಇದೆ ನನಗೆ ಮೃದುಲಾಳನ್ನು ನನ್ನ ಸೊಸೆಯಾಗಿ ಮಾಡಿಕೊಳ್ಳಬೇಕೆಂದು ಬಹಳ ದಿನದಿಂದ ಅಂದುಕೊಂಡಿದ್ದೆ ಹೇಳಲು ಈಗ ಕಾಲ ಬಂದಿದೆ ರಾಘವನನ್ನು ಕರೆದುಕೊಂಡು ಬಾ ಎಂದರು. ರಾಘವನು ಬಂದನು.

ರಾಘವ ನೀನು ಇದುವರೆಗೆ ನನ್ನ ಯಾವುದೇ ಮಾತುಗಳನ್ನು ಕೇಳಿಲ್ಲ ಇದೊಂದು ಬಾರಿ ಹೇಳುವ ಮಾತನ್ನಾದರೂ ಈಡೇರಿಸುವಂತೆ ಒತ್ತಾಯಿಸಿದ್ದರು.ಅವರ ಒತ್ತಾಯಕ್ಕೆ ಮಣಿದು
ಹೇಳಿ ಅದೇನು ಎಂದನು ರಾಘವ.ನನಗೆ ಬಹುದಿನಗಳಿಂದ ಮೃದುಲಾಳನ್ನು ಸೊಸೆಯಾಗಿ ಮಾಡಿಕೊಳ್ಳಬೇಕೆಂದುಕೊಂಡಿದ್ದೆ ಈ ಆಸೆಯನ್ನಾದರೂ ಈಡೇರಿಸು ಎಂದರು.
ಮೃದುಲಾ ಅಷ್ಟೊಂದು ಸುಂದರಿಯಲ್ಲದ ಕಾರಣ ಅವನು ನಿರಾಕರಿಸಿದನು.ಈ ಚಿಂತೆಯಲ್ಲೇ ಮಲಗಿದ ಮಧುಸೂದನ್ ಬೆಳಿಗ್ಗೆ ಎದ್ದೇಳಲಿಲ್ಲ.

ಮಧುಸೂದನ್ ತೀರಿಕೊಂಡ ನಂತರ ಗಾಯಿತ್ರಿ ಸ್ವಲ್ಪ ದಿನ ಕಳೆದ ನಂತರ ಏನೇನೋ ಹೇಳಿ ರಾಘವನನ್ನು ಮದುವೆಗೆ ಒಪ್ಪಿಸಿದಳು.ರಾಘವ್ ಗೂ ಮೃದುಲಾಳಿಗೂ ಮದುವೆಯಾಯಿತು. ಆದರೆ ರಾಘವನಿಗೆ ಅವರು ಅಪ್ಪ ನೋಡಿಕೊಳ್ಳುತ್ತಿದ್ದ ಬಿಸಿನೆಸ್ ಆಗಲಿ ಯಾವ ಕೆಲಸಗಳೇ ಆಗಲಿ ಯಾವುದನ್ನು ಮಾಡಲು ಗೊತ್ತಿರಲಿಲ್ಲ.ಅವನು ಮೊದಲಿನಂತೆ ಮೋಜು ಮಸ್ತಿಯಲ್ಲೇ ಕಾಲಕಳೆಯುತ್ತಿದ್ದನು.ಈಗ ಮದುವೆಯಾಗಿದೆ ಈಗಲಾದರೂ ಜವಾಬ್ದಾರಿಯಿಂದ ಕೆಲಸದ ಕಡೆ ಗಮನಕೊಡು ಎಂದು ಅವರ ಅಮ್ಮ ಗಾಯಿತ್ರಿ ಹೇಳಿದರು ಅದನ್ನು ನಿರಾಕರಿಸಿ ಮೃದುಲಾಳನ್ನು ಮತ್ತು ಗಾಯಿತ್ರಿಯನ್ನು ಮನೆಯಿಂದ ಹೊರಹಾಕಿದನು.

ಆದರೂ ಮೃದುಲಾ ನೊಂದುಕೊಳ್ಳದೆ ತನ್ನ ಅತ್ತೆ ಗಾಯಿತ್ರಿಯನ್ನು ಕರೆದುಕೊಂಡು ತನ್ನ ಅಪ್ಪನ ಮನೆಗೆ ಬಂದಳು.ನಿರಂಜನ್ ಚಿಕ್ಕವರಿದ್ದಾಗಿಂದಲೂ ಬಡತನದಿಂದ ಬೆಳೆದವರು. ಆದರೆ ಮೃದುಲಾಳು ಗಾರ್ಮೆಂಟ್ಸ್ ಶುರುಮಾಡಿದ ಮೇಲೆಯೇ ಶ್ರೀಮಂತರಾಗಿದ್ದರು.ಪ್ರತಿದಿನವೂ ಕಷ್ಟಪಟ್ಟಿಕೊಂಡು ಬೆಳದ ಮೃದುಲಾಳಿಗೆ ಬಡತನದ ಬಗ್ಗೆ ಅರಿವಿತ್ತು.ಆಕೆಗೆ ಎಲ್ಲಿ ಯಾರೊಡನೆ ಹೇಗೆ ಇರಬೇಕೆಂದು ಗೊತ್ತಿತ್ತು. ಮನೆಗೆ ಕರೆದುಕೊಂಡು ಬಂದ ಅತ್ತೆಯನ್ನು ಸ್ವಂತ ಅಮ್ಮನಂತೆ ನೋಡಿಕೊಳ್ಳುತ್ತಿದ್ದಳು.

ಹೀಗೆಯೇ ವರ್ಷಗಳು ಕಳೆದವು. ಮುತ್ತಾತನ ಕಾಲದಿಂದಲೂ ಇದ್ದ ಆಸ್ತಿಯನ್ನು ಮಾರುವಂತ ಪರಿಸ್ಥಿತಿಗೆ ರಾಘವ, ರಾಗಿಣಿ ತಂದು ನಿಲ್ಲಿಸಿದ್ದರು. ನೊಂದುಕೊಂಡ ಗಾಯಿತ್ರಿ ಮೃದುಲಾಳಿಗೆ ಸ್ವಲ್ಪ ಆಸ್ತಿಯಾನ್ನಾದರೂ ಉಳಿಸಿಕೊಳ್ಳಲು ನೀನೇ ಆಸ್ತಿಯನ್ನು ಕೊಳ್ಳು ಆ ಆಸ್ತಿಯನ್ನು ನೀನೇ ಕೊಂಡಿರುವುದು ಅಂತಾ ಅವರಿಗೆ ಗೊತ್ತಾಗಬಾರದು ಎಂದಳು. ಅತ್ತೆಯ ಮಾತಿನಂತೆ ಅವರಿಗೆ ಗೊತ್ತಿಲ್ಲದಂತೆ ಕೊಂಡುಕೊಂಡಳು.

ಬೀದಿಗೆ ಬಿದ್ದ ರಾಘವ ಮತ್ತು ರಾಗಿಣಿ ಏನು ತೋಚದೆ ಅಮ್ಮ ಗಾಯಿತ್ರಿ ಇದ್ದ ಮೃದುಲಾಳ ಮನೆಗೆ ಬಂದರು. ನಿರಂಜನ್ ಅವರನ್ನು ಬರಮಾಡಿಕೊಂಡರು. ಆದರೆ ಗಾಯಿತ್ರಿ ಮೃದುಲಾ ಅವರು ಬರದಂತೆ ತಡೆದರು. ನಮ್ಮ ಮನೆಗೆ ನೀವು ಬರಬೇಕೆಂದರೆ ಕೆಲದಿನಗಳ ಕಾಲ ನಮ್ಮ ಅಶ್ರಮದಲ್ಲಿರುವವರ ಜೊತೆಗೆ ಅಲ್ಲಿಯೇ ಇದ್ದು ಅವರು ಮಾಡುವ ಕೆಲಸಗಳನ್ನು ನೀವು ಮಾಡಬೇಕು. ಅವರುಗಳು ಏನು ಊಟ ತಿಂಡಿ ಮಾಡಿತಿನ್ನುತ್ತಾರೆಯೋ ಅದನ್ನೇ ನೀವು ತಿನ್ನಬೇಕು. ಅವರುಗಳಿಗೆ ಬೈಯುವುದು ದರ್ಪ ತೋರಿಸುವುದು ಮಾಡಬಾರದು. ಅವರು ಏನು ಹೇಳಿದರೂ ಕೇಳಬೇಕು ಹಿಂದುರುಗಿ ಮಾತಾನಾಡಬಾರದು. ಅವರು ಯಾವಾಗ ಮಲಗುವರೋ ಆಗ್ಲೇ ನೀವು ಮಲಗಬೇಕು. ಬೆಳಗ್ಗೆ ಬೇಗನೇ ಏಳಬೇಕು. ಹೀಗೆಲ್ಲಾ ಮಾಡಿದ್ರೆ ಮಾತ್ರ ನಾವು ಮನೆಗೆ ಸೇರಿಸಿಕೊಳ್ಳುವುದು ಎಂದಳು ಮೃದುಲಾ. ನಂತರ ಗಾಯಿತ್ರಿ ನನಗೆ ಮನಸ್ಸಾದರೆ ಮಾತ್ರ ನಿಮ್ಮನ್ನು ಮನೆಗೆ ಸೇರಿಸುಕೊಳ್ಳುತ್ತೇನೆ ಎಂದರು.

ನಂತರ ಮೃದುಲಾ ಆಶ್ರಮಕ್ಕೆ ಕರೆದುಕೊಂಡು ಹೋಗಿ ಅವರನ್ನು ಅಲ್ಲಿರುವವರಿಗೆ ಪರಿಚಯ ಮಾಡಿಕೊಟ್ಟಳು. ಅವಳು ಅಲ್ಲಿ ಪುರುಷರಿಗೆ ಬೇರೆ, ಮಹಿಳೆಯರಿಗೆ ಬೇರೆ ಅಶ್ರಮ ಕಟ್ಟಿದ್ದಳು.
ಪುರುಷರ ಅಶ್ರಮದಲ್ಲಿ ಮಹಾದೇವ ಎಂಬ ತಾತ ಇದ್ದರು. ಹಿರಿಯರಾದರಿಂದ ಅಲ್ಲಿ ಅವರನ್ನು ಉಳಿದವರು ಮನೆಯ ಯಜಮಾನನಂತೆ ನೋಡಿಕೊಳ್ಳುತ್ತಿದ್ದರು ಅವರು ಹೇಳಿದಂತೆ ಕೇಳಿಕೊಂಡು ಕೆಲಸ ಮಾಡುತ್ತಿದ್ದರು. ಆ ತಾತನಿಗೆ ದಿನನಿತ್ಯವೂ ರಾಘವನ ಹತ್ತಿರ ಕೆಲಸಮಾಡಿಸಿ ಅವರಿಗೆ ಒಳ್ಳೆಯ ಗುಣನಡತೆಗಳು ತಿಳಿಯುವಂತೆ ಮಾಡಿ ತಾತ ಎಂದು ಹೇಳಿದ್ದಳು. ಹಾಗೆಯೇ ರಾಗಿಣಿಗೂ ಮಹಿಳೆಯರ ಆಶ್ರಮದಲ್ಲಿದ್ದ ಸಾವಿತ್ರಿ ಅಜ್ಜಿಗೆ ತಾತನಿಗೆ ಹೇಳಿದಂತೆಯೇ ಹೇಳಿದ್ದಳು.

ಮೊದಮೊದಲು ರಾಘವ್, ರಾಗಿಣಿಗೆ ಅಲ್ಲಿ ಹೊಂದಿಕೊಳ್ಳುವುದು ಕಷ್ಟವಾಯಿತು. ವಿಧಿಯಿಲ್ಲದೆ ಪರಿಸ್ಥಿತಿಗೆ ತಕ್ಕಂತೆ ಹೊಂದುಕೊಳ್ಳಲು ಪ್ರಯತ್ನ ಮಾಡಿದರು. ಪ್ರತಿದಿನವೂ ಅಲ್ಲಿ ನೊಂದು ಬಂದವರ ಕಥೆಗಳನ್ನು ಕೇಳಿ ಅವರ ಮನಸ್ಸು ಬದಲಾಗತೊಡಗಿತು. ದಿನಕಳೆದಂತೆ ಅವರಿಗೆ ಅವರ ತಪ್ಪುಗಳು ಅರ್ಥವಾಗಿತ್ತು. ಮಾಡಿದ ತಪ್ಪಿಗೆ ಪಶ್ಚಾತ್ತಾಪ ಮಾಡಿಕೊಳ್ಳಲು ಅವರು ಮೃದುಲಾಳ ಮನೆಗೆ ಹೋಗದೆ ಅಲ್ಲಿಯೇ ಕೆಲಸ ಮಾಡಿಕೊಂಡಿದ್ದರು.

ಮೃದುಲಳ ತಂದೆ ನಿರಂಜನ್ ರವರಿಗೆ ಅವರುಗಳನ್ನು ನೋಡಿ ಕನಿಕರಪಟ್ಟು ಮನೆಗೆ ಕರೆದರೆ ಅವರು ಅಮ್ಮ ಮೃದುಲಾಳನ್ನು ನೋಡಿಕೊಳ್ಳದೇ ಮನೆಯಿಂದ ಹೊರಗೆ ಹಾಕಿದ್ದರಿಂದ ದುಃಖಪಟ್ಟು ಮನೆಗೆ ಬರಲು ನಿರಾಕರಿಸಿದರು. ಆದ್ರೂ ನಿರಂಜನ್ ಅವರು ಒತ್ತಾಯ ಮಾಡಿ ಮನೆಗೆ ಕರೆದುಕೊಂಡು ಬಂದರು. ಮನೆಗೆ ಬಂದವರೇ ಅಮ್ಮ ಗಾಯಿತ್ರಿ ಕಾಲಿಗೆ ಬಿದ್ದು ತಪ್ಪಾಯಿತು ಕ್ಷಮಿಸಿ ಎಂದರು. ಮೃದುಲಳ ಹತ್ತಿರವೂ ಕ್ಷಮೆ ಕೇಳಿದರು.ಅವರುಗಳು ಅವರನ್ನು ಕ್ಷಮಿಸಿದರು.

ಆಶ್ರಮದಲ್ಲಿದ್ದವರ ಒಡನಾಟದಿಂದ ರಾಘವನಿಗೆ ಸೌಂದರ್ಯಕ್ಕಿಂತ ಗುಣನಡತೆ ಮುಖ್ಯ ಎಂದು ಅರಿವಾಗಿತ್ತು.ನಂತರ ಎಲ್ಲರ ಸಮ್ಮುಖದಲ್ಲಿ ಇಷ್ಟಪಟ್ಟು ಮೃದುಲಳನ್ನು ಹೆಂಡತಿಯೆಂದು ಸ್ವೀಕರಿಸಿ ಅಮ್ಮ ಮತ್ತು ಮಾವನ ಆಶಿರ್ವಾದ ಪಡೆದುಕೊಂಡನು.ದಿನಕಳೆದಂತೆ ಇಬ್ಬರಲ್ಲೂ ಪ್ರೀತಿ ಬೆಳೆಯಿತು.ಖುಷಿಯಿಂದ ಕಾಲಕಳೆಯುತ್ತಿದ್ದರು ಮೃದುಲಳ ಕುಟುಂಬ.

ಹೀಗಿರುವಾಗ ಮೃದುಲಾ ಆಸ್ತಿ ಕೊಂಡಿರುವ ವಿಚಾರವನ್ನೇಲ್ಲಾ ರಾಘವ,ರಾಗಿಣಿಗೆ ಹೇಳಿದಳು.ಅವರು ಖುಷಿಪಟ್ಟರು.ಆ ಆಸ್ತಿಯನ್ನು ರಾಘವ, ರಾಗಿಣಿಗೆ ಕೊಡಲು ನಿರ್ಧರಿಸಿದ ಮೃದುಲಾ ಅವರಿಗೆ ಬರೆದುಕೊಡಲು ಕರೆದಾಗ ಅವರು ನಿರಾಕರಿಸಿದರು.ಅದು ನೀನು ನಿನ್ನ ಸ್ವಂತ ದುಡಿಮೆಯಿಂದ ದುಡಿದು ಕೊಂಡುಕೊಂಡ ಆಸ್ತಿ ಅದರ ಮೇಲೆ ನಮಗೇನು ಹಕ್ಕಿಲ್ಲ.ಅದು ನಿನ್ನದೇ ಆಸ್ತಿ ನಮಗೆ ಬೇಡ ಎಂದರು. ಆದರೂ ಮೃದುಲಾ ಪಟ್ಟುಬಿಡದೆ ಆ ಆಸ್ತಿಯನ್ನು ಅವಳು ಇಟ್ಟುಕೊಳ್ಳದೆ ಅವರಿಬ್ಬರ ಹೆಸರಿಗೂ ವರ್ಗಾಯಿಸಿದಳು.

ರಾಗಿಣಿಗೂ ಮದುವೆಮಾಡಿದರು.ರಾಗಿಣಿಯು ಮೃದುಲಳಂತೆ ಗಂಡನ ಮನೆಯಲ್ಲಿ ಒಳ್ಳೆಯ ಗುಣ ನಡತೆಯಿಂದ ಅಚ್ಚುಮೆಚ್ಚಿನ ಸೊಸೆಯಾಗಿ ಜೀವನಸಾಗಿಸಿದಳು.ರಾಘವನು ಕೂಡ ಮೃದುಲಳ ಜೊತೆಗೂಡಿ ಕೆಲಸಮಾಡಿ ಉನ್ನತ ಸ್ಥಾನಕ್ಕೆ ಬಂದನು.

ರಾಘವ,ಮೃದುಲಳಿಗೆ ಮುದ್ದಾದ ಮಗುವಾಯಿತು.ರಾಘವ ತಾನು ಮಾಡಿದ ತಪ್ಪಿನಂತೆ ತನ್ನ ಮಗ ಬೆಳೆಯಬಾರದೆಂದು ಆ ಮಗುವಿಗೆ ಚಿಕ್ಕವನಿದ್ದಾಗಿನಿಂದಲೆ ಒಳ್ಳೆಯ ಗುಣನಡತೆ, ಬುದ್ಧಿ ಹೇಳಿಕೊಡುವುದರ ಜೊತೆಗೆ ಕಷ್ಟಸುಖದ ಅರಿವು ಮೂಡಿಸಲು ಸಣ್ಣಪುಟ್ಟ ಕೆಲಸಗಳನ್ನು ಮಾಡಿಸುತ್ತಿದ್ದನು.ಪ್ರೀತಿ ಮಾಡುವಾಗ ಪ್ರೀತಿ ಮಾಡುತ್ತಿದ್ದನು.ಆ ಮಗು ಕೂಡ ಅಪ್ಪ ಅಮ್ಮ ಹೇಳುವ ಮಾತುಗಳನ್ನು ಚಾಚುತಪ್ಪದೆ ಪಾಲಿಸುತ್ತಾ ಬೆಳೆಯತೊಡಗಿತು.


  • ಬಿ ಆರ್ ಯಶಸ್ವಿನಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW